• ಹೋಂ
 • »
 • ನ್ಯೂಸ್
 • »
 • Jobs
 • »
 • SSP Scholarship: ರಾಜ್ಯ ಸರ್ಕಾರದಿಂದ ಭರ್ಜರಿ ವಿದ್ಯಾರ್ಥಿ ವೇತನ; ಅಪ್ಲೈ ಮಾಡಲು ಈ ತಿಂಗಳೇ ಕೊನೆ

SSP Scholarship: ರಾಜ್ಯ ಸರ್ಕಾರದಿಂದ ಭರ್ಜರಿ ವಿದ್ಯಾರ್ಥಿ ವೇತನ; ಅಪ್ಲೈ ಮಾಡಲು ಈ ತಿಂಗಳೇ ಕೊನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ SSP ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಆರ್ಥಿಕ ನೆರವು ನೀಡಲು ಮುಂದಾಗಿದೆ. ಈ ಯೋಜನೆಯ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸಹಾಯವಾಗುತ್ತದೆ.

 • Share this:

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ (Scholarship) 2023ಕ್ಕೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಈಗಿನಿಂದಲೇ ದಾಖಲೆಗಳನ್ನು ಕೂಡಿಟ್ಟುಕೊಳ್ಳಿ. ಅಗತ್ಯ ಮಾಹಿತಿಯನ್ನು ತಿಳಿದಿಟ್ಟುಕೊಳ್ಳಿ. ನಾವಿಲ್ಲಿ ಅಗತ್ಯವಿರುವ ಕೆಲವು ಮಾಹಿತಿಗಳು (Information) ಅಪ್ಲೈ ಮಾಡಲು ಕೊನೆ ದಿನಾಂಕ ಯಾವುದು ಎಂಬೆಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ಅನುಸಾರ ನೀವು ಅಪ್ಲೈ (Apply) ಮಾಡಬಹುದು. ವಿದ್ಯಾರ್ಥಿವೇತನ ಯೋಜನೆಯ ಮಾಹಿತಿಯನ್ನು ನಾವಿಲ್ಲ ಸಂಪೂರ್ಣವಾಗಿ ನೀಡಿರುವುದರ ಜೊತೆಗೆ ಅಧಿಕೃತ ಜಾಲತಾಣದ ಲಿಂಕ್​ ಕೂಡಾ ನೀಡಿದ್ದೇವೆ ಗಮನಿಸಿ.


ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೀವೂ ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಬೇಕು ಎಂಬ ಆಶಯ ಹೊಂದಿದ್ದರೆ ಹತ್ತನೇ ತರಗತಿ ಪೂರ್ಣಗೊಳಿಸಿರಬೇಕಾಗುತ್ತದೆ. ಅಧಿಕೃತ ಪ್ರಾಧಿಕಾರವು ಈ ವಿದ್ಯಾರ್ಥಿವೇತನ ಯೋಜನೆಗಾಗಿ ವಿಶೇಷ ಪೋರ್ಟಲ್ ಆರಂಭಿಸಿದೆ. ರಾಜ್ಯ ಸ್ಕಾಲರ್‌ಶಿಪ್ ಪೋರ್ಟಲ್ - ಎಸ್‌ಎಸ್‌ಪಿ ಸ್ಕಾಲರ್‌ಶಿಪ್ ಅಧಿಕೃತ ವೆಬ್ ಪೋರ್ಟಲ್ ಆಗಿದೆ. ಈಅಧಿಕೃತ ಜಾಲತಾಣದಲ್ಲೇ ನೀವು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಾಧ್ಯ.


ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳು ಮೊದಲು ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.ಅರ್ಹತೆ, ಅಗತ್ಯವಿರುವ ದಾಖಲಾತಿಗಳು, ಅಪ್ಲಿಕೇಶನ್ ಪ್ರಕ್ರಿಯೆ ಈ ಎಲ್ಲವನ್ನು ತಿಳಿದು ನಂತರ ಅಪ್ಲೈ ಮಾಡುವುದು ಒಳ್ಳೆಯದು.


ಇದನ್ನೂ ಓದಿ: CUET UG 2023 ಅರ್ಜಿ ತಿದ್ದುಪಡಿ ದಿನಾಂಕ ಪ್ರಕಟ; ಈ ಲಿಂಕ್ ಬಳಸಿ ಸರಿಪಡಿಸಿ


ಕರ್ನಾಟಕ ಸರ್ಕಾರವು ಕರ್ನಾಟಕದ ಎಲ್ಲಾ ಅರ್ಹ ಮತ್ತು ಸಮರ್ಥ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ಅನುವುಮಾಡಿಕೊಡುತ್ತಿದೆ. ಎಲ್ಲಾ ಅರ್ಹ ವಿದ್ಯಾರ್ಥಿಗಳು ಈ ಪೋರ್ಟಲ್ ಮೂಲಕ ಅಪ್ಲೈ ಮಾಡಬಹುದು.


ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅಗತ್ಯವಿರುವ ದಾಖಲೆಗಳ ವಿವರ
1. ಅಭ್ಯರ್ಥಿ ಮತ್ತು ಅಭ್ಯರ್ಥಿಯ ಪೋಷಕರ ಆಧಾರ್ ಕಾರ್ಡ್.
2. ಶಾಲಾ ಕಾಲೇಜು ಶುಲ್ಕ ರಶೀದಿ
3. ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ
4. ಶಾಲೆ ಮತ್ತು ಕಾಲೇಜು ದಾಖಲಾತಿ ಸಂಖ್ಯೆ
5. ಪಡಿತರ ಚೀಟಿ
6. ಕುಟುಂಬದ ಆದಾಯ ಪುರಾವೆ ಪ್ರಮಾಣಪತ್ರ


ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ನೀವು ನೀಡಬೇಕಾಗುತ್ತದೆ. ನೋಂದಣಿ ಮಾಡಲು ಅಧಿಕೃತ ಜಾಲತಾಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ನೀವು ಕ್ಲಿಕ್ ಮಾಡಿದ ತಕ್ಷಣ ಮುಖಪುಟ ತೋರಿಸುತ್ತದೆ.
ನಿಮ್ಮ ಐಡಿ ನೀಡಿ ಲಾಗಿನ್​ ಆಗಿ
ನಂತರ ಅಲ್ಲಿ ಕೇಳಲಾಗುವ ದಾಖಲೆಗಳನ್ನು ನೀಡಿ
ಈ ಹಂತಗಳನ್ನು ಪಾಲಿಸಿ ಅಪ್ಲೈ ಮಾಡಿ


ನೀವು ಸಂಪರ್ಕ ಮಾಡಲು ಅಗತ್ಯವಿರುವ ಮಾಹಿತಿ


 • ವಿದ್ಯಾರ್ಥಿವೇತನ ಸಹಾಯ ಸಂಖ್ಯೆ – 080-35254757

 • ಇಮೇಲ್ ಐಡಿ - postmatrichelp@karnataka.gov.in

 • ಹಿತ್ತಲಿನಲ್ಲಿದ್ದ ವರ್ಗಗಳ ಕಲ್ಯಾಣ ಇಲಾಖೆ – 080-8050770005, 080-22374836

 • ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆ – 9008400010/9008400078

 • ಬುಡಕಟ್ಟು ಕಲ್ಯಾಣ ಇಲಾಖೆ - 080-22261789

 • ಸಾಮಾಜಿಕ ಅಭಿವೃದ್ಧಿ ಇಲಾಖೆ – 080-22535931ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ಆರ್ಥಿಕ ನೆರವು ಒದಗಿಸುವುದು.  ಏಕೆಂದರೆ ತಮ್ಮ ಮಕ್ಕಳಿಗೆ ಹಣ ನೀಡಲು ಸಾಧ್ಯವಾಗದ ಹಲವಾರು ಜನರಿದ್ದಾರೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ SSP ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಆರ್ಥಿಕ ನೆರವು ನೀಡಲು ಮುಂದಾಗಿದೆ. ಈ ಯೋಜನೆಯ ಸಹಾಯದಿಂದ ವಿದ್ಯಾರ್ಥಿಗಳು ಸ್ವತಂತ್ರರಾಗುತ್ತಾರೆ.


ಅಪ್ಲೈ ಮಾಡಲು ಕೊನೆ ದಿನ: ಇದೇ ತಿಂಗಳು ಅಂದರೆ ಮೇ 31, 2023
ಅಧಿಕೃತ ವೆಬ್‌ಸೈಟ್ ssp.karnataka.gov.in ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಅಧಿಕೃತ ವೆಬ್‌ಸೈಟ್: https://ssp.postmatric.karnataka.gov.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

top videos
  First published: