ಕರ್ನಾಟಕ ಪ್ರೌಢ ಶಿಕ್ಷಣ (Education) ಪರೀಕ್ಷಾ ಮಂಡಳಿಯು (KSEEB) 2022-23ನೇ ಸಾಲಿನ ಬೋರ್ಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ವಿದ್ಯಾರ್ಥಿಗಳು ಇದೀಗ ರಜೆಯಲ್ಲಿ ಮೋಜಿನಿಂದ ಕಾಲ ಕಳೆಯುತ್ತಿದ್ದಾರೆ. ಆದರೂ ಸಹ ಫಲಿತಾಂಶದ ಬಗ್ಗೆ ಕುತೂಹಲ ಅವರಿಗೆ ಇದ್ದೇ ಇದೆ. ಇನ್ನು ಪೋಷಕರು ಮುಂದಿನ ಕಾಲೇಜ್ ಅಡ್ಮಿಷನ್ಗಾಗಿ ಕಾಯುತ್ತಿದ್ದಾರೆ. ಇದೆಲ್ಲದಕ್ಕೂ ಫಲಿತಾಂಶ (Result) ಪ್ರಕಟವಾಗಲು ಕಾಯುತ್ತಿದ್ದಾರೆ. ಆ ಕಾರಣ ಫಲಿತಾಂಶ ಪ್ರಕಟವಾಗುವ ಸಂಭವನೀಯ ದಿನಾಂಕವನ್ನು ಇಲ್ಲಿ ನೀಡಲಾಗಿದೆ ನೀವು ಇನ್ನು ಹೆಚ್ಚಿನ ದಿನಗಳ ಕಾಲ ಕಾಯುವ ಅವಶ್ಯಕಥೆ ಇಲ್ಲಾ.
ನೀವು ಈ ಬಾರಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಖಂಡಿತ ಒಮ್ಮೆ ಈ ಸುದ್ದಿಯನ್ನು ಓದಲೇ ಬೇಕು. ಮೇ ತಿಂಗಳ ಮೊದಲ ವಾರವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ.
KSEEB 10 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಲು ನೋಂದಾಯಿಸಿಕೊಂಡಿದ್ದರು ಮತ್ತು ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಇದನ್ನೂ ಓದಿ: JEE Main Result 2023 ಫಲಿತಾಂಶ ಪ್ರಕಟ; ಈ ಲಿಂಕ್ ಬಳಸಿ ಚೆಕ್ ಮಾಡಿ
ವಿದ್ಯಾರ್ಥಿಗಳು ತಮ್ಮ ವೃತ್ತಿ ಮಾರ್ಗವನ್ನು ನಿರ್ಧರಿಸಲು ಮತ್ತು ತಾವು ಮುಂದೆ ಯಾವ ಕಾಲೇಜಿಗೆ ಹೋಗಬೇಕು ಎಂದು ತಿಳಿಯಲು ಈ ಫಲಿತಾಂಶ ಬಹಳ ಮುಖ್ಯವಾಗುತ್ತದೆ. ಕರ್ನಾಟಕ SSLC ಫಲಿತಾಂಶ 2023 ಅನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (KSEB) ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ನೀವೂ ಈ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
35% ಪಡೆದ ವಿದ್ಯಾರ್ಥಿಗಳೆಲ್ಲರೂ ಪಾಸ್ ಎಂದು ಪರಿಗಣಿಸಲಾಗುತ್ತದೆ. ಈ ಮಾಹಿತಿ ಅನುಸಾರ ನೀವು ಪಾಸ್ ಆಗಿದ್ದೋರೋ ಇಲ್ಲವೋ ಎಂದು ಪರಿಶೀಲಿಸಬಹುದು. ಪಾಸ್ ಆಗಲಿ ಫೇಲ್ ಆಗಲಿ ಇದೇ ಜೀವನದ ಅಂತಿಮ ಅಲ್ಲ ಎಂಬುದನ್ನು ಎಲ್ಲಾ ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೇ ನಿಮ್ಮ ಫಲಿತಾಂಶ ಏನೇ ಆಗಿದ್ದರು ಎದೆಗುಂದದೆ ಮುಂದೆ ಸಾಗುವವರಾಗಿರಬೇಕು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಕರ್ನಾಟಕ ಬೋರ್ಡ್ 10 ನೇ ಫಲಿತಾಂಶ 2023ಕ್ಕೆ ಭೇಟಿ ನೀಡುವ ಮೂಲಕ ಚೆಕ್ ಮಾಡಬಹುದು.
ನೀವು ಯಾವುದೇ ಅನುಮಾನಗಳಿಲ್ಲದೆ ಅಧಿಕೃತ ಮಾಹಿತಿಗಳನ್ನು ನೀಡಿ ವೆಬ್ಸೈಟ್ಗೆ ಬೇಟಿ ನೀಡಿ ಪರಿಹರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾರ್ಕ್‌ಶೀಟ್ 2023 ಅನ್ನು ಡೌನ್‌ಲೋಡ್ ಕೂಡಾ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ನಿಮಗೆ ಹಾರ್ಡ್ ಕಾಫಿ ಬೇಕು ಎಂದಾದರೆ ನೀವು ಈ ವೆಬ್ಸೈಟ್ನಿಂದ ನಿಮ್ಮ ಅಂಕಪಟ್ಟಿಯನ್ನು ಜೆರಾಕ್ಸ್ ಮಾಡಿಸಿಕೊಳ್ಳಬಹುದು. ನಂತರ ಇದು ನಿಮ್ಮ ಕಾಲೇಜ್ ಅಡ್ಮಿಷನ್ಗೆ ತುಂಬಾ ಸಹಾಯವಾಗುತ್ತದೆ.
ವಿದ್ಯಾರ್ಥಿಗಳೇ ಆತಂಕ ಬೇಡ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2023 ರ ದಿನಾಂಕವನ್ನು ಮೇ 2023 ರ 1 ನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲಾ. ಇಲ್ಲವಾದರೆ ಮೇ 2ನೇ ವಾರದಲ್ಲಂತೂ ಖಂಡಿತ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಏಕೆಂದರೆ ವಿದ್ಯಾರ್ಥಿಗಳಿಗೆ ಚುನಾವಣೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಬೇರೆ ಬೇರೆ ದಿನಾಂಕದಂದು ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ, ಆದ್ದರಿಂದ ವಿದ್ಯಾರ್ಥಿಗಳಿಗೆ ಈ ಕುರಿತು ಆತಂಕ ಬೇಡ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ