ಮಾರ್ಚ್ 31 ರಿಂದ ಆರಂಭವಾಗಲಿರುವ SSLC ಪರೀಕ್ಷೆಗೆ ವಿದ್ಯಾರ್ಥಿಗಳೆಲ್ಲರೂ ಅಭ್ಯಾಸ ನಡೆಸುತ್ತಿರುತ್ತೀರಾ. ಆದರೆ ನಿಮಗೆ ಪರೀಕ್ಷೆಯ ಕುರಿತು ಯಾವುದೇ ಅನುಮಾನಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಒಂದು ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ನೀವು ಈ ನಂಬರ್ಗೆ (Number) ಕರೆ ಮಾಡಿ ಬೇಕಾದ ಮಾಹಿತಿಯನ್ನು (Information) ಪಡೆದುಕೊಳ್ಳಬಹುದು. ಸಹಾಯವಾಣಿಗೆ ನೀವು ಕರೆ ಮಾಡಿದರೆ ನೀವು ಖಂಡಿತ ನಿಮ್ಮ ಸಮಸ್ಯೆಗಳಿಗೆ (Problem) ಪರಿಹಾರ ಕಂಡುಕೊಳ್ಳಬಹುದು.
ನೀವು ನಿಮ್ಮ ಹತ್ತಿರದ ಪ್ರದೇಶದಲ್ಲಿ ಇರುವ ಸಲಹೆಗಾರರಿಗೆ ಕರೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. SSLC ಅಂತಿಮ ವೇಳಾಪಟ್ಟಿ ಕೂಡಾ ಬಿಡುಗಡೆಯಾಗಿದೆ. ಆ ಪ್ರಕಾರವೇ ಪರೀಕ್ಷೆ ನಡೆಯಲಿದೆ. ನಂಬರ್ ಹಾಗೂ ಇನ್ನಿತರ ಅಧಿಕಾರಿಗಳ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಈ ಲಿಂಕ್ನಲ್ಲಿ ನಿಮಗೆ ಬೇಕಾದ ಎಲ್ಲಾ ವಿವರಗಳು ಲಭ್ಯವಿದೆ.
ಸಂಪರ್ಕ ಸಾಧಿಸುವುದಕ್ಕೆ ಬೇಕಾದ ಮಾಹಿತಿಗಳು ಲಭ್ಯವಿದೆ. 080-23445579 ಈ ನಂಬರ್ಗೂ ನೀವು ಕರೆ ಮಾಡಬಹುದು. ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ಮಾತ್ರ ನೀವು ಇಲ್ಲಿ ವಿಚಾರಿಸಬಹುದು.
ಇದನ್ನೂ ಓದಿ: Play School: ನಿಮ್ಮ ಮಕ್ಕಳನ್ನು ಪ್ಲೇ ಸ್ಕೂಲ್ಗೆ ಸೇರಿಸುವ ಮೊದಲು ಈ ನಿಯಮಗಳನ್ನು ಪಾಲಿಸಿ
080- 23310075 ಹೆಚ್ಚಿನ ಮಾಹಿತಾಗಿ ಈ ನಂಬರ್ಗೆ ನೀವು ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಪಬ್ಲಿಕ್ ರಿಲೇಶನ್ಶಿಫ್ ಆಫೀಸರ್ಗಳು ಈ ಕುರಿತು ಸಂವಹನ ನಡೆಸುತ್ತಾರೆ.
ಮಾರ್ಚ 31- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್
ಏಪ್ರಿಲ್ 03- ಗಣಿತ , ಸಮಾಜ ವಿಜ್ಞಾನ
ಏಪ್ರಿಲ್ 06 - ದ್ವಿತೀಯ ಭಾಷೆ
ಇಂಗ್ಲಿಷ್, ಕನ್ನಡ
ಏಪ್ರಿಲ್ 08- ಅರ್ಥಶಾಸ್ತ್ರ
ಏಪ್ರಿಲ್ 10- ವಿಜ್ಞಾನ, ರಾಜ್ಯಶಾಸ್ತ್ರ
ಏಪ್ರಿಲ್ 12- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ
ಹೀಗೆ ವೇಳಾಪಟ್ಟಿ ಬಿಡುಗಡೆಯಾಗಿದೆ ಇದಕ್ಕೆ ಸಂಬಂಧಿಸಿದಂತೆ ಆಯಾ ದಿನಾಂಕದಂದು ಪರೀಕ್ಷೆಗಳು ನಡೆಯಲಿದೆ. ಯಾವುದೇ ಬದಲಾವಣೆ ಆಗುವುದಿಲ್ಲ. ತುರ್ತು ಸಂದರ್ಭದ ಬದಲಾವಣೆ ಉಂಟಾದರೆ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ.
ವೇಳಾಪಟ್ಟಿ ವಿವರ ಹೀಗಿದೆ
2023 ಮಾರ್ಚ್ 09 ಕನ್ನಡ
ಮಾರ್ಚ್ 11 ಗಣಿತ, ಶಿಕ್ಷಣ
ಮಾರ್ಚ್ 13 ಅರ್ಥಶಾಸ್ತ್ರ
ಮಾರ್ಚ್ 14 ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ ಮತ್ತು ಮೂಲಗಣಿತ
ಮಾರ್ಚ್ 15 , ಪ್ರಥಮ ಭಾಷೆ ಪರೀಕ್ಷೆ
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಪರೀಕ್ಷೆಗಳು ನಡೆಯಲಿದೆ.
ಈ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲೂ ಸಹ ಸಹಾಯವಾಣಿ ಸಂಖ್ಯೆ ಈಗಾಗಲೇ ಬಿಡುಗಡೆಯಾಗಿದೆ. ನಿಮಗೆ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅನುಮಾನ ಇದ್ದರೂ ಸಹ ಪೋನ್ ಮಾಡಿ ವಿಚಾರಿಸಬಹುದಾಗಿದೆ. ಈ Examination related queries - 080- 23310076 ನಂಬರ್ಗೆ ನೀವು ಕರೆ ಮಾಡಬಹುದಾಗಿದೆ.
ಪಬ್ಲಿಕ್ ಪರೀಕ್ಷಾ ಮಾರ್ಗಸೂಚಿ
10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ವಿಷಯಗಳನ್ನು ಇಲ್ಲಿ ಗಮನಿಸಿ.ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಮಾರ್ಗಸೂಚಿ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಎಲ್ಲಾ ಶಾಲೆಗಳು ಉತ್ತರ ಪತ್ರಿಕೆಗಳನ್ನು ಅಂಚೆ ಸೇವೆಗಳ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಕಳುಹಿಸುತ್ತಿದ್ದು, ಇನ್ನು ಮುಂದೆ ಆ ಎಲ್ಲಾ ಉತ್ತರ ಪತ್ರಿಕೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಳಿಸಿ ಎಂದು ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ