• ಹೋಂ
  • »
  • ನ್ಯೂಸ್
  • »
  • Jobs
  • »
  • SSLC ಪರೀಕ್ಷೆ ಶುರುವಾದ್ರೂ ಈ ವಿದ್ಯಾರ್ಥಿಗಳಿಗೆ ಹಾಲ್ ​ಟಿಕೆಟ್​ ಸಿಕ್ಕಿಲ್ಲ! ಆಮೇಲೆನಾಯ್ತು ನೋಡಿ

SSLC ಪರೀಕ್ಷೆ ಶುರುವಾದ್ರೂ ಈ ವಿದ್ಯಾರ್ಥಿಗಳಿಗೆ ಹಾಲ್ ​ಟಿಕೆಟ್​ ಸಿಕ್ಕಿಲ್ಲ! ಆಮೇಲೆನಾಯ್ತು ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೇ ಅತಂತ್ರರಾಗಿದ್ದರು. ಆಮೇಲೆ ವಿದ್ಯಾರ್ಥಿಗಳು ಕಂಗಾಲಾಗಿರುವುದನ್ನು ನೋಡಿ ಪಾಲಕರು ಶಿಕ್ಷಣ ಸಚಿವರಿಗೆ ಫೋನ್​ ಮಾಡಿ ಹಾಲ್​ ಟಿಕೆಟ್​ ಕೊಡಿಸುವಂತೆ ಕೇಳಿಕೊಂಡಿದ್ದಾರೆ.

  • News18
  • 4-MIN READ
  • Last Updated :
  • Karnataka, India
  • Share this:
  • published by :

ಇಂದಿನಿಂದ ಹತ್ತನೇ ತರಗತಿ ಪರೀಕ್ಷೆ ಆರಂಭವಾಗಿದೆ. ಆದರೆ 8 ವಿದ್ಯಾರ್ಥಿಗಳಿಗೆ ಹಾಲ್​ ಟಿಕೇಟ್​ ನೀಡಿಲ್ಲ ಎಂಬ ದೂರು ಬರುತ್ತಿದೆ. ಪರೀಕ್ಷೆ (Exam) ಹತ್ತಿರ ಬಂದರೂ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗು ನಿರ್ಲಕ್ಷ ಮಾಡಿರುವುದು ತೋರುತ್ತಿದೆ. ಯಾಕೆಂದರೆ ಪರೀಕ್ಷೆ ಆರಂಭ ಆಗುವ ವೇಳೆ ಶಿಕ್ಷಣ ಸಚಿವರಿಗೆ ಫೋನ್​ ಮಾಡಿ ತಮ್ಮ ಮಕ್ಕಳ ಹಾಲ್​ ಟಿಕೇಟ್ (Hall Ticket)​ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಸಿ ನಾಗೇಶ್​​ (BC Nagesh) ಕೂಡಾ ತಮ್ಮ ಪ್ರತಿಕ್ರಿಕೆ ನೀಡಿದ್ದಾರೆ. ಹಾಗಾದರೆ ಅಲ್ಲಿ ನಿಜವಾಗಿ ನಡೆದದ್ದು ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 


ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೇ ಅತಂತ್ರರಾಗಿದ್ದರು. ಆಮೇಲೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪಾಲಕರು ಹೇಗಾದರೂ ಮಾಡಿ ತಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತಾಗಬೇಕು. ಯಾವುದೇ ತೊಂದರೆಯಾಗಿ ಅವರ ಒಂದು ವರ್ಷದ ಓದು ಹಾಳಾಗ ಬಾರದು ಎಂದು ಅವರು ಬಿಸಿ ನಾಗೇಶ್​ ಅವರಿಗೆ ಫೋನ್​ ಮಾಡಿದ್ದಾರೆ. ಆಗಿರುವ ಸಮಸ್ಯೆಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: Exam News: ಇಂದಿನಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಆಲ್​ ದಿ ಬೆಸ್ಟ್​​


ವಿದ್ಯಾರ್ಥಿ ಜೊತೆ ಚೆಲ್ಲಾಟ ಆಡುತ್ತಿರುವ ಖಾಸಗಿ ಶಾಲೆ
ಲಗ್ಗೆರೆಯ ಸೆಂಟ್ ಪಬ್ಲಿಕ್ ಶಾಲೆ ನಿರ್ಲಕ್ಷ್ಯ ತೋರಿದೆ ಎಂದು ಹೇಳಲಾಗುತ್ತಿದೆ. ಅಲ್ಲಿನ ಮುಖ್ಯೋದ್ಯಾಪಕರು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಹಾಲ್​ ಟಿಕೇಟ್​ ನೀಡಿಲ್ಲ ಎಂದು ಪಾಲಕರು ಆಕ್ಷೇಪ ಮಾಡಿದ್ದಾರೆ.




ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ
ಸಪ್ಲಿಮೆಂಟರಿ ಪರೀಕ್ಷೆ ಬರೆಸುತ್ತೇವೆ ಎನ್ನುತ್ತಿರುವ ಶಾಲಾ ಹೆಡ್ ಮಿಸ್ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.  1-8ನೇ ತರಗತಿಗೆ ಮಾತ್ರ ಶಾಲೆ ನಡೆಸಲು ಅವಕಾಶ ನೀಡಿರುವ ಇಲ್ಲಿ ಅನಧಿಕೃತವಾಗಿ 10ನೇ ತರಗತಿವರೆಗೆ ಶಾಲೆ ನಡೆಸುತ್ತಿರುವ ಸೆಂಟ್ ಮೇರಿಸ್ ಶಾಲೆ ಹಾಲ್​ ಟಿಕೆಟ್ಅನ್ನೂ ನೀಡದೇ ನಿರ್ಲಕ್ಷ ಮಾಡಿದೆ.  ಎಂಟು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೇ ಅತಂತ್ರರಾಗಿದ್ದರು ನಂತರ ಶಿಕ್ಷಣ ಸಚಿವರು ಇದಕ್ಕೆಲ್ಲಾ ಪರಿಹಾರ ಸೂಚಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ.


ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ
ಪಾಲಕರು ಫೋನ್​ ಮಾಡಿದ ನಂತರ ಈ ಕುರಿತು ಪರಿಶೀಲಿಸ್ತೇನೆ ಎಂದು ಭರವಸೆ ನೀಡದ ಕೆಲವೇ ನಿಮಿಷಗಳಲ್ಲಿ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​ ಸಿಗುವಂತೆ ಮಾಡಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.  ನ್ಯೂಸ್ 18 ಪ್ರತಿನಿಧಿಗೆ ಭರವಸೆ ನೀಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪೋಷಕರ ಜೊತೆ ಸೆಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯಿನಿಯೊಂದಿಗೆ ಮಾತಾಡಿ ಪರೀಕ್ಷೆ ಬರೆಯಲು ಅನುಮತಿಸಿದ್ದಾರೆ.

top videos


    ಹಾಲ್‌ ಟಿಕೆಟ್ ವಂಚಿತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ
    ಪೂಜೆ ಮಾಡಿ ಹಾಲ್ ಟಿಕೆಟ್‌ ಕೊಡ್ತಿವಿ ಎಂದು ಕೊಡಲೇ ಇಲ್ಲ ಕೊನೆಗೆ ಹಾಲ್​ ಟಿಕೆಟ್​ ಸಿಕ್ಕಿದೆ ಇದಕ್ಕಾಗಿ SSLC ವಿದ್ಯಾರ್ಥಿ ನಂದಿನಿ ಪೋಷಕರು ಧನ್ಯವಾದ ತಿಳಿಸಿದ್ದಾರೆ.
    ನನ್ನ ಮಗಳು ಇವತ್ತು ಪರೀಕ್ಷೆ ಬರೆಯೋದಿಲ್ಲ ಅಂದುಕೊಂಡ್ವಿ ಪೂಜೆ ಮಾಡಿ ಹಾಲ್ ಟಿಕೆಟ್‌ ಕೊಡ್ತಿವಿ ಎಂದು ಕೊಡಲೇ ಇಲ್ಲ ಸಪ್ಲಿಮೆಂಟರಿ ಪರೀಕ್ಷೆ ಬರೆಸ್ತೀವಿ ಅಂತಿದಾರೆ
    ನೀವು ಬೆಳಗ್ಗೆ ಬಂದು ನಮ್ಮ‌ ಮಗಳು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ
    ನಿಮಗೆ ಥ್ಯಾಂಕ್ಸ್ ಎಂದು ವಿದ್ಯಾರ್ಥಿನಿ ತಾಯಿ ನಾಗಮಣಿ ಮತ್ತು ವಿದ್ಯಾರ್ಥಿ ಸಹೋದರಿ ಮಾನಸ ಧನ್ಯವಾದ ತಿಳಿಸಿದ್ದಾರೆ.

    First published: