SSC CGL 2022ರ ಫಲಿತಾಂಶ ಪ್ರಕಟ, ಈ ಲಿಂಕ್​ ಮೂಲಕ ಚೆಕ್​ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶ್ರೇಣಿ ಒಂದರ ಪರೀಕ್ಷೆಯನ್ನು 1 ರಿಂದ 13 ಡಿಸೆಂಬರ್ 2022 ರವರೆಗೆ ಕಂಪ್ಯೂಟರ್ ಆಧಾರಿತ ಮೋಡ್‌ನಲ್ಲಿ ನಡೆಸಲಾಯಿತು. ಶ್ರೇಣಿ-ಒಂದರ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

SSC CGL 2022 ಶ್ರೇಣಿ 1 ರಲ್ಲಿ ಪೀಕ್ಷೆ ಬರೆದ ಅಭ್ಯರ್ಥಿಗಳ ಸ್ಕೋರ್​ ಇದೀಗ ಬಿಡುಗಡೆಯಾಗಿದೆ. ನೀವೂ ಕೂಡಾ ಈ ಫಲಿತಾಂಶಕ್ಕಾಗಿ (Result) ಕಾದವರಾಗಿದ್ದರೆ ಖಂಡಿತ ನಾವು ಇಲ್ಲಿ ನೀಡಿರುವ ಮಾಹಿತಿ (Information) ಅನುಸರಿಸಿ ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ (Visit) ನೀಡಬಹುದು. ಇನ್ನೂ ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ. ಸಿಬ್ಬಂದಿ ಆಯ್ಕೆ ಆಯೋಗವು SSC CGL ಫಲಿತಾಂಶ 2022 ಅಂಕಪಟ್ಟಿಯನ್ನು (Marks Card) ಈಗಾಗಲೇ ಬಿಡುಗಡೆ ಮಾಡಿದೆ.


ಶ್ರೇಣಿ ಒಂದr ಪರೀಕ್ಷೆಗೆ ಅಂಕಪಟ್ಟಿ ಬಿಡುಗಡೆಯಾಗಿದೆ. ಶ್ರೇಣಿ ಒಂದರ ಪರೀಕ್ಷೆಗೆ ಹಾಜರಾಗಿರುವ ಅರ್ಜಿದಾರರು ಈಗ SSC ಯ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಯನ್ನು ಇದೇ ಜಾಲತಾಣದಲ್ಲಿ ನೀವು ಪಡೆದುಕೊಳ್ಳಬಹುದು.


SSC CGL 2022: ಸ್ಕೋರ್‌ಕಾರ್ಡ್ ಪರಿಶೀಲಿಸಲು ಹೀಗೆ ಮಾಡಿ


1. SSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವಿಭಾಗದ ಮೇಲೆ ಟ್ಯಾಪ್ ಮಾಡಿ.
3. ಹೊಸ ಪುಟವು ತೆರೆಯುತ್ತದೆ, ಅಲ್ಲಿ ಅರ್ಜಿದಾರರು SSC CGL ಶ್ರೇಣಿ I ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
3. ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸೇವ್​ ಕ್ಲಿಕ್ ಮಾಡಿ.
4. ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ


ಇದನ್ನೂ ಓದಿ: SSLC, PUC ಪರೀಕ್ಷಾ ಮಾರ್ಗಸೂಚಿ ಪ್ರಕಟ, ಇಲ್ಲಿದೆ ಡಿಟೇಲ್ಸ್​​


ಶ್ರೇಣಿ ಒಂದರ ಪರೀಕ್ಷೆಯನ್ನು 1 ರಿಂದ 13 ಡಿಸೆಂಬರ್ 2022 ರವರೆಗೆ ಕಂಪ್ಯೂಟರ್ ಆಧಾರಿತ ಮೋಡ್‌ನಲ್ಲಿ ನಡೆಸಲಾಯಿತು. ಶ್ರೇಣಿ-ಒಂದರ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, ಅರ್ಜಿದಾರರನ್ನು ಶ್ರೇಣಿ-II ಪರೀಕ್ಷೆ ಬರೆಯಲು ಅರ್ಹರಾಗುತ್ತಾರೋ ಇಲ್ಲವೋ ಎನ್ನುವುದು ತಿಳಿಯುತ್ತದೆ.


2023 ರ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ SSC CGL ಅರ್ಹತಾ ಮಾನದಂಡಗಳನ್ನು ಬಿಡುಗಡೆ ಮಾಡಲಾಗಿದೆ. ಆ ವಿವರಗಳನ್ನು ನೀವು ಚೆಕ್ ಮಾಡಿ ನಿಮ್ಮ ಮುಂದಿನ ಅಂದರೆ 2023ರ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ. ಇದಕ್ಕೆ ಕೆಲವು ಮಾನದಂಡಗಳೂ ಸಹ ಇದೆ.


  1. ವಯಸ್ಸಿನ ಮಿತಿ

  2. ರಾಷ್ಟ್ರೀಯತೆ

  3. ಅರ್ಹತೆ


ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕಾಗುತ್ತೆ.


SSC CGL ಪರೀಕ್ಷೆಯನ್ನು 4 ಹಂತಗಳಲ್ಲಿ ಅಥವಾ ಶ್ರೇಣಿಗಳಲ್ಲಿ ನಡೆಸಲಾಗುತ್ತದೆ


  1. ಶ್ರೇಣಿ I

  2. ಶ್ರೇಣಿ II

  3. ಶ್ರೇಣಿ III

  4. ಶ್ರೇಣಿ IV


ಯಾವುದೇ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗವು ನಿಗದಿಪಡಿಸಿದ ಅಗತ್ಯ ಮಾನದಂಡಗಳನ್ನು ಪೂರೈಸಬೇಕು. ಹೀಗೆ ನಾಲ್ಕು ಹಂತದಲ್ಲಿ ನಡೆಯುವ ಪರೀಕ್ಷೆಯನ್ನು ನೀವು ಪಾಸ್ ಮಾಡಬೇಕಾಗುತ್ತದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ 2018-19 ರಿಂದ ನಿರ್ದಿಷ್ಟ ಹುದ್ದೆಗೆ (ಟ್ಯಾಕ್ಸ್ ಅಸಿಸ್ಟೆಂಟ್- ಗ್ರೂಪ್ ಸಿ) CGL ವಯಸ್ಸಿನ ಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ನವೀಕರಣದ ಪ್ರಕಾರ, ತೆರಿಗೆ ಸಹಾಯಕ ಹುದ್ದೆಗೆ ವಯಸ್ಸಿನ ಮಿತಿಯನ್ನು 20 ವರ್ಷದಿಂದ 18 ವರ್ಷಗಳಿಗೆ ಸಡಿಲಿಸಲಾಗಿದೆ.


2023 ರ ಪರೀಕ್ಷೆಯಲ್ಲಿ ವಿವಿಧ ಹುದ್ದೆಗಳಿಗೆ SSC CGL ವಯಸ್ಸಿನ ಮಿತಿ ಕನಿಷ್ಠ 18 ಮತ್ತು ಗರಿಷ್ಠ 32 ವರ್ಷಗಳನ್ನು ನಿಗದಿಪಡಿಸಲಾಗಿದೆ. ಈ ಅರ್ಹತಾ ಮಾನದಂಡಗಳನ್ನು ಅನುಸರಿಸಿ ನೀವೂ ಕೂಡಾ ಅಪ್ಲೈ ಮಾಡಬಹುದು. ಸಹಾಯಕ ವಿಭಾಗ ಅಧಿಕಾರಿ, ಸಹಾಯಕ, ಲೆಕ್ಕ ಪರಿಶೋಧಕರು, ಉಪನಿರೀಕ್ಷಕರು, ಜೂನಿಯರ್ ಅಕೌಂಟೆಂಟ್, ತೆರಿಗೆ ಸಹಾಯಕ, ಸಹಾಯಕ ಖಾತೆ ಅಧಿಕಾರಿ, ಮೇಲ್ ವಿಭಾಗದ ಗುಮಾಸ್ತ ಹೀಗೆ ಹಲವು ಹುದ್ದೆಗೆ ನೀವು ಆಯ್ಕೆಯಾಗುತ್ತೀರಿ.

First published: