• ಹೋಂ
  • »
  • ನ್ಯೂಸ್
  • »
  • Jobs
  • »
  • Mysuru: ಮೃಗಾಲಯದಲ್ಲಿ ಮಕ್ಕಳ ಸಮ್ಮರ್ ಕ್ಯಾಂಪ್, 10 ದಿನ ಪ್ರಾಣಿಗಳ ಜೊತೆ ಒಡನಾಟ ಮಾಡಿ

Mysuru: ಮೃಗಾಲಯದಲ್ಲಿ ಮಕ್ಕಳ ಸಮ್ಮರ್ ಕ್ಯಾಂಪ್, 10 ದಿನ ಪ್ರಾಣಿಗಳ ಜೊತೆ ಒಡನಾಟ ಮಾಡಿ

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್​

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್​

ಹತ್ತು ದಿನಗಳಲ್ಲೂ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ, ವಿದ್ಯಾರ್ಥಿಗಳು ಕ್ಯಾಪ್ಟಿವ್ ವೈಲ್ಡ್ ಅನಿಮಲ್ಸ್ ಮ್ಯಾನೇಜ್ಮೆಂಟ್ ಮತ್ತು ವನ್ಯಜೀವಿ ಸಂರಕ್ಷಣೆಯ ಮೂಲಭೂತ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.

  • News18 Kannada
  • 3-MIN READ
  • Last Updated :
  • Mysore, India
  • Share this:
  • published by :

ಶಾಲಾ ವಿದ್ಯಾರ್ಥಿಗಳು (School Students) ಈ ಸಮಯದಲ್ಲಿ ಸಮರ್​  ಕ್ಯಾಂಪ್​​ಗಳನ್ನು ಹುಡುಕುತ್ತಿರುತ್ತಾರೆ. ತಮ್ಮ ಬೇಸಿಗೆ ರಜೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ತಮ್ಮ ರಜಾ (Holiday) ದಿನಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಉತ್ತಮ ಸಮ್ಮರ್​ ಕ್ಯಾಂಪ್​ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಅನುಸಾರ ನೀವೂ ಸಹ ಈ ಕ್ಯಾಂಪ್​ (Summer Camp) ಜಾಯ್ನ್​​ ಆಗಬಹುದು. ಆದಷ್ಟು ಬೇಗ ರೆಜಿಸ್ಟರ್​ ಮಾಡಿಕೊಳ್ಳಿ. ರೆಜಿಸ್ಟರ್​ ಮಾಡಿಕೊಳ್ಳಲು ನಾವು ಈ ಕೆಳಗೆ ನೀಡಿರುವ ಮಾಹಿತಿಯನ್ನು (Information) ಅನುಸರಿಸಿ. 


ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ( ಮೈಸೂರು ಮೃಗಾಲಯ ),12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರಕ್ಕೆ ನೀವೂ ಸಹ ಸೇರಿಕೊಳ್ಳಬಹುದು. ಈ ಶಿಬಿರದ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.ಶಿಬಿರವು 10 ದಿನಗಳ ಕಾಲ ನಡೆಯಲಿದ್ದು, ಎರಡು ಬ್ಯಾಚ್‌ಗಳಲ್ಲಿ ಆಯೋಜಿಸಲಾಗಿದೆ. 1ನೇ ಬ್ಯಾಚ್ ಅ.17ರಿಂದ 26ರವರೆಗೆ ನಡೆಯಲಿದ್ದು, 2ನೇ ಬ್ಯಾಚ್ ಮೇ 5ರಿಂದ 14ರವರೆಗೆ ನಡೆಯಲಿದೆ.


ಹತ್ತು ದಿನಗಳಲ್ಲೂ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ, ವಿದ್ಯಾರ್ಥಿಗಳು ಕ್ಯಾಪ್ಟಿವ್ ವೈಲ್ಡ್ ಅನಿಮಲ್ಸ್ ಮ್ಯಾನೇಜ್ಮೆಂಟ್ ಮತ್ತು ವನ್ಯಜೀವಿ ಸಂರಕ್ಷಣೆಯ ಮೂಲಭೂತ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.


ಇದನ್ನೂ ಓದಿ: Music Band: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಂಗೀತ ಪ್ರಯೋಗ! ಇದಕ್ಕೆಂದೇ ರಚಿಸಲಾಯ್ತು ವಿದ್ಯಾರ್ಥಿಗಳ ತಂಡ


ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣೆ, ಪ್ರಾಣಿಗಳ ನಡವಳಿಕೆ, ಕಾಡು ಪ್ರಾಣಿಗಳ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ಕಲಿಯಬಹುದು. ಈ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡ ವಿಷಯಗಳ ಕುರಿತು ತರಗತಿಗಳು ಇರುತ್ತವೆ. ಮೃಗಾಲಯದ ಪಶುವೈದ್ಯಾಧಿಕಾರಿಗಳು ಮತ್ತು ಇತರ ವಿಷಯ ತಜ್ಞರು ನಿಮಗೆ ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ. ಸಂಪೂರ್ಣವಾಗಿ ಅವರೂ ಸಹ ನಿಮ್ಮೊಟ್ಟಿಗೆ ಭಾಗಿಯಾಗುತ್ತಾರೆ. ನೀವು ಅವರನ್ನು ಮಾತನಾಡಿಸಿ ಸಂವಾದ ಮಾಡಿ ಅನುಮಾನಗಳಿದ್ದಲ್ಲಿ ಕೇಳಿ ಬಗೆಹರಿಸಿಕೊಳ್ಳಬಹುದು.




ಎರಡೂ ಬ್ಯಾಚ್‌ಗಳಿಗೆ ಅರ್ಜಿ ನಮೂನೆಗಳನ್ನು ಮೃಗಾಲಯ ಕಚೇರಿಯಿಂದ ಪಡೆಯಬಹುದು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಆಧಾರ್ ಕಾರ್ಡ್ ಅಥವಾ ಜನ್ಮ ಪ್ರಮಾಣಪತ್ರ ಮತ್ತು ಇತ್ತೀಚಿನ ಸ್ಟ್ಯಾಂಪ್ ಗಾತ್ರದ ಫೋಟೋ ಪ್ರತಿಗಳೊಂದಿಗೆ ಎಪ್ರಿಲ್ 5 ರ ಮೊದಲು ಶಿಬಿರ ಶುಲ್ಕವನ್ನು ರೂ ಪಾವತಿಸಿ ಸಲ್ಲಿಸಬೇಕು. ಶಿಬಿರ ಶುಲ್ಕ ಒಬ್ಬರಿಗೆ 1,000. ಆಗಿರುತ್ತದೆ. ಇದನ್ನು ಪಾವತಿಸಿ ನೀವು ರೆಜಿಸ್ಟರ್​​ ಮಾಡಿಕೊಳ್ಳಬಹುದು.




ವಿವರಗಳಿಗಾಗಿ, ಮೊಬೈಲ್​ ಸಂಖ್ಯೆಯನ್ನು ನಾವಿಲ್ಲಿ ನೀಡಿದ್ದೇವೆ: 96866-68099 ಗೆ ಕರೆ ಮಾಡಿ
ಅಥವಾ ಇ-ಮೇಲ್ ಮಾಡಿ: edumysore99@gmail.com.


ಶಿಬಿರದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಮಾಹಿತಿ ಮತ್ತು ವಿವರಗಳನ್ನು ಕಳುಹಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಆದಷ್ಟು ಬೇಗ ರೆಜಿಸ್ಟರ್​ ಮಾಡಿಕೊಳ್ಳಿ. ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

top videos


    ಶಾಲಾ ಮಕ್ಕಳು ತರಗತಿಯಿಂದ ಬೇಸತ್ತು ಹೋಗಿ ಪ್ರತಿನಿತ್ಯ ಪಟ್ಟಿ, ಪುಸ್ತಕ ಮತ್ತು ಪಾಠ ಇವುಗಳಿಂದ ಚೂರು ಹೊರಬಂದು ಉತ್ತಮ ಸಮಯವನ್ನು ಕಳೆಯಲು ಇಂತಹ ಬೇಸಿಗೆ ಶಿಬಿರಗಳು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಇನ್ನಷ್ಟು ಚುರುಕುಗೊಳಿಸಲು ಬೇಸಿಗೆ ಶಿಬಿರಗಳಿಗೆ ಸೇರಿಸಿ. ನೀವೂ ಅವರ ಜೊತೆ ಮಾಹಿತಿ ಹಂಚಿಕೊಳ್ಳಿ.

    First published: