• ಹೋಂ
  • »
  • ನ್ಯೂಸ್
  • »
  • jobs
  • »
  • Mid Day Meal: ಬಿಸಿ ಊಟಕ್ಕೆ ದಾನಿಗಳ ನೆರವು, ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ

Mid Day Meal: ಬಿಸಿ ಊಟಕ್ಕೆ ದಾನಿಗಳ ನೆರವು, ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ

ಬಿಸಿಊಟ

ಬಿಸಿಊಟ

ನಿಯಮ ಹಾಗೂ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ದಾನಿಗಳು ನೆರವು ನೀಡಬಹುದು. ಹಾಗೂ ಶಿಕ್ಷಕರು ಮತ್ತು ಎಸ್​ಡಿಎಂಸಿ ಅವರೂ ಸಹ ಈ ಷರತ್ತಿನ ಅನ್ವಯವೇ ದಾನಿಗಳಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸಬೇಕು.

  • News18 Kannada
  • 3-MIN READ
  • Last Updated :
  • Karnataka, India
  • Share this:

ದಿನೇ ದಿನೇ ಮಕ್ಕಳ ಬಿಸ ಊಟ ಸಮಸ್ಯೆ ಕುರಿತು ಚರ್ಚೆಯಾಗುತ್ತಿತ್ತು. ಈ ಕುರಿತು ಒಂದಿಷ್ಟು ಮಹತ್ವದ ನಿಯಮಗಳನ್ನು ಸರ್ಕಾರ (Government) ಜಾರಿಗೊಳಿಸುತ್ತಿದ್ದೆ. ಇದರ ನಡುವೆಯೇ ಮಕ್ಕಳ (Students) ಬಿಸಿಯೂಟಕ್ಕೆ (Mid Day Meal) ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ದಾನಿಗಳು ನೀಡಬಹುದು ಎಂಬ ಸುತ್ತೋಲೆ ಹೊರಡಿಸಿದೆ. ಆದರೆ ಸ್ವೀಕರಿಸುವಾಗ ಕೆಲವು ನಿಯಮಗಳನ್ನು ಶಾಲೆಗಳು ಪಾಲಿಸಬೇಕಾಗುತ್ತದೆ. ಆ ಕುರಿತು ಇನ್ನಷ್ಟು ವಿವರವಾದ ಮಾಹಿತಿ (Information) ಇಲ್ಲಿದೆ ನೋಡಿ.


ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಜಾರಿಗೊಳಿಸಿರುವ ಈ ಯೋಜನೆಯನ್ನು ರಾಜ್ಯದಲ್ಲೂ ಸಹ ಈ ವರ್ಷ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.


ಈ ಯೋಜನೆ ಅಡಿಯಲ್ಲಿ ದಾನಿಗಳು, ಟ್ರಸ್ಟ್‌, ಸಂಘ- ಸಂಸ್ಥೆಗಳು, ಎಸ್‌ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೆರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು ಎಂದು ಸೂಚನೆ ನೀಡಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕಾಗುತ್ತದೆ.


ಇದನ್ನೂ ಓದಿ: Higher Education: ಉನ್ನತ ಶಿಕ್ಷಣ ಕುಂದುಕೊರತೆ ನಿವಾರಿಸಲು ಬರಲಿದೆ ಹೊಸ ಪೋರ್ಟಲ್


ವಿಶೇಷವಾಗಿ ಊರಿನ ಹಬ್ಬ, ಹರಿದಿನ, ಜಾತ್ರೆ, ತೇರು, ರಾಷ್ಟ್ರೀಯ ಹಬ್ಬಗಳು, ಜನ್ಮ ದಿನ, ಜಯಂತಿ, ವಿವಾಹ, ವಾರ್ಷಿಕೋತ್ಸವ ಹೀಗೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ವಿತರಿಸಬಹುದಾಗಿದೆ.


ಇದನ್ನು ವಿತರಿಸಲೂ ಸಹ ಕೆಲವು ಮಾರ್ಗ ಸೂಚಿಗಳನ್ನು ಅನುಸರಿಸಬೇಕಾಗುತ್ತದೆ


1. ದಾನಿಗಳು ಯಾರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು
2. ಎಸ್‌ಡಿಎಂಸಿ ಸದಸ್ಯರೊಂದಿಗೆ ಈ ಕುರಿತು ಮಾತನಾಡಬೇಕು
3. ತಿಂಗಳಲ್ಲಿಎರಡು ದಿನ ಮಾತ್ರ ಆಯೋಜನೆಗೆ ಅವಕಾಶ
4. ವಿಶೇಷ ಭೋಜನ ನೀಡಿದವರನ್ನು ಶಾಲೆ ಸನ್ಮಾನಿಸಬೇಕು


ಕೆಲವು ಷರತ್ತುಗಳು ಅನ್ವಯವಾಗುತ್ತದೆ. 
1. ಮೊಟ್ಟೆ, ಶೇಂಗಾ ಚಿಕ್ಕಿ, ಸಿಹಿ ಹಲ್ವ, ಬಿಸ್ಕೇಟ್‌, ಹಪ್ಪಳ, ಉಪ್ಪಿನಕಾಯಿ ನೀಡಬಹುದು
2. ಸಂಜೆ ವೇಳೆ ಸ್ನ್ಯಾಕ್ಸ್‌, ಬಾಳೆ ಹಣ್ಣು, ಇತರೆ ಹಣ್ಣು, ಹಂಪಲು, ಮೊಳಕೆ ಕಾಳು ನೀಡಬಹುದು
3. ಆಹಾರ ಪದಾರ್ಥ ಪಟ್ಟಿಯಲ್ಲಿರುವುದನ್ನೇ ನೀಡಬೇಕು
4. ಋುತುಮಾನಕ್ಕೆ ತಕ್ಕಂತೆ ಸ್ಥಳೀಯವಾಗಿ ಕಡಿಮೆ ಬೆಲೆಗೆ ಹೇರಳವಾಗಿ ಸಿಗುವ ಪದಾರ್ಥ ಸ್ವೀಕರಿಸಬೇಕು
5. ಮಿಕ್ಸಿ, ಗ್ರೈಂಡರ್‌, ತಟ್ಟೆ , ಲೋಟ ಕೂಡ ನೀಡಬಹುದು


ಸಾಂದರ್ಭಿಕ ಚಿತ್ರ


ಈ ಮೇಲಿನ ಎಲ್ಲಾ ನಿಯಮ ಹಾಗೂ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ದಾನಿಗಳು ನೆರವು ನೀಡಬಹುದು. ಹಾಗೂ ಶಿಕ್ಷಕರು ಮತ್ತು ಎಸ್​ಡಿಎಂಸಿ ಅವರೂ ಸಹ ಈ ಷರತ್ತಿನ ಅನ್ವಯವೇ ದಾನಿಗಳಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸಬೇಕು. ಆದ್ದರಿಂದ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.


ಬಿಸಿ ಊಟ ವಿತರಣೆಯಲ್ಲಿ ಬದಲಾವಣೆ


ಹಿರಿಯರ ವಿಭಾಗದ ವಿದ್ಯಾರ್ಥಿಗಳು ಹಾಗು ಕಿರಿಯ ವಿದ್ಯಾರ್ಥಿಗಳು ಒಂದೇ ಬಾರಿ ಊಟಕ್ಕೆ ಬರುವುದು. ನೂಕುನುಗ್ಗಲಾಗುವುದು ಮತ್ತು ಗಲಾಟೆ ಆಗುತ್ತಿರುವ ಕಾರಣ ಅಷ್ಟೇ ಅಲ್ಲ ಶಾಲಾ ಮಕ್ಕಳು ತಮ್ಮ ತಟ್ಟೆಗಳನ್ನು ತೊಳೆಯುವ ಸಂದರ್ಭದಲ್ಲೂ ನೂಕು ನುಗ್ಗಲಾಗುತ್ತಿದೆ. ಈ ಹಿನ್ನಲೆಯಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 1.45 ರವರೆಗೆ, ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ರಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

First published: