ಕರ್ನಾಟಕ ಎಸ್‌ಎಸ್‌ಪಿ (SSP) ವಿದ್ಯಾರ್ಥಿವೇತನ 2023 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ಬಿಡುಗಡೆಯಾಗಿದೆ. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಲಭ್ಯವಿದೆ. SSP ಕರ್ನಾಟಕ ಸ್ಕಾಲರ್‌ಶಿಪ್ (Scholarship) 2023 ಅರ್ಜಿ ನಮೂನೆ, ದಿನಾಂಕಗಳು ಮತ್ತು ವಿದ್ಯಾರ್ಥಿವೇತನ ಯೋಜನೆಯ ಮಾಹಿತಿಯನ್ನು ಇಲ್ಲಿ ನಿಮಗೆ ತಿಳಿಸುತ್ತೇವೆ. ಕರ್ನಾಟಕ ರಾಜ್ಯ ಸರ್ಕಾರವು SSP ಸ್ಕಾಲರ್‌ಶಿಪ್ 2023ಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿವೇತನಕ್ಕೆ ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಂತಿಮ ದಿನಾಂಕದ (Date) ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ.
ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್ ಶಿಪ್ಗೆ ಅಪ್ಲೈ ಮಾಡಬಹುದು. ಏಕೆಂದರೆ ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು ನೀಡುತ್ತದೆ. ಅಧಿಕೃತ ಪ್ರಾಧಿಕಾರವು ಈ ವಿದ್ಯಾರ್ಥಿವೇತನ ಯೋಜನೆಗಾಗಿ ವಿಶೇಷ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ನೀವೂ ಸಹ ನಿಮ್ಮ ದಾಖಲೆಗಳನ್ನು ನೋಂದಣಿ ಮಾಡುವ ಮೂಲಕ ಈ ಸ್ಕಾಲರ್‌ಶಿಪ್ ಪಡೆಯಬಹುದು.
ಇದನ್ನೂ ಓದಿ: Education Loan: ಎಜುಕೇಶನ್ ಲೋನ್ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರೀ ಇಳಿಕೆ!
ಎಸ್‌ಎಸ್‌ಪಿ ಕರ್ನಾಟಕ ಸ್ಕಾಲರ್‌ಶಿಪ್ 2023 ಎಂದರೇನು?
ಕರ್ನಾಟಕ ಸರ್ಕಾರವು ಕರ್ನಾಟಕದ ಎಲ್ಲಾ ಅರ್ಹ ಮತ್ತು ಸಮರ್ಥ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ಅನ್ನು ತೆರೆದಿದೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಅರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಹೆಸರಿನ ಮತ್ತು ಮೊತ್ತದ ವಿದ್ಯಾರ್ಥಿ ವೇತನ ದೊರೆಯುತ್ತದೆ. ಎಲ್ಲಾ ಅರ್ಹ ವಿದ್ಯಾರ್ಥಿ ವರ್ಗಗಳು ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ಸರ್ಕಾರದ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನವಾಗಿದೆ.
ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅಗತ್ಯವಿರುವ ದಾಖಲೆಗಳು?
1. ಅಭ್ಯರ್ಥಿ ಮತ್ತು ಅಭ್ಯರ್ಥಿಯ ಪೋಷಕರ ಆಧಾರ್ ಕಾರ್ಡ್.
2. ಶಾಲಾ ಕಾಲೇಜು ಶುಲ್ಕ ರಶೀದಿ
3. ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ
4. ಶಾಲೆ ಮತ್ತು ಕಾಲೇಜು ದಾಖಲಾತಿ ಸಂಖ್ಯೆ
5. ಪಡಿತರ ಚೀಟಿ
6. ಕುಟುಂಬದ ಆದಾಯ ಪುರಾವೆ ಪ್ರಮಾಣಪತ್ರ
ಇವಿಷ್ಟು ದಾಖಲೆಗಳನ್ನು ಹೊಂದಿಸಿಡಿ.
ಸಮಾಜ ಕಲ್ಯಾಣ ಇಲಾಖೆ ಯೋಜನೆ
ಈ ವಿದ್ಯಾರ್ಥಿ ವೇತನಕ್ಕೆ ನೀವೀಗ ಅಪ್ಲೈ ಮಾಡಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡುವುದಾದರೆ ನೀವು ಮೇಲೆ ನೀಡಿರುವ ದಾಖಲೆಗಳನ್ನು ಹೊಂದಿರಲೇ ಬೇಕಾಗುತ್ತದೆ. ಏಪ್ರಿಲ್ 2023 ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಲು ಕೊನೆಯ ತಿಂಗಳಾಗಿದೆ. ನಿಖರವಾದ ದಿನಾಂಕ ಇನ್ನೂ ಬಿಡುಗಡೆ ಮಾಡಿಲ್ಲಾ ಆದರೆ ಈ ಸ್ಕಾಲರ್ ಶಿಪ್ಗೆ ಸಂಬಂಧಿಸಿದಂತೆ ನೀವು ಮಾಹಿತಿ ಪಡೆಯಬೇಕಾದರೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ.
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು: ಇಲ್ಲಿ ಕ್ಲಿಕ್ ಮಾಡಿ
ನಾವು ಈ ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.
ಸರಿಯಾದ ಇ-ಮೇಲ್ ಐಡಿ ಹಾಗೂ ದೂರವಾಣಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಆನ್‌ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಮುಖ್ಯವಾಗಿ ನೀವು ಬ್ಯಾಂಕ್ ಖಾತೆ ನಂಬರ್ ಹೊಂದಿರಬೇಕಾಗುತ್ತದೆ. ವಾರ್ಷಿಕ ಆದಾಯ ಮಿತಿಯೊಳಗಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಸರ್ಕಾರ ನೀಡುತ್ತಿರುವ ಈ ಯೋಜನೆಯ ಸದುಪಯೋ ಪಡಿಸಿಕೊಳ್ಳಿ ನೀವೂ ಫಲಾಭವಿಗಳಾಗಿ. ಇದರಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಅಷ್ಟೇ ಅಲ್ಲ ಮಕ್ಕಳ ವಿದ್ಯಾಭ್ಯಾಕ್ಕೆ ಪ್ರೋತ್ಸಾಹ ದೊರೆಯುತ್ತದೆ.
ಸಮಾಜ ಕಲ್ಯಾಣ ಇಲಾಖೆ ಯೋಜನೆ ಅಡಿಯಲ್ಲಿ ನೀವು ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಅಧಿಕೃತ ಜಾಲತಾಣದಲ್ಲಿ ಇನ್ನೂ ಹಲವು ವಿದ್ಯಾರ್ಥಿ ವೇತನಗಳ ಮಾಹಿತಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ