ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ (Siddeshwar Swamiji) ಜೀವನದ ಅಂಶಗಳು ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಉತ್ತರ ಕರ್ನಾಟಕದಲ್ಲಿ (Karnataka) ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಸ್ವಾಮೀಜಿ ಪ್ರವಚನಕಾರರಾಗಿಯೂ ಪ್ರಸಿದ್ಧಿ ಗಳಿಸಿದ್ದರು.ಅವರು ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ವಿವಿಧ ರೀತಿಯ ಬದಲಾವಣೆಗೆ ಕಾರಣವಾಗುತ್ತಿತ್ತು. ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ (Inspirational) ಜೀವನ (Life) ಶೈಲಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಲುವಾಗಿ ಭಕ್ತರು ಇವರ ಜೀವನವನ್ನು ಪಠ್ಯದಲ್ಲಿ ಸೇರಿಸುವಂತೆ ಕೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಈ ಕುರಿತು ತಮ್ಮ ಪ್ರತ್ಯುತ್ತರ ನೀಡಿದ್ದಾರೆ. ಅವರು ಹೇಳಿದ್ದೇನು? ಶ್ರೀಗಳ ಜೀವನ ಪಠ್ಯವಾಗಿ ಬದಲಾಗುತ್ತಾ? ಈ ಕುರಿತು ಭಕ್ತರ ಬೇಡಿಕೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ನಾವು ಎಲ್ಲವನ್ನೂ ಮಾಡಲು ಸಿದ್ಧರಿದ್ದೇವೆ. ವಿಲ್ನಲ್ಲಿ ಏನಿದೆ ಅದನ್ನು ನೆಡೆಸಿಕೊಂಡು ಹೋಗುವುದೇ ನಮ್ಮ ಕರ್ತವ್ಯ. ಅದರಲ್ಲಿ ಏನಿದೆಯೋ ಅದನ್ನು ಆ ಚೌಕಟ್ಟಿನಲ್ಲಿ ನಡೆಸಿಕೊಂಡು ಹೋಗುವುದೇ ನಮ್ಮ ಮುಂದಿನ ನಡೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಲ್ ನಲ್ಲಿ ಶ್ರೀಗಳು ತನ್ನ ಯಾವುದೇ ಮೂರ್ತಿಯನ್ನು ನಿರ್ಮಿಸ ಬೇಡಿ. ನನ್ನನ್ನು ಸಂಪೂರ್ಣವಾಗಿ ಮರೆತುಬಿಡಿ. ನಾನೂ ಸಂಪೂರ್ಣವಾಗಿ ಮರೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Siddeshwar Swamiji: ಸರಳ ಸಂತ ಸಿದ್ದೇಶ್ವರ ಸ್ವಾಮೀಜಿ ಕಲಿಸಿದ ಬದುಕಿನ ಪಾಠಗಳಿವು
ಆ ವಿಲ್ನಲ್ಲಿ ಅವರು ಬರೆದ ಪ್ರಕಾರ ಅವರಿಗೆ ತಮ್ಮ ನೆನಪು ಮುಂದುವರೆಯುತ್ತಾ ಹೋಗುವುದು ಇಷ್ಟವಿಲ್ಲ ಎಂಬುದು ತಿಳಿದುಬರುತ್ತದೆ. ಯಾವಾಗಲೂ ಪಂಚತತ್ವದಿಂದ ಬಂದ ದೇಹ ಪಂಚತತ್ವದಲ್ಲೇ ಲೀನವಾಗಿ ಹೋಗಬೇಕು ಎಂಬ ಆಸೆ ಅವರದ್ದಾಗಿತ್ತು. ಆ ಕಾರಣದಿಂದ ಪಠ್ಯ ಪುಸ್ತಕದಲ್ಲಿ ಸಿದ್ದೇಶ್ವರ ಶ್ರೀಗಳ ಕುರಿತು ಪಾಠವನ್ನು ಹಾಕಲು ಈ ಒಂದು ಅಂಶ ಬಹುಷಃ ಅಡ್ಡಿಯಾಗಲಿದೆ. ಆದರೂ ಭಕ್ತರ ಒತ್ತಾಸೆಗೆ ಈ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ತನ್ನ ಸ್ಮಾರಕವನ್ನೂ ಸಹ ನಿರ್ಮಿಸಬೇಡಿ ಎಂದು ಹೇಳಿದ್ದಾರೆ ಆ ಕಾರಣ ಪಠ್ಯ ಪುಸ್ತಕದ ವಿಚಾರದಲ್ಲಿ ಏನಾಗುತ್ತೆ ಕಾದು ನೋಡಬೇಕಿದೆ. ಆದರೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಸಹ ಇವರ ಜೀವನದ ಸರಳತೆ ಒಂದು ಪಾಠವೇ ಸರಿ. ವಿಜಯಪುರದಲ್ಲಿ ಮಾತನಾಡುತ್ತಾ ಸಿಎಂ ಬೊಮ್ಮಾಯಿ ಅವರೂ ಸಹ ಈ ವಿಚಾರವಾಗಿ ಮಾತನಾಡಿದ್ದಾರೆ. ಈ ಮೇಲಿನ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಶ್ರೀಗಳ ಹಿತ ವಚನ
ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆ ವಿಶ್ವ-ಚಿಂತನೆ ಹಾಗೂ ಸತ್ಯಶೋಧನೆಗಳಿಂದ ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂಥಹ ಜೀವನದಲ್ಲಿ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ ಎಂದು ಅವರೇ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ