• Home
  • »
  • News
  • »
  • jobs
  • »
  • Education: ಫಿನ್‌ಲ್ಯಾಂಡ್ ಶಿಕ್ಷಣ ಪದ್ಧತಿಗೂ ನಮ್ಮಲ್ಲಿನ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸವೇನು? ಇಲ್ಲಿದೆ ಡಿಟೇಲ್ಸ್​

Education: ಫಿನ್‌ಲ್ಯಾಂಡ್ ಶಿಕ್ಷಣ ಪದ್ಧತಿಗೂ ನಮ್ಮಲ್ಲಿನ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸವೇನು? ಇಲ್ಲಿದೆ ಡಿಟೇಲ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಲ್ಲಿಯವರೆಗೆ ದೆಹಲಿ ಸರ್ಕಾರವು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ವಿವಿಧ ದೇಶಗಳಿಗೆ ತರಬೇತಿಗಾಗಿ ಕಳುಹಿಸಿದೆ. 420 ಶಿಕ್ಷಕರು ಕೇಂಬ್ರಿಡ್ಜ್‌ಗೆ ಮತ್ತು 600 ಶಿಕ್ಷಕರು ಸಿಂಗಾಪುರಕ್ಕೆ ತರಬೇತಿಗಾಗಿ ಹೋಗಿದ್ದಾರೆ. ದೇಶದಲ್ಲಿ ಐಐಎಂ ಅಹಮದಾಬಾದ್ ಮತ್ತು ಲಕ್ನೋದಂತಹ ನಿರ್ವಹಣಾ ಸಂಸ್ಥೆಗಳಲ್ಲಿ ಸರ್ಕಾರಿ ಶಾಲೆಗಳ 860 ಶಾಲಾ ಮುಖ್ಯಸ್ಥರನ್ನು ತರಬೇತಿಗಾಗಿ ಕಳುಹಿಸಲಾಗಿದೆ.

ಮುಂದೆ ಓದಿ ...
  • Share this:

ಕಳೆದ ಕೆಲವು ದಿನಗಳಿಂದ ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೆ ತರಬೇತಿಗಾಗಿ ಕಳುಹಿಸುವ ಕುರಿತು ದೆಹಲಿ(Dehali) ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ (Governor) ನಡುವಿನ ಸಂಘರ್ಷ ತಾರಕಕ್ಕೇರಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಸರಕಾರಿ ಶಿಕ್ಷಕರನ್ನು ತರಬೇತಿಗಾಗಿ ಫಿನ್‌ಲ್ಯಾಂಡ್‌ಗೆ (Finland) ಕಳುಹಿಸುವ  ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧಿತವಾಗಿ ಎಲ್‌ಜಿ (ಲಿಫ್ಟ್‌ನೆಂಟ್) ಕಚೇರಿಗೆ ಫೈಲ್ ಅನ್ನು ಕಳುಹಿಸಿದ್ದರು. ಆದರೆ ಈ ಫೈಲ್‌ಗೆ (File) ಎಲ್‌ಜಿ ಕಚೇರಿ ಇನ್ನೂ ಅನುಮೋದನೆ ನೀಡಿಲ್ಲ.


ಶಿಕ್ಷಕರನ್ನು ತರಬೇತಿಗೆ ಫಿನ್‌ಲ್ಯಾಂಡಿಗೆ ಕಳುಹಿಸುವ ವಿಚಾರಕ್ಕೆ ತಗಾದೆ


ಫೈಲ್ ಅನ್ನು ಸಿಎಂಗೆ ಹಿಂತಿರುಗಿಸಿರುವ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಹಿಂದಿನ ತರಬೇತಿಯ ವೆಚ್ಚ ಹಾಗೂ ಪ್ರಯೋಜನಗಳ ವರದಿಯನ್ನು ಕೇಳಿದ್ದಾರೆ. ಹೀಗೆ ರಾಜಕೀಯ ವಲಯದಲ್ಲೂ ಚರ್ಚೆಗೆ, ಜಗಳಗಳಿಗೆ ಕಾರಣವಾಗಿರುವ ಶಿಕ್ಷಕರ ತರಬೇತಿ ವಿಚಾರ ಇನ್ನಷ್ಟು ವಿಸ್ತರಿಸುತ್ತಲೇ ಇದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮತ್ತು ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೆ ಕಳುಹಿಸುವುದಕ್ಕೆ ನಕಾರ ಸೂಚಿಸಿರುವುದನ್ನು ಕುರಿತು ಎಲ್‌ಜಿ ಕಚೇರಿಗೆ ಮೆರವಣಿಗೆ ನಡೆಸಿದ್ದಾರೆ.


ಗವರ್ನರ್ ನಮ್ಮ ಮುಖ್ಯೋಪಾಧ್ಯಾಯರಲ್ಲ, ಕೇಜ್ರಿವಾಲ್ ವಾಗ್ದಾಳಿ


ರಾಜಕೀಯ ಕಾರಣಗಳಿಗಾಗಿ ದೆಹಲಿ ಸರ್ಕಾರದ ಕಾರ್ಯಗಳನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದು, ಆಡಳಿತದ ಕೆಲಸಗಳನ್ನು ಪರಿಶೀಲಿಸಲು ಗವರ್ನರ್ ನಮ್ಮ ಮುಖ್ಯೋಪಾಧ್ಯಾಯರಲ್ಲ. ನಮ್ಮ ಪ್ರಸ್ತಾಪಗಳಿಗೆ ಹೌದು ಅಥವಾ ಇಲ್ಲ ಎಂಬುದನ್ನು ಮಾತ್ರವೇ ಅವರು ಹೇಳಬೇಕು ಎಂದು ಕೇಜ್ರಿವಾಲ್ ದೂಷಿಸಿದ್ದಾರೆ. ತಾವು ಮಾಡಿರುವ ತಪ್ಪನ್ನು ತಿದ್ದಿಕೊಂಡು ಲಿಫ್ಟ್‌ನೆಂಟ್ ಗವರ್ನರ್ ಶಿಕ್ಷಕರನ್ನು ತರಬೇತಿಗಾಗಿ ಫಿನ್‌ಲ್ಯಾಂಡ್‌ಗೆ ಕಳುಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: Anganwadi Workers: 2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


ದೆಹಲಿ ಸರಕಾರ ಶಿಕ್ಷಕರನ್ನು ತರಬೇತಿಗಾಗಿ ಫಿನ್‌ಲ್ಯಾಂಡ್‌ಗೆ ಏಕೆ ಕಳುಹಿಸಲು ಬಯಸುತ್ತಿದೆ? ಅಲ್ಲಿನ ಶಿಕ್ಷಣ ಪದ್ಧತಿಗೂ ನಮ್ಮಲ್ಲಿನ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸವೇನು? ಮೊದಲಾದ ಸಂದೇಹಗಳು ಕುತೂಹಲಗಳು ಮೂಡುವುದು ಸಹಜ. ಹಾಗಿದ್ದರೆ ಈ ಕುರಿತು ಇನ್ನಷ್ಟು ವಿವರಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


ಫಿನ್‌ಲ್ಯಾಂಡ್‌ನ ಶಿಕ್ಷಣ ವ್ಯವಸ್ಥೆ ಹೇಗಿದೆ?


ಫಿನ್‌ಲ್ಯಾಂಡ್‌ನಲ್ಲಿ ಹೈಸ್ಕೂಲ್ ಪರೀಕ್ಷೆಗಳಿಗೆ ಮುನ್ನ ಇತರ ಯಾವುದೇ ಪ್ರಮಾಣಿತ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂಬ ವಿಷಯ ಆಶ್ಚರ್ಯವನ್ನುಂಟು ಮಾಡುವುದು ಸಹಜವಾಗಿದೆ. ಪ್ರೌಢಶಾಲೆಗೆ ವರ್ಷಾಂತ್ಯದಲ್ಲಿ ಒಂದೇ ಪರೀಕ್ಷೆ ಇರುತ್ತದೆ. ಇನ್ನು ವರದಿಯ ಪ್ರಕಾರ ಫಿನ್‌ಲ್ಯಾಂಡ್‌ನಲ್ಲಿ ಯಾವುದೇ ರ‍್ಯಾ ಆ್ಯಂಕರ್ಕರ್ ರ‍್ಯಾಂಕಿಂಗ್ ಪದ್ಧತಿ ಇಲ್ಲ. ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ಸ್ಪರ್ಧೆಯಿಲ್ಲ.


ಇಲ್ಲಿನ ಶಾಲೆಗಳಿಗೆ ಸರಕಾರ ಸಹಾಯ ಮಾಡುತ್ತದೆ. ರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಮಟ್ಟದವರೆಗಿನ ಎಲ್ಲಾ ಶಾಲೆಗಳು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಜನರಿಗೆ ಮಾತ್ರ ಉಸ್ತುವಾರಿ ವಹಿಸುತ್ತವೆಯೇ ಹೊರತು ಯಾವುದೇ ವ್ಯಾಪಾರ ನಾಯಕ, ಮಿಲಿಟರಿ ನಾಯಕ ಅಥವಾ ವೃತ್ತಿಪರ ರಾಜಕಾರಣಿಗಳಿಗೆ ಹೊಣೆ ಹೊರಿಸಿಲ್ಲ.


ಪ್ರತಿಯೊಂದು ಶಾಲೆಯು ಒಂದು ಸಾಮಾನ್ಯ ರಾಷ್ಟ್ರೀಯ ಗುರಿಯನ್ನು ಹೊಂದಿದೆ ಮತ್ತು ಅದನ್ನು ಸಾಧಿಸಲು ವಿಶ್ವವಿದ್ಯಾನಿಲಯದ ತರಬೇತಿ ಪಡೆದ ಶಿಕ್ಷಕರ ಸಮೂಹವನ್ನೇ ಹೊಂದಿದೆ. ಗ್ರಾಮೀಣ ಹಾಗೂ ನಗರದಿಂದ ಬಂದಿರುವ ಮಕ್ಕಳು ಸಮಾನವಾಗಿ ಶಿಕ್ಷಣ ಪಡೆಯುತ್ತಾರೆ.


ಫಿನ್ನಿಷ್ ಶಿಕ್ಷಣದಲ್ಲಿ, ಸಮಾನತೆ ಅತ್ಯಂತ ಪ್ರಮುಖ ಪದವಾಗಿದೆ. ಇದಕ್ಕೆ ಎಲ್ಲಾ ಎಡ ಹಾಗೂ ಬಲಪಂಥೀಯ ರಾಜಕೀಯ ಪಕ್ಷಗಳು ಸಮ್ಮತಿ ಸೂಚಿಸುತ್ತವೆ ಎಂಬುದು ಫಿನ್‌ಲ್ಯಾಂಡ್‌ನ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾದ ಒಲ್ಲಿ ಲುಕ್ಕೈನೆನ್ ಮಾತಾಗಿದೆ.


ಶಾಲೆಗಳಲ್ಲಿ ಸ್ಪರ್ಧೆ ಇಲ್ಲ, ಶಿಕ್ಷಣ ಪದ್ಧತಿ ವಿಭಿನ್ನ


93% ದಷ್ಟು ಫಿನ್‌ಲ್ಯಾಂಡಿಗರು ಶೈಕ್ಷಣಿಕ ಅಥವಾ ವೃತ್ತಿಪರ ಪ್ರೌಢಶಾಲೆಗಳಿಂದ ಪದವಿ ಪಡೆದಿದ್ದಾರೆ ಹಾಗೂ ಅಮೆರಿಕಾದಿಂದ 17.5% ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಅಂತೆಯೇ 66% ದಷ್ಟು ಹೆಚ್ಚಿನ ವಿದ್ಯಾರ್ಥಿಗಳು ಉನ್ನತಿ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ ಇದು ಯುರೋಪಿಯನ್ ಒಕ್ಕೂಟದಲ್ಲೇ ಅತಿ ಹೆಚ್ಚಿನ ಸಂಖ್ಯೆ ಎಂದೆನಿಸಿದೆ.


ಅದೇನೇ ಇದ್ದರೂ, ಯುನೈಟೆಡ್ ಸ್ಟೇಟ್ಸ್‌ಗಿಂತ ಫಿನ್‌ಲ್ಯಾಂಡ್ ಪ್ರತಿ ವಿದ್ಯಾರ್ಥಿಗೆ ಸರಿಸುಮಾರು 30% ಕಡಿಮೆ ಖರ್ಚು ಮಾಡುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಹೇಗೆ ಕಲಿಯಬೇಕೆಂದು ತಿಳಸಲಾಗುತ್ತದೆಯೇ ಹೊರತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕೆಂಬುದನ್ನಲ್ಲ ಎಂಬುದು ಫಿನ್‌ಲ್ಯಾಂಡ್‌ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಮಾಜಿ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕ ಪಾಸಿ ಸಾಹ್ಲ್‌ಬರ್ಗ್ ಹೇಳಿಕೆಯಾಗಿದೆ.


ಶಿಕ್ಷಣ ಪದ್ಧತಿಯಲ್ಲಿನ ಮಾರ್ಪಾಡಿಗೆ ಕಾರಣವೇನು?


ಅನೇಕ ಶಾಲೆಗಳು ಹಾಗೂ ಶಿಕ್ಷಣ ಪದ್ಧತಿಗಳು ಗಣಿತ ಹಾಗೂ ವಿಜ್ಞಾನಾ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸುವತ್ತ ಗಮನಹರಿಸುತ್ತವೆ. ಈ ಸಮಯದಲ್ಲಿ ಮಕ್ಕಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ ಹಾಗೂ ಮಕ್ಕಳಿಗೆ ಅತ್ಯಗತ್ಯವಾಗಿರುವ ಸಂತೋಷಮಯ, ಸಾಮರಸ್ಯವುಳ್ಳ ಹಾಗೂ ಆರೋಗ್ಯಕರ ಶಿಕ್ಷಣಾ ಪರಿಸರವನ್ನು ರೂಪಿಸುವುದನ್ನು ಮರೆತುಬಿಡುತ್ತವೆ.


ಹಲವು ವರ್ಷಗಳ ಹಿಂದೆಯೇ ಇಂತಹುದೇ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದ್ದ ಫಿನ್ನಿಶ್ ಶಿಕ್ಷಣ ವ್ಯವಸ್ಥೆಯು ಗಂಭೀರ ಸುಧಾರಣೆಗಳ ಅಗತ್ಯವನ್ನು ಮನಗಂಡಿತ್ತು ಹಾಗೂ ಅದಕ್ಕೆ ಅನುಗುಣವಾಗಿ ಶಿಕ್ಷಣ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ತಂದಿತು ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿ ತಿಳಿಸಿದೆ.


ಶಿಕ್ಷಣ ತಜ್ಞರು ಆದ್ಯತೆ ನೀಡಿರುವ ಅಂಶಗಳು


1980 ರ ದಶಕದಿಂದಲೂ, ಫಿನ್ನಿಷ್ ಶಿಕ್ಷಣತಜ್ಞರು ಈ ಮೂಲಭೂತ ಅಂಶಗಳಿಗೆ ಆದ್ಯತೆ ನೀಡಿದ್ದಾರೆ:


ಸಾಮಾಜಿಕ ಅಸಮಾನತೆ ನಿವಾರಣೆಗೆ ಶಿಕ್ಷಣವನ್ನು ಬಳಸಿಕೊಳ್ಳಬೇಕು.


ಎಲ್ಲಾ ವಿದ್ಯಾರ್ಥಿಗಳು ಉಚಿತ ಶಾಲಾ ಊಟಕ್ಕೆ ಅರ್ಹರಾಗಿರುತ್ತಾರೆ.


ಆರೋಗ್ಯ ಸೌಕರ್ಯ ಸುಲಭಗೊಳಿಸಲಾಗಿದೆ.


ಮಾನಸಿಕ ಚಿಕಿತ್ಸೆ


ವೈಯಕ್ತಿಕ ಸಲಹೆ


ಫಿನ್ನಿಗಳು ಕೆಲವೊಂದು ವಿಷಯಕ್ಕೆ ಆದ್ಯತೆ ನೀಡುತ್ತಾರೆ. ಇಲ್ಲಿನ ಮಕ್ಕಳು ತಮ್ಮ ಏಳನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣವನ್ನು ಆರಂಭಿಸುತ್ತಾರೆ ಆದರೆ ಬಾಲ್ಯದ ಸಮಯದಲ್ಲಿ ಮುಕ್ತ ನಿಯಂತ್ರಣವನ್ನು ನೀಡಲಾಗುತ್ತದೆ. ಹಾಗಾಗಿ ಕಡ್ಡಾಯ ಶಿಕ್ಷಣಕ್ಕೆ ಅವರು ಬದ್ಧರಾಗಬೇಕು ಎಂಬ ಕಟ್ಟುಪಾಡುಗಳಿಲ್ಲ. ಇದರಿಂದ ಮಗು ತನ್ನಷ್ಟಕ್ಕೆ ತಾನು ರೂಪುಗೊಳ್ಳುತ್ತದೆ ಹಾಗೂ ಅವರಾಗಿಯೇ ಪರಿವರ್ತನೆಗೊಳ್ಳದೆಯೇ ಶಿಕ್ಷಣ ವ್ಯವಸ್ಥೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂಬುದು ಇಲ್ಲಿನ ಶಿಕ್ಷಣ ವ್ಯವಸ್ಥೆಯ ಇರಾದೆಯಾಗಿದೆ.
ಕೇವಲ 9 ವರ್ಷಗಳ ಕಡ್ಡಾಯ ಶಾಲೆ


ಫಿನ್ನಿಷ್ ಮಕ್ಕಳಿಗೆ 9 ವರ್ಷಗಳ ಕಡ್ಡಾಯ ಶಾಲೆಗೆ ಹಾಜರಾದರೆ ಸಾಕು. ಎಂಟನೇ ತರಗತಿಯು ಐಚ್ಛಿಕವಾಗಿದೆ, ಆದರೆ ಒಂಬತ್ತನೇ ತರಗತಿಯು ಕಡ್ಡಾಯವಾಗಿದೆ. ಮಕ್ಕಳಿಗೆ ಶಾಲೆ ಎಂಬುದು ಬಲವಂತವಾಗಿರಬಾರದು ಹಾಗೂ ಸೆರೆಮನೆಯಲ್ಲಿದ್ದಂತೆ ಭಾಸವಾಗಬಾರದು ಎಂಬ ತತ್ವಕ್ಕೆ ಫಿನ್‌ಲ್ಯಾಂಡ್ ಬದ್ಧವಾಗಿದೆ. ಬಲವಂತದ ಆದರ್ಶವನ್ನು ಫಿನ್‌ಲ್ಯಾಂಡ್ ನಿವಾರಿಸುತ್ತದೆ ಹಾಗೂ ಮಕ್ಕಳನ್ನು ನೈಜ ಜಗತ್ತಿಗೆ ಪರಿಚಯಿಸುವ ಅಂಶಕ್ಕೆ ಒತ್ತು ನೀಡುತ್ತದೆ ಎಂಬುದು ವರದಿ ತಿಳಿಸಿದೆ.


ಇಲ್ಲಿಯವರೆಗೆ ದೆಹಲಿಯ ಶಿಕ್ಷಕರು ತರಬೇತಿಗಾಗಿ ಈ ದೇಶಗಳಿಗೆ ಹೋಗಿದ್ದಾರೆ


ಇಲ್ಲಿಯವರೆಗೆ ದೆಹಲಿ ಸರ್ಕಾರವು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ವಿವಿಧ ದೇಶಗಳಿಗೆ ತರಬೇತಿಗಾಗಿ ಕಳುಹಿಸಿದೆ. 420 ಶಿಕ್ಷಕರು ಕೇಂಬ್ರಿಡ್ಜ್‌ಗೆ ಮತ್ತು 600 ಶಿಕ್ಷಕರು ಸಿಂಗಾಪುರಕ್ಕೆ ತರಬೇತಿಗಾಗಿ ಹೋಗಿದ್ದಾರೆ. ದೇಶದಲ್ಲಿ ಐಐಎಂ ಅಹಮದಾಬಾದ್ ಮತ್ತು ಲಕ್ನೋದಂತಹ ನಿರ್ವಹಣಾ ಸಂಸ್ಥೆಗಳಲ್ಲಿ ಸರ್ಕಾರಿ ಶಾಲೆಗಳ 860 ಶಾಲಾ ಮುಖ್ಯಸ್ಥರನ್ನು ತರಬೇತಿಗಾಗಿ ಕಳುಹಿಸಲಾಗಿದೆ. ಈ ಬಾರಿ, ಕಳೆದ ವರ್ಷ ಅಕ್ಟೋಬರ್ 2022 ರಲ್ಲಿ, ತರಬೇತಿಯ ಅನುಮೋದನೆಗಾಗಿ ಫೈಲ್ ಅನ್ನು ಡೆಪ್ಯುಟಿ ಗವರ್ನರ್‌ಗೆ ಕಳುಹಿಸಲಾಗಿದೆ, ಆದರೆ ಎಲ್‌ಜಿ ಈ ಫೈಲ್ ಅನ್ನು ಹೊಸ ವರ್ಷದಲ್ಲಿ ಹಿಂದಿರುಗಿಸಿದ್ದು ಅದರ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದೆ. ಈಗ ಈ ವಿಚಾರವಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ಸಮರ ನಡೆಯುತ್ತಿದೆ.


ಎಲ್‌ಜಿ ಹಾಗೂ ಆಮ್‌ ಆದ್ಮಿ ಪಕ್ಷಗಳ ಜಗಳ ಹೊಸದಲ್ಲ


ಆಮ್‌ಆದ್ಮಿ ಪಕ್ಷ ಮತ್ತು ಎಲ್‌ಜಿ 2014 ರಿಂದ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ಹೋರಾಟ ನಡೆಸುತ್ತಿದೆ.


ಎಲ್-ಜಿ ಕಚೇರಿಯು ಎಎಪಿ ಸರ್ಕಾರದ ಯೋಜನೆಗಳನ್ನು ಅಸಮ್ಮತಿಗೊಳಿಸಿದೆ, ಪಕ್ಷದ ನೀತಿಗಳ ಬಗ್ಗೆ ವಿಚಾರಣೆಗೆ ಆದೇಶಿಸಿದೆ, ಉನ್ನತ ನಾಯಕರನ್ನು ಗುರಿಯಾಗಿಸಿ, ಮತ್ತು ಮೊಹಲ್ಲಾ ಕ್ಲಿನಿಕ್‌ಗಳು ಮತ್ತು ಶಾಲೆಗಳಂತಹ ಶೋಪೀಸ್ ಉಪಕ್ರಮಗಳನ್ನು ಪ್ರಶ್ನಿಸಿದೆ.


ಮತ್ತೊಂದೆಡೆ, ಎಎಪಿ ನಾಯಕರು ಎಲ್-ಜಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ, ಧರಣಿ ನಡೆಸಿದ್ದಾರೆ, ಅಧಿಕಾರಶಾಹಿಗಳಲ್ಲಿ ಅವಿಧೇಯತೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಸಿಎಂ ಕೇಜ್ರಿವಾಲ್ ಗವರ್ನರ್ ಅವರೊಂದಿಗೆ ಸಮನ್ವಯ ಸಭೆಗಳನ್ನು ತಪ್ಪಿಸಿಕೊಂಡಿದ್ದಾರೆ.


ಕಳೆದ ವರ್ಷ, ಸಂಸತ್ತು ಲಿಫ್ಟ್‌ನೆಂಟ್ ಗವರ್ನರ್ ಅನ್ನು ದೆಹಲಿ ಸರ್ಕಾರದ ಒಟ್ಟಾರೆ ಮುಖ್ಯಸ್ಥರನ್ನಾಗಿ ಮಾಡುವ ಮಸೂದೆಯನ್ನು ಅಂಗೀಕರಿಸಿದ್ದರಿಂದ ಇವರಿಬ್ಬರ ನಡುವಿನ ಚರ್ಚೆಯನ್ನು ಇತ್ಯರ್ಥಪಡಿಸಿತು. ದೆಹಲಿ ಸರ್ಕಾರದ ಅಧಿಕಾರಿಗಳು ಸಹ ಎಲ್-ಜಿಗೆ ವರದಿ ಮಾಡುತ್ತಾರೆಯೇ ಎಂಬುದು ಉನ್ನತ ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಲ್-ಜಿ ವರದಿ ನೀಡಿದೆ.

First published: