ಈಗಾಗಲೇ ಪರೀಕ್ಷೆ (Exam) ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಿಲೀಫ್ ನೀಡುವ ಒಂದು ಮಾಹಿತಿ ಇಲ್ಲಿದೆ ಅದೇನೆಂದರೆ ಫಲಿತಾಂಶ ಪ್ರಕಟವಾಗುವ ಜಾಲತಾಣದ ಡೀಲೇಟ್ಸ್ ಬಿಡುಗಡೆಯಾಗಿದೆ. ಯಾವ ವೆಬ್ಸೈಟ್ನಲ್ಲಿ ನಿಮ್ಮ ಪರೀಕ್ಷೆಯ ಫಲಿತಾಂಶವನ್ನು (Result) ಸರ್ಚ್ ಮಾಡಬೇಕು ಎಂಬ ಗೊಂದಲ ಇದ್ದರೆ ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿದರೆ ನೀವು ನಿಮ್ಮ ಪರೀಕ್ಷೆಯ ಫಲಿತಾಂಶವನ್ನು ಗಮನಿಸಬಹುದು. ಈ ಅಧಿಕೃತ ಜಾಲತಾಣದಲ್ಲೇ (Website) ನೀವು ಮಾಹಿತಿ ಪಡೆಯಬಹುದು.
ಈ ವರ್ಷದ ಮೌಲ್ಯ ಮಾಪನ ಆರಂಭವಾಗಿದೆ. ಶೀಘ್ರದಲ್ಲೇ ಫಲಿತಾಂಶ ಪ್ರಕಟಗೊಳ್ಳಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) II PU ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಏಪ್ರಿಲ್ 5 ರಿಂದ ಪ್ರಾರಂಭಿಸಿದೆ. ಈ ವರ್ಷ, KSEAB ರಾಜ್ಯದಾದ್ಯಂತ 23,000 ಅರ್ಹ ಶಿಕ್ಷಕರನ್ನು ಮೌಲ್ಯಮಾಪನಕ್ಕಾಗಿ ನಿಯೋಜಿಸಲಾಗಿದೆ.
ಆದ್ದರಿಂದ ಚುನಾವಣೆಯೂ ಇರುವ ಕಾರಣ ಬೇಗ ಫಲಿತಾಂಶ ಪ್ರಕಟವಾಗಲಿದೆ. ನೀವು ಫಲಿತಾಂಶವನ್ನು ಚೆಕ್ ಮಾಡಲು karnatakaresult.nic.in ಮತ್ತು https://pue.karnataka.gov.in/english ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಹಾಲ್ಟಿಕೆಟ್ ನಂಬರ್ ನಮೂದಿಸಿದರೆ ನಿಮ್ಮ ಫಲಿತಾಂಶ ದೊರೆಯುತ್ತದೆ.
ಇದನ್ನೂ ಓದಿ: Exam News: ಮಾತೃಭಾಷೆಯಲ್ಲೇ ಪರೀಕ್ಷೆ ಬರೆಯುವ ಕುರಿತು ಸಚಿವರ ಮಹತ್ವದ ಹೇಳಿಕೆ
ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (ಫ್ರೆಷರ್ಸ್) , 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಿಂದ 2,34,815, ವಾಣಿಜ್ಯ- 2,47,260 ಮತ್ತು ವಿಜ್ಞಾನದಿಂದ 2,44,120 ವಿದ್ಯಾರ್ಥಿಗಳಾಗಿದ್ದಾರೆ. ಪರೀಕ್ಷಾ ಕಾರ್ಯಕ್ಕೆ 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ ಮತ್ತು 2,373 ವಿಶೇಷ ಜಾಗೃತ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಹಿಂದೆ ಫಲಿತಾಂಶದ ಬಗ್ಗೆ ನೀಡಲಾಗಿದ್ದ ಮಾಹಿತಿ
ಈ ಎಲ್ಲಾ ಕ್ರಮ ಕೈಗೊಂಡು ಉತ್ತಮ ರೀತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಆದರೆ ಈ ಹಿಂದೆ ಪರೀಕ್ಷಾ ಫಲಿತಾಂಶ ವಿಳಂಬವಾಗಬಹುದು ಏಕೆಂದರೆ ಶಿಕ್ಷಕರಿಗೆ ಚುನಾವಣಾ ತರಬೇತಿ ನೀಡುವ ಅಗತ್ಯ ಇದೆ ಎಂದು ಹೇಳಲಾಗಿತ್ತು.
ರಾಜ್ಯದಲ್ಲಿ ಘೋಷಣೆಯಾಗಿರುವ ಚುನಾವಣಾ ವೇಳಾಪಟ್ಟಿ ಪ್ರಕಾರ ಎಲ್ಲಾ ಶಾಲೆಗಳನ್ನು ಚುನಾವಣಾ ಮತಗಟ್ಟೆಯನ್ನಾಗಿ ಪರಿವರ್ತಿಸಲಾಗುತ್ತದೆ. ಅಷ್ಟೇ ಅಲ್ಲಾ ಚುನಾವಣೆಯಲ್ಲಿ ಶಿಕ್ಷಕರ ಪಾತ್ರವೂ ಪ್ರಮುಖವಾಗಿರುತ್ತದೆ. ಆದ್ದರಿಂದ ಶಿಕ್ಷಕರಿಗೆ ಈ ಸಂದರ್ಭದಲ್ಲಿ ಶಿಕ್ಷಕರಿಗೆ ಕೆಲವು ತರಬೇತಿಗಳನ್ನು ನೀಡಲಾಗುತ್ತದೆ. ತರಬೇತಿ ಪಡೆಯಬೇಕಾದರೆ ಶಿಕ್ಷಕರು ಲಭ್ಯವಿರಬೇಕಾಗುತ್ತದೆ. ಇತ್ತೀಚಿಗೆ ಮುಕ್ತಾಯಗೊಂಡ ದ್ವಿತೀಯ ಪಿಯು ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ವಿಳಂಬಗೊಳಿಸಲು ಶಿಕ್ಷಕರಿಗೆ ಚುನಾವಣೆ ಬಗ್ಗೆ ನೀಡುವ ತರಬೇತಿಯೂ ಒಂದು ಕಾರಣವಾಗಬಹುದು. ಯಾಕೆಂದರೆ ಮೌಲ್ಯಮಾಪನ ಮಾಡುವ ಶಿಕ್ಷಕರು ಚುನಾವಣಾ ಕಾರ್ಯವನ್ನೂ ಸಹ ಮಾಡಬೇಕಾಗುತ್ತದೆ.
ಏಪ್ರಿಲ್ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸಬೇಕಿತ್ತು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) II PU ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಏಪ್ರಿಲ್ 5 ರಿಂದ ಪ್ರಾರಂಭಿಸಲು ಯೋಜಿಸಿದೆ. 30% ಮೌಲ್ಯಮಾಪಕರನ್ನು ಚುನಾವಣಾ ಸಂಬಂಧಿತ ಕೆಲಸಗಳಿಗೆ ನಿಯೋಜಿಸಲಾಗಿರುವುದರಿಂದ, ಮೌಲ್ಯಮಾಪನವು ವಿಳಂಬವಾಗುವ ನಿರೀಕ್ಷೆಯಿದೆ. KSEABಯ ಮೂಲಗಳ ಪ್ರಕಾರ, ಹಿಂದಿನ ಯೋಜನೆಯು ಮೌಲ್ಯಮಾಪನ ಕಾರ್ಯವನ್ನು 10 ರಿಂದ 12 ದಿನಗಳಲ್ಲಿ ಪೂರ್ಣಗೊಳಿಸಿ ಏಪ್ರಿಲ್ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸುವುದಾಗಿತ್ತು.
ಶಿಕ್ಷಕರಿಗೆ ಚುನಾವಣಾ ಕರ್ಥವ್ಯ
ಈಗ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರ ಸಂಖ್ಯೆಯನ್ನು ನೋಡಿದರೆ, ಮೌಲ್ಯಮಾಪನ ಕಾರ್ಯವು ತೊಂದರೆಗೊಳಗಾಗುತ್ತದೆ ಮತ್ತು ವಿಳಂಬವಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಚುನಾವಣಾ ತರಬೇತಿಗಾಗಿ ನಿಯೋಜಿಸಲಾಗಿದೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾಹಿತಿಯ ಪ್ರಕಾರ, ಹಲವಾರು ಪಿಯು ಕಾಲೇಜು ಶಿಕ್ಷಕರು ಕಳೆದ 15 ದಿನಗಳಿಂದ ವಿವಿಧ ಚುನಾವಣಾ ಸಂಬಂಧಿತ ತರಬೇತಿಗಳಲ್ಲಿದ್ದಾರೆ. ಸಾಮಾನ್ಯವಾಗಿ, ಪಿಯುಸಿ ಶಿಕ್ಷಕರನ್ನು ಸೆಕ್ಟರ್ ಅಧಿಕಾರಿಗಳು ಮತ್ತು ಮಾಸ್ಟರ್ ಟ್ರೈನರ್‌ಗಳಾಗಿ ಬಳಸಲಾಗುತ್ತದೆ. ಈ ಬಾರಿ ಚೆಕ್‌ಪೋಸ್ಟ್‌ಗಳಲ್ಲೂ ನಿಯೋಜನೆ ಮಾಡಲಾಗಿದೆ’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ