• ಹೋಂ
  • »
  • ನ್ಯೂಸ್
  • »
  • Jobs
  • »
  • Vijayapura: ತನ್ನಿಂದ ತಾನೇ ಸುಟ್ಟು ಭಸ್ಮವಾದ ಹಾಲ್​ ಟಿಕೆಟ್​! ವಿಜಯಪುರದಲ್ಲಿ ವಿಚಿತ್ರ ಘಟನೆ

Vijayapura: ತನ್ನಿಂದ ತಾನೇ ಸುಟ್ಟು ಭಸ್ಮವಾದ ಹಾಲ್​ ಟಿಕೆಟ್​! ವಿಜಯಪುರದಲ್ಲಿ ವಿಚಿತ್ರ ಘಟನೆ

ಹರಿದ ಹಾಲ್​ ಟಿಕೆಟ್​

ಹರಿದ ಹಾಲ್​ ಟಿಕೆಟ್​

ವರ್ಷದ ಹಿಂದೆ ಹೆತ್ತವರನ್ನ ಕಳೆದುಕೊಂಡು ಅನಾಥವಾಗಿರುವ ಪವಿತ್ರಾ ಗುಡ್ಡದ್ ಕಳೆದ‌ ಶುಕ್ರವಾರ ಮೊದಲ ಹಾಲ್ ಟಿಕೇಟ್ ತಂದಿದ್ದಳು, ಅದೇ ದಿನ ಅಚಾನಕ್ ಆಗಿ ಸುಟ್ಟು ಹಾಲ್​ ಟಿಕೆಟ್​ ಭಸ್ಮವಾಗಿತ್ತಂತೆ. ವಿಚಾರ ತಿಳಿಸಿ ಮತ್ತೆ ಎರಡನೇ ಪ್ರತಿಯನ್ನು ತಂದಿದ್ದಳು ಎಂದು ಹೇಳಲಾಗಿದೆ.

  • News18 Kannada
  • 3-MIN READ
  • Last Updated :
  • Vijayapura, India
  • Share this:

ವಿಜಯಪುರ: ದ್ವಿತೀಯ ಪಿಯುಸಿ (2nd PUC) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಲ್​ ಟಿಕೆಟ್​ ಬೇಕೆ ಬೇಕು. ಹಾಲ್​ ಟಿಕೆಟ್​ ನೀಡದ ಅಥವಾ ಪರೀಕ್ಷೆಗೆ ಬರುವಾಗ ತರದ ವಿದ್ಯಾರ್ಥಿಗಳಿಗೆ ಪರೀಕ್ಷೆ (Exam) ಬರೆಯಲು ಅನುಮತಿ ನೀಡಲಾಗುವುದಿಲ್ಲ. ಆದರೆ ಅಧಿಕಾರಿಗಳಿಂದಲೇ ಹಾಲ್​ ಟಿಕೆಟ್​ ವಿಷಯದಲ್ಲಿ ಲೋಪ ಉಂಟಾಗಿದೆ. ತನ್ನಿಂದ ತಾನೇ ಸುಟ್ಟು, ಹರಿದು ಹೋದ ಪಿಯು ಹಾಲ್ ಟಿಕೇಟ್‌ಗಳು (Hall Ticket) ಲಭ್ಯವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದ್ರೆ ಇದು ನಿಜಾನಾ? ಎಲ್ಲಿ ಹೀಗಾಗಿದೆ? ಯಾಕೆ ಹೀಗಾಗಿದೆ ಈ ಎಲ್ಲಾ ಮಾಹಿತಿಗಾಗಿ ಇದನ್ನ ಸಂಪೂರ್ಣಾವಾಗಿ ಓದಿ. 


ವಿಜಯಪುರ ಜಿಲ್ಲೆಯ ನಿಡಗುಂದಿ ತಾ. ಗೊಳಸಂಗಿ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ಜರುಗಿದೆ. ಪವಿತ್ರಾ ಪುಂಡಲೀಕ ಗುಡ್ಡರ್ (18) ಪಿಯು ದ್ವೀತಿಯ ವರ್ಷದ ವಿದ್ಯಾರ್ಥಿನಿಯು 3 ಹಾಲ್ ಟಿಕೇಟ್‌ಗಳನ್ನು ಪಡೆದುಕೊಂಡಿದ್ದಳು ಮೂರೂ ಹಾಲ್​ ಟಿಕೆಟ್​ಗಳು ಹಾನಿಯಾಗಿರುವ ಘಟನೆ ನಡೆದಿದೆ. ಇದೊಂತರ ಆಶ್ಚರ್ಯವನ್ನೂ ಮೂಡಿಸಿದೆ.


ಇದನ್ನೂ ಓದಿ: 2nd PUC ಪರೀಕ್ಷೆಗೆ ಹಾಲ್ ​ಟಿಕೆಟ್​​ ಬಿಟ್ಟು ಹೋಗಿದ್ದೀರಾ? ಹಾಗಾದ್ರೆ ಈ ರೀತಿ ಮಾಡಿ


ಪರೀಕ್ಷೆಗಾಗಿ ತಂದ ಮೊದಲ ಹಾಲ್ ಟಿಕೇಟ್ ಸುಟ್ಟು ಭಸ್ಮವಾದ ರೀತಿಯಲ್ಲಿತ್ತು. ಮನೆಯಲ್ಲಿ ತುಂಡಾಗಿ ಬಿದ್ದ ಇನ್ನೇರಡು ಹಾಲ್ ಟಿಕೇಟ್‌ಗಳು ಪತ್ತೆಯಾಗಿದೆ. ಗೊಳಸಂಗಿ ಗ್ರಾಮಸ್ಥರಲ್ಲಿ ಅಚ್ಚರಿ, ಅನುಮಾನಗಳನ್ನ ಮೂಡಿಸಿರುವ ವಿಚಿತ್ರ ಘಟನೆ ಇದಾಗಿದೆ. ವಿದ್ಯಾರ್ಥಿನಿ ತನ್ನ ಮೊದಲ ಹಾಲ್​ ಟಿಕೆಟ್​ ಕಳೆದುಕೊಂಡಾಗ ಶಾಲೆಗೆ ಮಾಹಿತಿ ನೀಡಿದ್ದಳು ಅದಾದ ನಂತರ ಎರಡನೇ ಹಾಲ್​ ಟಿಕೆಟ್​ ನೀಡಲಾಗಿತ್ತು.


ಬಿ ಎಸ್ ಪವಾರ್ ಪಿ ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿಇಂದು ಪರೀಕ್ಷೆಗೆ ಹಾಜರಾಗಬೇಕಿತ್ತು. ಪ್ರಾಂಶುಪಾಲರಿಂದ ಮೂರನೇ ಬಾರಿಯು ತಂದ ಹಾಲ್ ಟಿಕೇಟ್ ತುಂಡು ತುಂಡಾಗಿ ಬಿದ್ದಿತ್ತು.




ವರ್ಷದ ಹಿಂದೆ ಹೆತ್ತವರನ್ನ ಕಳೆದುಕೊಂಡು ಅನಾಥವಾಗಿರುವ ಪವಿತ್ರಾ ಗುಡ್ಡದ್ ಕಳೆದ‌ ಶುಕ್ರವಾರ ಮೊದಲ ಹಾಲ್ ಟಿಕೇಟ್ ತಂದಿದ್ದಳು, ಅದೇ ದಿನ ಅಚಾನಕ್ ಆಗಿ ಸುಟ್ಟು ಹಾಲ್​ ಟಿಕೆಟ್​ ಭಸ್ಮವಾಗಿತ್ತಂತೆ. ವಿಚಾರ ತಿಳಿಸಿ ಮತ್ತೆ ಎರಡನೇ ಪ್ರತಿಯನ್ನು ತಂದಿದ್ದಳು ಎಂದು ಹೇಳಲಾಗಿದೆ.


ಹರಿದ ಹಾಲ್​ ಟಿಕೆಟ್​


ಮೊನ್ನೆ ದ್ವೀತಿಯ ಹಾಲ್ ಟಿಕೇಟ್ ಕೂಡ ಹರಿದು ತುಂಡು ತುಂಡಾಗಿ ಬಿದ್ದಿತ್ತಂತೆ. ಬಳಿಕ ಕಾಲೇಜು ವ್ಯವಸ್ಥಾಪಕರನ್ನ ಭೇಟಿ ಮಾಡಿ ಮನವಿ ಮಾಡಿಕೊಂಡು ತಂದಿದ್ದ 3ನೇ ಪ್ರತಿಯು ತುಂಡು ತುಂಡಾಗಿ ಬಿದ್ದು ಹಾನಿಯಾಗಿದೆ. ಇದರಿಂದ ಮನನೊಂದಿರುವ ವಿದ್ಯಾರ್ಥಿನಿ ಪರೀಕ್ಷೆಗೆ ಅವಕಾಶ ಕೊಡುವಂತೆ ಮನವಿ ಮಾಡ್ತಿದ್ದಾಳೆ. ಹಾಲ್ ಟಿಕೇಟ್ ಹಾನಿ ಹಿಂದೆ ಕುತಂತ್ರ ಇರುವ ಅನುಮಾನ ಹುಟ್ಟಿಕೊಂಡಿದೆ.


ಹಾಲ್​​ ಟಿಕೆಟ್​ ಪಡೆಯುವ ಕುರಿತು ಇಲ್ಲಿದೆ ಮಾಹಿತಿ


ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ನೀವೇನಾದರೂ ಹಾಲ್​ಟಿಕೆಟ್​ ತೆಗೆದುಕೊಳ್ಳಲು ಮರೆತಿದ್ದರೆ ನಾವು ಇಲ್ಲಿ ತಿಳಿಸಿದ ಮಾಹಿತಿಯನ್ನು ಅನುಸರಿಸಿ. ಹೀಗೆ ಮಾಡಿದರೆ ನೀವು ನಿಮ್ಮ ಹಾಲ್​ ಟಿಕೆಟ್​ ಪಡೆದುಕೊಳ್ಳಬಹುದು. ನೀವೇನಾದರೂ ಪರೀಕ್ಷೆ ಹಾಲ್​ಗೆ ತಲುಪಿದ್ದು ಹಾಲ್​ ಟಿಕೆಟ್​​ ತೆಗೆದುಕೊಂಡು ಹೋಗಲು ಮರೆತಿದ್ದರೆ. ಇನ್ನೊಂದು ಉಪಾಯ ಮಾಡಿ ಪರೀಕ್ಷೆ ಬರೆಯಬಹುದು. ಅದಕ್ಕೂ ಇಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಇದನ್ನೂ ಗಮನಿಸಿ.


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಕರ್ನಾಟಕ 2nd PUC ಹಾಲ್ ಟಿಕೆಟ್ 2023 ಅನ್ನು ಫೆಬ್ರುವರಿ 18 2023 ರಂದು ಬಿಡುಗಡೆ ಮಾಡಿದೆ . ಆದರೆ, ಅದನ್ನು ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸುವ ಜವಾಬ್ದಾರಿ ಶಾಲಾ ಅಧಿಕಾರಿಗಳ ಮೇಲಿದೆ. ಕರ್ನಾಟಕ 2 ನೇ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲರೂ ತಮ್ಮ ಕರ್ನಾಟಕ 2 ನೇ ಪಿಯುಸಿ ಹಾಲ್ ಟಿಕೆಟ್ 2023 ಅನ್ನು ಪರೀಕ್ಷೆಯ ದಿನದಂದು ಒಯ್ಯಬೇಕಾಗುತ್ತದೆ. ನೀವೇ ಈ ವೆಬ್​ಸೈಟ್​ಗೆ ಭೇಟಿ ನೀಡಿ ಹಾಲ್​ ಟಿಕೆಟ್​ ಸಾಪ್ಟ್​​ ಕಾಪಿ ತೆಗೆದುಕೊಳ್ಳಬಹುದು. ಲಿಂಕ್​ ಇಲ್ಲಿದೆ - pue.karnataka.gov.in

First published: