• Home
 • »
 • News
 • »
 • jobs
 • »
 • School Timings: ಚಳಿ ಹೆಚ್ಚಿದ ಕಾರಣ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ!

School Timings: ಚಳಿ ಹೆಚ್ಚಿದ ಕಾರಣ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶದಲ್ಲಿ, ಶೀತ ಹವಾಮಾನ ಮತ್ತು ದಟ್ಟ ಮಂಜಿನಿಂದಾಗಿ ಡಿಸೆಂಬರ್ 31 ರವರೆಗೆ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಶಾಲಾ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬದಲಾಯಿಸಲಾಗಿದೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಎಲ್ಲಾ ರಾಜ್ಯಗಳಲ್ಲೂ ಹವಾಮಾನ (Weather) ವೈಪರಿತ್ಯ ಉಂಟಾಗುತ್ತಿದೆ. ಇದರಿಂದ ಜನಸಾಮಾನ್ಯರೆಲ್ಲರಿಗೂ ಸಹ ದಿನನಿತ್ಯದ ಕಾರ್ಯಕ್ಕೆ ತೊಡಕುಂಟಾಗುತ್ತಿದೆ. ಚಳಿ (Cold) ಹಾಗೂ ತುಂತುರು ಮಳೆಯಿಂದಾಗಿ ಎಲ್ಲರ ಆರೋಗ್ಯದಲ್ಲೂ ಬದಲಾವಣೆಯಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳ (School students) ಪರಿಸ್ಥಿತಿಯಂತು ಕೇಳುವುದೇ ಬೇಡ ಆ ರೀತಿಯಾಗಿದೆ. ಆದರೆ ಇದೇ ಕಾರಣದಿಂದ ಉತ್ತರ ಪ್ರದೇಶದ ಶಾಲೆಗಳಲ್ಲಿ (School) ಕೆಲವು ಮಹತ್ತರ ಬದಲಾವಣೆ ತರಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ. 


ಉತ್ತರ ಪ್ರದೇಶದಲ್ಲಿ, ಶೀತ ಹವಾಮಾನ ಮತ್ತು ದಟ್ಟ ಮಂಜಿನಿಂದಾಗಿ ಡಿಸೆಂಬರ್ 31 ರವರೆಗೆ 1 ರಿಂದ 8 ನೇ ತರಗತಿಯ ಮಕ್ಕಳಿಗೆ ಶಾಲಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಶಾಲಾ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬದಲಾಯಿಸಲಾಗಿದೆ. ಲಕ್ನೋ, ಘಾಜಿಯಾಬಾದ್ ಮತ್ತು ಇತರ ನಗರಗಳ ಜಿಲ್ಲಾಡಳಿತವು ಬದಲಾವಣೆಯನ್ನು ಮಾಡಿದ ಸಮಯವನ್ನು ಘೋಷಿಸಿದೆ.


ದಟ್ಟವಾದ ಮಂಜು ಕವಿದ ವಾತಾವರಣ


ದಟ್ಟವಾದ ಮಂಜು ಮತ್ತು ಚಳಿಯ ಹಿನ್ನೆಲೆಯಲ್ಲಿ ಜಿಲ್ಲೆಯ 1 ರಿಂದ 8 ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:30 ರವರೆಗೆ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ


ಇದನ್ನೂ ಓದಿ: PUC Model Question Paper: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ, ಇಲ್ಲಿ ಪರಿಶೀಲಿಸಿ


ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಟ್ಟವಾದ ಮಂಜು ಆವರಿಸಿದ್ದು, 10 ಮೀಟರ್‌ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುಗಳು ಕಣ್ಣಿಗೆ ಕಾಣಿಸದಷ್ಟು ಮಂಜು ಕವಿದಿದೆ. ಈ ಪ್ರದೇಶದಲ್ಲಿ ಯಾವುದೇ ವಸ್ತುಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ವಾಹನ ಚಲಾಯಿಸುವುದು ಸಹ ತುಂಬಾ ಕಷ್ಟವಾಗಿದೆ. ನಿತ್ಯ ಬೇರೆ ಬೇರೆ ತರಗತಿಗಳಿಗೆ ಮತ್ತು ಕೋಚಿಂಗ್‌ಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಈ ಕುರಿತು ಮಾತನಾಡಿ ತಮಗೆ ಆಗುತ್ತಿರುವ ಕಷ್ಟದ ಕುರಿತು ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಸಾಕಷ್ಟು ಮಂಜು ಇರುತ್ತದೆ.


ವಾಹನನಗಳ ಅಪಘಾತ ಹೆಚ್ಚುತ್ತಿದೆ


ಬೆಳಿಗ್ಗೆ ತುಂಬಾ ಚಳಿ ಇರುತ್ತದೆ ಇದರ ಅಬ್ಬರಕ್ಕೆ ಯಾರಿಗೂ ಸಹ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮಂಜು ದಟ್ಟವಾಗಿದ್ದು 8-10 ಮೀಟರ್ ಆಚೆ ಏನೂ ಕಾಣಿಸುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದೂ ಕಷ್ಟವಾಗಿದೆ ಎಂದು ಪಾಲಕರು ಹೇಳುತ್ತಿದ್ದಾರೆ. ನಿನ್ನೆ ತೆಂಡುವಾ ಟೋಲ್ ಪ್ಲಾಜಾ ಬಳಿ ಹಲವು ವಾಹನಗಳು ಅಪಘಾತಕೊಳಪಟ್ಟಿದೆ ಇದಕ್ಕೆ ಕಾರಣ ಅಲ್ಲಿರುವ ಮಂಜು ಎಂದು ತಿಳಿದು ಬಂದಿದೆ.


ಭಾರತೀಯ ಹವಾಮಾನ ಇಲಾಖೆ ವರದಿ


ಎಲ್ಲಿಯೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಈ ವಾತಾವರಣದಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರದಂತೆ ಮತ್ತು ಕಡಿಮೆ ವಾಹನ ಚಲಾಯಿಸದಂತೆ ಉತ್ತರ ಪ್ರದೇಶದ ಸರ್ಕಾರ ಸೂಚಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯಂತೆ ಗುರುವಾರ ಬೆಳಿಗ್ಗೆ ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಹರಿಯಾಣದಾದ್ಯಂತ ಪೂರ್ವ ಉತ್ತರ ಪ್ರದೇಶದವರೆಗೆ ದಟ್ಟವಾದ ಮಂಜು ಮುಂದುವರೆದಿದೆ.


ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿರುವ ಮಂಜು


ರಾಷ್ಟ್ರ ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣವು ಇನ್ನೂ 2 ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಮತ್ತು ನಗರದ ತಾಪಮಾನವು 6 ರಿಂದ 7 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪಾಲಕರು ಹಾಗೂ ಇನ್ನಿತರ ಉದ್ಯಮಗಳಿಗೂ ಇದು ತುಂಬಾ ತೊಂದರೆ ಉಂಟುಮಾಡಿದೆ. ಶಾಲಾ ಸಮಯ ಬದಲಿಸಿರುವುದು ಸ್ವಲ್ಪ ಮಟ್ಟಿನಲ್ಲಿ ಎಲ್ಲರಿಗೂ ಪ್ರಯೋಜನವಾಗಿದೆ. ಶಿಕ್ಷಕರಿಗೂ ಸಹಾಯವಾಗಿದೆ ಎಂದು ಹೇಳಬಹುದು.

First published: