ಡಿಸೆಂಬರ್ ವರ್ಷದ ಕೊನೆ ತಿಂಗಳಾಗಿದ್ದು ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ರಜೆಗಳ (Holidays) ಸರಮಾಲೆಯೇ ಇದೆ. ಅಷ್ಟೇ ಅಲ್ಲ ಹಲವು ಕಂಪನಿ ಉದ್ಯೋಗಿಗಳೂ ಸಹ ತಮ್ಮ ಬಾಕಿ ಇರುವ ರಜೆಯನ್ನು ಕಳೆಯಲು ಡಿಸೆಂಬರ್ ತಿಂಗಳನ್ನೇ ಬಳಸಿಕೊಳ್ಳುತ್ತಾರೆ. ಮಕ್ಕಳಿಗೂ (Students) ಡಿಸೆಂಬರ್ ತಿಂಗಳೆಂದರೆ ಬಲು ಪ್ರೀತಿ ಇದಕ್ಕೆ ಕಾರಣವೇ ಒಂದರ ಹಿಂದೆ ಒಂದರಂತೆ ಸಿಗುವ ರಜೆಗಳು. ಈ ವರ್ಷ ಡಿಸೆಂಬರ್ನಲ್ಲಿ (December) ಎಷ್ಟು ದಿನ ರಜೆ ಇರಲಿದೆ ಎಂದು ನೀವು ಯೋಚಿಸುತ್ತಿದ್ದರೆ. ಇಲ್ಲಿದೆ ಶಾಲಾ (School) ಮಕ್ಕಳ ರಜೆಗಳ ಪಟ್ಟಿ.
1 ನೇ ಶನಿವಾರ | ಡಿಸೆಂಬರ್ 3 |
2 ನೇ ಶನಿವಾರ | ಡಿಸೆಂಬರ್ 10 |
3 ನೇ ಶನಿವಾರ | ಡಿಸೆಂಬರ್ 17 |
4 ನೇ ಶನಿವಾರ | ಡಿಸೆಂಬರ್ 24 |
5 ನೇ ಶನಿವಾರ | ಡಿಸೆಂಬರ್ 31 |
1 ನೇ ಭಾನುವಾರ | ಡಿಸೆಂಬರ್ 4 |
2 ನೇ ಭಾನುವಾರ | ಡಿಸೆಂಬರ್ 11 |
3 ನೇ ಭಾನುವಾರ | ಡಿಸೆಂಬರ್ 18 |
4 ನೇ ಭಾನುವಾರ | ಡಿಸೆಂಬರ್ 25 |
1 ನೇ ಶನಿವಾರ - ಡಿಸೆಂಬರ್ 3
2 ನೇ ಶನಿವಾರ - ಡಿಸೆಂಬರ್ 10
3 ನೇ ಶನಿವಾರ - ಡಿಸೆಂಬರ್ 17
4 ನೇ ಶನಿವಾರ - ಡಿಸೆಂಬರ್ 24 (ಕ್ರಿಸ್ಮಸ್ ಮುನ್ನಾದಿನ)
5 ನೇ ಶನಿವಾರ - ಡಿಸೆಂಬರ್ 31
ಇದನ್ನೂ ಓದಿ: CBSE Guidelines: 10 ಹಾಗೂ 12ನೇ ತರಗತಿ ಪ್ರಾಯೋಗಿಕ ಪರೀಕ್ಷಾ ಮಾರ್ಗಸೂಚಿ ಪ್ರಕಟ
ಡಿಸೆಂಬರ್ನಲ್ಲಿ ಬರುವ ಭಾನುವಾರದ ರಜೆಗಳು:
1 ನೇ ಭಾನುವಾರ - ಡಿಸೆಂಬರ್ 4
2 ನೇ ಭಾನುವಾರ - ಡಿಸೆಂಬರ್ 11
3 ನೇ ಭಾನುವಾರ - ಡಿಸೆಂಬರ್ 18
4 ನೇ ಭಾನುವಾರ - ಡಿಸೆಂಬರ್ 25 (ಕ್ರಿಸ್ಮಸ್)
ಕೆಲವು ಖಾಸಗಿ ಶಾಲೆಗಳಲ್ಲಿ ಕ್ರಿಸ್ಮಸ್ಗೆಂದೇ ಬೇರೆ ರಜೆ ನೀಡಲಾಗುತ್ತದೆ.
ಇಲ್ಲಿ ನೀಡಲಾದ ರಜೆಗಳನ್ನು ಬಿಟ್ಟು ಕೆಲವು ಖಾಸಗಿ ಶಾಲೆಗಳಲ್ಲಿ ಕ್ರಿಸ್ಮಸ್ಗೆಂದೇ ಬೇರೆ ರಜೆಗಳನ್ನು ನೀಡಲಾಗುತ್ತದೆ. ಒಂದು ವಾರಗಳ ರಜೆ ಅಥವಾ ಮೂರು ದಿನಗಳ ರಜೆಯನ್ನು ನೀಡುತ್ತಾರೆ. ಇದರ ಹೊರತಾಗಿ ಚಳಿಗಾಲದ ರಜೆಯನ್ನು ನೀಡುತ್ತವೆ. ಇದು ಸಾಮಾನ್ಯವಾಗಿ ಸುಮಾರು 10 ದಿನಗಳವರೆಗೆ ಇರುತ್ತದೆ. ಆದರೆ ಇದು ಬೋರ್ಡ್ ಮತ್ತು ಶಾಲೆಯಿಂದ ಶಾಲೆಗೆ ಬದಲಾಗುತ್ತದೆ. ಕೆಲ ಶಾಲೆಗಳಲ್ಲಿ ಇದನ್ನು ಡಿಸೆಂಬರ್ ಕೊನೆ ವಾರದಲ್ಲಿ ಕೊಡಲಾಗುತ್ತದೆ. ಕೆಲ ಶಾಲೆಗಳಲ್ಲಿ ಈ ರಜೆಗಳನ್ನು ಡಿಸೆಂಬರ್ ತಿಂಗಳ ಆರಂಭದಿಂದಲೇ ನೀಡಲಾಗುತ್ತದೆ. ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಈ ಡಿಸೆಂಬರ್ ಅಂತ್ಯದ ರಜೆಗಳ ಪಟ್ಟಿ ತುಂಬಾ ದೊಡ್ಡದಿರುತ್ತದೆ.
ಪ್ರವಾಸಕ್ಕೆ ಪ್ಲಾನ್ ರೆಡಿ ಮಾಡಲು ಸಹಾಯವಾಗುತ್ತದೆ
ಈ ರಜೆಗಳ ಬಗ್ಗೆ ಮೊದಲೇ ತಿಳಿದಿದ್ದರೆ ಹಾಸ್ಟೆಲ್ನಲ್ಲಿ ಇರುವ ಮಕ್ಕಳು ಹಾಗು ಕಲಿಕೆಗೆಂದು ಬೇರೆಡೆ ಇದ್ದು ಓದುವ ಮಕ್ಕಳಿಗೆ ಮುಂದಿನ ಪ್ಲಾನ್ ಮಾಡಿಕೊಳ್ಳು ಸುಲಭವಾಗುತ್ತದೆ. ಅಷ್ಟೇ ಏಕೆ ಪ್ರವಾಸಕ್ಕೆ ತೆರಳಲು ಎಷ್ಟೋ ಜನ ಯೋಚಿಸಿರುತ್ತಾರೆ. ಅವರಿಗೂ ಸಹ ಈ ರಜೆಗಳ ಪಟ್ಟಿ ತುಂಬಾ ಸಹಾಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ರಜೆಯ ಪ್ರವಾಸವನ್ನು ತಿಂಗಳ ಮುಂಚಿತವಾಗಿ ಯೋಜಿಸಬಹುದು. ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ ಎಲ್ಲಾ ವಿಷಯಗಳಲ್ಲಿ ತಮ್ಮ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಮೂಲಕ ಈ ತಿಂಗಳ ದೀರ್ಘ ರಜಾದಿನಗಳ ಲಾಭವನ್ನು ಪಡೆಯಬಹುದು.
ಈಗಲೇ ನಿಮ್ಮ ಪ್ಲಾನ್ ಸಿದ್ಧಪಡಿಸಿ.
ಮುಂಚಿತವಾಗಿ ಈ ರಜೆಗಳ ಲಿಸ್ಟ್ ಮಾಡಿಟ್ಟುಕೊಂಡ ಎಷ್ಟೋ ಜನ ಈಗಾಗಲೇ ಬಸ್ ಅಥವಾ ಟ್ರೇನ್ ಬುಕ್ ಮಾಡಿ ಮನೆಗೆ ಹೊರಡಲು ಸಿದ್ಧತೆ ನಡೆಸಿಕೊಂಡಿರುತ್ತಾರೆ. ಇನ್ನು ಹಾಸ್ಟೇಲ್ನಲ್ಲಿ ಇರುವ ಮಕ್ಕಳ ಪಾಳಕರೂ ಸಹ ತಮ್ಮ ಮಕ್ಕಳನ್ನು ಮನೆಗೆ ಕರೆತರಲು ಎಲ್ಲಾ ಸಿದ್ಧತೆ ನಡೆಸಿಕೊಂಡಿರುತ್ತಾರೆ. ಈ ಏಲ್ಲಾ ಕಾರಣದಿಂದ ರಜಾ ದಿನಗಳ ಪಟ್ಟಿ ಮುಂಚಿತವಾಗಿ ದೊರೆಯುವುದು ತುಂಬಾ ಸಹಕಾರಿಯಾಗಿರುತ್ತದೆ. ಈ ದಿನಾಂಕವನ್ನು ಆಧರಿಸಿ ಈಗಲೇ ನಿಮ್ಮ ಪ್ಲಾನ್ ಸಿದ್ಧಪಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ