• ಹೋಂ
 • »
 • ನ್ಯೂಸ್
 • »
 • jobs
 • »
 • Education: ಬ್ರಿಟನ್‌ನಲ್ಲಿ ಭುಗಿಲೆದ್ದ ಶಿಕ್ಷಕರ ಹೋರಾಟ, ಸ್ಯಾಲರಿ ವಿಚಾರಕ್ಕೆ ಮುಷ್ಕರಕ್ಕೆ ಮುಂದಾದ ಟೀಚರ್ಸ್

Education: ಬ್ರಿಟನ್‌ನಲ್ಲಿ ಭುಗಿಲೆದ್ದ ಶಿಕ್ಷಕರ ಹೋರಾಟ, ಸ್ಯಾಲರಿ ವಿಚಾರಕ್ಕೆ ಮುಷ್ಕರಕ್ಕೆ ಮುಂದಾದ ಟೀಚರ್ಸ್

ಬ್ರಿಟನ್‌ನಲ್ಲಿ ಭುಗಿಲೆದ್ದ ಶಿಕ್ಷಕರ ಹೋರಾಟ

ಬ್ರಿಟನ್‌ನಲ್ಲಿ ಭುಗಿಲೆದ್ದ ಶಿಕ್ಷಕರ ಹೋರಾಟ

ಸರ್ಕಾರ ಮತ್ತು ಶಿಕ್ಷಕರ ನಡುವೆ ನಾ ಕೊಡೆ, ನೀ ಬಿಡೆ ಸಂಘರ್ಷ ನಡೆಯುತ್ತಿದೆ. ಸರ್ಕಾರ ನಮಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ಶಿಕ್ಷಕರು ಹೋರಾಟಕ್ಕಿಳಿದರೆ, ಇತ್ತ ಸರ್ಕಾರ ಹೋರಾಟ, ಮುಷ್ಕರ ನಿಲ್ಲದ ಹೊರತು ಮಾತುಕತೆ ಸಾಧ್ಯವಿಲ್ಲ ಎನ್ನುತ್ತಿದೆ. ನ್ಯಾಷನಲ್ ಎಜುಕೇಶನ್ ಯೂನಿಯನ್ ಸೇರಿದಂತೆ ನಾಲ್ಕು ಶಿಕ್ಷಣ ಒಕ್ಕೂಟಗಳು ಶಿಕ್ಷಣ ಕಾರ್ಯದರ್ಶಿ ಗಿಲಿಯನ್ ಕೀಗನ್ ಅವರಿಗೆ ಸಮನ್ವಯ ಮತ್ತು ಮಧ್ಯಸ್ಥಿಕೆ ಸೇವೆ (ACAS) ಮೂಲಕ ಸಂಧಾನ ಮಾತುಕತೆಗಳನ್ನು ನಡೆಸುವಂತೆ ಪತ್ರ ಬರೆದಿದ್ದರು.

ಮುಂದೆ ಓದಿ ...
 • Share this:

  ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಹೆಣಗಾಡುತ್ತಿರುವ ಯುಕೆ ಸರ್ಕಾರದ (America)  ಮೇಲೆ ಶಾಲಾ ಶಿಕ್ಷಕರು (Teachers) ಮತ್ತೊಂದು ಬರೆ ಎಳೆದಿದ್ದಾರೆ. ವೇತನ ಹೆಚ್ಚಳ (Salary) ವಿಚಾರ ಸಂಬಂಧಿಸಿದಂತೆ ಯುಕೆಯಲ್ಲಿ ಸರ್ಕಾರ ಮತ್ತು ಶಿಕ್ಷಕರ ಒಕ್ಕೂಟದ ನಡುವೆ ಜಟಾಪಟಿ ನಡೆಯುತ್ತಿದ್ದು ಸರ್ಕಾರಗಳ ಸುಳ್ಳು ಭರವಸೆಗೆ ಬೇಸತ್ತಿರುವ ಶಿಕ್ಷಕರು ಸರ್ಕಾರದ ಮೇಲೆ ಒತ್ತಡವನ್ನು ಹೆಚ್ಚಿಸಲು ತೀವ್ರ ಮುಷ್ಕರ ಕ್ರಮ ಕೈಗೊಂಡಿದ್ದಾರೆ. ವೇತನ ಹೆಚ್ಚಳ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಕಾರ್ಯದರ್ಶಿ ಗಿಲಿಯನ್ ಕೀಗನ್ (Education secretary Gillian Keegan) ಜೊತೆಗೆ ನಡೆದ ಮಾತುಕತೆ ವಿಫಲವಾಗಿದ್ದು, ಶಿಕ್ಷಕರ ಎಲ್ಲಾ ವಿನಂತಿ, ಬೇಡಿಕೆಗಳನ್ನು ಹಣದುಬ್ಬರದ ಕಾರಣ ನೀಡಿ ಗಿಲಿಯನ್ ಕೀಗನ್ ತಳ್ಳಿಹಾಕಿದ್ದಾರೆ. ಇದೇ ವಿಚಾರವಾಗಿ ಮತ್ತಷ್ಟು ಕೋಪಗೊಂಡಿರುವ ಶಿಕ್ಷಕ ಒಕ್ಕೂಟಗಳು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತೀವ್ರ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.


  ಶಿಕ್ಷಣ ಕಾರ್ಯದರ್ಶಿ ಜೊತೆ ಮಾತುಕತೆ ವಿಫಲ


  ಸರ್ಕಾರ ಮತ್ತು ಶಿಕ್ಷಕರ ನಡುವೆ ನಾ ಕೊಡೆ, ನೀ ಬಿಡೆ ಸಂಘರ್ಷ ನಡೆಯುತ್ತಿದೆ. ಸರ್ಕಾರ ನಮಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ಶಿಕ್ಷಕರು ಹೋರಾಟಕ್ಕಿಳಿದರೆ, ಇತ್ತ ಸರ್ಕಾರ ಹೋರಾಟ, ಮುಷ್ಕರ ನಿಲ್ಲದ ಹೊರತು ಮಾತುಕತೆ ಸಾಧ್ಯವಿಲ್ಲ ಎನ್ನುತ್ತಿದೆ. ನ್ಯಾಷನಲ್ ಎಜುಕೇಶನ್ ಯೂನಿಯನ್ ಸೇರಿದಂತೆ ನಾಲ್ಕು ಶಿಕ್ಷಣ ಒಕ್ಕೂಟಗಳು ಶಿಕ್ಷಣ ಕಾರ್ಯದರ್ಶಿ ಗಿಲಿಯನ್ ಕೀಗನ್ ಅವರಿಗೆ ಸಮನ್ವಯ ಮತ್ತು ಮಧ್ಯಸ್ಥಿಕೆ ಸೇವೆ (ACAS) ಮೂಲಕ ಸಂಧಾನ ಮಾತುಕತೆಗಳನ್ನು ನಡೆಸುವಂತೆ ಪತ್ರ ಬರೆದಿದ್ದರು.


  Digital revolution in education computer training for teachers
  ಸಾಂಕೇತಿಕ ಚಿತ್ರ


  ಆದರೆ ಮಾತುಕತೆ ವಿಫಲವಾಗಿದ್ದು, ಕೆಲದಿನಗಳ ಹಿಂದೆ ಅಂದರೆ ಮಾರ್ಚ್ 8 ರಂದು ಕೀಗನ್, ರಾಷ್ಟ್ರೀಯ ಶಿಕ್ಷಣ ಒಕ್ಕೂಟ (NEU) ರಾಷ್ಟ್ರೀಯ ವಾಕ್-ಔಟ್‌ಗಳನ್ನು ನಿಲ್ಲಸದ ಹೊರತು ಯಾವುದೇ ಮಾತುಕತೆ ನಡೆಯುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. NEU ನ ಜಂಟಿ ಪ್ರಧಾನ ಕಾರ್ಯದರ್ಶಿ ಡಾ ಮೇರಿ ಬೌಸ್ಟೆಡ್, ಕೂಡ ಕೀಗನ್ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂಬ ವಿಚಾರವನ್ನು ದೃಢಪಡಿಸಿದ್ದಾರೆ.


  "ಮುಷ್ಕರ ಒಂದೇ ಅಸ್ತ್ರ"


  ಇನ್ನು ರಾಷ್ಟ್ರೀಯ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಾಲ್ ವೈಟ್‌ಮ್ಯಾನ್ ಈ ಬಗ್ಗೆ ಮಾತನಾಡಿ "ಸರ್ಕಾರ ನಮಗೆ ನೀಡುತ್ತಿರುವ ಭರವಸೆಗಳೆಲ್ಲಾ ಸುಳ್ಳು. ನಾವು ಇನ್ನು ತಡಮಾಡುವುದಿಲ್ಲ. ಮಾತುಕತೆಯನ್ನು ಸಹ ಕೀಗನ್‌ ನಿರಾಕರಿಸಿದ್ದಾರೆ. ನಮ್ಮ ಬೇಡಿಕೆ ಪೂರೈಕೆಗೆ ನಮಗಿರುವುದು ಮುಷ್ಕರ ಅಸ್ತ್ರ ಒಂದೇ" ಎಂದು ತಿಳಿಸಿದ್ದಾರೆ.


  ಫೆಬ್ರವರಿಯಲ್ಲಿ 200,000 ಶಿಕ್ಷಕರು ಶಾಲೆಗೆ ಹೋಗದೇ ಪ್ರತಿಭಟಿಸಿದ ವೇಳೆ ಶಾಲೆಗಳನ್ನು ಭಾಗಶಃ ಮುಚ್ಚಲಾಗಿತ್ತು. ಈ ತಿಂಗಳದ ಕಳೆದ ವಾರ ಕೂಡ ಶಿಕ್ಷಕರು ಪ್ರಾದೇಶಿಕ ಮುಷ್ಕರಗಳ ಸರಣಿ ನಡೆಸಿದರು. ಇನ್ನೂ ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ರಾಷ್ಟ್ರೀಯ ಮುಷ್ಕರವನ್ನು ಯೋಜಿಸಲು ನಿರ್ಧರಿಸಿದ್ದಾರೆ.


  ವಿದ್ಯಾರ್ಥಿಗಳ ಮೇಲೆ ಎಫೆಕ್ಟ್


  ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ಜಂಟಿ ಪ್ರಧಾನ ಕಾರ್ಯದರ್ಶಿ ಕೆವಿನ್ ಕರ್ಟ್ನಿ ಮಾತನಾಡಿ "ಪ್ರತಿಭಟನೆಗಳು ಬೇಸಿಗೆಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಕ್ಕೂಟದ ನಾಯಕರು ಈ ವಾರದ ಮುಷ್ಕರಗಳನ್ನು ಹಿಂತೆಗೆದುಕೊಳ್ಳದ ಹೊರತು ಕೀಗನ್ ವೇತನ ಮಾತುಕತೆಗಳನ್ನು ಚರ್ಚಿಸಲು ನಿರಾಕರಿಸಿದ್ದಾರೆ. ಇದು ನೇರವಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ" ಎಂದಿದ್ದಾರೆ.


  ಇತ್ತ NEU ಜಂಟಿ ಪ್ರಧಾನ ಕಾರ್ಯದರ್ಶಿ ಮೇರಿ ಬೌಸ್ಟೆಡ್ “ನಾವು ಗಿಲಿಯನ್ ಕೀಗನ್ ಅವರೊಂದಿಗೆ ಮಾತನಾಡಲು ಬಯಸುತ್ತೇವೆ. ನಮ್ಮ ಶಾಲೆಗಳಲ್ಲಿನ ಸಮಸ್ಯೆ ಬಗ್ಗೆ, ಕಟ್ಟಡಗಳ ಬಗ್ಗೆ ಹೇಳಿಕೊಳ್ಳಬೇಕು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ" ಎಂದು ತಿಳಿಸಿದರು.


  ಸಾಂದರ್ಭಿಕ ಚಿತ್ರ  ಹಣದುಬ್ಬರದ ನಡುವೆ ವೇತನ ಹೆಚ್ಚಳ ಅಸಾಧ್ಯ - ಯುಕೆ ಸರ್ಕಾರ


  ಸರ್ಕಾರ, ಶಿಕ್ಷಕರ ಯೂನಿಯನ್‌ಗಳು ಹಣದುಬ್ಬರಕ್ಕಿಂತ ಹೆಚ್ಚಿನ ವೇತನ ಹೆಚ್ಚಳವನ್ನು ಬಯಸುತ್ತಿವೆ ಜೊತೆಗೆ ಶಾಲೆಗಳಿಗೂ ಹೆಚ್ಚುವರಿ ಅನುದಾನ ಬಿಡುಗಡೆಗೆ ಒತ್ತಾಯಿಸುತ್ತಿವೆ. ಇದೆಲ್ಲಾ ಹಣದುಬ್ಬರದ ಸಂದರ್ಭದಲ್ಲಿ ಅಸಾಧ್ಯವಾದ ಮಾತು. ವೇತನ ಹೆಚ್ಚಳವು ಅಸ್ತಿತ್ವದಲ್ಲಿರುವ ಬಜೆಟ್‌ನಲ್ಲಿ ಪೂರೈಸಲು ಸಾಧ್ಯವಿಲ್ಲ. ವಾರ್ಷಿಕ ಬೆಲೆ ಏರಿಕೆಯು 10.1% ರಷ್ಟಿದೆ, ಸರ್ಕಾರವು ವೇತನ ಬೇಡಿಕೆಯನ್ನು ಪೂರೈಸಲು ಅಸಮರ್ಥವಾಗಿದೆ ಎಂದು ಕೆಲ ಸರ್ಕಾರದ ಮೂಲಗಳು ತಿಳಿಸಿವೆ.


  ಕೀಗನ್ "ನಾನು ನ್ಯಾಷನಲ್ ಎಜುಕೇಶನ್ ಯೂನಿಯನ್‌ಗೆ ವೇತನ ಸೇರಿದಂತೆ ಅವರ ಸಮಸ್ಯೆ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಲು ಪ್ರಸ್ತಾಪವನ್ನು ಮಾಡಿ ಎರಡು ವಾರಗಳು ಕಳೆದಿವೆ. ಆದರೆ ಅವರು ತಮ್ಮ ಸ್ಟ್ರೈಕ್‌ಗಳನ್ನು ಮಾತ್ರ ನಿಲ್ಲಿಸುತ್ತಿಲ್ಲ. ಮುಷ್ಕರ ನಿಲ್ಲದ ಹೊರತು ಮಾತುಕತೆ ಸಾಧ್ಯವಿಲ್ಲ. ಇದು ಮಕ್ಕಳಿಗೆ ಮತ್ತು ಪೋಷಕರಿಗೆ ಹಾನಿ ಉಂಟು ಮಾಡುತ್ತಿದೆ. ದಾದಿಯರು, ಆಂಬ್ಯುಲೆನ್ಸ್ ಕಾರ್ಮಿಕರು ಮತ್ತು ಫಿಸಿಯೋಥೆರಪಿಸ್ಟ್‌ಗಳನ್ನು ಪ್ರತಿನಿಧಿಸುವ ಒಕ್ಕೂಟಗಳು ಮುಷ್ಕರವನ್ನು ಹಿಂಪಡೆದುಕೊಂಡು ಈಗ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಆದರೆ ಶಿಕ್ಷಕರ ಸಂಘ ಮಾತ್ರ ಪಟ್ಟು ಬಿಡುತ್ತಿಲ್ಲ" ಎಂದಿದ್ದಾರೆ.
  ಕೀಗನ್‌ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬೌಸ್ಟೆಡ್ ಶಿಕ್ಷಕರ ವೇತನವು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಿಂತ ಕಡಿಮೆಯಾಗಿದೆ. ಶಿಕ್ಷಕರನ್ನು ಯಾವಾಗಲೂ ಕಡೆಗಣಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.


  ಶಿಕ್ಷಕರ ವೇತನದ ಬೇಡಿಕೆಗಳೇನು?


  ಇಂಗ್ಲೆಂಡ್ ಮತ್ತು ವೇಲ್ಸ್‌ನ ಹೆಚ್ಚಿನ ರಾಜ್ಯ-ಶಾಲಾ ಶಿಕ್ಷಕರಿಗೆ 2022 ರಲ್ಲಿ 5% ವೇತನ ಹೆಚ್ಚಳವನ್ನು ನೀಡಲಾಯಿತು. ಆದರೆ ಶಿಕ್ಷಕರ ವೇತನಗಳು ಇಲ್ಲಿ 2010 ಮತ್ತು 2022ರ ನಡುವೆ ಸರಾಸರಿ 11% ರಷ್ಟು ಕುಸಿದಿದೆ. ಹೀಗಾಗಿ ಇದರ ಸಲುವಾಗಿ NEU ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಪರಿಗಣಿಸಿ ಶಿಕ್ಷಕರ ವೇತನವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿದೆ. ಉತ್ತರ ಐರ್ಲೆಂಡ್‌ನ ಶಿಕ್ಷಕರಿಗೆ 2021/22 ಮತ್ತು 2022/23 ರಲ್ಲಿ 3.2% ವೇತನ ಹೆಚ್ಚಳವನ್ನು ನೀಡಲಾಯಿತು.

  Published by:Monika N
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು