• Home
  • »
  • News
  • »
  • jobs
  • »
  • Kerala: ವಲಸೆ ಕಾರ್ಮಿಕರ ಮಕ್ಕಳಿಗೆ ಶಾಲೆ ಆರಂಭ ಮಾಡಿದ ತೆಲಂಗಾಣ ಪೊಲೀಸರು!

Kerala: ವಲಸೆ ಕಾರ್ಮಿಕರ ಮಕ್ಕಳಿಗೆ ಶಾಲೆ ಆರಂಭ ಮಾಡಿದ ತೆಲಂಗಾಣ ಪೊಲೀಸರು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಟ್ಟಿಗೆ ಗೂಡಿನ ಮಾಲೀಕರ ಸಹಕಾರದೊಂದಿಗೆ, ಡಿಸಿಪಿ ರೂಪೇಶ್, ಕಾರ್ಪೊರೇಟ್ ಶಾಲೆಗಳಿಗೆ ಸಮಾನವಾಗಿ ಡಿಜಿಟಲ್ ತರಗತಿಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಈಗ ಡಿಸಿಪಿ ಅವರು ಧ್ರುವ ಎಂಬ ಶಾಲೆಯನ್ನು ಉದ್ಘಾಟಿಸಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ಧ್ರುವ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ನೋಟ್ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಿದ್ದಾರೆ

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Kerala, India
  • Share this:

ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಕಾನೂನು ಬದ್ಧ ಹಕ್ಕು ಅಂತ ಹೇಳುವುದನ್ನು ನಾವೆಲ್ಲಾ ಹಿಂದೆಯಿಂದಲೂ ಕೇಳುತ್ತಾ ಬರುತ್ತಿದ್ದೇವೆ. ಸರಕಾರವು ಸಹ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಪಾಲಕ, ಪೋಷಕರು ತಮ್ಮ ಮಕ್ಕಳಿಗೆ (Children) ಕಡ್ಡಾಯವಾಗಿ ಶಿಕ್ಷಣ (Education) ಕೊಡಿಸಬೇಕು ಅಂತ ಪದೇ ಪದೇ ಹೇಳುತ್ತಲೇ ಇರುತ್ತದೆ. ಸರಕಾರವನ್ನು ಹೊರತುಪಡಿಸಿ, ಎಷ್ಟು ಜನ ವಿದ್ಯಾವಂತರು ಮತ್ತು ದುಡ್ಡು ಇರುವ ಶ್ರೀಮಂತರು ತಮ್ಮ ಏರಿಯಾದಲ್ಲಿ ಕೆಲಸ (Work) ಮಾಡುವ ಕಾರ್ಮಿಕರ ಮಕ್ಕಳ ಶಿಕ್ಷಣದ ಬಗ್ಗೆ ಯೋಚನೆ ಮಾಡುತ್ತಾರೆ ನೀವೇ ಹೇಳಿ?


ಯೋಚನೆ ಮಾಡಿ, ಆ ಬಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಮಾಡುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವವರು ನಮ್ಮ ಸಮಾಜದಲ್ಲಿ ತುಂಬಾನೇ ವಿರಳವಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ವಲಸೆ ಕಾರ್ಮಿಕರ ಮಕ್ಕಳಿಗಾಗಿ ಶಾಲೆ ಶುರು ಮಾಡಿದ ಪೊಲೀಸರು


ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಇಲ್ಲಿ ತೆಲಂಗಾಣದಲ್ಲಿ ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಿದ್ದಾರೆ ನೋಡಿ.


ನಗರಗಳ ಹೊರ ವಲಯದಲ್ಲಿ ಅಥವಾ ಈ ಹಳ್ಳಿಗಳಲ್ಲಿ ಇರುವ ಇಟ್ಟಿಗೆ ಗೂಡು (ಇಟ್ಟಿಗೆ ಭಟ್ಟಿ) ಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮತ್ತು ಅವರಿಗೆ ಒಂದು ಹೊಸ ಜೀವನವನ್ನು ನೀಡಲು ಅವರಿಗೆ ಕಾರ್ಪೊರೇಟ್ ಶಾಲೆಗಳಿಗೆ ಸರಿಸಮನಾಗಿ ಶಿಕ್ಷಣವನ್ನು ಒದಗಿಸಲು, ಪೆದ್ದಪಲ್ಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಿ.ಎಚ್.ರೂಪೇಶ್ ಅವರು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಮಗಿರಿ ಮಂಡಲದ ಬೇಗಂಪೇಟ್ ಗ್ರಾಮದಲ್ಲಿ ಧ್ರುವ ಶಾಲೆಯನ್ನು ಉದ್ಘಾಟಿಸಿದ್ದಾರೆ.


ಇದನ್ನೂ ಓದಿ: Digital India: ಡಿಜಿಟಲ್ ಇಂಡಿಯಾ ಪ್ರಶಸ್ತಿಗೆ ಭಾಜನವಾದ CBSE, ಎಲ್ಲಾ ದಾಖಲೆಗಳು ಇಲ್ಲಿ ಲಭ್ಯ!


ಈ ಪ್ರದೇಶವು ಅನೇಕ ಇಟ್ಟಿಗೆ ಗೂಡುಗಳಿಂದ ಸುತ್ತುವರೆದಿದ್ದು, ಇಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರ ಬಳಿ ಹಣವಿಲ್ಲ.


ಬಡ ಮಕ್ಕಳಿಗಾಗಿ ಶಾಲೆ ಆರಂಭಿಸುವ ಯೋಚನೆ ಬಂದಿದ್ದು ಹೇಗೆ?


ಪೆದ್ದಪಲ್ಲಿ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಐಪಿಎಸ್ ಅಧಿಕಾರಿ ಸಿ.ಎಚ್.ರೂಪೇಶ್ ಅವರು ವಲಸೆ ಕಾರ್ಮಿಕರ ಮಕ್ಕಳು ಇಟ್ಟಿಗೆ ಗೂಡುಗಳಲ್ಲಿ ತಮ್ಮ ಸಮಯವನ್ನು ಕಳೆಯುವುದನ್ನು ವೈಯಕ್ತಿಕವಾಗಿ ವೀಕ್ಷಿಸಿದರು.


ಶಿಕ್ಷಣವನ್ನು ಮುಂದುವರಿಸದೆ ಕೆಲಸ ಮಾಡುತ್ತಿದ್ದಾರೆ


ಅಲ್ಲಿ ಅವರ ಪೋಷಕರು ಶಿಕ್ಷಣವನ್ನು ಮುಂದುವರಿಸದೆ ಕೆಲಸ ಮಾಡುತ್ತಿದ್ದಾರೆ. ಅವರ ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿದರು. ಅಲ್ಲದೆ, ಪೋಷಕರು ತಮ್ಮ ಕೆಲಸದಲ್ಲಿ ಸಹಾಯಕ್ಕಾಗಿ ಈ ಮಕ್ಕಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದರು.


ಎಸಿಪಿ ಸಾರಂಗಪಾಣಿ ಮತ್ತು ಸಿಐ ಪ್ರದೀಪ್ ಕುಮಾರ್ ಅವರೊಂದಿಗೆ ಡಿಸಿಪಿ ಅವರು ವಲಸೆ ಕಾರ್ಮಿಕರು ಮತ್ತು ಇಟ್ಟಿಗೆ ಗೂಡುಗಳ ಮಾಲೀಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದರು ಮತ್ತು ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಪೊಲೀಸರು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾರೆ ಎಂದು ಭರವಸೆಯನ್ನು ಸಹ ನೀಡಿದರು.


ಇಟ್ಟಿಗೆ ಗೂಡಿನ ಮಾಲೀಕರ ಸಹಾಯದೊಂದಿಗೆ ಶಾಲೆ ಶುರು ಮಾಡಿದ ಪೊಲೀಸರು


ಇಟ್ಟಿಗೆ ಗೂಡಿನ ಮಾಲೀಕರ ಸಹಕಾರದೊಂದಿಗೆ, ಡಿಸಿಪಿ ರೂಪೇಶ್, ಕಾರ್ಪೊರೇಟ್ ಶಾಲೆಗಳಿಗೆ ಸಮಾನವಾಗಿ ಡಿಜಿಟಲ್ ತರಗತಿಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಈಗ ಡಿಸಿಪಿ ಅವರು ಧ್ರುವ ಎಂಬ ಶಾಲೆಯನ್ನು ಉದ್ಘಾಟಿಸಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ಧ್ರುವ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ನೋಟ್ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಿದ್ದಾರೆ. ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವಲ್ಲಿ ಸಹಾಯ ಮಾಡಿದಕ್ಕೆ ಡಿಸಿಪಿ ಅವರ ಬಗ್ಗೆ ಸ್ಥಳೀಯ ಜನರು ಮತ್ತು ವಲಸೆ ಕಾರ್ಮಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು