ಮಕ್ಕಳು ಶೌರ್ಯವಂತರು, ಧೈರ್ಯವಂತರು. ಇದಕ್ಕೆ ಹಲವು ನಿದರ್ಶನಗಳಿವೆ. ಇನ್ನು ಮಕ್ಕಳಲ್ಲಿ ಸಮಯಪ್ರಜ್ಞೆ ಎಂಬುದು ಸದಾ ಚೇತನಶೀಲವಾಗಿರುತ್ತದೆ. ನಮ್ಮಲ್ಲಿಯೇ ಎಷ್ಟೋ ಮಕ್ಕಳು ತಮ್ಮ ಸಮಯಪ್ರಜ್ಞೆಯಿಂದ (Punctuality) ಜೀವಗಳನ್ನು (Life) ಉಳಿಸಿ ನಾಡಿನ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಂದು ಮಗು ಈಜಲು ಹೋದಾಗ ಮತ್ತೊಂದು ಮಗು ಜೀವದ ಹಂಗು ತೊರೆದು ರಕ್ಷಿಸಿರುವುದು, ರೈಲ್ವೆ ಅಪಘಡಗಳನ್ನು ಮಕ್ಕಳು (Students) ತಪ್ಪಿಸಿರುವುದು, ಚಾಲಕನ ನಿಯಂತ್ರಣ ತಪ್ಪಿದಾಗ ಮುಂದಾಗುತ್ತಿದ್ದ ಅನಾಹುತಗಳನ್ನು ತಪ್ಪಿಸಿರುವುದು ನಮ್ಮ ಕಣ್ಣ (Eye) ಮುಂದೆಯೇ ಇದೆ. ಇದೀಗ ಇಂತಹದೇ ಘಟನೆ ಅಮೆರಿಕಾ ಮಿಚಿಗನ್‍ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ಬಾಲಕನೊಬ್ಬ ತನ್ನ ಸಮಯಪ್ರಜ್ಞೆಯಿಂದ ಸಾಕಷ್ಟು ಸಹಪಾಠಿಗಳ ಜೀವ ಉಳಿಸಿದ ಸಾಹಸಮಯ ಘಟನೆ ಮಿಚಿಗಾನ್ ನಲ್ಲಿ ನಡೆದಿದ್ದು, ಈ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾರೆನ್ ಕನ್ಸಾಲಿಡೇಟೆಡ್ ಶಾಲೆಯ ಮಕ್ಕಳನ್ನು ಮನೆಗೆ ಬಿಡಲು ಚಾಲಕ ಬಸ್ ಅನ್ನು ಚಲಾಯಿಸುತ್ತಿರುತ್ತಾನೆ. ಈ ವೇಳೆ ಚಾಲಕ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಇಂತಹ ಸಮಯದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ, ಶಾಲಾ ವಾಹನದಲ್ಲಿದ್ದ ವಿದ್ಯಾರ್ಥಿಯೊಬ್ಬ ಶಾಲಾ ಬಸ್‍ನ್ನು ನಿಯಂತ್ರಿಸಲು ತಾನೇ ಮುಂದಾಗುತ್ತಾನೆ. ಈ ವಿಡಿಯೋವನ್ನು ವಾರೆನ್ ಕನ್ಸಾಲಿಡೇಟೆಡ್ ಶಾಲೆಯು ಹಂಚಿಕೊಂಡಿದ್ದಾರೆ.
66 ವಿದ್ಯಾರ್ಥಿಗಳ ಜೀವ ಉಳಿಸಿದ ಸಾಧಕ ವಿದ್ಯಾರ್ಥಿಯ ಹೆಸರೇ ದಿಲ್ಲನ್ ರೇವಿಸ್. ಈತ ವಾರೆನ್ ಕನ್ಸಾಲಿಡೇಟೆಡ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದನು.
ವಿಡಿಯೋದಲ್ಲಿ ಏನಿದೆ?
ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಅನಾಯಾಸವಾಗಲು ಶುರುವಾಗುತ್ತದೆ. ಮೂಗಿಗೆ ಏನನ್ನೋ ಹಿಡಿಯುತ್ತಾನೆ. ಸುಸ್ತಾಗುತ್ತಿದ್ದರೂ ಲೆಕ್ಕಿಸದೇ ಶಾಲಾ ಬಸ್ ಅನ್ನು ಚಲಾಯಿಸಲು ಮುಂದಾಗುತ್ತಾನೆ. ಆದರೆ ಸಾಧ್ಯವಾಗದೇ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಆಗ ಓಡಿ ಬಂದ ವಿದ್ಯಾರ್ಥಿಯು ಬಸ್ ಅನ್ನು ಬುನರ್ಟ್ ರಸ್ತೆಯ ಬಳಿಯ ಮೇಸೋನಿಕ್ ಬೌಲೆವಾರ್ಡ್‍ನಲ್ಲಿ ಸುರಕ್ಷಿತವಾಗಿ ನಿಲ್ಲಿಸುತ್ತಾನೆ ಎಂದು ಫಾಕ್ಸ್ 2 ಡೆಟ್ರಾಯಿಟ್ ವರದಿ ಮಾಡಿದೆ.
ಇದನ್ನೂ ಓದಿ: SSLC Result 2023 ಸಂಭವನೀಯ ದಿನಾಂಕ ಪ್ರಕಟ
ಬಸ್ ನಿಯಂತ್ರಣ ಕಳೆದುಕೊಳ್ಳುತ್ತಿರುವುದನ್ನು ಕಂಡು ಹೆದರಿದ ಸುಮಾರು ವಿದ್ಯಾರ್ಥಿಗಳನ್ನು ಹೊಂದಿದ್ದ ಬಸ್‍ನಲ್ಲಿದ್ದ ಇತರರಿಗೆ ವಿದ್ಯಾರ್ಥಿಯು "ಯಾರಾದರೂ 911ಕ್ಕೆ ಕರೆ ಮಾಡಿ ಎಂದು ಹೇಳಿರುವುದನ್ನು, ಇತರ ವಿದ್ಯಾರ್ಥಿಗಳು ಭಯದಿಂದ ಕಿರುಚುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ ಎಂದು ಫಾಕ್ಸ್ 2 ಡೆಟ್ರಾಯಿಟ್ ಹೇಳಿದೆ.
ಸೂಪರಿಂಟೆಂಡೆಂಟ್ ರಾಬರ್ಟ್ ಲಿವರ್ನೋಯಿಸ್ ಪ್ರಕಾರ, ದಿಲ್ಲನ್ ಚಾಲಕನ ಹಿಂದಿನ ಐದನೇ ಸಾಲಿನಲ್ಲಿ ಕುಳಿತಿದ್ದನು. ಚಾಲಕ ಪ್ರಜ್ಞೆ ಕಳೆದುಕೊಂಡಿರುವುದನ್ನು ಗಮನಿಸಿದ ಆತ ಮರು ಯೋಚಿಸದೇ ಕೆಲವೇ ಸೆಕೆಂಡುಗಳಲ್ಲಿ ಸಹಾಯಕ್ಕೆ ಧಾವಿಸಿ ಪ್ರಾಣ ಉಳಿಸಿದ್ದಾನೆ. ತಕ್ಷಣವೇ ಸಮಯಪ್ರಜ್ಞೆ ಮೆರೆದ 7 ನೇ ತರಗತಿಯ ವಿದ್ಯಾರ್ಥಿಯು, ಚಾಲಕನಿಗೆ ಬಸ್ ಚಲಾಯಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದನು. ಆಗ ತಕ್ಷಣವೇ ಬಸ್‍ನ ಮುಂಭಾಗಕ್ಕೆ ಬಂದು ಸಹಾಯ ಮಾಡಿದನು.
ಇನ್ನು ವಾರೆನ್ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಶೀಘ್ರವಾಗಿ ಪ್ರತಿಕ್ರಿಯಿಸಿ ಚಾಲಕನ ನೆರವಿಗೆ ಧಾವಿಸಿದರು ಮತ್ತು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೇರೆ ಬಸ್ ಮೂಲಕ ಮನೆಗೆ ತಲುಪಿಸಿದರು ಎಂದು ಲಿವರ್ನೋಯಿಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಬಸ್ ನಿಲ್ಲಿಸಲು ಸಹಾಯ ಮಾಡಿದ ವಿದ್ಯಾರ್ಥಿಯ ಯೋಚನೆ ನಿಜಕ್ಕೂ ಶ್ಲಾಘನೀಯ ಮತ್ತು ಅವರ ಪ್ರಯತ್ನದ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತದೆ" ಎಂದು ಲಿವರ್ನೋಯಿಸ್ ಅವರು ಹೇಳಿದರು. ಗುರುವಾರ ನಡೆದ ವಿಶೇಷ ಸಮಾರಂಭದಲ್ಲಿ ಇಡೀ ಶಾಲೆಯು ದಿಲ್ಲನ್ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಸಿದರು. ಸರಿಯಾದ ಸಮಯಕ್ಕೆ ತೋರಿದ ಧೈರ್ಯವು ವಿದ್ಯಾರ್ಥಿಗಳಿಗೆ ಮರು ಜೀವ ಒದಗಿಸಿತು. ಚಾಲಕನು ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದನೇ ಎಂಬುದರ ಕುರಿತು ಪರಿಶೀಲಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ