• ಹೋಂ
 • »
 • ನ್ಯೂಸ್
 • »
 • Jobs
 • »
 • Scholarship: ಫೆಬ್ರವರಿಯಲ್ಲಿ ಅಪ್ಪೈ ಮಾಡಬಹುದಾದ ವಿದ್ಯಾರ್ಥಿ ವೇತನದ ಮಾಹಿತಿ ಇಲ್ಲಿದೆ

Scholarship: ಫೆಬ್ರವರಿಯಲ್ಲಿ ಅಪ್ಪೈ ಮಾಡಬಹುದಾದ ವಿದ್ಯಾರ್ಥಿ ವೇತನದ ಮಾಹಿತಿ ಇಲ್ಲಿದೆ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಅಥವಾ ವೃತ್ತಿಯ ಆಕಾಂಕ್ಷೆಗಳನ್ನು ಮುಂದುವರಿಸಲು ಅವಕಾಶವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ನೀವು ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • New Delhi, India
 • Share this:

ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಹಲವಾರು ವಿದ್ಯಾರ್ಥಿ ವೇತನವನ್ನು (Scholarship) ನೀಡಲಾಗುತ್ತದೆ. ಅದೇ ರೀತಿ ಇಲ್ಲಿ ನೀಡಿರುವ ಕೆಲವು ಸ್ಕಾಲರ್​ಶಿಪ್​ಗಳು ನಿಮಗೆ ಈ ತಿಂಗಳೇ ಲಭ್ಯವಾಗಲಿದೆ.  ಫೆಬ್ರವರಿ ಹಾಗೂ ಮಾರ್ಚ್​ ಅವಧಿಯಲ್ಲಿ ನೀವು ಅಪ್ಲೈ ಮಾಡಬಹುದಾದ ಕೆಲವು ಸ್ಕಾಲರ್​ ಶಿಪ್​ ಮಾಹಿತಿಯನ್ನು (information) ಇಲ್ಲಿ ನೀಡಲಾಗಿದೆ. ಈ ಕೂಡಲೇ ಅಪ್ಲೈ (Apply) ಮಾಡಿ ಈ ಸ್ಕಾಲರ್​ಶಿಪ್​ ನಿಮ್ಮದಾಗಿಸಿಕೊಳ್ಳಿ. ಅಧಿಕೃತ ಜಾಲತಾಣಗಳ ಲಿಂಕ್ (Link)​ ನೀಡಲಾಗಿದೆ ಅವುಗಳಿಗೂ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. 


1. ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಮತ್ತು ಕ್ರೀಡಾಪಟುಗಳು ಮತ್ತು ವ್ಯಕ್ತಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ
ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಅಥವಾ ವೃತ್ತಿಯ ಆಕಾಂಕ್ಷೆಗಳನ್ನು ಮುಂದುವರಿಸಲು ಅವಕಾಶವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ನೀವು ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದು. ಆದರೆ ಈ ಸ್ಕಾಲರ್​ಶಿಪ್​ ಪಡೆಯಲು ಕೆಲವು ಅರ್ಹತೆಗಳ ಅಗತ್ಯತೆ ಇರುತ್ತದೆ.  ಯಾರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದಾರೋ ಅಂಥವರಿಗೆ ಈ ಸ್ಕಾಲರ್​ಶಿಪ್​ ನೀಡಲಾಗುತ್ತದೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಳ್ಳಬಹುದು.


ಇದನ್ನೂ ಓದಿ: Anganwadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್!


ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆ


1. ಇತರರಿಗೆ ಸಹಾಯ ಮಾಡುವ ವ್ಯಕ್ತಿಗಳಾಗಿರಬೇಕು
2. ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ವರ್ಗದ  ವಿದ್ಯಾರ್ಥಿಗಳಿಗೆ   ಕಲಿಸುವುದು ಅಥವಾ ಅವರಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು.
3. ಕ್ರೀಡಾಪಟುಗಳಿಗೆ  ಅರ್ಜಿದಾರರು ಕಳೆದ 2, 3 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು. ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ ಸ್ಥಾನ ಪಡೆದಿರಬೇಕು.
4. ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು.
5. 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
6. ಎಲ್ಲಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು.
ಮೂರು ವರ್ಷಗಳ ವರೆಗೆ INR 75 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ ಈ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2023


ಅಪ್ಲಿಕೇಶನ್ ಮೋಡ್: ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ


ಅಧಿಕೃತ ಜಾಲತಾಣ : ಇಲ್ಲಿ ಕ್ಲಿಕ್ ಮಾಡಿ
2. JN ಟಾಟಾ ಎಂಡೋಮೆಂಟ್ ಲೋನ್​ ವಿದ್ಯಾರ್ಥಿವೇತನ 2023-24
ಜೆಎನ್ ಟಾಟಾ ಎಂಡೋಮೆಂಟ್ ವಿದೇಶದಲ್ಲಿ ಉನ್ನತ ಅಧ್ಯಯನವನ್ನು ಮುಂದುವರಿಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಅರ್ಜಿಗಳನ್ನು ಆಹ್ವಾನಿಸುತ್ತದೆ. ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದು ಅವರ ಶೈಕ್ಷಣಿಕ ವೆಚ್ಚ ಬರಿಸಲು ತುಂಬಾ ಸಹಾಯಕವಾಗಿದೆ. ಯಾರಾದರೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲು ಆಸಕ್ತಿ ಹೊಂದಿದ್ದು ನಿಮ್ಮ ಆರ್ಥಿಕತೆ ಅಷ್ಟು ಸಭಲವಾಗಿರದೇ ಇದ್ದರೆ ಖಂಡಿತ ಈ ಲೋನ್ ಸ್ಕಾಲರ್‌ಶಿಪ್‌ಗೆ ನೀವು ಅರ್ಜಿ ಸಲ್ಲಿಸಿ ಅವಶ್ಯವಿರುವ ಹಣ ಸಂಗ್ರಹಿಸಿ.


ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆ ಹೊಂದಿರಬೇಕು


1. ಕನಿಷ್ಠ ಒಂದು ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿದ ಭಾರತೀಯ ಪ್ರಜೆಗಳಿಗೆ ಅಥವಾ ಭಾರತದಲ್ಲಿನ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಕಾಲೇಜು/ಸಂಸ್ಥೆಯಲ್ಲಿ ಯಾವುದೇ ಪದವಿಪೂರ್ವ ಕೋರ್ಸ್​​ನ ಕೊನೆ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್​ಶಿಪ್​ ಲಭಿಸುತ್ತದೆ.
2. ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ / ಡಾಕ್ಟರೇಟ್ / ಪೋಸ್ಟ್‌ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು


ಅಪ್ಲಿಕೇಶನ್ ಮೋಡ್: ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ


ಅಧಿಕೃತ ಜಾಲತಾಣ : ಇಲ್ಲಿ ಕ್ಲಿಕ್ ಮಾಡಿ

First published: