• Home
  • »
  • News
  • »
  • jobs
  • »
  • Scholarship In 2023: ಹೊಸ ವರ್ಷಕ್ಕೆ ಅಪ್ಲೈ ಮಾಡಬಹುದಾದ ಸ್ಕಾಲರ್​ ಶಿಪ್​ಗಳ​ ಮಾಹಿತಿ ಇಲ್ಲಿದೆ

Scholarship In 2023: ಹೊಸ ವರ್ಷಕ್ಕೆ ಅಪ್ಲೈ ಮಾಡಬಹುದಾದ ಸ್ಕಾಲರ್​ ಶಿಪ್​ಗಳ​ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉನ್ನತ ಶಿಕ್ಷಣ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ವರ್ಷ ಅಪ್ಲೈ ಮಾಡಬಹುದಾದ ಮೂರು ಸ್ಕಾಲರ್​ ಶಿಪ್​ ಇಲ್ಲಿದೆ. ನೀವೂ ಅಪ್ಲೈ ಮಾಡಿ ಇದರ ಫಲಾನುಭವಿಗಳಾಗಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

  • News18 Kannada
  • 2-MIN READ
  • Last Updated :
  • New Delhi, India
  • Share this:

ಹಿಂದಿನ ವರ್ಷ ನಿಮಗೆ ಯಾವ ವಿದ್ಯಾರ್ಥಿ (Students) ವೇತನವೂ ಲಭ್ಯವಾಗಿಲ್ಲ ಅಂತ ಕೊರಗೋದು ಬೇಡ, ಏಕೆಂದರೆ ಈ ವರ್ಷದ ಆರಂಭದಲ್ಲೇ ಹಲವು ವಿದ್ಯಾರ್ಥಿ ವೇತನಗಳು ನಿಮಗೆಂದು ಸಾಲುಗಟ್ಟಿ ನಿಂತಿವೆ. 2023ರಲ್ಲಿ ನೀವು ಅಪ್ಲೈ ಮಾಡಬಹುದಾದ ಕೆವು ಸ್ಕಾಲರ್​ ಶಿಪ್​ಗಳ (Scholarship) ಕುರಿತು ನಾವಿಲ್ಲಿ ಮಾಹಿತಿ (Information) ನಿಡುತ್ತಿದ್ದೇವೆ. ಈ ಮಾಹಿತಿ ಅನುಸಾರ ನೀವು ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು. ಅಪ್ಲೈ (Apply) ಮಾಡಬಹುದಾದ ಲಿಂಕ್​ಗಳನ್ನು ಇಲ್ಲಿ ನೀಡಲಾಗಿದೆ. ಮೂರು ಸ್ಕಾಲರ್ ಶಿಪ್​ಗಳ ವಿವರ ಇಲ್ಲಿದೆ. ಕೊನೆ ದಿನಾಂಕದೊಳಗೆ ಅಪ್ಲೈ ಮಾಡಿಬಿಡಿ.


1. ಇಂಜಿನಿಯರಿಂಗ್ ಪದವೀಧರರಿಗೆ GCIL ಅಪ್ರೆಂಟಿಶಿಪ್ 2022-23
ಇಂಜಿನಿಯರಿಂಗ್ ಪದವೀಧರರಿಗೆ GCIL ಅಪ್ರೆಂಟಿಸ್‌ಶಿಪ್ 2022-23 ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾ ಲಿಮಿಟೆಡ್ ಅಂದರೆ, ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ಎಂಟರ್‌ಪ್ರೈಸ್ BE/BTech ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್​ ಶಿಪ್​ ನೀಡುತ್ತಿದೆ. ನೀವೂ ಸಹ BE/BTech ಪದವಿ ವಿದ್ಯಾರ್ಥಿಗಳಾಗಿದ್ದರೆ ಖಂಡಿತ ಅಪ್ಲೈ ಮಾಡಬಹುದು.


ಅರ್ಹತೆ:
1. ಡಿಸೆಂಬರ್ 31, 2022 ರಂತೆ 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು.
2. . ಅರ್ಜಿದಾರರು AICTE, ಸರ್ಕಾರದಿಂದ ಗುರುತಿಸಲ್ಪಟ್ಟ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ BE/BTech ಪದವಿ ಪಡೆದಿರಬೇಕು.
3. ಒಂದು ವರ್ಷದ ಕೆಲಸದ ಅನುಭವದೊಂದಿಗೆ ಭಾರತದ.
ಯಾವುದೇ ಸಂಸ್ಥೆಯಲ್ಲಿ ಯಾವುದೇ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
4. ತಿಂಗಳಿಗೆ 15 ಸಾವಿರ ಸ್ಕಾಲರ್​ ಶಿಪ್​ ದೊರೆಯುತ್ತದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-01-2023


ಇದನ್ನೂ ಓದಿ: Reliance Scholarship: ವಾಟ್ಸಪ್​ನಲ್ಲಿ ಹಾಯ್​ ಎಂದು ಮೆಸೇಜ್​ ಮಾಡಿದ್ರೆ ಸಾಕು 6 ಲಕ್ಷ ಸ್ಕಾಲರ್​ಶಿಪ್​ ಸಿಗುತ್ತೆ!


ಅಪ್ಲಿಕೇಶನ್ ಮೋಡ್: ಇಮೇಲ್ ಮೂಲಕ ಮಾತ್ರ, nerldchr@posoco.in ನಲ್ಲಿ ಅಥವಾ nerldchr@grid-india.inಗೆ ಇಮೇಲ್ ಮಾಡಿ


2. ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್
ಕ್ರೀಡಾಪಟುಗಳು ಮತ್ತು ವ್ಯಕ್ತಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ, ಇದರ ಮೂಲಕ ನೀವು ವಿದ್ಯಾರ್ಥಿವೇತನ ಮತ್ತು ತರಬೇತಿ ಎರಡನ್ನೂ ಪಡೆಯಬಹುದು. ಇದರಿಂದ ಕ್ರೀಡಾ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನ ಸಿಗಲಿದೆ. ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಮತ್ತು ವೃತ್ತಿಯ ಆಕಾಂಕ್ಷೆಗಳನ್ನು ಮುಂದುವರಿಸಲು ಈ ವಿದ್ಯಾರ್ಥಿ ವೇತನ ಅವಕಾಶವನ್ನು ನೀಡುತ್ತಿದೆ.


ಅರ್ಹತೆಗಳು


1. ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ಮಕ್ಕಳ ಗುಂಪಿಗೆ ಕಲಿಸುವುದು ಅಥವಾ ಅವರಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು.
2. ಕ್ರೀಡಾಪಟುಗಳಿಗೆ , ಅರ್ಜಿದಾರರು ಕಳೆದ 2/3 ವರ್ಷಗಳಲ್ಲಿ ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು.
3. ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ / ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು.
4. ಅವರು 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
5. ಎಲ್ಲಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು.
6. ವರ್ಷಕ್ಕೆ 75,000 ವಿದ್ಯಾರ್ಥಿವೇತನ ಲಭಿಸುತ್ತದೆ.


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


3. ಶಾಪಿಂಗ್ ಸ್ಕಾಲರ್​ ಶಿಪ್​
ಇದು ಸಮಾಜದ ವಿವಿಧ ಹಂತಗಳ ಯುವ ವೃತ್ತಿಪರರಿಗೆ 18 ತಿಂಗಳ ವರೆಗೆ ನೀಡುವ ಸ್ಕಾಲರ್​ ಶಿಪ್​ ಆಗಿದೆ. ನಾಯತ್ವ ತೆಗೆದುಕೊಳ್ಳಲು ಸಮರ್ಥರಾದ ಇತರರಿಗೆ ಸಹಾಯ ಮಾಡುವ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.


ಅರ್ಹತೆ:
1. 20 ರಿಂದ 30 ವರ್ಷ ವಯಸ್ಸಿನ ಒಳಗಿನ ಭಾರತೀಯ ನಾಗರಿಕರಿಗೆ ಮಾತ್ರ ಇದನ್ನು ನೀಡಲಾಗುತ್ತದೆ.
2. ಅರ್ಜಿದಾರರು ಯಾವುದೇ ವಿಭಾಗದಲ್ಲಿ ಪದವಿ ಪಡೆದವರಾಗಿರಬೇಕು ಅಥವಾ ಫೆಲೋಶಿಪ್ ಪ್ರಾರಂಭ ದಿನಾಂಕದೊಳಗೆ ಯಾವುದೇ ಕ್ಷೇತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಬೇಕು.
3. INR 20,000 ಸ್ಕಾಲರ್​ ಶಿಪ್​ ನೀಡಲಾಗುತ್ತದೆ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2022

First published: