ಒಂಟಿ ಹೆಣ್ಣು ಮಗುವಿಗೆ (SJSGC) ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್‌ನಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಅಧ್ಯಯನಗಳನ್ನು ಸೇರಿದಂತೆ ಒಟ್ಟು ಅಪ್ಲಿಕೇಶನ್‌ಗಳ ಸಂಖ್ಯೆ 16 ಪಟ್ಟು ಹೆಚ್ಚಾಗಿದೆ. ಯುಜಿಸಿ ನೀಡುವ ಈ ಸ್ಕಾಲರ್ಶಿಪ್ಗೆ (Scholarship) ಅಪ್ಲೈ ಮಾಡಲು ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 5 ರಂದು ಪರಿಚಯಿಸಲಾದ ಫೆಲೋಶಿಪ್‌ನಲ್ಲಿನ (Fellowship) ಮಾಹಿತಿ ಪ್ರಕಾರ 1,144 ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಹೇಳಲಾಗಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ತಾತ್ಕಾಲಿಕವಾಗಿ 1,129 ಅರ್ಜಿದಾರರನ್ನು ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿದೆ. ಹಿಂದಿನ ಯುಜಿಸಿ ಯೋಜನೆ ಸಮಾಜ ವಿಜ್ಞಾನದಲ್ಲಿ ಸಂಶೋಧನೆಗಾಗಿ ಒಂಟಿ ಹೆಣ್ಣು ಮಗುವಿನ ಫೆಲೋಶಿಪ್, ಮಾನವಿಕ ಮತ್ತು ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯನ್ನು ಅನುಸರಿಸುವ ವಿದ್ವಾಂಸರಿಗೆ ಮಾತ್ರ ಅವಕಾಶವನ್ನು ನೀಡಿತ್ತು. ಫೆಲೋಶಿಪ್ ಹ್ಯುಮಾನಿಟೀಸ್ ವಿದ್ಯಾರ್ಥಿಗಳಿಗೆ ಸೀಮಿತವಾದಾಗ ಕೇವಲ 67 ಅರ್ಜಿಗಳನ್ನು ಸ್ವೀಕರಿಸಿತ್ತು.
ಆದರೆ ಇದೀಗ ಕ್ಷೇತ್ರವನ್ನು ವಿಸ್ತರಣೆ ಮಾಡಲಾಗಿದೆ ಹಾಗಾಗಿ ಅರ್ಜಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಇದರಿಂದ ವಿದ್ಯಾರ್ಥಿನಿಯರಿಗೂ ಸಹ ತುಂಬಾ ಸಹಾಯವಾಗಲಿದೆ.
ಇದನ್ನೂ ಓದಿ: PUC Exam: ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಮರು ಮೌಲ್ಯಮಾಪನದಲ್ಲಿ 1 ಅಂಕ ಹೆಚ್ಚು ಬಂದ್ರೂ ಪರಿಗಣನೆ
ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಫೆಲೋಶಿಪ್‌ಗಾಗಿ ಸ್ಲಾಟ್‌ಗಳ ಸಂಖ್ಯೆಯ ಮೇಲಿನ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ನಿರ್ಧರಿಸಲಾಗಿದೆ. ಇದರಿಂದಾಗಿ ಇನ್ನೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಇದು ಮುಕ್ತವಾಗಿರುತ್ತದೆ. ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಮಾತನಾಡಿ, ಶಿಕ್ಷಣದ ಪ್ರವೇಶದ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಅಭ್ಯರ್ಥಿಗಳ ಹೆಚ್ಚಿನ ಡ್ರಾಪ್ಔಟ್ ಪ್ರಮಾಣವನ್ನು ತಗ್ಗಿಸಲು ಈ ರೀತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಪರಿಷ್ಕರಣೆ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ವಿದ್ಯಾರ್ಥಿನಿಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ. ಯುಜಿಸಿ ಒಂದು ಉತ್ತಮ ಸೇವೆಯನ್ನು ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದು ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿನಿಯರು ಪಡೆದುಕೊಂಡರೆ ಉತ್ತಮ.
ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಮತ್ತು ಕ್ರೀಡಾಪಟುಗಳು ಮತ್ತು ವ್ಯಕ್ತಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ
ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಅಥವಾ ವೃತ್ತಿಯ ಆಕಾಂಕ್ಷೆಗಳನ್ನು ಮುಂದುವರಿಸಲು ಅವಕಾಶವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ನೀವು ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದು. ಆದರೆ ಈ ಸ್ಕಾಲರ್‌ಶಿಪ್ ಪಡೆಯಲು ಕೆಲವು ಅರ್ಹತೆಗಳ ಅಗತ್ಯತೆ ಇರುತ್ತದೆ. ಯಾರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದಾರೋ ಅಂಥವರಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಳ್ಳಬಹುದು.
1. ಇತರರಿಗೆ ಸಹಾಯ ಮಾಡುವ ವ್ಯಕ್ತಿಗಳಾಗಿರಬೇಕು
2. ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕಲಿಸುವುದು ಅಥವಾ ಅವರಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು.
3. ಕ್ರೀಡಾಪಟುಗಳಿಗೆ ಅರ್ಜಿದಾರರು ಕಳೆದ 2, 3 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು. ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ ಸ್ಥಾನ ಪಡೆದಿರಬೇಕು.
4. ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು.
5. 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
6. ಎಲ್ಲಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು.
ಮೂರು ವರ್ಷಗಳ ವರೆಗೆ INR 75 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ ಈ ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ