ಕೊಪ್ಪಳ: ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡುವ ಸಹೋದರಿ ಅಕ್ಕ ಅನು ಎಂದೇ ಪ್ರಸಿದ್ಧಿ ಪಡೆದಿರುವ ಇವರು ತಮ್ಮ ತಂಡದ ಮೂಲಕ ಹಲವಾರು ಶಾಲೆಗಳನ್ನು ಶುಚಿಗೊಳಿಸಿದ್ದಾರೆ. ಸಿಂಧನೂರು ತಾಲೂಕಿನ (Sindhanur District) ಅನು ಅಕ್ಕ ಎಂಬುವವರಿಂದ ಶಾಲೆಗಳ ಅಭಿವೃದ್ದಿಗಾಗಿಯೇ ಶ್ರಮಿಸುತ್ತಾ ಬಂದಿದ್ದಾರೆ. ಅದೇ ರೀತಿ ಇಲ್ಲೂ ಕೂಡಾ ಶಾಲೆಗಳ (School) ಉದ್ದಾರಕ್ಕಾಗಿ ಸಹಾಯ ಮಾಡಿದ್ದಾರೆ. ಹಾಗಾದರೆ ಇವರು ಮಾಡಿದ್ದೇನು ಎಂಬ ಮಾಹಿತಿಯನ್ನು (Information) ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಸರಕಾರಿ ಶಾಲೆ ಉಳಿಸಿ ಅಭಿಯಾನದಡಿ ಶಾಲೆಗಳ ಅಂದ ಹೆಚ್ಚಿಸುವ ತಂಡ
ಈಗ ಕೊಪ್ಪಳ ಜಿಲ್ಲೆಯ ತಾಳಕೇರಿಯ ಸರಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ತೊಡಗಿದೆ.
ಸ್ಥಳೀಯರ ಸಹಕಾರದಿಂದ ಶಾಲೆಗಳಿಗೆ ಸುಣ್ಣ ಬಣ್ಣ, ಸ್ವಚ್ಛತೆ ಕಾರ್ಯ ಮಾಡುವ ಅನು ಅಕ್ಕ ಕಳೆದ ನಾಲ್ಕೈದು ವರ್ಷಗಳಿಂದ ಆರಂಭವಾದ ಅಭಿಯಾನವನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Government School: ಪ್ರೈವೇಟ್ ಸ್ಕೂಲ್ಗಳಿಗೇ ಟಕ್ಕರ್ ಕೊಡಲು ಮುಂದಾದ ಸರ್ಕಾರಿ ಶಾಲೆಗಳು, ಬರಲಿದೆ ಈ ವ್ಯವಸ್ಥೆ
ಇಲ್ಲಿಯವರೆಗೂ 22 ಜಿಲ್ಲೆಗಳ 114 ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ.
ಪ್ಯಾಂಟ್ , ಶರ್ಟ್ ಹಾಕಿಕೊಂಡು, ಕೈಯಲ್ಲಿ ಬಣ್ಣದ ಡಬ್ಬಿ, ಬ್ರಷ್ ಹಿಡಿದಿರುವ ಅನು ಅಕ್ಕ
ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಾವು ಮಾಡುವ ಕೆಲಸದ ಮೂಲಕ ಇನ್ನಷ್ಟು ಜನರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ಕಳೆದ ಏಳೆಂಟು ತಿಂಗಳಿನಿಂದ ಶಾಲೆ ಅಭಿವೃದ್ಧಿಗೆ ಬಿಡುವು ನೀಡಿದ್ದರು ತಂಡದ ಸದಸ್ಯರಿಗೆ ಪರೀಕ್ಷೆ ಇರುವ ಹಿನ್ನೆಲೆ ಈ ಕೆಲಸಕ್ಕೆ ವಿರಾಮ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಶಾಲೆಗಳಲ್ಲಿಯೂ ಪರೀಕ್ಷೆ ಸಮಯದ ಹಿನ್ನೆಲೆಯಲ್ಲಿ ಗ್ಯಾಪ್ ನೀಡಿದ್ದೆ
ಈಗ ಮತ್ತೆ ಅಭಿಯಾನ ಆರಂಭಿಸಿದ್ದೇನೆ ಎನ್ನುವ ಅನು ಅಕ್ಕ ಮತ್ತೆ ತಮ್ಮ ಕಾರ್ಯ ಆರಂಭಿಸಿದ್ದಾರೆ.
ಸರಕಾರದ ಅನುದಾನವಿಲ್ಲದೆ. ಸ್ಥಳೀಯರ ಸಹಕಾರದಲ್ಲಿ ಶಾಲೆ ಅಭಿವೃದ್ಧಿ ಪಡಿಸುತ್ತಿರುವ ಅನು ಅಕ್ಕ ತುಂಬಾ ಉತ್ತಮ ಕಾರ್ಯ ಮಾಡುತ್ತಾ ಬಂದಿದ್ದಾರೆ. ಯಾವುದೇ ಹೆಚ್ಚಿನ ಪ್ರಚಾರವನ್ನು ಬಯಸದ ಇವರು ತಮ್ಮ ಪಾಡಿಗೆ ತಮ್ಮ ತಂಡದ ಸದಸ್ಯರೊಡಗೂಡಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ.
ಸರ್ಕಾರಿ ಕನ್ನಡ ಶಾಲೆಗಳ ಮೇಲೆ ಇರಿಗಿರುವ ಗೌರವ ಹಾಗೂ ಪ್ರೀತಿಯಿಂದಲೇ ಈ ಕಾರ್ಯ ಆಗುತ್ತಿದೆ. ಶಾಲೆಗಳ ಹೊರಾಂಗಣ ಸ್ವಚ್ಛಗೊಳಿಸಿ, ಬಣ್ಣ ಬಳಿದು ಬೇಕಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.
ವರದಿ: ಶರಣಪ್ಪಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ