ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಮುಖ್ಯಸ್ಥ ಎಂ ಜಗದೇಶ್ ಕುಮಾರ್ ಅವರು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಸ್ವಯಂ ಮೌಲ್ಯಮಾಪನ ವೇದಿಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಈ ಹೊಸ ವೇದಿಕೆಯನ್ನು SATHEE ಸ್ವಯಂ ಮೌಲ್ಯಮಾಪನ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಗಳಿಗೆ ಸಹಾಯ ಮಾಡುವ ಯೋಜನೆ ಇದಾಗಿದೆ. ಇದು ಐಐಟಿ ಕಾನ್ಪುರದ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯದ ಹೊಸ ಯೋಜನೆಯಾಗಿದೆ.
ಈ ಹೊಸ ವೇದಿಕೆಯ ಗುರಿಯು ಭಾರತೀಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತಯಾರಾಗಲು ಸ್ವಯಂ ಸಂವಾದಾತ್ಮಕ ಕಲಿಕೆ ಮತ್ತು ಮೌಲ್ಯಮಾಪನ ವೇದಿಕೆಯ ಅವಕಾಶವನ್ನು ಒದಗಿಸುವುದಾಗಿದೆ. SATHEE ಪ್ಲಾಟ್‌ಫಾರ್ಮ್ "ವಿದ್ಯಾರ್ಥಿಗಳಿಗೆ ದುಬಾರಿ ಪ್ರವೇಶ ಪರೀಕ್ಷೆಯ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
ಈ ಯೋಜನೆಯನ್ನು ಜಾರಿಗೆ ತರುವ ಕುರಿತು ಯುಜಿಸಿ ಮುಖ್ಯಸ್ಥ ಎಂ ಜಗದೇಶ್ ಟ್ವೀಟ್ ಕೂಡಾ ಮಾಡಿದ್ದಾರೆ. ಅದರಲ್ಲಿ ಏನೆಂದು ವಿವರಿಸಿದ್ದಾರೆ ನೀವೇ ನೋಡಿ.
SATHEE (Self Assessment Test and Help for Entrance Exams) is an initiative by the Ministry of Education, in association with IIT Kanpur, which will give students a self-paced interactive learning and assessment platform to prepare for competitive and other exams.
— Mamidala Jagadesh Kumar (@mamidala90) March 2, 2023
ಆದ್ದರಿಂದ ಅವರು IIT ಮತ್ತು IISc ಅಧ್ಯಾಪಕರು ಸಿದ್ಧಪಡಿಸಿದ ವೀಡಿಯೊಗಳನ್ನು ನೋಡುವ ಮೂಲಕ ಯಾವುದೇ ಪರೀಕ್ಷೆಗಳನ್ನ ಬೇಕಾದರು ಎದುರಿಸುತ್ತೇವೆ ಎಂಬ ಧೈರ್ಯ ಪಡೆಯುತ್ತಾರೆ. ಹೆಚ್ಚಿನ ಆತ್ಮವಿಶ್ವಾಸ ಹೊಂದುತ್ತಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಜಾಗತಿಕ ಮಟ್ಟದಲ್ಲಿ ಬೆಳವಣಿಗೆಗಳ ಬಗ್ಗೆ ಭಾರತದ ಯುವಜನರಿಗೆ ಅರಿವು ಮೂಡಿಸಲು ಹೆಚ್ಚಿನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದುವ ಅಗತ್ಯದ ಬಗ್ಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ NEP ಬಗ್ಗೆ ಚರ್ಚೆಯಾಗಿದೆ. ಶಿಕ್ಷಣ ಮೇಳವು ಜ್ಞಾನದ ಮಹಾಶಕ್ತಿ ಮತ್ತು ಶಿಕ್ಷಣದ ಜಾಗತಿಕ ಕೇಂದ್ರವಾಗಲು ಭಾರತದ ರಾಷ್ಟ್ರೀಯ ಸಂಕಲ್ಪವನ್ನು ಪ್ರದರ್ಶಿಸಿದ ಸಂದರ್ಭವಾಗಿ ಕಂಡುಬಂತು. ಇದರಲ್ಲಿ ಭಾಗಿಯಾದ ಗಣ್ಯರು ಹಲವಾರು ಶೈಕ್ಷಣಿಕ ವಿಚಾರವನ್ನು ಚರ್ಚಿಸಿದ್ದಾರೆ.
ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳೊಂದಿಗೆ ರಾಷ್ಟ್ರಗಳ ನಡುವೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದರೊಂದಿದೆ ಶಿಕ್ಷಣಕ್ಕೂ ಒತ್ತು ನೀಡಲಾಗುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನವು ಜಾಗತಿಕ ಒಳಿತಿಗಾಗಿ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಂತರರಾಷ್ಟ್ರೀಯಗೊಳಿಸುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಶಿಕ್ಷಣ ಮೇಳದಲ್ಲಿ ಸಚಿವರು ಈ ವಿಷಯ ತಿಳಿಸಿದರು. "ಎನ್‌ಇಪಿಯ ಅನುಷ್ಠಾನದೊಂದಿಗೆ, ಜಾಗತಿಕ ಒಳಿತಿಗಾಗಿ ಭಾರತದಲ್ಲಿ ಶಿಕ್ಷಣವನ್ನು ಅಂತಾರಾಷ್ಟ್ರೀಯಗೊಳಿಸಲಾಗುತ್ತಿದೆ. ಭಾರತವನ್ನು ಜಾಗತಿಕ ಅಧ್ಯಯನ ತಾಣವಾಗಿ ಸ್ಥಾಪಿಸುವ ಪ್ರಯತ್ನಗಳಿಗೆ ಸೇರಲು ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳನ್ನು ನಾನು ಪ್ರೋತ್ಸಾಹಿಸುತ್ತೇನೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ