ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ನೀಡುವ ಆರ್ಥಿಕ (Economic) ಬೆಂಬಲವನ್ನು ವಿದ್ಯಾರ್ಥಿ ವೇತನ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವ್ಯಾಸಂಗ (Study) ಮಾಡುತ್ತಿರುವ ಹಲವಾರು ವಿದ್ಯಾರ್ಥಿಗಳು ಪ್ರತಿ ವರ್ಷವೂ ಸರ್ಕಾರ ನೀಡುವ ವಿದ್ಯಾರ್ಥಿ ವೇತನದ (Scholarship) ಪ್ರಯೋಜನ ಪಡೆದುಕೊಳ್ಳುತ್ತಾರೆ. ಇದರಿಂದ ಅವರ ಶೈಕ್ಷಣಿಕ ಜೀವನದಲ್ಲಿ ಸುಧಾರಣೆಯಾಗಿದೆ. ಈ ವಿದ್ಯಾರ್ಥಿ ವೇತನಗಳ ಆಶಯವೂ ಅಷ್ಟೇ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿಯುವುದರ ಮೂಲಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದಾಗಿದೆ.
ಈ ಬಾರಿ ಸಂಚಿಹೊನ್ನಮ್ಮ ವಿದ್ಯಾರ್ಥಿ ವೇತನವನ್ನು ಯಾವಾಗ ನೀಡಲಾಗುತ್ತದೆ? ಎಷ್ಟು ಹಣ ಇದರಿಂದ ನಿಮಗೆ ಸಿಗಲಿದೆ ಎಂಬೆಲ್ಲಾ ವಿವರವನ್ನು ಇಲ್ಲಿ ನೀಡಲಾಗಿದೆ. ಇದರ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ಇಲ್ಲಿ ನೀಡಲಾಗಿದೆ.
DEC ಕರ್ನಾಟಕವು ಅರ್ಜಿದಾರರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರವೇ ಆರಂಭಿಸಿದ ವಿದ್ಯಾರ್ಥಿ ವೇತನ ಇದಾಗಿರುವುದರಿಂದ ಕರ್ನಾಟಕದಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಇದನ್ನೂ ಓದಿ: Ramesh Aravind: ಸಾಧಕರ ಸಾಧನೆ ವಿವರಿಸುವ ನಟ ರಮೇಶ್ ಅರವಿಂದ್ ಯಾವ ಪದವಿ ಪಡೆದಿದ್ದಾರೆ ನೋಡಿ
ಕರ್ನಾಟಕದಾದ್ಯಂತದ ಅಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳು ಈ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿರುತ್ತಾರೆ. ಮೇ 2023ಯಂದು ಅಧಿಕೃತ ಜಾಲತಾಣದಲ್ಲಿ ಈ ಬಾರಿಯ ಸ್ಕಾಲರ್‌ಶಿಪ್ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ನೀವು ಇದನ್ನು ಗಮನಿಸುತ್ತಿದ್ದರೆ ಬೇಗ ಅಪ್ಲೈ ಮಾಡಬಹುದು. ಜುಲೈನಲ್ಲಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಇದು ತುಂಬಾ ಪ್ರಯೋಜನ ನೀಡಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
1. ಹತ್ತನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿನಿಯರು ಅಪ್ಲೈ ಮಾಡಬಹುದು.
2. ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ವಿದ್ಯಾರ್ಹತೆ ಹೀಗಿರಲಿ
ಬಿ.ಎಸ್ಸಿ, ಬಿ.ಎ ಮತ್ತು ಬಿ.ಕಾಂ ಓದುತ್ತಿರುವ ವಿದ್ಯಾರ್ಥಿನಿಯರು ಅಪ್ಲೈ ಮಾಡಬಹುದು
ಅಂದರೆ ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಅಪ್ಲೈ ಮಾಡಬಹುದು.
ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ ಅರ್ಹತಾ ಮಾನದಂಡ 2023
1. ಅಭ್ಯರ್ಥಿಯು ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮಾಡುತ್ತಿರಬೇಕು
2. ಅರ್ಜಿದಾರರು ಅರ್ಜಿ ಸಲ್ಲಿಸಲು ಬಯಸಿದರೆ ಅವರು ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
5. ಆಕಾಂಕ್ಷಿಗಳು ತಮ್ಮ 10ನೇ ಮತ್ತು 12ನೇ ತರಗತಿಯನ್ನು ಮಾನ್ಯತೆ ಪಡೆದ ಮಂಡಳಿಯಿಂದ ಪೂರ್ಣಗೊಳಿಸಿರಬೇಕು.
6. ಅಭ್ಯರ್ಥಿಯು ಈ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅವರು ಮತ್ತೊಂದು ವಿದ್ಯಾರ್ಥಿವೇತನ ಯೋಜನೆಯ ಪ್ರಯೋಜನಗಳನ್ನು ಪಡೆಯುವಂತಿಲ್ಲ.
7. B.Sc, B. A ಮತ್ತು B.Com ಕೋರ್ಸ್‌ಗಳನ್ನು ಅನುಸರಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
8. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು INR2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ ಮೊತ್ತ 2023
2000/ ರೂ
ಸಂಚಿ ಹೊನ್ನಮ್ಮ ಸ್ಕಾಲರ್‌ಶಿಪ್ 2023 ಅಗತ್ಯ ದಾಖಲೆಗಳು
1. ಅಭ್ಯರ್ಥಿಯ ಆಧಾರ್ ಕಾರ್ಡ್
2. ಪೋಷಕರ ಆದಾಯ ಪುರಾವೆ
3. ನಿವಾಸ ಪುರಾವೆ
4. ಬ್ಯಾಂಕ್ ಶಾಖೆಯ IFSC ಕೋಡ್ ಹೊಂದಿರುವ ಬ್ಯಾಂಕ್ ಖಾತೆ ಸಂಖ್ಯೆ
5. ಅಭ್ಯರ್ಥಿಯ ಜನ್ಮ ದಿನಾಂಕ ಪ್ರಮಾಣಪತ್ರದ ಪ್ರತಿ
6. ಗುರುತಿನ ಪುರಾವೆ
7. 10 ಹಾಗೂ 12ನೇ ತರಗತಿ ಮಾರ್ಕ್ಸ್ ಕಾರ್ಡ್ ಹೊಂದಿರಬೇಕು.
8. ಪಡಿತರ ಚೀಟಿ
9. ಕುಟುಂಬದ ಆದಾಯ ಪ್ರಮಾಣಪತ್ರ.
ಇವಿಷ್ಟು ದಾಖಲೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಲೇ ಬೇಕಾಗುತ್ತದೆ. ನೀವೂ ಅಪ್ಲೈ ಮಾಡಿ ಈ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ