ಸ್ಟಡಿ ಸೆಂಟರ್ ಹೆಸರಿನಲ್ಲಿ ಎಸ್ಎಸ್ಎಲ್ ಸಿ (SSLC) ಮತ್ತು ಪಿಯುಸಿ (PUC) ಮಾರ್ಕ್ಸ್ ಕಾರ್ಡ್ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಮಾಡಿಕೊಂಡು ಇದನ್ನೇ ಬ್ಯುಸಿನೆಸ್ ಮಾಡಿಕೊಂಡವರು ಕೂಡಾ ಕಾಣಸಿಗುತ್ತಾರೆ. ಈ ನಿಟ್ಟಿನಲ್ಲಿ ಕೆಲಸ (Work) ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂವರು ಆರೋಪಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ (Information) ನೀಡಿದ್ದಾರೆ. ಈ ರೀತಿ ನಕಲಿ ಅಂಕಪಟ್ಟಿಗಳ ಮಾರಾಟ ಇದೇ ಮೊದಲ ಬಾರಿಗಲ್ಲ. ಈ ಹಿಂದೆಯೂ ಇದೇ ರೀತಿ ಮಾಡಲಾಗಿತ್ತು.
ಪ್ರಭುರಾಜ್, ಮೈಲಾರಿ, ಮೊಹಮ್ಮದ್ ತೈಹೀದ್ ಇವರೆಲ್ಲರೂ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಪದವಿ, ಎಸ್ಎಸ್ಎಲ್ ಸಿ, ಪಿಯು ಮಾರ್ಕ್ಸ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. KIOS ಹೆಸರಿನಲ್ಲಿ ಅಂಕ ಪಟ್ಟಿ ಪಡೆದಿರುವುದಾಗಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಹುಬ್ಬಳ್ಳಿಯ KIOS ಕಚೇರಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸತ್ಯಾಂಶವನ್ನು ಹೊರಗೆ ತಂದಿದ್ದಾರೆ.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸ್ಟಡಿ ಸೆಂಟರ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಟಡಿ ಸೆಂಟರ್ ಮೂಲಕ 10,12, ಪದವಿ ಮಾರ್ಕ್ಸ್ ಕಾರ್ಡ್ ತಯಾರು ಮಾಡಿ ಮಾರಾಟ ಮಾಡುವ ಕೆಲಸ ಮಾಡಿದ್ದಾರೆ. ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ KIOS ನಲ್ಲಿ ಅಂಕ ಪಟ್ಟಿ ಗಳನ್ನು ವಿತರಿಸುತ್ತಿದ್ರು ಎಂದು ತಿಳಿದು ಬಂದಿದೆ. ಸರ್ಕಾರಕ್ಕೆ ಸಮಾನಾಂತರವಾಗಿ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: JEE Main Result 2023 ಫಲಿತಾಂಶ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
70 ಅಂಕಪಟ್ಟಿಗಳು, ನೋಂದಣಿ ಸಂಖ್ಯೆ ನಮೂದಿಸದ 190 ಅಂಕಪಟ್ಟಿಗಳು ಅಲ್ಲಿ ಲಭ್ಯವಾಗಿದೆ. ಯಾವುದೇ ಮಾಹಿತಿ ಇಲ್ಲದೆ 7100 ಅಂಕಪಟ್ಟಿ, 5500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್ಗಳು, ಕಲರ್ ಪ್ರಿಂಟ್, ಜೆರಾಕ್ಸ್ ಮಿಷನ್ ವಶಕ್ಕೆ ಪಡೆಯಲಾಗಿದೆ. ನಕಲಿ ಅಂಕಪಟ್ಟಿ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದೆ.
ಈ ಹಿಂದೆಯೂ ನಡೆದಿತ್ತು ಇಂತಹದ್ದೇ ಇನ್ನೊಂದು ಘಟನೆ
ಆಗಾಗ ಮಾರ್ಕ್ಸ್ ಕಾರ್ಡ್ ಕುರಿತು ಸುದ್ಧಿಯಾಗುತ್ತಲೇ ಇರುತ್ತದೆ. ಈಗಲೂ ಕೂಡ ಅಂತದೇ ಒಂದು ಘಟನೆ ಬೆಳಕಿಗೆ ಬಂದಿದೆ. ಎಷ್ಟೋ ಜನ ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದಿಂದ ಓದಿ ಪಾಸ್ ಆದರೆ ಇನ್ನು ಕೆಲವರು ಪರೀಕ್ಷೆಯನ್ನೇ ಬರೆಯದೆ ನಕಲಿ ಅಂಕಪಟ್ಟಿ ಪಡೆದು ಕೆಲಸ ಗಿಟ್ಟಿಸಿಕೊಳ್ತಾರೆ. ಈ ನಕಲಿ ಮಾರ್ಕ್ಸ್ ಕಾರ್ಡ್ ಸಂಬಂಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಪೂರ್ತಿ ಸುದ್ದಿ ಓದಿ.
ಈ ಹಿಂದೆ ಸಿಕ್ಕ ಮಾಹಿತಿಯ ಪ್ರಕಾರ ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ಮೇಲೆ ದಾಳಿ ನಡೆದಿದೆ. ಈಗಾಗಲೇ 5 ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ. ಮೂರು ದಿನದಿಂದ ನಿರಂತರವಾಗಿ ದಾಳಿ ಹಾಗೂ ಪರಿಶೀಲನೆ ನಡೆಯುತ್ತಲೇ ಇದೆ. 6800 ವಿವಿಧ ಮಾರ್ಕ್ಸ್ ಕಾರ್ಡ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.15 ಯೂನಿವರ್ಸಿಟಿಯ ನಕಲಿ ಮಾರ್ಕ್ಸ್ ಕಾರ್ಡ್ ವಶಕ್ಕೆ ಪಡೆದಿದ್ದೇವೆ. 22 ಕಂಪ್ಯೂಟರ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.ಇದರಲ್ಲೇ ತಿಳಿಯುತ್ತದೆ ಇವರ ಜಾಲ ಎಷ್ಟು ದೊಡ್ಡದಿದೆ ಎಂದು. ಇಷ್ಟೋಂದು ಪರಿಕರಗಳನ್ನು ಬಳಸಿಕೊಂಡು ನಕಲಿ ಅಂಕ ಪಟ್ಟಿಯನ್ನು ಸಿದ್ಧಗೊಳಿಸುವುದೇ ಇವರ ಕಾಯಕವಾಗಿತ್ತಿ ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ