RV ವಿಶ್ವವಿದ್ಯಾಲಯವು (RV University) 2023-24 ರಲ್ಲಿ ಮೆರಿಟ್ ವಿದ್ಯಾರ್ಥಿವೇತನಕ್ಕಾಗಿ 10 ಕೋಟಿ ರೂ ಮೀಸಲಿಟ್ಟಿದೆ. ವಿದ್ಯಾರ್ಥಿಗಳು (Students) ಇದರ ಪ್ರಯೋಜನ ಪಡೆದುಕೊಳ್ಳಬಹುದು. ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳೂ ಸಹ ಇದಕ್ಕೆ ಅಪ್ಲೈ ಮಾಡಬಹುದು. ಒಟ್ಟು 500 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯುವಂತೆ ಮಾಡುವ ಪ್ಲಾನ್ (Plan) ಹೊಂದಿದೆ. ಆದ್ದರಿಂದ ಯಾರು ಬೇಗ ಅಪ್ಲೈ (Apply) ಮಾಡುತ್ತಾರೋ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಬಹುದು.
ಮೊದಲ ವರ್ಷದಲ್ಲಿ ಅಧ್ಯಯನಕ್ಕಾಗಿ 100%, 50% ಮತ್ತು 25% ಸ್ಕಾಲರ್ಶಿಪ್ ಹೀಗೆ ಹಂತ ಹಂತವಾಗಿ ಇದನ್ನು ನೀಡಲಾಗುತ್ತದೆ. ಹೊಸ ಶೈಕ್ಷಣಿಕ ಅವಧಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು. ಕಾಲೇಜು ನೀಡುವ ವಿದ್ಯಾರ್ಥಿ ವೇತನದೊಂದಿಗೆ ಕಲಿಕೆಯ ವೆಚ್ಚವನ್ನು ಭರಿಸಿಕೊಳ್ಳಬಹುದು. ಹೊಸದಾಗಿ ಅಡ್ಮಿಷನ್ ಮಾಡಿಸುವವರು ಈ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಹಲವು ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರಯೋಜನ
ಸುಮಾರು 200 ಬಿ.ಟೆಕ್. ವಿದ್ಯಾರ್ಥಿಗಳು ಮತ್ತು 50 ಬಿ.ಎಸ್ಸಿ. ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆಯುತ್ತಾರೆ, ಜೊತೆಗೆ 75 ವಿದ್ಯಾರ್ಥಿಗಳು ಐದು ವರ್ಷಗಳ ಸಂಯೋಜಿತ BALL.B. ಮತ್ತು BBALL.B. ಹಾಗೆಯೇ ಎಲ್.ಎಲ್.ಎಂ. ಕಾನೂನು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ಗೆ ಅರ್ಹರಾಗುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Lecturer Jobs: ರಾಮನಗರ, ಬೆಂಗಳೂರಿನಲ್ಲಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ಕಾಲರ್ಶಿಪ್ಗಳು ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸ್ ಮತ್ತು ಸ್ಕೂಲ್ ಆಫ್ ಡಿಸೈನ್ ಆ್ಯಂಡ್ ಇನೋವೇಶನ್ ತಲಾ ಸುಮಾರು 40 ವಿದ್ಯಾರ್ಥಿಗಳನ್ನು ಮತ್ತು ಬಿಬಿಎ, ಬಿಕಾಂ ವಿದ್ಯಾರ್ಥಿಗಳಿಗೆ 80 ಮೆರಿಟ್ ವಿದ್ಯಾರ್ಥಿವೇತನವನ್ನು ಒಳಗೊಂಡಿರುತ್ತದೆ ಎಂದು ತಿಳಿದು ಬಂದಿದೆ. ಮತ್ತು ಬಿಎ (ಅರ್ಥಶಾಸ್ತ್ರ) ಓದುತ್ತಿರುವ ವಿದ್ಯಾರ್ಥಿಗಳಿಗೂ ಇದು ಲಭ್ಯವಾಗುತ್ತದೆ.
ವಿದ್ಯಾರ್ಥಿ ವೇತನದ ಮೊತ್ತ ಹೆಚ್ಚಳ
ಈ ವರ್ಷ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ವಿದ್ಯಾರ್ಥಿ ವೇತನವು ಮುಂದಿನ ಪೀಳಿಗೆಯ ನಾಯಕರನ್ನು ನಿರ್ಮಾಣ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂದು ಬೆಂಗಳೂರಿನ ಆರ್ವಿ ವಿಶ್ವವಿದ್ಯಾಲಯದ ಉಪಕುಲಪತಿ ವೈಎಸ್ಆರ್ ಮೂರ್ತಿ ಹೇಳಿದ್ದಾರೆ. ಇದಲ್ಲದೆ, ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸಿದ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲು ಅಪ್ಲೈ ಮಾಡಿದವರಿಗೆ ಮೊದಲ ಆದ್ಯತೆ
ಉತ್ತಮ ಶೈಕ್ಷಣಿಕ ಸಾಧನೆಯೊಂದಿಗೆ ಭಾರತದಾದ್ಯಂತ ಎಲ್ಲಾ ರಾಜ್ಯ ಮತ್ತು ಕೇಂದ್ರ ಮಂಡಳಿಗಳು ಮತ್ತು ಇತರ ಮಾನ್ಯತೆ ಪಡೆದ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು ಮುಕ್ತವಾಗಿವೆ. ಬೋಧನಾ ಶುಲ್ಕ ಹಾಗೂ ಇನ್ನಿತರ ಶೈಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಈ ಸ್ಕಾಲರ್ಶಿಪ್ ಪ್ರಯೋಜನವಾಗಲಿದೆ. ನೀವು ಈ ವಿದ್ಯಾರ್ಥಿ ವೇತನದ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ https://admissions.rvu.edu.in/
ಆರು ವಿಶ್ವವಿದ್ಯಾಲಯಗಳಿಗೆ ಮೀಸಲು ಈ ಹಣ
ಪದವಿಪೂರ್ವ, ಸ್ನಾತಕೋತ್ತರ ಮತ್ತು ಪೂರ್ಣ ಸಮಯ/ ಅರೆಕಾಲಿಕ ಪಿಎಚ್ಡಿ ಪ್ರವೇಶಗಳು. RV ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆ. ಸ್ಕೂಲ್ ಆಫ್ ಬ್ಯುಸಿನೆಸ್, ಸ್ಕೂಲ್ ಆಫ್ ಎಕನಾಮಿಕ್ಸ್, ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಸ್ಕೂಲ್ ಆಫ್ ಡಿಸೈನ್ ಮತ್ತು ಇನ್ನೋವೇಶನ್, ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಸ್ಕೂಲ್ ಆಫ್ ಲಾ ಸೇರಿದಂತೆ RV ವಿಶ್ವವಿದ್ಯಾಲಯದ ಆರು ಶಾಲೆಗಳಲ್ಲಿ ಈ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ