ಭಾರತದಲ್ಲಿ ಭ್ರಷ್ಟಾಚಾರ ಎಂಬುದು ಒಂದು ದೊಡ್ಡ ಪಿಡುಗು. ಅದು ಯಾವ ಇಲಾಖೆಯನ್ನೂ ಸಹ ಬಿಟ್ಟಿಲ್ಲ. ಶಿಕ್ಷಣ (Education) ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ (Corruption) ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ ನೋಡಿ. ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತರುವ ಈ ಭ್ರಷ್ಟಾಚಾರವನ್ನು ತಡೆಯಲು ಹಲವಾರು ಪ್ರಯತ್ನ ಮಾಡಲಾಗುತ್ತೆ. ರುಪ್ಸಾ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಿದೆ. ಲಂಚ ಕೊಟ್ಟರೆ ಮಾತ್ರ ಶಾಲೆಯ (School) ನವೀಕರಣ ಮಾಡುತ್ತೇವೆ ಎಂದು ಹೇಳಿರುವ ಆಡಿಯೋ ಹಾಗೂ ವಿಡಿಯೋ (Video) ಕ್ಲಿಪ್ಗಳು ಲಭ್ಯವಾಗಿದೆ.
ಇಲಾಖೆಯ ಅಧಿಕಾರಿಗಳು ಲಂಚ ಕೊಟ್ಟರಷ್ಟೇ ಶಾಲಾ ನವೀಕರಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರ ಕುರಿತು ಆಡಿಯೋ, ವೀಡಿಯೋ, ದಾಖಲೆಗಳನ್ನು ರುಪ್ಸಾ ಸಾಕ್ಷಿಯಾಗಿ ನೀಡಿದೆ. ರುಪ್ಸಾ ಖಾಸಗಿ ಶಾಲೆ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರಿಂದ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಲಾಯಿತು. ಕೋಲಾರ ಬಂಗಾರಪೇಟೆ ಶಿಕ್ಷಣ ಇಲಾಖೆಯ ಅಧಿಕಾರಿ ಲಂಚಾವತಾರ ಈಗ ಬಯಲಿಗೆ ಬಂದಿದೆ.
ಶಾಲಾ ನವೀಕರಣಕ್ಕೆ ಲಂಚ ಕೇಳಿದ ಅಧಿಕಾರಿ ಆಡಿಯೋ ರಿಲೀಸ್ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿ ಶಾಲೆ ನವೀಕರಣ ಮಾಡಬೇಕು ಎಂದರೆ ಹದಿನೈದು ಸಾವಿರ ನೀಡಬೇಕು ಎಂದು ಹೇಳಿದ್ದಾರೆ. ಸರ್ಕಾರಿ ಶಾಲೆಯ ತರಗತಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬರ್ತಿದೆ.
ಇದನ್ನೂ ಓದಿ: Scholarship: ಜನವರಿಯಲ್ಲೇ ಅಪ್ಲೈ ಮಾಡಬೇಕಾದ ಸ್ಕಾಲರ್ಶಿಪ್ಗಳಿವು, ಈಗಲೇ ಅಪ್ಲೈ ಮಾಡಿ
ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಅಧಿಕಾರಿಗಳು ಶಿಕ್ಷಕರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮೋದಿ ಕೇರ್ ಹೆಸರಿನಲ್ಲಿ ಸರಕಾರಿ ಶಾಲೆಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಬ್ಯುಸಿನೆಸ್ ಪ್ರಾಡೆಕ್ಟ್ಗಳನ್ನು ತರಗತಿಯಲ್ಲೇ ಮಾರಾಟ ಮಾಡಿದ್ದಾರೆ. ಶಿಕ್ಷಕರು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಫೋಟೋ, ವೀಡಿಯೋ ಬಿಡುಗಡೆಯಾಗಿದೆ.
ಶಾಲೆ ನವೀಕರಣಕ್ಕೆ ಲಂಚ ಕೊಡದೇ ಇದ್ರೆ ಅಧಿಕಾರಿಗಳು ಸಹಿ ಹಾಕಲ್ಲ
ಶಾಲೆ ನವೀಕರಣಕ್ಕೆ ಲಂಚ ಕೊಡದೇ ಇದ್ರೆ ಅಧಿಕಾರಿಗಳು ಸಹಿ ಹಾಕಲ್ಲ ಎಂದು ಹೇಳಿದ್ದಾರೆ. ನವೀಕರಣ ಸಲುವಾಗಿ ಬಿಇಒ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಲಂಚ ಕೊಡಲೇಬೇಕು ಎಂದು ಕಡಾಖಂಡಿತವಾಗಿ ಹೇಳಿದ್ದಾರೆ. ಹೀಗಾದ್ರೆ ಬಜೆಟ್ ಖಾಸಗಿ ಶಾಲೆ ಉಳಿಯೋದು ಕಷ್ಟವಾಗುತ್ತದೆ. ಈ ಕುರಿತು ದಾಖಲೆ ಸಹಿತ ದೂರು ನೀಡಿದ್ರೂ ಸರಕಾರ ಇದುವರೆಗು ಏನೂ ಕ್ರಮಕೈಗೊಂಡಿಲ್ಲ. ಸಿಎಂ ಬೊಮ್ಮಾಯಿ, ಮೋದಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ಧಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಬಯಲಿಗೆಳೆದ ವಿಚಾರ
8, 10ನೇ ತರಗತಿ ಪಬ್ಲಿಕ್ ಪರೀಕ್ಷೆ ವಿಚಾರದಲ್ಲೂ ಕೂಡಾ ಶಿಕ್ಷಣ ಸಚಿವರು ದುಡ್ಡು ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕಂಡುಬರುತ್ತಿದೆ. 10ನೇ ತರಗತಿವರೆಗೆ ಫೇಲ್ ಮಾಡಬಾರದು ಎಂಬ ನಿಯಮವಿದೆ ಅಷ್ಟಾದರೂ ಸಹ 8, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಏಕೆ ಮಾಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಕಳೆದೆರಡು ವರ್ಷಗಳಿಂದ ಆರ್ ಟಿ ಇ ಬಾಕಿ ಮೊತ್ತ ನೀಡಿಲ್ಲ. ಅನುದಾನ ಬಿಡುಗಡೆ ಮಾಡದೇ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಅನುದಾನ ಸಹಿತ ಕನ್ನಡ ಶಾಲೆಗಳಿಗೆ ಸರ್ಕಾರ ಅನುದಾನವೇ ಕೊಡುತ್ತಿಲ್ಲ ಎಂದು ದೂರಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ರುಪ್ಸಾ ಈ ಹಿಂದೆಯೂ ಇದೇ ರೀತಿ ಎಷ್ಟೋ ವಿಚಾರಗಳನ್ನು ಬಯಲಿಗೆಳೆಯುವ ಕಾರ್ಯ ಮಾಡಿತ್ತು ಈ ಬಾರಿಯೂ ಈ ಸಂಘಟನೆ ಶಿಕ್ಷಣ ಇಲಾಖೆಯ ಒಳಗೆ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಅನ್ಯಾಯಗಳ ವಿರುದ್ಧ ಹೋರಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ