• Home
  • »
  • News
  • »
  • jobs
  • »
  • Education: ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಘೋಷಿಸಿರುವ ನಿಯಮಗಳೇನು?

Education: ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಘೋಷಿಸಿರುವ ನಿಯಮಗಳೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಳೆದ ಗುರುವಾರದಂದು ಭಾರತದಲ್ಲಿ ಉನ್ನತ ಶಿಕ್ಷಣದ ನಿಯಂತ್ರಕ ಪ್ರಾಧಿಕಾರವಾದ ಯುನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ)ಯು ವಿದೇಶಿ ವಿವಿಗಳು ಭಾರತಕ್ಕೆ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಬಿಡುಗಡೆ ಮಾಡಿತು.

  • Share this:

ಇದೊಂದು ಮಹತ್ವದ ಸುಧಾರಣಾ ಕ್ರಮವಾಗಿದೆ. ಇದನ್ನು ಈ ಹಿಂದೆಯೂ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗಿತ್ತಾದರೂ ಅದು ಯಶಸ್ಸನ್ನು ಕಂಡಿರಲಿಲ್ಲ. ಈಗ ಯುಜಿಸಿಯಿಂದ (UGC) ರೂಪಿಸಲಾಗಿರುವ ನಿಯಮಗಳು ಯಾವುವು? ಈ ಹಿಂದಿನ ಪ್ರಸ್ತಾವನೆಗಳಿಗೆ ಅವು ಹೇಗೆ ಭಿನ್ನವಾಗಿವೆ? ಯಾವೆಲ್ಲ ಸುರಕ್ಷತಾ (Safety) ಕ್ರಮಗಳನ್ನು ಅಳವಡಿಸಲಾಗಿದೆ? ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಈ ಹಿಂದೆ ರಾಜಕೀಯವಾಗಿ (Politically) ಸಾಕಷ್ಟು ಸಂಚಲನ ಮೂಡಿಸಿದ್ದ ಹಾಗೂ ಸಾಕಷ್ಟು ವಿರೋಧ ಕಂಡಿದ್ದ ಪ್ರತಿಷ್ಠಿತ ಯೋಜನೆಯನ್ನು ಈಗ ಮತ್ತೆ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರವು ಸಜ್ಜಾದಂತಾಗಿದ್ದು ವಿದೇಶಿ ವಿಶ್ವವಿದ್ಯಾಲಯಗಳು (University) ಭಾರತದಲ್ಲಿ ತಮ್ಮ ಬಾಗಿಲು ತೆರೆಯುವಂತೆ ಅನುಕೂಲವಾಗುವ ಪಥದಲ್ಲಿ ಸಾಗಿದೆ.


ಕಳೆದ ಗುರುವಾರದಂದು ಭಾರತದಲ್ಲಿ ಉನ್ನತ ಶಿಕ್ಷಣದ ನಿಯಂತ್ರಕ ಪ್ರಾಧಿಕಾರವಾದ ಯುನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ)ಯು ವಿದೇಶಿ ವಿವಿಗಳು ಭಾರತಕ್ಕೆ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಬಿಡುಗಡೆ ಮಾಡಿತು.


ಈ ನಿಟ್ಟಿನಲ್ಲಿ ಏನಾದರೂ ಸಾರ್ವಜನಿಕ ಆಕ್ಷೇಪಣೆ, ಪ್ರತಿಕ್ರಿಯೆ ಅಥವಾ ಅನಿಸಿಕೆಗಳಿದ್ದಲ್ಲಿ, ಸಾರ್ವಜನಿಕರು ಆ ಬಗ್ಗೆ ತಮ್ಮ ನಿಲುವುಗಳನ್ನು ಜನವರಿ 18ರ ವರೆಗೆ ವ್ಯಕ್ತಪಡಿಸಲು ಯುಜಿಸಿ ತನ್ನ ಇಮೇಲ್ ವಿಳಾಸ ನೀಡಿದ್ದು ಅದಕ್ಕೆ ಅಂಚೆ ಕಳುಹಿಸಬಹುದಾಗಿ ಹೇಳಿದೆ. ಇಮೇಲ್ ವಿಳಾಸ ಈ ರೀತಿ ಇದೆ - ugcforeigncollaboration@gmail.com


ಹಾಗಾದರೆ, ಆಕ್ಸ್ ಫರ್ಡ್, ಕೆಂಬ್ರಿಡ್ಜ್ ಗಳಂತಹ ವಿವಿಗಳು ಭಾರತದಲ್ಲಿ ಆರಂಭಾಗಬಹುದೆ?


ತಾಂತ್ರಿಕವಾಗಿ ಈ ರೀತಿ ಮಾಡಲು ಎಲ್ಲ ಅವಕಾಶಗಳು ಈಗ ಲಭ್ಯವಿದೆ ಎಂದೇ ಹೇಳಬಹುದು. ಆದರೂ, ಅಂತಹ ದೊಡ್ಡ ದೊಡ್ಡ ವಿವಿಗಳು ಭಾರತದಲ್ಲಿ ಹೂಡಿಕೆ ಮಾಡಿ ತನ್ನ ಶಾಖೆಯೊಂದನ್ನು ಇಲ್ಲಿ ತೆರೆಯಬೇಕೆಂದರೆ ಅವುಗಳಿಗೆ ಭಾರತದಲ್ಲಿನ ಮಾರುಕಟ್ಟೆಯು ಸಹ ಆಕರ್ಷಿಸಬೇಕಾಗಿರುವುದು ಅಗತ್ಯವಾಗಿದೆ.


ಯುಜಿಸಿ ಹೇಳುವುದೇನು?


ಯುಜಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಯುರೋಪ್ ಖಂಡದ ಹಲವು ದೇಶಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಹೆಚ್ಚಾದ ಆಸಕ್ತಿಯನ್ನು ತೋರಿಸಿವೆ. ಇನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಯುಜಿಸಿ ಭಾರತದ ತನ್ನ ಯೋಜನಾಗುರಿಗಳನ್ನು ಮುನ್ನುಗ್ಗಿಸುವ ನಿಟ್ಟಿನಲ್ಲಿ ಹಲವು ಪ್ರಸ್ತಾವನೆಗಳನ್ನು ವಿದೇಶಗಳಿಗೆ ಕೊಡೊಯ್ಯುವ ಕಾರ್ಯಕ್ಕಿಳಿಯಲಿದೆ. ಈ ಸಂದರ್ಭದಲ್ಲಿ ಯುಜಿಸಿ ಹಲವು ದೇಶಗಳ ರಾಯಭಾರಿಗಳು ಹಾಗೂ ಸಂಬಂಧಿಸಿದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ತನ್ನ ನಿಯಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಿದೆ.


ಇದನ್ನೂ ಓದಿ: Diploma: ಹತ್ತನೇ ತರಗತಿ ಪಾಸ್ ಆದ್ಮೇಲೆ ನೀವು ಈ ಡಿಪ್ಲೊಮಾ ಮಾಡ್ಬಹುದು


ಪ್ರಸ್ತುತ ಇಂಡಿಯನ್ ಎಕ್ಸ್ ಪ್ರೆಸ್ ಬರ್ಮಿಂಗ್ ಹ್ಯಾಮ್ ವಾರ್ಸಿಟಿಗೆ ಮೇಲ್ ಮಾಡಿ ಪ್ರತಿಕ್ರಿಯೆ ಪಡೆಯಲು ಸಫಲವಾಗಿದೆ ಹಾಗೂ ಮಾಧ್ಯಮ ಅಂಚೆಗೆ ಪ್ರತಿಕ್ರಯಿಸುತ್ತ ಬರ್ಮಿಂಗ್ ಹ್ಯಾಮ್ ವಾರ್ಸಿಟಿಯ ವಕ್ತಾರರು, ಪ್ರಸ್ತುತ ಅವರು ಭಾರತದಲ್ಲಿ ತಮ್ಮ ಕ್ಯಾಂಪಸ್ ಹೊಂದುವ ಯಾವುದೇ ಯೋಜನೆ ಹೊಂದಿಲ್ಲವಾದರೂ ಅವರು ಈ ರೀತಿಯ ಮುಕ್ತ ಪಾಲುದಾರಿಕೆಯ ಅವಕಾಶಗಳಿಗಾಗಿ ಉತ್ಸುಕರಾಗಿದ್ದಾರೆಂದು ತಿಳಿಸಿದ್ದಾರೆ.


ಭಾರತೀಯ ವಿದ್ಯಾರ್ಥಿಗಳ ಗಮನಸೆಳೆಯುವುದಾಗಿ ತಿಳಿಸಿದ್ದಾರೆ


ಅಲ್ಲದೆ ವಕ್ತಾರರು ತಮ್ಮ ಯುಕೆ ಹಾಗೂ ದುಬೈನಲ್ಲಿರುವ ಗುಣಮಟ್ಟದ ಶಿಕ್ಷಣಗಳ ಬಗ್ಗೆ ಭಾರತೀಯ ವಿದ್ಯಾರ್ಥಿಗಳ ಗಮನಸೆಳೆಯುವುದಾಗಿ ತಿಳಿಸಿದ್ದಾರೆ. ಇನ್ನು ಆಕ್ಸ್ ಫರ್ಡ್ ವಿವಿಯನ್ನು ಕುರಿತು ಈ ಬಗ್ಗೆ ಪ್ರಶ್ನೆಯನ್ನು ಮೇಲ್ ಮೂಲಕ ಕೇಳಿದಾಗ ಆಕ್ಸ್ ಫರ್ಡ್ ಆ ಬಗ್ಗೆ ಅದು ಯಾವುದೇ ಸಾಗರದಾಚೆಯ ಕ್ಯಾಂಪಸ್ ಹೊಂದುವ ಆಲೋಚನೆ ಅಥವಾ ಯೋಜನೆ ಹೊಂದಿಲ್ಲ ಎಂಬುದಾಗಿ ತಿಳಿಸಿದೆ.


ಹಿಂದಿನ ವರ್ಷ ಕೇಳಿದ ಇದೇ ರೀತಿಯ ಪ್ರಶ್ನೆಗೆ ಲಂಡನ್ನಿನ ಕಿಂಗ್ಸ್ ಕಾಲೇಜು, ಭಾರತದ ತೆಲಂಗಾಣ ಸರ್ಕಾರದೊಂದಿಗೆ ಪಠ್ಯಕ್ರಮ ಸುಧಾರಣೆ, ಕೌಶಲ್ಯ, ಸಂಶೋಧನಾ ಯೋಜನೆಗಳಿಗಾಗು ತಿಳುವಳಿಕೆ ಪತ್ರದ ಮೇಲೆ ಹಸ್ತಾಕ್ಷರ ಮಾಡಿರುವುದಾಗಿ ತಿಳಿಸಿದೆ.


ವಿದೇಶಿ ವಿವಿಗೆ ಭಾರತ ರೂಪಿಸಿರುವ ನಿಯಮವೇನು?


ಕಳೆದ ಗುರುವಾರದಂದು ಯುಜಿಸಿ ಅಧ್ಯಕ್ಷ ಡಾ. ಎಂ ಜಗದೇಶ್ ಕುಮಾರ್ ಅವರಿಂದ ಬಿಡುಗಡೆ ಮಾಡಲಾದ ಕರಡು ನಿಯಮಗಳ ಪ್ರಕಾರ, ಜಗತ್ತಿನಾದ್ಯಂತ ಯಾವುದೇ ವಿಷಯದಲ್ಲಿ ಅಥವಾ ಸಮಗ್ರವಾಗಿ ಟಾಪ್ 500 ಸ್ಥಾನಗಳೊಳಗಿರುವ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ಅನ್ನು ತೆರೆಯಲು ಅರ್ಹವಾಗಿರುತ್ತವೆ.


ಈ ರೀತಿಯ ಜಾಗತಿಕ ರ್‍ಯಾಂಕಿಂಗ್ ನಲ್ಲಿ ಭಾಗವಹಿಸದೆ ಇರುವ ವಿವಿಗಳು ತಮ್ಮ ಕ್ಯಾಂಪಸ್ ಗಳನ್ನು ಭಾರತದಲ್ಲಿ ತೆರೆಯಲು ಅವಕಾಶವಿದೆಯಾದರೂ ಮೊದಲು ತಮ್ಮ ದೇಶದಲ್ಲಿ ಅವರೊಂದು ಪ್ರತಿಷ್ಠಿತ ವಿವಿಯ ಸ್ಥಾನಮಾನ ಹೊಂದಿರಬೇಕು.


ಭಾರತದಲ್ಲಿ ವಿದೇಶಿ ವಿವಿಗಳ ಶುಲ್ಕ ಹೇಗಿರಲಿದೆ?


ಶುಲ್ಕದ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತಟಸ್ಥ ನಿಲುವು ಹೊಂದಿದೆ. ಭಾರತದಲ್ಲಿ ವಿದೇಶಿ ವಿವಿಗಳು ಭಾರತೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರವಾಗಿವೆ.


ಅಲ್ಲದೆ ಅಂತಹ ವಿವಿಗಳು ಭಾರತದಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತಮ್ಮದೆ ಆದ ನೀತಿ ನಿಯಮಗಳ ಮೂಲಕ ಭಾರತದ ಅಥವಾ ವಿದೇಶಿ ಮಾನವ ಸಂಪನ್ಮೂಲವನ್ನು ಹೊಂದಬಹುದಾಗಿದೆ. ಆದಾಗ್ಯೂ ಕರಡು ನಿಯಮಗಳಲ್ಲಿ ಶುಲ್ಕದ ವಿಷಯದಲ್ಲಿ ಪಾರದರ್ಶಕತೆ ಮತ್ತು ಸಮಂಜಸ ಕಾರಣವಿರಬೇಕು ಎಂದು ಉಲ್ಲೇಖಿಸಿದೆ.


ಈ ಹಿಂದೆ ಮಾಡಿದ್ದ ಪ್ರಯತ್ನಗಳು ವಿಫಲವಾಗಿದ್ದವು ಏಕೆ?


ಈ ಹಿಂದೆ 2014ರ ವರೆಗೆ ಆಡಳಿತ ನಡೆಸಿದ್ದ ಸಮ್ಮಿಶ್ರ ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಯತ್ನಗಳನ್ನು ಮಾಡಿತ್ತಾದರೂ ಸಾಕಷ್ಟು ಅಡೆ-ತಡೆಗಳನ್ನು, ಒತ್ತಡವನ್ನು ಅನುಭವಿಸಬೇಕಾಯಿತು. ಅಂದು ಕೆಲ ಎಡ ಪಕ್ಷಗಳು ತಮ್ಮ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿದೇಶಿ ಕಾಲೇಜುಗಳು ಭಾರತದ ನೆಲದಲ್ಲಿ ಆರಂಭಗೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.


ಯುಪಿಎಯ ವಿದೇಶಿ ವಿವಿಗಳ ರೆಗ್ಯುಲೇಷನ್


ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿ ಸ್ವತಃ ವಿದೇಶಿ ಕಾಲೇಜುಗಳು ಭಾರತದಲ್ಲಿ ಆರಂಭವಾಗುವಿಕೆಯನ್ನು ವಿರೋಧಿಸಿತ್ತು. ಯುಪಿಎಯ ವಿದೇಶಿ ವಿವಿಗಳ ರೆಗ್ಯುಲೇಷನ್ ಬಿಲ್ ಅನ್ನು ಬಿಜೆಪಿ, ಆರ್.ಎಸ್.ಎಸ್ ಜೊತೆಗೂಡಿ ವಿರೋಧಿಸುತ್ತ ಇದು ಕೇವಲ ಹಣ ಮಾಡುವ ತಂತ್ರವಾಗಿದೆ ಎಂದು ಖಂಡಿಸಿತ್ತು.


ನಿಯಂತ್ರಕ ಪ್ರಾಧಿಕಾರದ ರಚನೆ


ಈಗಲೂ ಸಹ ಬಹುಮತವನ್ನು ಹೊಂದಿರುವ ಕೇಂದ್ರ ಬಿಜೆಪಿ ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಬದ್ಧ ಬಿಲ್ ಅನ್ನು ಮಂಡಿಸದೆ ರೆಗ್ಯುಲೇಟರಿ ಅಂದರೆ ನಿಯಂತ್ರಕ ಪ್ರಾಧಿಕಾರದ ರಚನೆಯ ಮಾರ್ಗವನ್ನು ಹಿಡಿದಿದೆ. ಅಲ್ಲದೆ ಕರಡು ನಿಯಮದನುಸಾರ ವಿದೇಶಿ ವಿವಿಗಳು ಫಂಡ್ ಗಳನ್ನು ತಮ್ಮ ತವರು ಕ್ಯಾಂಪಸ್ಸಿಗೂ ಮರಳಿ ಕಳುಹಿಸಬಹುದಾಗಿದೆ. ಕಳೆದ ಬಾರಿ ಈ ಸೌಲಭ್ಯವಿರಲಿಲ್ಲ.


ಭಾರತವು ವಿದೇಶಗಳಲ್ಲಿ ಐಐಟಿಗಳನ್ನು ಸ್ಥಾಪಿಸಲು ಯೋಜಿಸಿದಾಗ 2016 ರಲ್ಲಿ ಪ್ರಸ್ತುತ ವಿಷಯದ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು. ನೀತಿ ಆಯೋಗವು ವಿದೇಶಿ ವಿವಿಗಳು ಭಾರತಕ್ಕೆ ಬರುವುದರ ಪರವಾಗಿತ್ತು.


ಈ ಪ್ರಸ್ತಾವನೆ ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಸಂಬಂಧ ಹೊಂದಿದೆಯೆ?


ರಾಷ್ಟ್ರೀಯ ಶಿಕ್ಷಣ ನೀತಿ 2020 ಭಾರತದಲ್ಲಿ ವಿಶ್ವದ ಟಾಪ್ ವಿವಿಗಳು ಕಾರ್ಯಾಚರಣೆ ಮಾಡಲು ಅವಕಾಶವಿದೆ ಎಂದು ಹೇಳಿದ್ದು ಈ ಮೂಲಕ ಗುರುವಾರ ಬಿಡುಗಡೆಗೊಳಿಸಲಾದ ಕರಡು ನಿಯಮಗಳು ರಾಷ್ಟ್ರೀಯ ಶಿಕ್ಷಣ ನೀತಿ ದೃಷ್ಟಿಕೋನವನ್ನು ಬೆಂಬಲಿಸುತ್ತಿವೆ.


ವಿದ್ಯಾರ್ಥಿಗಳ ಸುರಕ್ಷತೆ ಹೇಗೆ?


ಯುಜಿಸಿ ತಂದಿರುವ ಕರಡು ನಿಯಮಗಳ ಪ್ರಕಾರ, ಪ್ರಾಧಿಕಾರವು ಯಾವುದೇ ಸಮಯದಲ್ಲಿ ಕ್ಯಾಂಪಸ್ ಗೆ ಭೇಟಿ ನೀಡು ಪರಿಶೀಲಿಸಬಹುದಾಗಿದೆ. ಡಾ. ಕುಮಾರ್ ಹೇಳುವಂತೆ ಆಂಟಿ ರ್‍ಯಾಗಿಂಗ್ ಹಗೂ ಇತರೆ ಅಪರಾಧಗಳಿಗೆ ಸಂಭಂಧಿಸಿದಂತೆ ಎಲ್ಲ ನಿಯಮಗಳು ಚಾಲ್ತಿಯಲ್ಲಿರುತ್ತವೆ. ಕರಡು ನಿಯಮಗಳ ಪ್ರಕಾರ, ವಿದೇಶಿ ವಿವಿಗಳೂ ಸಹ ವಾರ್ಷಿಕ ಲೆಕ್ಕ-ಪತ್ರ ಹಾಗೂ ಇತರೆ ದಾಖಲೆಗಳನ್ನು ಯುಜಿಸಿಗೆ ಸಲ್ಲಿಸಬೇಕಾಗಿರುತ್ತದೆ.

First published: