• Home
  • »
  • News
  • »
  • jobs
  • »
  • Teacher: ಶಿಕ್ಷಕಿ ಜೊತೆ ವಿದ್ಯಾರ್ಥಿಗಳ ಅಸಭ್ಯ ವರ್ತನೆ! ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟ ಹುಡುಗರು

Teacher: ಶಿಕ್ಷಕಿ ಜೊತೆ ವಿದ್ಯಾರ್ಥಿಗಳ ಅಸಭ್ಯ ವರ್ತನೆ! ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟ ಹುಡುಗರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಷ್ಟು ದಿನ ಈ ಮಕ್ಕಳ ಕಾಟ ಸಹಿಸಿಕೊಂಡಿದ್ದ ಶಿಕ್ಷಕಿ ಈಗ ಖಿನ್ನತೆಗೊಳಗಾಗಿ ಇನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ತಮ್ಮ ಮಕ್ಕಳಿಗೆ ಟೀಚರ್ (Teacher)​ ಹೊಡೆದಿದ್ದಾರೆ ಬೈದಿದ್ದಾರೆ ಎಂದು ಶಾಲೆಗೆ ಬಂದು ವಾದ ಮಾಡುವ ಎಷ್ಟೋ ಪಾಲಕರ ಬಗ್ಗೆ ನೀವು ಕೇಳಿರುತ್ತೀರಿ ಆದರೆ ಇಲ್ಲಿ ಮಕ್ಕಳಿಂದಲೇ ಶಿಕ್ಷಕಿಗೆ ತೊಂದರೆಯಾಗಿರುವ ಘಟನೆ (Insident) ನಡೆದಿದೆ. ಈ ಘಟನೆ ನಡೆದಿದ್ದು ಉತ್ತರಪ್ರದೇಶದ ಮೀರತ್‌ನಲ್ಲಿ ಪ್ರೀತ್ಸೆ ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದಾನಂತೆ ಈ ವಿದ್ಯಾರ್ಥಿ ಹಾಗಾದರೆ ನಿಜವಾಗಿಯೂ ನಡೆದದ್ದೇನು ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ.


ಇದುವರೆಗೆ ಟೀಚರ್ ಹೊಡೆದರೆಂದು ಮಕ್ಕಳು ಪೋಷಕರನ್ನು ಕರೆದುಕೊಂಡು ಬಂದು ಶಾಲೆಯಲ್ಲಿ ಗಲಾಟೆ ಮಾಡಿದ ಹಲವು ಘಟನೆಗಳನ್ನು ನೀವು ಗಮನಿಸಿರುತ್ತೀರಿ. ಆದರೆ ಈಗ ಉತ್ತರಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.


ವಿಡಿಯೋ ಚಿತ್ರೀಕರಿಸಿದ ಕಿಡಿಗೇಡಿ
ಶಿಕ್ಷಕಿ ಶಾಲೆಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಪೊಲೀಸ್​ ಕಂಪ್ಲೇಂಟ್​ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಅಸಭ್ಯ ವರ್ತನೆಯಿಂದ ಶಿಕ್ಷಕಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಕಿಗೆ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿದ ಕಿಡಿಗೇಡಿ ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.


ಐ ಲವ್‌ಯೂ ಹೇಳಿ ಮುಜುಗರಕ್ಕೀಡು ಮಾಡಿದ್ದಾರೆ
ಮೀರತ್‌ನ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಮ್ ಮನೋಹರ್ ಲೋಹಿಯಾ ಇಂಟರ್ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿರುವ ಅಮನ್, ಕೈಫ್ ಹಾಗೂ ಅಮಲ್ತಾಸ್ ಎಂಬ ವಿದ್ಯಾರ್ಥಿಗಳು ತರಗತಿಯೊಳಗೆ ಶಿಕ್ಷಕಿ ಪಾಠ ಮಾಡುತ್ತಿದ್ದಾಗಲೇ ಅವರಿಗೆ ಐ ಲವ್‌ಯೂ ಹೇಳಿ ಮುಜುಗರಕ್ಕೀಡು ಮಾಡಿದ್ದಾರೆ. ನಂತರ ಶಾಲೆಯ ಪ್ರಾರ್ಥನಾ ಸಮಯದ ವೇಳೆ ಎಲ್ಲ ವಿದ್ಯಾರ್ಥಿಗಳು ಸೇರಿದ ವೇಳೆಯೂ ಕೆಟ್ಟ ಪದಗಳಿಂದ ಶಿಕ್ಷಕಿಗೆ ಕಾಮೆಂಟ್ ಮಾಡಿದ್ದಾರೆ.


ಶಿಕ್ಷಕಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ
ಶಿಕ್ಷಕಿಯ ಹೇಳಿರುವ ಪ್ರಕಾರ ಅವರು ಮೂಲತಃ ಮುಸ್ಲಿಂ ಆಗಿದ್ದು ಶಾಲೆಯಲ್ಲಿ ಮಾಮೂಲಿಯಂತೆ ಇಡೀ ದಿನ ಹಿಜಾಬ್ ಧರಿಸುತ್ತಿದ್ದರು. ಇತ್ತೀಚೆಗೆ ವಿದ್ಯಾರ್ಥಿಗಳ ವರ್ತನೆಯಿಂದ ಶಿಕ್ಷಕಿ ಬೇಜಾರಾಗಿದ್ದರು. ಆದರೆ ವಿದ್ಯಾರ್ಥಿಗಳು ಮಾತ್ರ ತಮ್ಮ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿದ್ದರು. ಪಾಠ ಮಾಡುವ ಮೂಲಕ ಬದುಕಿನ ಮಾರ್ಗ ಕಟ್ಟಿಕೊಡುವ ಶಿಕ್ಷಕಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ಆ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಮಕ್ಕಳ ಕಾಟ ತಡೆಯಲಾಗದೇ ಶಿಕ್ಷಕರೇ ರಾಜಿನಾಮೆ ನೀಡ್ತಿದ್ದಾರಂತೆ! ಈ ಮಕ್ಕಳು ಮಾಡಿದ್ದೇನು ನೋಡಿ


ಇಷ್ಟು ದಿನ ಈ ಮಕ್ಕಳ ಕಾಟ ಸಹಿಸಿಕೊಂಡಿದ್ದ ಶಿಕ್ಷಕಿ ಈಗ ಖಿನ್ನತೆಗೊಳಗಾಗಿ ಇನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಾಗಿನಿಂದ ಕಂಗಾಲಾದ ಇವರು ಇದಕ್ಕೆ ಪರಿಹಾರ ಬೇಕು ಇದಕ್ಕೊಂದು ಅಂತ್ಯ ಕಾಣಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.


ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಅರವಿಂದ್ ಮೋಹನ್ ಶರ್ಮಾ ಮಾಹಿತಿ ನೀಡಿದ್ದು ಒಬ್ಬಳು ವಿದ್ಯಾರ್ಥಿನಿ ಸೇರಿದಂತೆ ಒಟ್ಟು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್, 354, 500 ಹಾಗೂ 67 ರ ಅಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಖಿನ್ನತೆಗೆ ಒಳಗಾದ ಶಿಕ್ಷಕಿ
ಮಕ್ಕಳ ಕಿರುಕುಳದಿಂದ ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಗೆ ತರಗತಿ ನಡೆಸುತ್ತಿರುವಾಗಲೇ ಐಲವ್‌ ಯೂ ಮೇರಿ ಜಾನ್ ಎಂದೆಲ್ಲಾ ಹೇಳಿದ್ದಾರೆ. ಮೂವರು ವಿದ್ಯಾರ್ಥಿಗಳು ಶಿಕ್ಷಕಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದು ವಿಡಿಯೋದಲ್ಲಿಯೇ ಕಾಣಿಸುತ್ತದೆ. ಒಬ್ಬನಂತೂ ಬಾಯಲ್ಲಿ ಲಾಲಿಪಾಪ್ ಇರಿಸಿಕೊಂಡು ಶಿಕ್ಷಕಿಯತ್ತ ಅಸಭ್ಯ ವರ್ತನೆ ತೋರಿದ್ದಾನೆ.

First published: