• ಹೋಂ
  • »
  • ನ್ಯೂಸ್
  • »
  • Jobs
  • »
  • Education News: ವಿದ್ಯಾರ್ಥಿಗಳಿಗೆ ನೀಡಬೇಕಾದ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ಹಂಚಿಕೊಂಡ ರಿಷಿ ಸುನಕ್​

Education News: ವಿದ್ಯಾರ್ಥಿಗಳಿಗೆ ನೀಡಬೇಕಾದ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ಹಂಚಿಕೊಂಡ ರಿಷಿ ಸುನಕ್​

ರಿಷಿ ಸುನಕ್

ರಿಷಿ ಸುನಕ್

“ನಮ್ಮ ಆದ್ಯತೆ ಯಾವಾಗಲೂ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವಾಗಿರಬೇಕು ಎಂದು ಹೇಳಿದ್ದಾರೆ. ಮಕ್ಕಳು ಲೈಂಗಿಕತೆ ಮತ್ತು ಲಿಂಗದ ಬಗ್ಗೆ ಮೂಲಭೂತ ಮತ್ತು ಪುರಾವೆಗಳಿಲ್ಲದ ಸಿದ್ಧಾಂತಗಳೊಂದಿಗೆ ಕಲಿಸಲಾಗುತ್ತಿದೆ ಇದನ್ನು ಸರಿ ಪಡಿಸುತ್ತೇವೆ ಎಂದು ರಿಷಿ ಸುನಕ್​ ಹೇಳಿದ್ದಾರೆ.

  • Share this:

ರಿಷಿ ಸುನಕ್ (Rishi Sunak) ಅವರು ಲೈಂಗಿಕ ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ (Students) ನೀಡಬೇಕು ಎಂದು ತಿಳಿಸಿದ್ದಾರೆ. ಈ ಕುರಿತು ಅವರು ಹೇಳಿದ ವಿಚಾರಗಳೇನು ಎಂಬ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ. ವಿದ್ಯಾರ್ಥಿಗಳು ಸಂಬಂಧ, ಲೈಂಗಿಕತೆ ಮತ್ತು ಆರೋಗ್ಯ ಶಿಕ್ಷಣ ನೀಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಈ ಸಂಬಂಧ ಚರ್ಚೆ ಕೂಡಾ ನಡೆದಿದೆ. ಕೆಲವು ಶಾಲೆಗಳಲ್ಲಿ ಇದನ್ನು ಭೋದಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ. ಸಪ್ಟೆಂಬರ್ 2020 ರಿಂದ ಶಾಲೆಗಳಲ್ಲಿ (School), ರಾಷ್ಟ್ರೀಯ ಪಠ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಈ ವಿಷಯಗಳನ್ನು (Subject) ಕಲಿಸ ಬೇಕು ಎಂಬ ಸೂಚನೆ ಇತ್ತು. 


ಮಾಧ್ಯಮಿಕ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, "ಲಿಂಗ, ಲೈಂಗಿಕತೆ, ಲೈಂಗಿಕ ಆರೋಗ್ಯ ಮತ್ತು ಲಿಂಗ ಗುರುತಿನ ಬಗ್ಗೆ ಸತ್ಯಗಳು ಮತ್ತು ಕಾನೂನನ್ನು ವಯಸ್ಸಿಗೆ ಸೂಕ್ತವಾದ ಮತ್ತು ಅಂತರ್ಗತ ರೀತಿಯಲ್ಲಿ ಕಲಿಸಬೇಕು".ಸಂರಕ್ಷಣಾ ನಿಯಮಗಳನ್ನು ಅನುಸರಿಸಿದರೆ, ಈ ವಿಷಯಗಳ ಕುರಿತು ತರಗತಿಗಳನ್ನು ಕಲಿಸಲು ಬಾಹ್ಯ ಏಜೆನ್ಸಿಗಳನ್ನು ಆಹ್ವಾನಿಸಲು ಶಾಲೆಗಳಿಗೆ ಅನುಮತಿಸಲಾಗಿದೆ. ಆದರೆ ಹೆಚ್ಚಾಗಿ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಬೇಕು ಎಂಬುದದೇ ಅವರ ಆಶಯವಾಗಿತ್ತು.


ಕಳೆದ ಬೇಸಿಗೆಯಲ್ಲಿ ಕನ್ಸರ್ವೇಟಿವ್ ನಾಯಕತ್ವಕ್ಕಾಗಿ ಭಾಗವಹಿಸುವಾಗ  ಸುನಕ್ ಶಾಲೆಯಲ್ಲಿ ಲೈಂಗಿಕ ಮತ್ತು ಸಂಬಂಧ ಶಿಕ್ಷಣದ ಮಾರ್ಗದರ್ಶನವನ್ನು ಬಲಪಡಿಸುವುದಾಗಿ ಭರವಸೆ ನೀಡಿದರು.


ಇದನ್ನೂ ಓದಿ: Good News: ನಿಮ್ಮ ಶಾಲೆಯಲ್ಲೇ ನಡೆಯುತ್ತೆ ಬೋರ್ಡ್​​ ಎಕ್ಸಾಂ; 5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಶುಭ ಸಮಾಚಾರ!


ಬುಧವಾರ ಪ್ರಧಾನಿಯವರ ಜೊತೆ ಮಾತನಾಡಿದ ಸುನಕ್, ನಮ್ಮ ಆದ್ಯತೆ ಯಾವಾಗಲೂ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವಾಗಿರಬೇಕು ಎಂದು ಹೇಳಿದ್ದಾರೆ. ಮಕ್ಕಳು ಲೈಂಗಿಕತೆ ಮತ್ತು ಲಿಂಗದ ಬಗ್ಗೆ ಮೂಲಭೂತ ಮತ್ತು ಪುರಾವೆಗಳಿಲ್ಲದ ಸಿದ್ಧಾಂತಗಳೊಂದಿಗೆ ಕಲಿಸಲಾಗುತ್ತಿದೆ ಇದನ್ನು ಸರಿ ಪಡಿಸುತ್ತೇವೆ ಎಂದು ರಿಷಿ ಸುನಕ್​ ಹೇಳಿದ್ದಾರೆ. ಈ ರೀತಿಯಾಗಿ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.




ಮೌಖಿಕ ಲೈಂಗಿಕತೆಯ ಕುರಿತಾದ ಗ್ರಾಫಿಕ್ ಪಾಠಗಳು ಮಕ್ಕಳಲ್ಲಿ ಹೆಚ್ಚಿನ ಪ್ರಭಾವ ಬೀರಬಹುದು. ದೇಶದಾದ್ಯಂತ, ಮಕ್ಕಳನ್ನು ವಯಸ್ಸಿಗೆ ಸೂಕ್ತವಲ್ಲದ, ವಿಪರೀತ, ಲೈಂಗಿಕತೆಯ ಶಿಕ್ಷಣವನ್ನು ನೀಡುವುದು ಸಹ ತಪ್ಪಾಗುತ್ತದೆ.  ನಿಖರವಾಗಿಲ್ಲದ ಪಾಠಗಳಿಗೆ ವಿದ್ಯಾರ್ಥಿಗಳನ್ನು ಒಳಪಡಿಸಲಾಗುತ್ತದೆ. ಇದೂ ಸಹ ಒಂದು ಮುಖ್ಯ ಅಂಶವೇ ಆಗಿದೆ.


ಶಿಕ್ಷಣ ಇಲಾಖೆಯ ಗೊಂದಲಮಯ ಮಾರ್ಗದರ್ಶನವನ್ನು ತೆಗೆದು ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಈ ವಾರ, ಸುಮಾರು 50 ಕನ್ಸರ್ವೇಟಿವ್ ಸಂಸದರು ಪ್ರಧಾನ ಮಂತ್ರಿಗೆ ಪತ್ರ ಬರೆದು "ವಯಸ್ಸಿಗೆ ಸೂಕ್ತವಲ್ಲದ" ಲೈಂಗಿಕ ಶಿಕ್ಷಣದ ಬಗ್ಗೆ ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಲು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.


ಶ್ರೀಮತಿ ಕೆಟ್ಸ್​ ಕೂಡಾ ಈ ವಿಚಾರವಾಗಿ ಮಾತನಾಡಿದ್ದಾರೆ. ಪ್ರಧಾನಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಮತ್ತು ಅಸಮರ್ಪಕ ಆರ್‌ಎಸ್‌ಇ ಬಗ್ಗೆ ನಮ್ಮ ಕಳವಳಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ. ಲಾಖೆಯು ಗೊಂದಲಮಯ ಮಾರ್ಗದರ್ಶನವನ್ನು ತಯಾರಿಸಿದೆ, ಸಮಸ್ಯೆ ಇದೆ ಎಂದು ಸತತವಾಗಿ ನಿರಾಕರಿಸಿದೆ ಎಂದು ಹೇಳಲಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು