RTE ಕರ್ನಾಟಕ ಪ್ರವೇಶ 2023-24 ಕ್ಕೆ ಅಪ್ಲೈ (Apply) ಮಾಡುವ ಎಲ್ಲರಿಗೂ ಸಹಾಯವಾಗುವ ಮಾಹಿತಿ ಇಲ್ಲಿದೆ. ನಾವಿಲ್ಲಿ ಅಧಿಕೃತ ಜಾಲತಾಣ schooleducation.kar.nic.in ಆನ್‌ಲೈನ್ ಅರ್ಜಿ ನಮೂನೆ ಕೊನೆ ದಿನಾಂಕ, ಅರ್ಹತೆ, ಶಾಲಾ ಪಟ್ಟಿ, ವಯಸ್ಸಿನ ಮಿತಿ, ಅರ್ಹತೆಯ ಮಾನದಂಡ, ಅಗತ್ಯವಿರುವ ದಾಖಲೆಗಳು, ಆಯ್ಕೆ ಪಟ್ಟಿ, ಸಂಪೂರ್ಣ ಪ್ರವೇಶ (Admission) ಕಾರ್ಯವಿಧಾನವನ್ನು ಕೆಳಗೆ ನೀಡಲಾಗಿದೆ. ಈ ಮೂಲಕ ಮಾಹಿತಿ (Information) ಪಡೆದುಕೊಂಡು ನೀವು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಪ್ಲೈ ಮಾಡಿ.
ಶಾಲಾ ಪ್ರವೇಶಕ್ಕಾಗಿ ಹೆಣಗಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ನೀಡುವ ಸಲುವಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಂತೆ ಅಡ್ಮಿಷನ್ ಮಾಡಿಸಿಕೊಳ್ಳಲು ಬಯಸುವವರು ಖಂಡಿತ ಈ ಮಾಹಿತಿಯನ್ನು ಗಮನಿಸಿ ಅದರಂತೇ ಅಪ್ಲೈ ಮಾಡಿ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಕರ್ನಾಟಕ RTE ಶಾಲಾ ಪಟ್ಟಿ 2023 ಅನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Job News: ಟೆಲಿಕಾಲರ್ ಜಾಬ್ಗೆ ಅಪ್ಲೈ ಮಾಡಿ, ಕೈ ತುಂಬಾ ಸಂಬಳ ಪಡೆಯಿರಿ
ಸರ್ಕಾರಿ ಸೇವೆಗಳು ಅಥವಾ ಸರ್ಕಾರಿ ಧನಸಹಾಯದ ಅಡಿಯಲ್ಲಿ ಶಾಲಾ ಪ್ರವೇಶವನ್ನು ಬಯಸುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು.ಪಾಲಕರು, ಪೋಷಕರಿಗೂ ಸಹ ಇದು ತುಂಬಾ ಸಹಾಯವಾಗಲಿದೆ. ಸರ್ಕಾರವೇ ಆರ್ಥಿಕ ನೆರವು ನೀಡುತ್ತದೆ. ಕೊನೆಯ ದಿನಾಂಕದ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. RTE ಕರ್ನಾಟಕ ವಯಸ್ಸಿನ ಮಿತಿ ಹೊಂದಿದೆ.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ
ಕರ್ನಾಟಕದ ಎಲ್ಲಾ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಹಕ್ಕು ಕಾಯಿದೆಯಡಿ ಈಗ ಶಾಲೆಗೆ ಕಳುಹಿಸಬಹುದು. RTE ಎಂದರೆ ರೈಟ್ ಟು ಎಜುಕೇಷನ್ ಎಂದರ್ಥ. 1 ರಿಂದ 9 ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣವನ್ನು ನಮ್ಮ ಕರ್ನಾಟಕದಲ್ಲಿ ನೀಡಲಾಗಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಇನ್ನು ಚಿಕ್ಕವರಾಗಿದ್ದು ಇದೇ ಮೊದಲನೇ ಬಾರಿ ಶಾಲೆಗೆ ಸೇರಿಸುತ್ತಿದ್ದರೆ ಖಂಡಿತ ಒಮ್ಮೆ ಈ ಮಾಹಿತಿಯನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಿ.
20-3-2023 ರಿಂದ 20-4-2023 ರ ವರೆಗೆ ಪ್ರವೇಶ
ಅನುದಾನ ರಹಿತ ಹಾಗೂ ಅನುದಾನ ಸಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಈ ಬಾರಿ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಅಡ್ಮಿಷನ್ ಮಾಡಿಸುವಂತೆ ಸೂಚಿಸಲಾಗಿದೆ. ಆರ್‌ಟಿಇ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು. RTE ಶಾಲಾ ಪಟ್ಟಿ 2023 ರ ಅಡಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳಿಗೆ ಸರ್ಕಾರವು ಶುಲ್ಕವನ್ನು ಒದಗಿಸುತ್ತದೆ. ಆದರೆ ಅದಕ್ಕೂ ಮೊದಲು ವಿದ್ಯಾರ್ಥಿಗಳು RTE ಕರ್ನಾಟಕ ಪ್ರವೇಶದ ಆನ್‌ಲೈನ್ ಅರ್ಜಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅಂದರೆ schooleducation.kar.nic.in ಈ ಅಧಿಕೃತ ಜಾಲತಾಣಕ್ಕೆ ನೀವು ಭೇಟಿ ನೀಡಬೇಕಾಗುತ್ತದೆ. ಸಂಪೂರ್ಣ ಶುಲ್ಕ ವಿನಾಯಿತಿಯೊಂದಿಗೆ ನೀವು ಅಡ್ಮಿಷನ್ ಮಾಡಿಸಲು ಇದು ಸಹಾಯಮಾಡುತ್ತದೆ. ಸರ್ವ ಶಿಕ್ಷಣ ಎಂಬ ನಿಯಮವೂ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.
ಉನ್ನತ ಶಿಕ್ಷಣಕ್ಕೀಗ ವಿದ್ಯಾಶಕ್ತಿ
ಉನ್ನತ ಶಿಕ್ಷಣ ಹೊಂದಲು ಅನುಕೂಲವಾಗುವಂತೆ 'ಮುಖ್ಯಮಂತ್ರಿ ವಿದ್ಯಾಶಕ್ತಿ' ಎಂಬ ಯೋಜನೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಸರ್ಕಾರಿ ಪದವಿ ಪೂರ್ವ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯತಿ ನೀಡಲಾಗುತ್ತದೆ. ಈ ಯೋಜನೆಯಿಂದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ