ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮರು ಮೌಲ್ಯಮಾಪನದ (Result) ಫಲಿತಾಂಶ ವಿಳಂಭವಾಗಿದೆ ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ. ಎಲ್ಲಾ ಕಾಲೇಜುಗಳಲ್ಲೂ (College) ಇತ್ತೀಚಿಗೆ ಇದೆ ಸಮಸ್ಯೆ ತಾವು ಪರೀಕ್ಷೆ (Exam) ಬರೆದರೂ ಎಷ್ಟು ಅಂಕ ಗಳಿಸಿದ್ದೇವೆ ಎಂದು ತಿಳಿಯಲು ಐದಾರು ತಿಂಗಳು ವಿಳಂಬವಾಗುತ್ತಿದೆ ಎಂಬ ಮಾತು ಕೇಳಿಬರ್ತಿದೆ. ಈ ಸಮಸ್ಯೆ ಬಗೆ ಹರಿಸಿ ಎಂದು ಹಲವರು ಮನವಿ ಕೂಡಾ ಮಾಡಿಕೊಂಡಿದ್ದಾರೆ. ಆದರೂ ಯಾಕೋ ಈ ವಿದ್ಯಾರ್ಥಿಗಳ ಈ ಮನವಿಗೆ ವಿಶ್ವವಿದ್ಯಾಲಯಗಳು (University) ಓಗುಡುತ್ತಿಲ್ಲ.
ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಿಸಿದೆ ವಿಳಂಭ
ಮರು ಮೌಲ್ಯಮಾಪನ ವಿಳಂಬವಾಗಿರುವ ಕಾರಣ ಎಂಬಿಬಿಎಸ್ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಈ ರೀತಿ ವಿಳಂಭವಾಗಿದೆ. 600 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಯಲಾಗಿದೆ. ಒಂದೇ ವಿಷಯದ ಮೌಲ್ಯಮಾಪನದಲ್ಲಿ ಅಂಕ ಏರು ಪೇರಾಗಿದೆ ಎಂದು ತಿಳಿದು ಬಂದಿದೆ.
ಇಬ್ಬರು ಮೌಲ್ಯಮಾಪಕರಿಂದ ಮೌಲ್ಯಮಾಪನ
ಒಂದೇ ವಿಷಯವನ್ನು ಎರಡು ಜನ ಮೌಲ್ಯಮಾಪನ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೂ ಸಹ ಉತ್ತರ ಪತ್ರಿಕೆಯ ಅಂಕ ಏರು ಪೇರಾಗಿರುವುದು ಕಂಡುಬಂದಿದೆ. ಒಂದೇ ವಿಷಯದಲ್ಲಿ ಒಬ್ರು ಮೌಲ್ಯಮಾಪಕರು 40 ಅಂಕ ಕೊಟ್ರೆ, ಮತ್ತೊಬ್ಬರು 10 ಅಂಕ ಕೊಟ್ಟಿದ್ದಾರೆ. ಈ ಕಾರಣದಿಂದ ಮೌಲ್ಯಮಾಪನದ ಸಮಸ್ಯೆ ಉಂಟಾಗಿದೆ.
ಇದನ್ನೂ ಓದಿ: NEET PG 2023 ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಒತ್ತಾಯ
ಇದನ್ನು ಪ್ರಶ್ನೀಸಿ 600 ವಿದ್ಯಾರ್ಥಿಗಳಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಮರುಮೌಲ್ಯಮಾಪನದ ಅಂಕ ಕೂಡ ವಿಳಂಭವಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಸುಮಾರು 600 ವಿದ್ಯಾರ್ಥಿಗಳ ಮರು ಮೌಲ್ಯಮಾಪನ ಫಲಿತಾಂಶ ತಡೆ ಹಿಡಿದ ವಿವಿ ಇನ್ನೂ ಕೂಡಾ ವಿದ್ಯಾರ್ಥಿಗಳಿಗೆ ಫಲಿತಾಂಶ ಬಿಡುಗಡೆ ಮಾಡಿಲ್ಲ.
ಪರೀಕ್ಷೆ ಬರೆದು 6 ತಿಂಗಳು ಕಳೆದ್ರು ಫಲಿತಾಂಶ ಪ್ರಕಟಿಸಿಲ್ಲ
ವಿದ್ಯಾರ್ಥಿಗಳು ಪರೀಕ್ಷೆ ಬರೆದು ಈಗಾಗಲೇ ಆರು ತಿಂಗಳು ಕಳೆದಿದೆ ಆದರೂ ಕೂಡಾ ಫಲಿತಾಂಶದ ಸುಳಿವೇ ಇಲ್ಲ. ಫಲಿತಾಂಶ ವಿಳಂಭ ಧೋರಣೆಯಿಂದ ವಿದ್ಯಾರ್ಥಿಗಳು ಈಗ ಕೋರ್ಟ್ ಮೊರೆಹೋಗಿದ್ದಾರೆ. ಫಲಿತಾಂಶ ಪ್ರಕಟಿಸುವಂತೆ ಕೋರ್ಟ್ ರಾಜೀವ್ ಆರೋಗ್ಯ ವಿವಿಗೆ ಸೂಚನೆ ನೀಡಿದೆ. ಆದರೂ ಸಹ ಫಲಿತಾಂಶವನ್ನ ಪ್ರಕಟ ಮಾಡದ ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟ್ರಾರ್ ಈಗ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಂದ ಸಮಸ್ಯೆ ಬಗೆಹರಿಸಲು ಕೋರಿಕೆ
ಕೋರ್ಟ್ ನಿರ್ಧಾರಕ್ಕೂ ಸಹ ಯಾರೂ ಕೇಳದೇ ಇದ್ದಾಗ ಮಧ್ಯೆ ಪ್ರವೇಶಿಸುವಂತೆ ರಾಜ್ಯಪಾಲರಿಗೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಸಲಾಗಿದೆ. ಮುಂದಿನ ವರ್ಷದ ಪರೀಕ್ಷೆ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಇದೇ ತಿಂಗಳು 16 ಕೊನೆ ದಿನವಾಗಿದ್ದು ಶುಲ್ಕ ಪಾವತಿಸುವ ದಿನ ಸಮೀಪಿಸುತ್ತಿದೆ ಆದರೆ ವಿದ್ಯಾರ್ಥಿಗಳು ಶುಲ್ಕ ಪಾವತಿಸು ಹಿಂಜರಿಯುತ್ತಿದ್ದಾರೆ.
ಆದ್ರೆ ಮರು ಮೌಲ್ಯಮಾಪನ ಫಲಿತಾಂಶ ಬಾರದೇ ಶುಲ್ಕ ಕಟ್ಟಲು ಸಾಧ್ಯವಿಲ್ಲ
ಫಲಿತಾಂಶವೇ ಬಾರದೇ ನಾವೇಕೆ ಶುಲ್ಕ ಪಾವತಿಸಬೇಕು ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ. ತಾವು ಶುಲ್ಕ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಆ ಕಾರಣದಿಂದ ಹಲವಾರು ಜನರಿಗೆ ತೊಂದರೆಯಾಗುತ್ತಿದೆ. ಈ ರೀತಿಯಲ್ಲಾದರೂ ಪರಿಹಾರ ಸಿಗಬಹುದಾ ಎಂಬ ಚಿಂತನೆ ಮಾಡುತ್ತಿದ್ದಾರೆ. ದಯಮಾಡಿ ನಮಗೆ ಫಲಿತಾಂಶ ಪ್ರಕಟಿಸುವಂತೆ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಇನ್ನಾದರೂ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸಿಗುತ್ತಾ ಇಲ್ವಾ ಎಂದು ಕಾದು ನೋಡ ಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ