• Home
  • »
  • News
  • »
  • jobs
  • »
  • Republic Day Speech: ಗಣರಾಜ್ಯೋತ್ಸವದ ದಿನ ಶಭಾಷ್ ಎನಿಸಿಕೊಳ್ಳೋಕೆ ಇಲ್ಲಿದೆ ನೋಡಿ ಸುಲಭ ಭಾಷಣ

Republic Day Speech: ಗಣರಾಜ್ಯೋತ್ಸವದ ದಿನ ಶಭಾಷ್ ಎನಿಸಿಕೊಳ್ಳೋಕೆ ಇಲ್ಲಿದೆ ನೋಡಿ ಸುಲಭ ಭಾಷಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಮ್ಮ ದೇಶವು ಸ್ವತಂತ್ರ ಗಣರಾಜ್ಯ ರಾಷ್ಟ್ರವಾದ ಐತಿಹಾಸಿಕ ಕ್ಷಣವನ್ನು ನೆನಪಿಟ್ಟುಕೊಳ್ಳಲು ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಭಾರತವು 15 ಆಗಸ್ಟ್ 1947 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡಿತು, ಆದರೂ ಸಹ ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದಿರಲಿಲ್ಲ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಗಣರಾಜ್ಯೋತ್ಸವವು ಹತ್ತಿರದಲ್ಲಿದೆ ಶಾಲಾ ಮಕ್ಕಳೆಲ್ಲಾ ತಮ್ಮ ಭಾಷಣ ಪ್ರಾಕ್ಟೀಸ್​ ಮಾಡುವ ಕಾತುರದಲ್ಲಿದ್ದಾರೆ. ಸುಲಭವಾಗಿ ಹಾಗೂ ಸರಳವಾಗಿ ಮಕ್ಕಳಿಗೆ ನೆನಪಿನಲ್ಲಿ ಉಳಿಯಬಹುದಾದ ಭಾಷಣದ (Speech) ವಿಷಯವನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಮಕ್ಕಳಿಗೆ (Students) ಈ ಭಾಷಣ ಕಲಿಸಿಕೊಡಿ. ಭಾರತವು 15 ಆಗಸ್ಟ್ 1947 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡರೂ ಸಹ ತನ್ನದೇ ಆದ ಸಂವಿಧಾನವನ್ನು ಹೊಂದಿರಲಿಲ್ಲ ಆ ಕಾರಣದಿಂದ ಸಂವಿಧಾನವನ್ನು ಸ್ಥಾಪನೆ ಮಾಡಿ 26 ಜನವರಿ 1950 ರಂದು ಅದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು (Independence Day) ಆಚರಿಸಲಾಗುತ್ತದೆ. ಇದು ಆಚರಣೆಯ ಮುಖ್ಯ ಉದ್ದೇಶವಾಗಿದೆ.


ಭಾರತದ ಸಂವಿಧಾನವು ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವವೆಂದು ಆಚರಿಸಲಾಗುತ್ತದೆ. ದೇಶದ ಎಲ್ಲಾ ಶಾಲಾ ಕಾಲೇಜುಗಳು ಜನವರಿ 26 ರಂದು ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲು ತಯಾರಿ ನಡೆಸುತ್ತಿವೆ. ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಹಾಗೇ ಭಾಷಣವೂ ಸಹ ಒಂದು ಮುಖ್ಯ ಅಂಶವಾಗಿರುತ್ತದೆ.


ಗಣರಾಜ್ಯೋತ್ಸವ ಭಾಷಣ
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಶುಭೋದಯ. ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುತ್ತದೆ, ಈ ವರ್ಷವೂ ಆಚರಿಸಲಾಗುತ್ತಿದೆ. ನಮ್ಮ ದೇಶವು ಸ್ವತಂತ್ರ ಗಣರಾಜ್ಯ ರಾಷ್ಟ್ರವಾದ ಐತಿಹಾಸಿಕ ಕ್ಷಣವನ್ನು ನೆನಪಿಟ್ಟುಕೊಳ್ಳಲು ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಭಾರತವು 15 ಆಗಸ್ಟ್ 1947 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡಿತು, ಆದರೆ ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದಿರಲಿಲ್ಲ.


ಇದನ್ನೂ ಓದಿ: NEP Opinion: ಶಿವಾಜಿ ಮಹಾರಾಜರ ಸ್ಟೈಲ್‌ನಲ್ಲಿ ಇರಬೇಕಂತೆ ಹೊಸ ಶಿಕ್ಷಣ ನೀತಿ! ಹೀಗೂ ಇದೆ ಅಭಿಪ್ರಾಯ


ಬದಲಿಗೆ ಭಾರತವು ಬ್ರಿಟಿಷರು ಜಾರಿಗೆ ತಂದ ಕಾನೂನುಗಳಿಂದ ಆಡಳಿತ ನಡೆಸುತ್ತಿತ್ತು. ಈ ಕುರಿತು ಹಲವು ಚರ್ಚೆಗಳು ಮತ್ತು ತಿದ್ದುಪಡಿಗಳ ನಂತರ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ಭಾರತೀಯ ಸಂವಿಧಾನದ ಕರಡನ್ನು ಸಲ್ಲಿಸಿತು, ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು ಮತ್ತು ಅಧಿಕೃತವಾಗಿ 26 ಜನವರಿ 1950 ರಂದು ಇದು ಜಾರಿಗೆ ಬಂದಿತು.


ಅದೇ ದಿನ ಡಾ ರಾಜೇಂದ್ರ ಪ್ರಸಾದ್ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಿ ತಮ್ಮ ಅವಧಿಯನ್ನು ಪ್ರಾರಂಭಿಸಿದರು. ಅಂದಿನಿಂದಲೇ ಸಂವಿಧಾನ ಜಾರಿಯಾಯಿತು. ಸ್ವಾತಂತ್ರ್ಯದ ನಂತರ, ಗಣರಾಜ್ಯೋತ್ಸವದ ಮುಖ್ಯ ಆಚರಣೆಯನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್‌ಪಥ್‌ನಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಭಾರತದ ಇತರ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು.
ಭಾರತಕ್ಕೆ ಗೌರವವಾಗಿ, ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಮೆರವಣಿಗೆಗಳು ನಡೆಯುತ್ತವೆ. ಹಾಗೇ ಹಲವಾರು ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲೂ ಸಹ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವ ಪರೇಡ್ ಆಕರ್ಷಣೀಯವಾಗಿರುತ್ತದೆ. ನಾವೆಲ್ಲರೂ ಸಹ ಇಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಖುಷಿ ತಂದಿದೆ.


ಗಣರಾಜ್ಯೋತ್ಸವದ ಮೆರವಣಿಗೆ ಮತ್ತು ಪರೇಡ್​ಗಳ ಪ್ರಾಮುಖ್ಯತೆ 


ಗಣರಾಜ್ಯೋತ್ಸವದ ಮೆರವಣಿಗೆ ಮತ್ತು ಪರೇಡ್​ಗಳು ತುಂಬಾ ಆಕರ್ಷಣೀಯ ಕೇಂದ್ರಗಳು ಇದನ್ನು ಯಾಕಾಗಿ ಮಾಡಲಾಗುತ್ತದೆ ಎಂಬುದಕ್ಕೆ ನಾನು ಬಲವಾದ ಕಾರಣ ತಿಳಿಸುತ್ತೇನೆ ಕೇಳಿ. ಇದು ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಸಹ ತೋರಿಸುತ್ತದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಭಲವನ್ನು ತೋರ್ಪಡಿಸಲು ಇದು ಸಹಾಯವಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ಗೌರವ ಸ್ವೀಕಾರ ಮಾಡುತ್ತಾರೆ.


ಸೈನಿಕರನ್ನು ಸ್ಮರಿಸುವ ಸಂದರ್ಭ


ದೇಶದ ವೀರರನ್ನು, ಸೈನಿಕರನ್ನು ಸ್ಮರಿಸಲು ಇದೊಂದು ಒಳ್ಳೆ ದಿನ.  ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರಯೋಧರಿಗೆ ಮತ್ತು ಹುತಾತ್ಮರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಇದೇ ಸಂದರ್ಭದಲ್ಲಿ  ನೀಡಲಾಗುವುದು. ನಮ್ಮ ಶಾಲೆಯಲ್ಲೂ ಸಹ ಇದೀಗ ಸಂಭ್ರಮದ ಆಚರಣೆ ನಡೆಯುತ್ತಿದೆ. ಎಲ್ಲರಿಗೂ ಮತ್ತೊಮ್ಮೆ ಶುಭಾಶಯ ಕೋರುತ್ತಾ ನನ್ನ ಮಾತಿಗೆ ಪೂರ್ಣ ವಿರಾಮವಿಡುತ್ತಿದ್ದೇನೆ.


ಧನ್ಯವಾದ

First published: