CBSE 10 ನೇ ತರಗತಿ ಪರೀಕ್ಷೆಯು (Exam) ಮಾರ್ಚ್ 21, 2023 ರಂದು ಮುಕ್ತಾಯಗೊಂಡಿತು. ಈ ವರ್ಷ 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಹಲವಾರು ವಿದ್ಯಾರ್ಥಿಗಳು (Students) ಹಾಗೂ ಪಾಲಕರು ಗೊಂದಲಕ್ಕೀಡಾಗಿದ್ದರು. ಆ ಕಾರಣದಿಂದ ಒಂದು ಸ್ಪಷ್ಟನೆಯನ್ನು ಇಲ್ಲಿ ನೀಡಲಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ (Information) ಇಲ್ಲಿದೆ ಗಮನಿಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿ ಮಹತ್ವದ ಸೂಚನೆ ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Education) ತಿಳಿಸಿದ ಮಾಹಿತಿ ನೋಡಿ.
ದೇಶಾದ್ಯಂತ 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. CBSE ಬೋರ್ಡ್ ಪರೀಕ್ಷೆಗಳು 2023 ನಕಲಿ ಪೇಪರ್ ಸೋರಿಕೆ ಸುದ್ದಿಗಳ ಕುರಿತು ಮಂಡಳಿಯು ಪ್ರಮುಖ ಸೂಚನೆಯನ್ನು ನೀಡಿದೆ. ಪರೀಕ್ಷೆಯ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪೇಪರ್ ಸೋರಿಕೆಯಾಗಿದೆ ಎಂದು ಸುಳ್ಳು ಹೇಳಿಕೆ ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಮಿಷವೊಡ್ಡಿ ಪ್ರಶ್ನೆಪತ್ರಿಕೆಯನ್ನು ಪಡೆಯಲು ನಕಲಿ ಸಂದೇಶಗಳು ಮತ್ತು ವೀಡಿಯೊ ಲಿಂಕ್‌ಗಳನ್ನು ಅಪ್‌ಲೋಡ್ ಮಾಡಿಲಾಗಿತ್ತು. ಈ ಕೃತ್ಯ ಮಾಡಿದ ಸಮಾಜವಿರೋಧಿಗಳ ವಿರುದ್ಧ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಂಡಳಿಯು ನೋಟಿಸ್‌ನಲ್ಲಿ ತಿಳಿಸಿದೆ.
ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಎಸ್‌ಇ ದೆಹಲಿ ಪೊಲೀಸ್ ವಿಶೇಷ ಕೋಶಕ್ಕೆ (ಎಂಎಸಿ) ದೂರು ಸಲ್ಲಿಸಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ವಿಡಿಯೋ ಲಿಂಕ್ಗಳನ್ನೂ ಸಹ ತೆಗೆದು ಹಾಕಲಾಗಿದೆ. ಇದರಿಂದ ವಿದ್ಯಾರ್ಥಿಗಳು ಚಿಂತಿಸ ಬೇಕಾಗಿಲ್ಲಾ ಪಾಲಕರೂ ಈ ಕುರಿತು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Education News: ಅತಿಥಿ ಸತ್ಕಾರಕ್ಕೆ ಮನಸೋತು ಈ ಹಳ್ಳಿಯಲ್ಲಿ ಶಾಲೆ ತೆರೆದಿದ್ದ ಅಧಿಕಾರಿ; ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಮಂಡಳಿಯು ಸಾರ್ವಜನಿಕರನ್ನು ಪರಿಶೀಲಿಸದ ಸುದ್ದಿ ಅಥವಾ ವದಂತಿಗಳ ವಿರುದ್ಧ ಜಾಗರೂಕರಾಗಿರಬೇಕು ಮತ್ತು ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನೀವೆ ನಿಮ್ಮನ್ನು ನಿಯಂತ್ರಿಸಕೊಳ್ಳಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಯಾವುದೇ ರೀತಿಯ ಸಂವಹನದ ಮೂಲಕ ಅಂತಹ ಮಾಹಿತಿಯನ್ನು ಹರಡದಂತೆ ವಿನಂತಿಸಿದೆ. CBSE ತರಗತಿ 10, 12 ಬೋರ್ಡ್ ಪರೀಕ್ಷೆ 2023 ಅನ್ನು ಫೆಬ್ರವರಿ 15, 2023 ರಂದು ಪ್ರಾರಂಭಿಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಮಾರ್ಚ್ 21, 2023 ರಂದು ಮುಕ್ತಾಯಗೊಂಡವು. 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 5, 2023 ರಂದು ಕೊನೆಗೊಳ್ಳುತ್ತವೆ.
ಏಪ್ರಿಲ್ 1 ರ ಮೊದಲು ಶೈಕ್ಷಣಿಕ ಅಧಿವೇಶನವನ್ನು ಪ್ರಾರಂಭಿಸುವಂತಿಲ್ಲ
ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು CBSE. ಏಪ್ರಿಲ್ 1 ರ ಮೊದಲು ಶೈಕ್ಷಣಿಕ ಅಧಿವೇಶನವನ್ನು ಪ್ರಾರಂಭಿಸುವುದರ ವಿರುದ್ಧ ಸಿಬಿಎಸ್‌ಇ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡುತ್ತದೆ ಎಂದು ಹೇಳಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಸೂಚನೆಯನ್ನು ಹಲವಾರು ಶಾಲೆಗಳು ವಿಶೇಷವಾಗಿ 10 ಮತ್ತು 12 ನೇ ತರಗತಿಗಳಿಗೆ ಸಂಬಂಧಿಸಿದ ಮಾಹಿತಿಯಾಗಿದೆ ಎಂದು ಒತ್ತಿ ಹೇಳಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಈ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ