ರಿಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿ ಅವರು 25 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ವಿದ್ಯಾರ್ಥಿವೇತನವನ್ನು (Reliance Scholarship) ನೀಡುತ್ತಿದ್ದಾರೆ. ಈ ವಿದ್ಯಾರ್ಥಿ ವೇತನ ಭಾರತದಾದ್ಯಂತ 13,000 ಯುವಕರ ಜೀವನಕ್ಕೆ ಸಹಾಯ ಮಾಡಿದೆ. 1996 ರಲ್ಲಿ ಈ ಯೋಜನೆಯನ್ನು ಇವರು ಆರಂಭಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವನ್ನು (Higher Education) ಪಡೆಯಲು ಪ್ರೋತ್ಸಾಹಿಸುವುದು ಈ ಸ್ಕಾಲರ್ ಶಿಪ್ನ ಉದ್ದೇಶವಾಗಿದೆ. ಐಐಟಿಗಳು, ಐಐಎಂಗಳು ಸೇರಿದಂತೆ ಪ್ರಮುಖ ಸಂಸ್ಥೆಗಳಿಂದ ಹೆಚ್ಚಿನ ಉನ್ನತ ಶಿಕ್ಷಣವನ್ನು (Education) ಪೂರೈಸಲು ಇದು ವಿದ್ಯಾರ್ಥಿಗಳಿಗೆ ಸಹಾಯವಾಗಿದೆ.
ಸ್ಕಾಲರ್ಶಿಪ್ (1) | ಪದವಿ ಪೂರ್ವ ವಿದ್ಯಾರ್ಥಿ ವೇತನ |
ಸ್ಕಾಲರ್ಶಿಪ್ (2) | ಸ್ನಾತಕೋತ್ತರ ವಿದ್ಯಾರ್ಥಿ ವೇತನ |
ಸಂಸ್ಥೆ | ರಿಲಯನ್ಸ್ |
ಫಲಾನುಭವಿಗಳು | ಉನ್ನತ ಶಿಕ್ಷಣ ಪೂರೈಸುತ್ತಿರುವ ವಿದ್ಯಾರ್ಥಿಗಳು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
WhatsApp ನಂಬರ್ | 7977100100 |
ಇದನ್ನೂ ಓದಿ: Scholarship: ಡಿಸೆಂಬರ್ 31ರ ಒಳಗೆ ಈ ಸ್ಕಾಲರ್ ಶಿಪ್ಗೆ ಅಪ್ಲೈ ಮಾಡಿ, ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ
ಅಗತ್ಯ ದಾಖಲೆಗಳು
1. ವೈಯಕ್ತಿಕ ಮತ್ತು ಸಂಪರ್ಕ ಮಾಹಿತಿ
2. ಶೈಕ್ಷಣಿಕ ಮಾಹಿತಿ
3. ಸಾಧನೆಗಳು ಮತ್ತು ಪ್ರಶಸ್ತಿಗಳು
4. ಪೋಷಕ ದಾಖಲೆಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11:59 ಫೆಬ್ರುವರಿ 14 2023
ಯಾರು ಅಪ್ಲೈ ಮಾಡಬಹುದು?
1. ಪದವಿ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಈ ಸ್ಕಾಲರ್ಶಿಪ್ಗೆ ಅಪ್ಲೈ ಮಾಡಬಹುದು.
2. ನೀವು ಈ ಹಿಂದೆ ಅಪ್ಲೈ ಮಾಡಿದ್ದರೂ ಸಹ ಮತ್ತೆ ಈ ಬಾರಿ ಅಪ್ಲೈ ಮಾಡಬಹುದು.
3. ಅಪ್ಲಿಕೇಶನ್ ತಪ್ಪಾಗಿ ತುಂಬಿದ್ದರೆ ಮತ್ತೊಮ್ಮೆ ನೀವು ಪುನಃ ಅರ್ಜಿ ತುಂಬ ಬಹುದು.
4. ಭಾರತ ದೇಶದ ಎಲ್ಲಾ ವಿದ್ಯಾರ್ಥಿಗಳೂ ಸಹ ಅಪ್ಲೈ ಮಾಡಬಹುದು.
5. 25 ವರ್ಷದೊಳಗಿನ ವಿದ್ಯಾರ್ಥಿಗಳು ಇದಕ್ಕೆ ಅಪ್ಲೈ ಮಾಡಬಹುದು.
6. ನಿಮ್ಮ ಕುಟುಂಬದ ಆದಾಯದ ಮೇಲೆ ನಿಮ್ಮ ವಿದ್ಯಾರ್ಥಿ ವೇತನದ ಮೊತ್ತ ನಿರ್ದಾರವಾಗುತ್ತದೆ. 2 ರಿಂದ 6 ಲಕ್ಷದವರೆಗೆ ನೀವು ವಿದ್ಯಾರ್ಥಿ ವೇತನ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
1. ಮೊದಲನೇಯದಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
2. ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
3. ಮುಖಪುಟ ತೆರೆಯುತ್ತದೆ
4. ಅವರು ನೀಡಿದ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ
5. ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳಿ
6. ಸರಿಯಾದ ಸಂಪರ್ಕ ಸಂಖ್ಯೆ ನೀಡಿ
7. ಇ-ಮೇಲ್ ಐಡಿ ಸರಿಯಾಗಿ ನಮೂದಿಸಿ
8. ಕ್ಯಾಪ್ಚಾ ನೀಡುತ್ತಾರೆ ಅದನ್ನು ಸರಿಯಾಗಿ ತುಂಬಿ
9. ಮತ್ತೊಮ್ಮೆ ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದ್ದೀರಾ ಎಂದು ಪರಿಶೀಲಿಸಿ
10. ಕೊನೆಯದಾಗಿ ಸಬ್ಮೀಟ್ ಕೊಡಿ, ಸೇವ್ ಮಾಡಿ
11. ಒಂದು ಹಾರ್ಡ್ ಕಾಫಿ ತೆಗೆದುಕೊಳ್ಳಿ
ನೀವು ಇದಕ್ಕೆ ಆಯ್ಕೆ ಯಾಗಬೇಕು ಎಂದಾದರೆ ಒಂದು ಪರೀಕ್ಷೆ ಪಾಸ್ ಆಗಬೇಕು ಅದು ಈ ಸ್ಕಾಲರ್ ಶಿಪ್ಗೆ ಸಂಬಂಧಿಸಿದ ಪರೀಕ್ಷೆಯಾಗಿದ್ದು. ಆಪ್ಟಿಟ್ಯೂಡ್ ಟೆಸ್ಟ್ ಆಗಿರುತ್ತದೆ.
ಎಲ್ಲಾ ಅರ್ಜಿದಾರರು ಆನ್ಲೈನ್ ಆಪ್ಟಿಟ್ಯೂಡ್ ಪರೀಕ್ಷೆಗೆ ಉತ್ತರಿಸಲು ಪರೀಕ್ಷೆಯ ಅವಧಿಯು 60 ನಿಮಿಷಗಳು ಮತ್ತು 60 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯು ಮೌಖಿಕ ಸಾಮರ್ಥ್ಯ, ವಿಶ್ಲೇಷಣಾತ್ಮಕ ಮತ್ತು ಲಾಂಗ್ ಆನ್ಸ್ರ್ ಪ್ರಕಾರವನ್ನು ಒಳಗೊಂಡಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಅಂಕದ ಆಧಾರದ ಮೇಲೆ ನೀವು ಆಯ್ಕೆಯಾಗುತ್ತೀರೋ ಇಲ್ಲವೋ ಎಂಬುದು ತಿಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ