• ಹೋಂ
  • »
  • ನ್ಯೂಸ್
  • »
  • Jobs
  • »
  • Education News: ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿಬೇಕು; ಸೆನೆಟ್ ಸಭೆಯಲ್ಲಿ ಚರ್ಚೆ

Education News: ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿಬೇಕು; ಸೆನೆಟ್ ಸಭೆಯಲ್ಲಿ ಚರ್ಚೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಮ್ಮಲ್ಲಿರುವ ಪ್ರಬುದ್ಧ ಯುವಕರು, ಹದಿಹರೆಯದ ತರುಣರು ಬಿಹಾರವನ್ನು ಬಿಟ್ಟು ಹೋಗುತ್ತಿದ್ದಾರೆ. ಹೆಚ್ಚಿನ ಅಧ್ಯಯನ ನಡೆಸಲು ಬೇರೆ ರಾಜ್ಯಗಳಿಗೆ ಏಕೆ ತೆರಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ನಾವು ಜವಬ್ದಾರರಲ್ಲವೇ ಎಂದು ಗವರ್ನರ್ ಸಭಿಕರನ್ನು ಪ್ರಶ್ನಿಸಿದ್ದಾರೆ.

ಮುಂದೆ ಓದಿ ...
  • Share this:

ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣ (Education) ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದು ಅತ್ಯಗತ್ಯವಾಗಿದೆ ಎಂದು ಚಾನ್ಸಲರ್ ಹಾಗೂ ಬಿಹಾರದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಕರೆ ನೀಡಿದ್ದಾರೆ. ಜೆಪಿ ವಿಶ್ವವಿದ್ಯಾಲಯದ ಆಡಳಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ವಿಶ್ವನಾಥ್ (Rajendra Vishwanath) ಮಾತನಾಡಿ ಶಿಕ್ಷಣ ಎಂಬುದು ನಮ್ಮ ಸಂಸ್ಕೃತಿಯ ವಾಹಕವಾಗಿದೆ ಹಾಗೂ ಶಿಕ್ಷಣವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಾಗಿದೆ (Protect) ಎಂದು ತಿಳಿಸಿದ್ದಾರೆ.


ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ತರಬೇಕು


ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದುದು ಎಂದು ಗವರ್ನರ್ ತಿಳಿಸಿದ್ದಾರೆ. ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವುದು ಅವರ ಸುಂದರ ಭವಿಷ್ಯಕ್ಕೆ ಬುನಾದಿಯಾಗಿದೆ ಎಂದು ತಿಳಿಸಿದರು. ಬಿಹಾರದ ಗವರ್ನರ್ ಆಗಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಗಳನ್ನು ತರುವ ವಿಷಯಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.


ಸಮಾಜ ಸುಧಾರಕರಾದ ಜಯ ಪ್ರಕಾಶ ನಾರಾಯಣರ ಆಲೋಚನೆಗಳು ಹಾಗೂ ಅವರ ಆಚಾರ ವಿಚಾರಗಳನ್ನು ನಾವು ಪಾಲಿಸಬೇಕು ಹಾಗೂ ಅವರ ಸಿದ್ಧಾಂತಗಳಿಗೆ ಬದ್ಧರಾಗಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ


ಬಿಹಾರದ ಯುವಕರು ಹೆಚ್ಚಿನ ಓದಿಗೆ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ


ನಮ್ಮಲ್ಲಿರುವ ಪ್ರಬುದ್ಧ ಯುವಕರು, ಹದಿಹರೆಯದ ತರುಣರು ಬಿಹಾರವನ್ನು ಬಿಟ್ಟು ಹೋಗುತ್ತಿದ್ದಾರೆ. ಹೆಚ್ಚಿನ ಅಧ್ಯಯನ ನಡೆಸಲು ಬೇರೆ ರಾಜ್ಯಗಳಿಗೆ ಏಕೆ ತೆರಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ನಾವು ಜವಬ್ದಾರರಲ್ಲವೇ ಎಂದು ಗವರ್ನರ್ ಸಭಿಕರನ್ನು ಪ್ರಶ್ನಿಸಿದ್ದಾರೆ.


ಸೆನೆಟ್ ಸಭೆಯಲ್ಲಿ ಮೊದಲ ಬಾರಿಗೆ ಗವರ್ನರ್ ಭಾಗವಹಿಸುವಿಕೆ


ವಿಶ್ವವಿದ್ಯಾಲಯದ ಸೆನೆಟ್ ಸಭೆಯ ಅಧ್ಯಕ್ಷತೆಯನ್ನು ಕುಲಪತಿಗಳು ಹಾಗೂ ಗವರ್ನರ್ ಕೂಡ ಆಗಿರುವ ರಾಜೇಂದ್ರ ವಿಶ್ವನಾಥ್ ಇದೇ ಮೊದಲ ಬಾರಿಗೆ ವಹಿಸಿದ್ದರು.


ಇದಕ್ಕೂ ಮುನ್ನ ಸೆನೆಟ್ 2023-24ರ ಆರ್ಥಿಕ ವರ್ಷಕ್ಕೆ 499 ಕೋಟಿ ರೂಪಾಯಿ ಬಜೆಟ್‌ಗೆ ಅನುಮೋದನೆ ನೀಡಿತ್ತು. ಬಜೆಟ್ ಅನ್ನು ವೈಸ್ ಚಾನ್ಸೆಲರ್ ಪ್ರೊಫೆಸರ್ ಎಲ್‌.ಎನ್ ಸಿಂಗ್ ರೂಪಿಸಿದ್ದರು. ಇದಕ್ಕೆ ಅನುಮೋದನೆಯನ್ನು ವಿಶ್ವವಿದ್ಯಾಲಯ ಈ ಹಿಂದೆಯೇ ನೀಡಿತ್ತು.
ಬಜೆಟ್ ಅನುಮೋದನೆ


ಬಜೆಟ್ ಒಟ್ಟಾರೆ ರೂ 519.63 ಕೋಟಿಯ ಖರ್ಚುವೆಚ್ಚಗಳ ಮಾಹಿತಿಯನ್ನು ಒದಗಿಸಿದ್ದು, ಇದರಲ್ಲಿ ಸ್ಥಾಪನೆಗಳು, ಅಭಿವೃದ್ಧಿ, ಪೆನ್ಶನ್ ಹಾಗೂ ಅರಿಯರ್ಸ್ ಪಾವತಿ, ನಿರ್ಮಾಣಗಳು/ಯೋಜನೆಗಳು ಹಾಗೂ ಅಂದಾಜು ಆದಾಯ ರೂ 20.4 ಕೋಟಿ, ಹೀಗೆ ಸುಮಾರು 499 ಕೋಟಿ ರೂ.ಗಳ ಕೊರತೆಯನ್ನು ಉಳಿಸಿದೆ.


ಸಂಬಳ ಹಾಗೂ ಪೆನ್ಶನ್ ಒಳಗೊಂಡಂತೆ 46% ಡಿಯರ್‌ನೆಸ್ ಅಲೊವೆನ್ಸ್ ಒದಗಿಸುವಿಕೆಯನ್ನು ಮಾಡಿದ್ದರೂ ವಿಶ್ವವಿದ್ಯಾಲಯವು 33% ಡಿಎ ಅನ್ನು ಕೆಲಸ ನಿರ್ವಹಿಸುತ್ತಿರುವ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಪಾವತಿಸುತ್ತಿದೆ.


ಸೆನೆಟ್ ಸಭೆಯಲ್ಲಿ ಚರ್ಚೆ


ವೈಸ್ ಚಾನ್ಸಲರ್ ವಿಶ್ವವಿದ್ಯಾಲಯದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ಜನವರಿ 1992 ರಲ್ಲಿ ಬಿಹಾರದ ವಿಶ್ವವಿದ್ಯಾಲಯದ ಕಾಯ್ದೆ 1976 ಯಡಿಯಲ್ಲಿ ವಿಶ್ವವಿದ್ಯಾಲವಯವನ್ನು ಸ್ಥಾಪಿಸಿದ್ದಾಗಿ ಚಾನ್ಸಲರ್‌ಗೆ ತಿಳಿಸಿದ್ದಾರೆ.


ಪ್ರಸ್ತುತ ವಿದ್ಯಾಲಯವು 17 ಪಿಡಿ ಡಿಪಾರ್ಟ್‌ಮೆಂಟ್‌ಗಳು, 21 ಕಾಲೇಜುಗಳು, ಅನುದಾನ ಸಂಯೋಜಿತ ಕಾಲೇಜುಗಳು, 9 ಇತರ ಸಂಯೋಜಿತ ಕಾಲೇಜುಗಳು, 15 ಶಿಕ್ಷಕ ತರಬೇತಿ ಕಾಲೇಜುಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Post Office Jobs: ಪೋಸ್ಟ್ ಆಫೀಸ್ ಹುದ್ದೆ ಖಾಲಿ ಇದೆ- 10th ಪಾಸಾಗಿದ್ರೆ 63 ಸಾವಿರ ಸಂಬಳ


ಬಜೆಟ್ ಪ್ರಸ್ತಾವನೆಗೆ ಸಂಬಂಧಿಸಿದ ಚರ್ಚೆಯ ಸಮಯದಲ್ಲಿ, ಕೆಲವು ಸೆನೆಟ್ ಸದಸ್ಯರು ಈ ಬಜೆಟ್ ಅನ್ನು ಹಣಕಾಸು ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರಿಂದ ಮಾತ್ರ ಅನುಮೋದಿತಗೊಂಡಿರುವುದಾಗಿ ತಿಳಿಸಿದ್ದು, ಫಲಿತಾಂಶಗಳ ಪ್ರಕಟಣೆಯಲ್ಲಿ ವಿಳಂಬ, ಪಿಜಿ ಭೋಜ್‌ಪುರಿ ಇಲಾಖೆಯ ಪರಿಚಯವಿಲ್ಲದಿರುವುದು, ಶಿಕ್ಷಕರಿಗೆ ಬಾಕಿ ಪಾವತಿ ಇತ್ಯಾದಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.


ಬಿಹಾರದ 41ನೇ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಆಯ್ಕೆಯಾಗಿದ್ದು ಅರ್ಲೇಕರ್ ಈ ಹಿಂದೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ಕೇಂದ್ರದಿಂದ ಗವರ್ನರ್‌ಗಳಾಗಿ ನೇಮಕಗೊಂಡ ಆರು ಜನರಲ್ಲಿ ಅವರು ಸೇರಿದ್ದಾರೆ.

First published: