ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ತರಗತಿಗಳ ನಡುವಿನ ವಿದ್ಯಾರ್ಥಿಗಳ ಡ್ರಾಪ್ಔಟ್ (Dropout) ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಇದೇ ಕಾರಣ ಇಟ್ಟುಕೊಂಡು ಹತ್ತನೇ ತರಗತಿ (SSLC) ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಇಳಿಸಬೇಕು ಎಂದು ಕೋರಲಾಗಿದೆ. ಇದುವರೆಗೆ 28 ಅಂಕದಿಂದ ವಿದ್ಯಾರ್ಥಿಗಳು ಪಾಸ್ ಆಗುತ್ತಿದ್ದರು ಇದನ್ನು (Marks) 20ಕ್ಕಿಳಿಸಿ ಎಂದು ಕೇಳಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾವಾರು ಉತ್ತೀರ್ಣತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಈ ನಿರ್ಧಾರ ಪಡೆದುಕೊಳ್ಳಲು ಸೂಚಿಸಿದೆ.
ಥಿಯರಿ ಪರೀಕ್ಷೆಗಳಲ್ಲಿ ಒಟ್ಟು 80 ಅಂಕಗಳ ಪೈಕಿ ಪ್ರಸ್ತುತ 28 ಅಂಕಗಳಿಂದ 20 ಅಂಕಗಳಿಗೆ ಇಳಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ಸಮಿತಿಯು ಶುಕ್ರವಾರ ನಾಲ್ಕು ಮತ್ತು ಐದನೇ ವರದಿಗಳನ್ನು ಸಿಎಂ ಬಸವರಾಜ್ ಬಿಯೊಮ್ಮಾಯಿ ಅವರಿಗೆ ಸಲ್ಲಿಸಿತು. ಆಯೋಗದ ಪ್ರಕಾರ ಪ್ರಿ-ಯೂನಿವರ್ಸಿಟಿ (PU) ತರಗತಿಗಳಿಗೆ ಪ್ರವೇಶ ಪಡೆಯುವ ಮಕ್ಕಳ ಒಟ್ಟು ದಾಖಲಾತಿ ಅನುಪಾತವು ಎಲ್ಲಾ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಎಂದು ಹೇಳಲಾಗಿದೆ.
ಬೇರೆ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಗಳಿಸುತ್ತಿರುವಾಗ ನಮ್ಮ ರಾಜ್ಯದ ವಿದ್ಯಾರ್ಥಿಗಳು ಯಾಕೆ ಅಂಕಗಳಿಕೆಯಲ್ಲಿ ಹಿಂದುಳಿಯಬೇಕು ಎಂದು ವಿಜಯಭಾಸ್ಕರ್ ಅವರು 1,609 ಶಿಫಾರಸುಗಳನ್ನು ಸಿಎಂಗೆ ಸಲ್ಲಿಸಿದ TNIE ಗೆ ತಿಳಿಸಿದರು.
ಇದನ್ನೂ ಓದಿ: Bakery Job: ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಖಾಲಿ ಇದೆ, ಮಹಿಳೆಯರು ಅಪ್ಲೈ ಮಾಡಬಹುದು
ಎಸ್‌ಸಿ/ಎಸ್‌ಟಿಗೆ ಸೇರಿದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ ಇದು ಒಟ್ಟಾರೆ ಕಡಿಮೆ ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ನೆರೆಯ ರಾಜ್ಯಗಳ ಮಾದರಿಯಲ್ಲಿ ಆಂತರಿಕ ಮೌಲ್ಯಮಾಪನವನ್ನು ಪರಿಚಯಿಸಲು ಸಮಿತಿಯು ಶಿಫಾರಸು ಮಾಡಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ವಿಜ್ಞಾನ ವಿಷಯಗಳಲ್ಲಿ 15 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ ಮತ್ತು ಭಾಷೆಗಳಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಬೇಕು ಎಂದು ಹೇಳಿದೆ.
ಪ್ರಥಮ ಪಿಯು ಮತ್ತು ದ್ವಿತೀಯ ಪಿಯು ತರಗತಿಗಳ ನಡುವಿನ ವಿದ್ಯಾರ್ಥಿಗಳ ಡ್ರಾಪ್ಔಟ್ ಪ್ರಮಾಣವನ್ನು ವರದಿಯು ಎತ್ತಿ ತೋರಿಸುತ್ತದೆ.ಇದಲ್ಲದೆ 100 ಮೀಟರ್ ವ್ಯಾಪ್ತಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳು, ಉನ್ನತ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳನ್ನು ವಿಲೀನಗೊಳಿಸಲು ಸಮಿತಿಯು ಶಿಫಾರಸು ಮಾಡಿದೆ. ಪ್ರಸ್ತುತ, 100 ಮೀಟರ್ ಪ್ರದೇಶದಲ್ಲಿ ವಿವಿಧ ಕಟ್ಟಡಗಳಲ್ಲಿ ಸಾವಿರಾರು ಶಾಲೆಗಳಿವೆ.
ಉನ್ನತ ಪ್ರಾಥಮಿಕ ಶಾಲೆಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ನಂತರ ಹೊಸ ಪ್ರವೇಶವನ್ನು ತೆಗೆದುಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ
ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ನಾವು ಶಾಲೆಗಳನ್ನು ಮುಚ್ಚಲು ಶಿಫಾರಸು ಮಾಡುತ್ತಿಲ್ಲ ಆದರೆ ಎರಡು ಶಾಲೆಗಳನ್ನು ವಿಲೀನಗೊಳಿಸುವುದು ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಪೂರ್ವ ಸಿದ್ಧತಾ ಪರೀಕ್ಷೆ ಮಾಹಿತಿ
ಈಗಾಗಲೇ ಹತ್ತನೇ ತರಗತಿ ವಿದ್ಯಾರ್ಥಿಗಳ ಫೈನಲ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ವಿದ್ಯಾರ್ಥಿಗಳೆಲ್ಲಾ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಮತ್ತೊಂದು ಮಹತ್ತರ ಮಾಹಿತಿ ಇದೆ ಗಮನಿಸಿ.ಈ ಬಾರಿ ಇದೇ ತಿಂಗಳು ಅಂದರೆ ಫೆಬ್ರವರಿ 23 ರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ