• Home
  • »
  • News
  • »
  • jobs
  • »
  • Raichur: ಶಾಲಾ ಸಮಯದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಶಿಕ್ಷಕರು ಅಮಾನತು

Raichur: ಶಾಲಾ ಸಮಯದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಶಿಕ್ಷಕರು ಅಮಾನತು

ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಚಿನ್ನದಗಣಿ‌ ಪ್ರೌಢಶಾಲಾ ಶಿಕ್ಷಕರಾದ ಮುಖ್ಯಗುರುಗಳು ಮುರಳಿಧರ ರಾವ್, ದೈ.ಶಿ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಈ ಐದೂ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

  • Share this:

ಶಿಕ್ಷಕರು ಎಂದರೆ ವಿದ್ಯಾರ್ಥಿಗಳಿಗೆ (Students) ಮಾದರಿಯಾಗಿರಬೇಕು. ಇವರಂತೆ ನಾನೂ ಕೂಡ ಆಗ್ಬೇಕು ಅಂತ ಅನಿಸುವ ಹಾಗಿರಬೇಕು. ಶಿಕ್ಷಕರು (Teachers) ಯಾವಾಗಲೂ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿಯಾಗಿರಬೇಕು. ಬದಲಾಗಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯವನ್ನು (Future) ಹಾಳು ಮಾಡುವಂತಿರಬಾರದು. ಆದರೆ ಇಲ್ಲಿ ನಡೆದ ಒಂದು ಘಟನೆ (Insident) ನೋಡಿದರೆ ಇಂಥಾಶಿಕ್ಷಕರೂ ಇರ್ತಾರಾ ಅನಿಸಿಬಿಡುತ್ತದೆ.


ರಾಯಚೂರು ಪ್ರೌಢಶಾಲಾ ಶಿಕ್ಷಕರು ಶಾಲಾ ಅವಧಿಯಲ್ಲಿ ಕುಡಿದು ಪಾರ್ಟಿ ಮಾಡುತ್ತಿರುವ ಸಂಗತಿ ಪಾಲಕರು ಮಾಡಿದ ವಿಡಿಯೋದಿಂದಾಗಿ ಹೊರಬಿದ್ದಿತ್ತು. ಈಗ ಅದೇ ಪ್ರಕರಣ ಶಿಕ್ಷಕರ ಅಮಾನತಿಗೆ ಕಾರಣವಾಗಿದೆ. ಈ ರೀತಿ ವರ್ತನೆಯನ್ನು ಕಂಢಿಸಿ ಆ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತರಗತಿಗೆ ಚಕ್ಕರ್ ಹೊಡೆದು ಎಣ್ಣೆ ಪಾರ್ಟಿ ಮಾಡಿದ್ದ ಐದೂ ಶಿಕ್ಷಕರು ಕೂಡಾ ಅಮಾನತಾಗಿದ್ದಾರೆ.


ಕಲಬುರಗಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಂದ ಈ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಅಪರ ಆಯುಕ್ತರಾದ ಗರೀಮಾ ಪಂವಾರ್ ಈ ಶಿಕ್ಷಕರನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ: Raichur: ಶಾಲೆ ಬಿಟ್ಟು ನಿತ್ಯ ಬಾರ್ ಕದ ತಟ್ಟುತ್ತಿರುವ ಶಿಕ್ಷಕರು! ಇದೆಂಥಾ ವಿಪರ್ಯಾಸ


ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಚಿನ್ನದಗಣಿ‌ ಪ್ರೌಢಶಾಲಾ ಶಿಕ್ಷಕರಾದ ಮುಖ್ಯಗುರುಗಳು ಮುರಳಿಧರ ರಾವ್, ದೈ.ಶಿ ಚನ್ನಪ್ಪ ರಾಠೋಡ್, ಲಿಂಗಪ್ಪ ಪೂಜಾರ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಇವಿಷ್ಟು ಶಿಕ್ಷಕರೂ ಸಹ ಅಮಾನತಾಗಿದ್ದಾರೆ.


ಶಾಲಾ ಸಮಯದಲ್ಲೇ ಎಣ್ಣೆ ಪಾರ್ಟಿ


ಮದ್ಯಾಹ್ನದ ವೇಳೆ ಶಾಲೆ ಬಿಟ್ಟು ಡಾಬಾಕ್ಕೆ ತೆರಳಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಶಿಕ್ಷಕರ ಗ್ಯಾಂಗ್ಅನ್ನು ಪಾಲಕರೇ ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸಾಕ್ಷಿ ಸಮೇತವಾಗಿ ಹಿಡಿದು ಒಪ್ಪಿಸಿದ್ದಾರೆ. ಇದರಿಂದಾಗಿ ಈ ಐದೂ ಜನ ಶಿಕ್ಷಕರನ್ನು ಸಸ್ಪೆಂಡ್​ ಮಾಡಲಾಗಿದೆ. ಶಿಕ್ಷಕರ ವೃತ್ತಿ ಘನತೆ ಗೌರವ ಹಾಳು ಮಾಡಿದ್ದ ಇವರಿಗೆ ಈ ರೀತಿ ಉತ್ತರ ನೀಡಲಾಗಿದೆ.


ಐದು ಜನ ಶಿಕ್ಷಕರ ಅಮಾನತು


ಐವರು ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕಾಗಿ ಆಯುಕ್ತರಿಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಈಗ ಆಯುಕ್ತರೂ ಸಹ ಸರಿಯಾದ ಕ್ರಮ ಕೈಗೊಂಡಿದ್ದಾರೆ. ಡಿಡಿಪಿಐ ವರದಿಯಂತೆ ಮುಖ್ಯಶಿಕ್ಷಕ ಮುರುಳೀಧರ್ ರಾವ್ ಸೇರಿದಂತೆ ಐವರ ಅಮಾನತು ನಡೆದಿದೆ. ಲಿಂಗಪ್ಪ ಪೂಜಾರಿ, ಚೆನ್ನಪ್ಪ ರಾಠೋಡ್, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಅಮಾನತುಗೊಂಡ ಸಹ ಶಿಕ್ಷಕರು.


ಈ ಹಿಂದೆ ನಡೆದದ್ದೇನು?
ಮದ್ಯಾಹ್ನದ ತರಗತಿಗಳನ್ನ ಬಂಕ್ ಮಾಡಿ, ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿದ ಶಿಕ್ಷಕರನ್ನು ವಿಚಾರಿಸಲು ಹೋದಾಗ ಶಿಕ್ಷಕರು ಶಾಲೆಯಲ್ಲಿ ಇರಲೇ ಇಲ್ಲ. ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಿ ನೇರವಾಗಿ ಟೀಚರ್ಸ್ ಬಾರ್ ಸೇರಿದ್ದರು. ಶಿಕ್ಷಕರ ಈ ರೀತಿಯ ವರ್ತನೆಯನ್ನು ಗಮನಿಸಿದ ಪಾಲಕರು ಶಿಕ್ಷಕರ ನಡತೆಗೆ ಬೇಸತ್ತು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಶಾಲೆಯ ತರಗತಿ ಕೊಠಡಿಗಳಲ್ಲೂ ಮೊಬೈಲ್ ನಲ್ಲಿ ಜಿಪಿಎಸ್ ಸಮೇತ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶಾಲೆ ಬಿಟ್ಟು ನಿತ್ಯ ಬಾರ್​ಗೆ ತೆರಳಿ ಕುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. 3.42 ನಿಮಿಷಕ್ಕೆ ಶಾಲೆ ಬಿಟ್ಟು ಬಾರ್ ಹೊಕ್ಕಾಗ ಪೋಷಕರು ತೆಗೆದ ಫೋಟೋದಲ್ಲಿ ಸಮಯ ಮೆನ್ಷನ್ ಆಗಿದೆ.

First published: