ಮುಂಬೈ: ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 25% ಶಿಕ್ಷಣ ಹಕ್ಕು (RTE) ಕೋಟಾದಡಿ ಪ್ರವೇಶ ಪ್ರಕ್ರಿಯೆಯು ಫೆಬ್ರವರಿ (February) 20 ರಿಂದ ಆನ್‌ಲೈನ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಮಹಾರಾಷ್ಟ್ರ ಪ್ರಾಥಮಿಕ ಶಿಕ್ಷಣ (Education Department) ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ 8,600 ಶಾಲೆಗಳಲ್ಲಿ ಈ ಯೋಜನೆಯಡಿ ಒಂದು ಲಕ್ಷಕ್ಕೂ ಹೆಚ್ಚು ಸೀಟುಗಳಿವೆ. ಈ ವರ್ಷ 9,230 ಶಾಲೆಗಳು (Schools) ನೋಂದಣಿಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ಜಿಲ್ಲೆಯಲ್ಲಿ 931 ಶಾಲೆಗಳಲ್ಲಿ 15,622 ಸೀಟುಗಳು ಲಭ್ಯವಿವೆ. ಇನ್ನೂ 400ಕ್ಕೂ ಹೆಚ್ಚು ಶಾಲೆಗಳು ನೋಂದಣಿಗೆ ಬಾಕಿ ಇರುವುದರಿಂದ ಸೀಟುಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಹಾರಾಷ್ಟ್ರ ಶಿಕ್ಷಣ ಸಚಿವ ಗೋಸಾವಿ.
ಮಹಾರಾಷ್ಟ್ರ ಶಿಕ್ಷಣ ಸಚಿವರಿಂದ ಮನವಿ
ಆದರೆ ಈ ಪ್ರವೇಶ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳ ಪ್ರತಿಕ್ರಿಯೆ ಈ ಹಿಂದಿಗಿಂತಲೂ ಕಡಿಮೆಯಾಗಿದೆ. ನೋಂದಾಯಿತ ಶಾಲೆಗಳ ಪರಿಶೀಲನೆಗೆ ಒಟ್ಟು ಒಂಬತ್ತು ದಿನಗಳ ಅಗತ್ಯವಿದೆ. ಪಾಲಕರು ತಮ್ಮ ಮಕ್ಕಳ ಪ್ರವೇಶಕ್ಕಾಗಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ವಿನಂತಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷ ಶರದ್ ಗೋಸಾವಿ ಮಾಹಿತಿ ನೀಡಿದ್ದಾರೆ. ಪ್ರವೇಶ ಬಯಸುವ ಪೋಷಕರು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. ವೆಬ್ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Exam Fees: SSLC ವಿದ್ಯಾರ್ಥಿಗಳಿಂದ ಪೂರ್ವ ಸಿದ್ಧತಾ ಪರೀಕ್ಷೆಗೂ ಶುಲ್ಕ ಸಂಗ್ರಹಿಸಿದ ಶಿಕ್ಷಣ ಇಲಾಖೆ
ವಿದೇಶಗಳಲ್ಲೇ ಓದಬೇಕು ಎಂಬ ವ್ಯಾಮೋಹ ಬೇಡ
ವಿದೇಶದಲ್ಲಿ ಬೋಧನಾ ಶುಲ್ಕ ಗಗನಕ್ಕೇರಿದ್ದರೂ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಅದನ್ನು ಬಿಟ್ಟು ನೀವು ಭಾರತದಲ್ಲೇ ಶಿಕ್ಷಣ ಪಡೆಯಬೇಕು ಎಂದು ಬಯಸಿದರೆ ಭಾರತದಲ್ಲೇ ಆ ವ್ಯವಸ್ಥೆಗಳ ನಿರ್ಮಾಣ ಆಗುತ್ತಿದೆ. ಅಷ್ಟು ಶುಲ್ಕ ಪಾವತಿಸಿ ನೀವು ವಿದೇಶಕ್ಕೇ ಹೋಗಿ ಅಭ್ಯಾಸ ಮಾಡಬೇಕು ಎಂದೇನು ಇಲ್ಲ.
ಅಷ್ಟೇ ಅಲ್ಲ, ಇನ್ನು ಮುಂದೆ ಭಾರತದಲ್ಲೇ ವಿದೇಶಿ ವಿದ್ಯಾಲಯಗಳ ಸ್ಥಾಪನೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಲವು ಕ್ರಮ
ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಪ್ರೌಢ ಶಿಕ್ಷಣ ಮಂಡಳಿಯು ಉತ್ತಮ ಸೇವೆಯನ್ನು ನೀಡುತ್ತಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಂಡಿದೆ.
ಇದನ್ನೂ ಓದಿ: Govt Job Preparation: ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಹೀಗೆ ಉತ್ತರಿಸಿದ್ರೆ ಯಶಸ್ವಿ ಆಗುತ್ತೀರಿ
ಹಲವು ಹೊಸ ವ್ಯವಸ್ಥೆ ಜಾರಿಗೊಳಿಸಿದ ಮಹಾರಾಷ್ಟ್ರ ಶಿಕ್ಷಣ ಇಲಾಖೆ
ಫೆಬ್ರವರಿಯಿಂದ ಪ್ರಾರಂಭವಾಗಿರುವ ಪರೀಕ್ಷೆಗಳಿಗೆ ಮೊಬೈಲ್ ಆಧಾರಿತ ಜಿಪಿಎಸ್ ವ್ಯವಸ್ಥೆಯ ಸಹಾಯದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದ ಮಹಾರಾಷ್ಟ್ರ ಶಿಕ್ಷಣ ಇಲಾಖೆ. ಸೀಲ್ ಮಾಡಿದ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ಮೊಬೈಲ್ ಆಧಾರಿತ ಜಿಪಿಎಸ್ ವ್ಯವಸ್ಥೆಯ ಸಹಾಯವನ್ನು ಬಳಸುವ ನೂತನ ವ್ಯವಸ್ಥೆಯನ್ನು ಕೂಡಾ ಮಹಾರಾಷ್ಟ್ರದಲ್ಲಿ ಈ ಬಾರಿ ಜಾರಿಗೆ ತರಲಾಗಿದೆ.
ಮಹಾರಾಷ್ಟ್ರ ಶಿಕ್ಷಣ ಸಚಿವ ಗೋಸಾವಿ ಪ್ರಯತ್ನ
ಹೌದು ಮಹಾರಾಷ್ಟ್ರ ಶಿಕ್ಷಣ ಸಚಿವ ಗೋಸಾವಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಸರಿಪಡಿಸುವ ಹಾಗೂ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ಇದರಿಂದ ಶೈಕ್ಷಣಿಕ ಸುಧಾರಣೆಯೊಟ್ಟಿಗೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸುಧಾರಣೆಗಳು ಆಗುವ ಸಾಧ್ಯತೆ ಈ ಬಾರಿ ಹೆಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ