ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ನೀಡುವ ಎಷ್ಟೋ ವಿದ್ಯಾರ್ಥಿ ವೇತನಗಳು ನಿಮ್ಮ ಶೈಕ್ಷಣಿಕ (Education) ಸಾಧನೆಗೆ ಪ್ರೇರಕವಾಗುತ್ತವೆ. ಅಂತಹದೇ ಇನ್ನೊಂದು ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಇಲ್ಲಿದೆ. ನೀವು ಈ ವಿದ್ಯಾರ್ಥಿ ವೇತನಕ್ಕೆ ಇನ್ನು ಸ್ವಲ್ಪದಿನದ ಒಳಗೇ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಪುರವಂಕರ ವಿದ್ಯಾರ್ಥಿವೇತನ (Puravankara Scholarship) ಎಂಬ ಹೆಸರಿನಲ್ಲಿ ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಖಂಡಿತ ನೀವೂ ಅಪ್ಲೈ ಮಾಡಿದರೆ ಹಣ ಬರುತ್ತದೆ. ಆದರೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಇನ್ನೊಂದು ವಾರ ಮಾತ್ರ ಬಾಕಿ ಇದೆ.
ಈ ಸ್ಕಾಲರ್ ಶಿಪ್ ಪಡೆಯಬೇಕು ಎಂದರೆ ನೀವು ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ ಹಾಗಿದ್ದರೆ ಮಾತ್ರ ನೀವು ಈ ಸ್ಕಾಲರ್ ಶಿಪ್ಗೆ ಅಪ್ಲೈ ಮಾಡಬಹುದು. ಹಾಗಾದರೆ ನೀವು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರ ಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕನಿಷ್ಠ ಅರ್ಹತಾ ಮಾನದಂಡಗಳು ಅರ್ಹತಾ ಮಾನದಂಡಗಳು :
10 ನೇ ತರಗತಿಯಲ್ಲಿ ಕನಿಷ್ಠ 60%, ತರಗತಿ 12 ರಲ್ಲಿ ಕನಿಷ್ಠ 60%, ಅಂಕಗಳನ್ನು ನೀವು ಪಡೆದಿರಬೇಕಾಗುತ್ತದೆ.
ಲಿಂಗ: ಗಂಡು, ಹೆಣ್ಣು, ಇತರೆ
ಕುಟುಂಬದ ಆದಾಯ 500000.00 ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗೆ ಮಾತ್ರ ಯೋಜನೆ ಲಭ್ಯವಿದೆ.
ಹಣಕಾಸು ವರ್ಷ 2022-2023
ಇದನ್ನೂ ಓದಿ: Punjab: ಪಂಜಾಬ್ನ 12 ಸರ್ಕಾರಿ ಶಾಲೆಗಳಿಗೆ ಮರುನಾಮಕರಣ ಮಾಡಿದ ಆಪ್ ಸರ್ಕಾರ
25/12/2022 ರಿಂದ ಅಪ್ಲಿಕೇಶನ್ ಸ್ವೀಕರಿಸಲಾಗುತ್ತಿದೆ.
15/01/2023 ರವರೆಗೆ ಮಾನ್ಯವಾಗಿರುತ್ತದೆ. ಅದಕ್ಕಿಂತ ಮುಂಚಿತವಾಗಿ ನೀವು ಅಪ್ಲೈ ಮಾಡಬೇಕಾಗುತ್ತದೆ. ಕೊನೆ ದಿನಾಂಕಕ್ಕೂ ನಂತರ ಅಪ್ಲೈ ಮಾಡಿದರೆ ಸ್ವೀಕರಿಸಲಾಗುವುದಿಲ್ಲ.
ವಿದ್ಯಾರ್ಥಿವೇತನ ಮೊತ್ತ (INR) 50000.00 ಅಂದರೆ ವರ್ಷಕ್ಕೆ 50 ಸಾವಿರ ಸ್ಕಾಲರ್ ಶಿಪ್ ನಿಮಗೆ ದೊರೆಯಲಿದೆ.
1) ಯಾರು ಅರ್ಜಿ ಸಲ್ಲಿಸಬೇಕು?
ಸಿವಿಲ್ ಇಂಜಿನಿಯರಿಂಗ್ನಲ್ಲಿ ಮಾತ್ರ ಬಿಇಯಂತಹ ಪೂರ್ಣ ಸಮಯದ ಪದವಿಪೂರ್ವ ಕೋರ್ಸ್ ಅನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು
2) ಯಾವ ಕೋರ್ಸುಗಳು ಈ ಯೋಜನೆಯಡಿ ಬರುತ್ತವೆ?
AICTE/NAAC/UGC/ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಗಳಿಂದ ಯಾವುದೇ ಪದವಿಪೂರ್ವ ಕೋರ್ಸ್ಗಳು.
3) ಅರ್ಜಿದಾರರು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವೇ?
ಹೌದು
4) ಯಾವ ಜಾತಿಯವರು ಅಪ್ಲೈ ಮಾಡಬಹುದು?
ಯಾರು ಬೇಕಾದರೂ ಅಪ್ಲೈ ಮಾಡಬಹುದು
ಅಗತ್ಯ ದಾಖಲೆಗಳು
1) ಅರ್ಜಿದಾರರ ಫೋಟೋ
2) ಗುರುತಿನ ಪುರಾವೆ
3) ವಿಳಾಸದ ಪುರಾವೆ
4) ಆದಾಯದ ಪುರಾವೆ
5) ವಿದ್ಯಾರ್ಥಿ ಬ್ಯಾಂಕ್ ಪಾಸ್ಬುಕ್/ಕಿಯೋಸ್ಕ್
6) ಕಳೆದ ಶೈಕ್ಷಣಿಕ ವರ್ಷದ ಮಾರ್ಕ್ಶೀಟ್
7) ಪ್ರಸ್ತುತ ವರ್ಷದ ಶುಲ್ಕ ರಶೀದಿಗಳು
8) ಪ್ರವೇಶ ಪತ್ರ / ಸಂಸ್ಥೆಯಿಂದ ವಿಶ್ವಾಸಾರ್ಹ ಪ್ರಮಾಣಪತ್ರ
9) ಇತ್ತೀಚಿನ ಕಾಲೇಜು ಅಂಕಪಟ್ಟಿಗಳು (ಮೊದಲ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ)
ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು ಮತ್ತು .jpeg .png ಫೈಲ್ನಲ್ಲಿ ಮಾತ್ರ ಇರಬೇಕು. ಇವಿಷ್ಟೂ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ.
ನೀವು ಈ ಮೇಲ್ ಮೂಕಲ ಸಂಪರ್ಕಿಸಿ
ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಮೇಲ್ ಮಾಡಿ: vidyasaarathi@nsdl.co.in
ಕುಂದುಕೊರತೆ ಸಂಬಂಧಿತ ಪ್ರಶ್ನೆಗಳಿಗೆ: vidyasaarathi@nsdl.co.in
ಈ ಮೂಲಕ ನೀವು ಅಪ್ಲೈ ಮಾಡಬಹುದು
ಅಧಿಕೃತ ಜಾಲತಾಣದಲ್ಲಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಿದೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಸಾರಥಿ ಸ್ಕಾಲರ್ ಶಿಪ್ ಅಡಿಯಲ್ಲೇ ಇದೂ ಕೂಡ ಒಂದು ಆದರೆ ನೀವಿದನ್ನು ಕಡ್ಡಾಯವಾಗಿ ಕೊನೆ ದಿನಾಂಕದೊಳಗೆ ಅಪ್ಲೈ ಮಾಡಬೇಕು. ನಿಮ್ಮ ಶಾಲಾ ಶುಲ್ಕ ಹಾಗೂ ಇನ್ನಿತರ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ನೀವು ಇದನ್ನು ಬಳಸಬೇಕು. ಹಾಸ್ಟೇಲ್ ಅಥವಾ ಪಠ್ಯ ಪುಸ್ತಕ ಕೊಳ್ಳುವ ಉದ್ದೇಶಕ್ಕಾಗಿ ಹಣವನ್ನು ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ