ಸಾಮಾನ್ಯವಾಗಿ ನಮ್ಮಲ್ಲಿ ಗೌರವವನ್ನು ಸೂಚಿಸುವ ಸಲುವಾಗಿ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಸಹ ನಮ್ಮ ಹಿರಿಯರ ತ್ಯಾಗ ಮತ್ತು ಒಳ್ಳೆಯ ಕೆಲಸಗಳ ಬಗ್ಗೆ ಅರಿವು ಇರಲಿ ಅಂತ ರಸ್ತೆಗಳಿಗೆ (Road), ಸಾರಿಗೆ ನಿಲ್ದಾಣಗಳಿಗೆ, ಕಾಲೋನಿಗಳಿಗೆ ಖ್ಯಾತ ವ್ಯಕ್ತಿಗಳ (Persons) ಹೆಸರುಗಳನ್ನು ಇರಿಸುವುದನ್ನು ನಾವೆಲ್ಲಾ ನೋಡುತ್ತಿರುತ್ತೇವೆ. ಈಗ ಇಲ್ಲಿಯೂ ಸಹ ಒಂದು ರಾಜ್ಯದಲ್ಲಿ (State) ಇಂತಹದೇ ಕೆಲಸ (Work) ಮಾಡಿದ್ದಾರೆ ನೋಡಿ.
ಪಂಜಾಬ್ ರಾಜ್ಯದಲ್ಲಿ ಆಪ್ ಸರ್ಕಾರ ಮಾಡಿದ ಕೆಲಸವೇನು?
ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮ ಸೈನಿಕರು ಮತ್ತು ಖ್ಯಾತ ಬರಹಗಾರರು, ಸಮಾಜ ಸುಧಾರಕರು ಮತ್ತು ಹೀಗೆ ಜನಪ್ರಿಯ ಹಿರಿಯ ವ್ಯಕ್ತಿಗಳಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಪಂಜಾಬ್ನ ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರವು 12 ಸರ್ಕಾರಿ ಶಾಲೆಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಮರುನಾಮಕರಣ ಮಾಡಿದೆ.
ಪಂಜಾಬ್ ರಾಜ್ಯದ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಸರ್ಕಾರಿ ಶಾಲೆಗಳ ಹೆಸರನ್ನು ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಬದಲಾಯಿಸಲು ಇಲಾಖೆ ನಿರ್ಧರಿಸಿದೆ, ಇದರಿಂದ ಅವರು ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತಾರೆ ಎಂದು ಹೇಳಿದರು.
ಯಾವೆಲ್ಲಾ ಸರ್ಕಾರಿ ಶಾಲೆಗಳಿಗೆ ಮರುನಾಮಕರಣ ಮಾಡಿದ್ದಾರೆ ನೋಡಿ..
ರಾಜ್ಯದ ಬರ್ನಾಲಾ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಸ್ಮಾರ್ಟ್ ಶಾಲೆಯ ಹೆಸರನ್ನು ರಾಮ್ ಸರೂಪ್ ಅಂಖಿ ಸರ್ಕಾರಿ ಪ್ರಾಥಮಿಕ ಶಾಲೆ ಧೌಲಾ ಎಂದು ಬದಲಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: Exam Tips: ಪರೀಕ್ಷೆಗೆ 40 ದಿನ ಬಾಕಿ ಇದ್ದರೂ 90 ಅಂಕ ಗಳಿಸಲು ಇಲ್ಲಿದೆ ಟಿಪ್ಸ್!
ಅಂತೆಯೇ, ಬಟಿಂಡಾ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹರಿಜನ ಬಸ್ತಿ ಕೋಟ್ ಫಟ್ಟಾದ ಹೆಸರನ್ನು ಶಹೀದ್ ಕರ್ತಾರ್ ಸಿಂಗ್ ಸರಭಾ ಸರ್ಕಾರಿ ಪ್ರಾಥಮಿಕ ಶಾಲೆ ಎಂದು ಬದಲಾಯಿಸಲಾಗಿದೆ. ಉಧಮ್ ಸಿಂಗ್ ನಗರ್ ಬಟಿಂಡಾದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಸರನ್ನು ಶಹೀದ್ ಉಧಮ್ ಸಿಂಗ್ ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಮಾಧ್ಯಮಿಕ ಶಾಲೆ ಪೊಹ್ಲೋಮಾಜ್ರಾ ಅನ್ನು ಶಹೀದ್ ಮಲ್ಕೀತ್ ಸಿಂಗ್ ಸರ್ಕಾರಿ ಮಾಧ್ಯಮಿಕ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ.
ಬಾಲಕಿಯರ ಹಿರಿಯ ಮಾಧ್ಯಮಿಕ ಸ್ಮಾರ್ಟ್ ಶಾಲೆ ಎಂದು ಮರುನಾಮಕರಣ
ಗುರುದಾಸ್ಪುರ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆ ಪಬರಲಿ ಕಲನ್ ಅನ್ನು ಶಹೀದ್ ಲ್ಯಾನ್ಸ್ ನಾಯಕ್ ರಾಜಿಂದರ್ ಸಿಂಗ್ ಸರ್ಕಾರಿ ಪ್ರೌಢಶಾಲೆ, ಹೋಶಿಯಾರ್ಪುರ ಜಿಲ್ಲೆಯಲ್ಲಿರುವ ಹಾಜಿಪುರ್ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯನ್ನು ಶಹೀದ್ ಬಖ್ತಬರ್ ಸಿಂಗ್ ಸರ್ಕಾರಿ ಬಾಲಕಿಯರ ಹಿರಿಯ ಮಾಧ್ಯಮಿಕ ಸ್ಮಾರ್ಟ್ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಲಿಚ್ಪುರ್ ಕಲೋಟನ್, ಹೋಶಿಯಾರ್ಪುರ್ ಅನ್ನು ಶಹೀದ್ ಸುಬೇದಾರ್ ರಾಜೇಶ್ ಕುಮಾರ್ ಸರ್ಕಾರಿ ಪ್ರಾಥಮಿಕ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಹೆಸರು
ಪಟಿಯಾಲ ಜಿಲ್ಲೆಯ ರುರ್ಕಿಯ ಸರ್ಕಾರಿ ಪ್ರಾಥಮಿಕ ಸ್ಮಾರ್ಟ್ ಶಾಲೆ ಸ್ವಾತಂತ್ರ್ಯ ಹೋರಾಟಗಾರ ಭಾಯಿ ನಾನು ಸಿಂಗ್ ಸರ್ಕಾರಿ ಪ್ರಾಥಮಿಕ ಸ್ಮಾರ್ಟ್ ಶಾಲೆ, ಪಟಿಯಾಲ ಜಿಲ್ಲೆಯಲ್ಲಿರುವ ಸರ್ಕಾರಿ ಹೈ ಸ್ಮಾರ್ಟ್ ಶಾಲೆ ಗ್ಯಾಂಗ್ರೋಲಾ ಅನ್ನು ಶಹೀದ್ ಉಧಮ್ ಸಿಂಗ್ ಸರ್ಕಾರಿ ಪ್ರೌಢಶಾಲೆ ಎಂದು ಮರುನಾಮಕರಣ ಮಾಡಲಾಯಿತು, ಪಠಾಣ್ಕೋಟ್ ಜಿಲ್ಲೆಯಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆ ಹರ್ದೋಶರನ್ ಅನ್ನು ಶಹೀದ್ ರಾಮ್ ಸಿಂಗ್ ಪಠಾನಿಯಾ ಸ್ಮಾರಕ ಸರ್ಕಾರಿ ಮಾಧ್ಯಮಿಕ ಶಾಲೆ ಎಂದು ಮರುನಾಮಕರಣ ಮಾಡಲಾಯಿತು.
ಶಹೀದ್ ಗುರುಪ್ರೀತ್ ಸಿಂಗ್ ಬಾಜ್ವಾ ಸರ್ಕಾರಿ ಪ್ರಾಥಮಿಕ ಶಾಲೆ
ಇನ್ನೂ ಅಮೃತಸರ್ ಜಿಲ್ಲೆಯ ಮಾಲೇರ್ಕೋಟ್ಲಾದ ಸರ್ಕಾರಿ ಪ್ರಾಥಮಿಕ ಶಾಲೆ ಬಡೇಶೆಯನ್ನು ಶಹೀದ್ ಗುರುಪ್ರೀತ್ ಸಿಂಗ್ ಬಾಜ್ವಾ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಮೃತಸರ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ ಡೇರಾ ಬಜಿಗರ್ ಎಂದು ಮರುನಾಮಕರಣ ಮಾಡಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ದೇಶನದಂತೆ, ವಿವಿಧ ಸರ್ಕಾರಿ ಶಾಲೆಗಳ ಹೆಸರುಗಳನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಹೀಗೆ ಸರ್ಕಾರಿ ಶಾಲೆಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಮರುನಾಮಕರಣ ಮಾಡುವುದು ಭವಿಷ್ಯದಲ್ಲಿಯೂ ಸಹ ಹೀಗೆಯೇ ಮುಂದುವರಿಯುತ್ತದೆ ಎಂದು ಬೈನ್ಸ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ