• Home
  • »
  • News
  • »
  • jobs
  • »
  • Punjab: ಟಾಪ್ ಸ್ಕೋರ್ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ವಿಮಾನ ಪ್ರಯಾಣ!

Punjab: ಟಾಪ್ ಸ್ಕೋರ್ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ವಿಮಾನ ಪ್ರಯಾಣ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹನ್ನೆರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಭಜನ್‌ಪ್ರೀತ್ ಕೌರ್ ಮತ್ತು ಸಿಮ್ರಂಜೀತ್ ಕೌರ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಮೃತಸರದಿಂದ ವಿಮಾನದಲ್ಲಿ ಗೋವಾಗೆ ಹೋಗಿದ್ದರು.

  • Share this:

10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಓದುವಂತೆ ಮಾಡಲು ಹಲವಾರು ರೀತಿಯಲ್ಲಿ ಶಿಕ್ಷಕರು (Teacher) ಹಾಗೂ ಪಾಲಕರು (Parents) ಪ್ರಯತ್ನ ಪಡುತ್ತಾರೆ. ಏನು ಮಾಡಿದರೆ ವಿದ್ಯಾರ್ಥಿಗಳು ಓದಲು ಮುಂದಾಗುತ್ತಾರೆ ಎಂಬುದನ್ನು ಅವರು ತಿಳಿದುಕೊಂಡು ಅದೇ ರೀತಿ ಪ್ರಯತ್ನಿಸುತ್ತಾರೆ. ಕೆಲವು ಆಸೆ ಆಮಿಷಗಳನ್ನು ಒಡ್ಡುತ್ತಾರೆ. ಇಲ್ಲವಾದರೆ ಯಾವುದಾದರೂ ಉಡುಗೊರೆ ಕೊಡುವುದಾಗಿ ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕರು ಆಶ್ವಸನೆ ನೀಡಿರುವ ಕೊಡುಗೆ (Gift) ಕೇಳಿದ್ರೆ ನೀವು ದಂಗಾಗ್ತೀರಾ.


ಓದಲು ಪ್ರೇರೇಪಿಸಲು ಪ್ರಾಂಶುಪಾಲರು ಮಕ್ಕಳ ಆಸೆಗಳನ್ನು ಕೇಳಿದರು. ನಂತರ ನೀವು ಹೆಚ್ಚಿನ ಅಂಕಗಳಿಸಿದರೆ ಖಂಡಿತ ನಾನು ನಿಮಗೆ ನೀವು ಕೇಳಿದ ಉಡುಗೊರೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳು ಕೇಳಿದ ಉಡುಗೊರೆ ಏನು ಗೊತ್ತಾ ಇಲ್ಲಿದೆ ನೋಡಿ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯ ಬೋರ್ಡ್ ಪರೀಕ್ಷೆಗಳ ಮೆರಿಟ್ ಸ್ಥಾನ ಪಡೆದುಕೊಂಡಾಗ ಅವರ ಆಸೆಯನ್ನು ಪೂರೈಸಲು ಇವರು ಮುಂದಾಗಿದ್ದಾರೆ.


ಫಿರೋಜ್‌ಪುರದ ಜಿರಾದಲ್ಲಿರುವ ಶಹೀದ್ ಗುರುದಾಸ್ ರಾಮ್ ಸ್ಮಾರಕ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ (ಬಾಲಕಿಯರ) ಪ್ರಾಂಶುಪಾಲರಾದ ರಾಕೇಶ್ ಶರ್ಮಾ ಅವರು ವಿದ್ಯಾರ್ಥಿಗಳ ವಿಮಾನ ಪ್ರಯಾಣದ ವೆಚ್ಚವನ್ನು ತಮ್ಮ ಹಣದಿಂದ ಭರಿಸುತ್ತಿದ್ದಾರೆ.


ಇದನ್ನೂ ಓದಿ: Vedic Mathematics: ವೇದ ಗಣಿತದ ಸಂಪೂರ್ಣ ಸೂತ್ರಗಳ ಪಟ್ಟಿ ಇಲ್ಲಿದೆ ನೋಡಿ


ಶರ್ಮಾ ಪ್ರಕಾರ, ಶಾಲೆಯ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಕಳೆದ 12 ವರ್ಷಗಳಿಂದ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಈ ಬಾರಿ ವಿದ್ಯಾರ್ಥಿಗಳು ಮೆರಿಟ್​ ಪಡೆದಿದ್ದರು ಇದರಿಂದ ಶಿಕ್ಷಕರಿಗೂ ಸಂತೋಷವಾಗಿದೆ. ವಿದ್ಯಾರ್ಥಿಗಳು ವಿಮಾನದ ಮೂಲಕ ಪ್ರಯಾಣ ಮಾಡಲು ಅನುವುಮಾಡಿಕೊಟ್ಟರು ಮತ್ತು ಅವರ ಆಸೆಯನ್ನು ಪ್ರಾಂಶುಪಾಲರೇ ಪೂರೈಸಿದ್ದಾರೆ.


ಮೆರಿಟ್ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳು


10 ಅಥವಾ 12 ನೇ ತರಗತಿಯ ಯಾವುದೇ ವಿದ್ಯಾರ್ಥಿಯು ಬೋರ್ಡ್ ಪರೀಕ್ಷೆಗಳಲ್ಲಿ ಮೆರಿಟ್ ಸ್ಥಾನಗಳನ್ನು ಪಡೆದರೆ ಆ ವಿದ್ಯಾರ್ಥಿಗಳಿಗೆ ನಾನು ದೇಶದ ಒಳಗೆ ವಿಮಾನದಲ್ಲಿ ಸಂಚರಿಸಲು ಅನುವುಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಶಾಲೆಯ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಆಸೆಗಳಿರುತ್ತವೆ ಆದರೆ ಅದನ್ನು ಪೂರೈಸಲು ಕಷ್ಟವಾಗುತ್ತದೆ ಆ ಕಾರಣದಿಂದ ಅಂತವರಿಗೆ ನೆರವಾಗುವ ರೀತಿಯಲ್ಲಿ ಈ ರೀತಿ ಮಾಡಿದ್ದೇನೆ ಎಂದಿದ್ದಾರೆ.


"ದೇವರ ದಯೆಯಿಂದ, ನಾಲ್ವರು ವಿದ್ಯಾರ್ಥಿಗಳು - 10 ನೇ ತರಗತಿಯ ಇಬ್ಬರು ಮತ್ತು 12 ನೇ ತರಗತಿಯ ಇಬ್ಬರು  ಅಂತಿಮ ಪರೀಕ್ಷೆಯಲ್ಲಿ ಮೆರಿಟ್ ಸ್ಥಾನಗಳನ್ನು ಗಳಿಸಿದ್ದಾರೆ" ಎಂದು ಹರ್ಷ ಶರ್ಮಾ ಹೇಳಿದರು.


ಅಮೃತಸರದಿಂದ ವಿಮಾನದಲ್ಲಿ ಗೋವಾಗೆ ಟ್ರಾವೆಲ್​


"ಹನ್ನೆರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಭಜನ್‌ಪ್ರೀತ್ ಕೌರ್ ಮತ್ತು ಸಿಮ್ರಂಜೀತ್ ಕೌರ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಮೃತಸರದಿಂದ ವಿಮಾನದಲ್ಲಿ ಗೋವಾಗೆ ಹೋಗಿದ್ದರು. ಇಬ್ಬರೂ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಶನಲ್ ಇನ್ನೋವೇಶನ್ ಮತ್ತು ಇನ್ವೆನ್ಶನ್ ಎಕ್ಸ್‌ಪೋ (INEX-2022) ನಲ್ಲಿ ಭಾಗವಹಿಸಿದ್ದರು" ಎಂದು ಶರ್ಮಾ ಹೇಳಿದರು.


ಬಡ ವಿದ್ಯಾರ್ಥಿಗಳಿಗೆ ಅನುಕೂಲ


ಭಜನ್ಪ್ರೀತ್ ಅವರ ತಂದೆ ಸ್ಥಳೀಯ ಗುರುದ್ವಾರದಲ್ಲಿ ಪುರೋಹಿತರಾಗಿದ್ದಾರೆ ಮತ್ತು ಸಿಮ್ರಂಜೀತ್ ಅವರ ತಂದೆ ಟ್ರಕ್ ಮೆಕ್ಯಾನಿಕ್. ಇನ್ನಿಬ್ಬರು ವಿದ್ಯಾರ್ಥಿಗಳು ಜನವರಿ ಕೊನೆಯ ವಾರದಲ್ಲಿ ಅಮೃತಸರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಅವರು ರಾಷ್ಟ್ರಪತಿ ಭವನ, ಕೆಂಪು ಕೋಟೆ ಮತ್ತು ರಾಷ್ಟ್ರ ರಾಜಧಾನಿಯ ಇತರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.


ಇಬ್ಬರು ವಿದ್ಯಾರ್ಥಿಗಳು ವಿಮಾನ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿರುವುದನ್ನು ನೋಡಿದ ಶರ್ಮಾ ಅವರು 10 ಮತ್ತು 12 ನೇ ತರಗತಿಯ ಇನ್ನೂ 22 ವಿದ್ಯಾರ್ಥಿಗಳು ಮೆರಿಟ್ ಸ್ಥಾನಗಳನ್ನು ಪಡೆಯಲು ಸಹಕರಿಸಿದ್ದಾರೆ.

First published: