• Home
  • »
  • News
  • »
  • jobs
  • »
  • School Rename: ಜಾತಿ ಆಧಾರಿತ ಹೆಸರು ಹೊಂದಿದ್ದ 56 ಶಾಲೆಗಳಿಗೆ ಮರು ನಾಮಕರಣ

School Rename: ಜಾತಿ ಆಧಾರಿತ ಹೆಸರು ಹೊಂದಿದ್ದ 56 ಶಾಲೆಗಳಿಗೆ ಮರು ನಾಮಕರಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಾಲೆಗಳು ಇರುವಂತಹ ಪ್ರದೇಶದ ಪ್ರಸಿದ್ಧ ವ್ಯಕ್ತಿಗಳು, ಹುತಾತ್ಮರ ಅಥವಾ ಸ್ಥಳೀಯ ವೀರರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗಿದೆ.

  • News18 Kannada
  • Last Updated :
  • Punjab, India
  • Share this:

ಜಾತಿ ಟ್ಯಾಗ್‌ ಹೊಂದಿದ್ದ ಶಾಲೆಗಳನ್ನು ಪಂಜಾಬ್‌ ಸರ್ಕಾರ ಮರುನಾಮಕರಣ ಮಾಡಿದೆ. ಇಲ್ಲಿನ ಶಾಲಾ ಶಿಕ್ಷಣ ಇಲಾಖೆಯು (Education Department) ಸರ್ಕಾರಿ ಶಾಲೆಗಳಿಗೆ ಜಾತಿಗಳ ಆಧಾರದ ಮೇಲೆ ಇಡಲಾಗಿದ್ದ ಹೆಸರನ್ನು ಬದಲಾಯಿಸಿ ಅಲ್ಲಿನ ಸ್ಥಳೀಯ ಪ್ರಸಿದ್ಧ ವ್ಯಕ್ತಿಗಳು, ಹಾಗೂ ಸ್ಥಳೀಯ ಸಾಧಕರ ಹೆಸರನ್ನಿಟ್ಟು ಮರುನಾಮಕರಣ ಮಾಡಿದೆ. ಜಾತಿ ಆಧಾರದ (Caste Tag) ಮೇಲೆ ಹೆಸರಿಸಲಾದ ಶಾಲೆಗಳಿಗೆ ಮರುನಾಮಕರಣ ಮಾಡುವಂತೆ ಪಂಜಾಬ್​ನ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ (Education Minister Harjot Singh Bains) ಆದೇಶ ಹೊರಡಿಸಿದ್ದರು.


ಜಾತಿ ಆಧಾರಿತ ಹೆಸರುಗಳನ್ನು ಹೊಂದಿರುವ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ವರದಿ ಕೇಳಿತ್ತು.


56 ಶಾಲೆಗಳ ಹೆಸರು ಮರು ನಾಮಕರಣ
ಇದಾದ ವಾರಗಳ ನಂತರ ಪಂಜಾಬ್ ಸರ್ಕಾರವು ಜಾತಿ ಟ್ಯಾಗ್ ಹೊಂದಿರುವ 56 ಸರ್ಕಾರಿ ಶಾಲೆಗಳಿಗೆ ಮರುನಾಮಕರಣ ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ 56 ಸರ್ಕಾರಿ ಶಾಲೆಗಳ ಹೆಸರನ್ನು ಶಾಲಾ ಶಿಕ್ಷಣ ಇಲಾಖೆ ಬದಲಾಯಿಸಿದೆ.


ಶಾಲೆಗಳು ಇರುವಂತಹ ಪ್ರದೇಶದ ಪ್ರಸಿದ್ಧ ವ್ಯಕ್ತಿಗಳು, ಹುತಾತ್ಮರ ಅಥವಾ ಸ್ಥಳೀಯ ವೀರರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗಿದೆ.


ಎಎಪಿ ಪಂಜಾಬ್‌ ಘಟಕದಿಂದ ಸರ್ಕಾರದ ಕ್ರಮಕ್ಕೆ ಸ್ವಾಗತ!
ಇನ್ನು ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕ ಸ್ವಾಗತಿಸಿದೆ. ಪಂಜಾಬ್​ನಲ್ಲಿ ಶಿಕ್ಷಣ ವ್ಯವಸ್ಥೆಯ ಹೊಸ ಯುಗ ಉದಯವಾಗಿದೆ. 56 ಶಾಲೆಗಳ ಮರುನಾಮಕರಣವು ಸ್ವಾಗತಾರ್ಹ ಕ್ರಮ ಎಂದು ಆಡಳಿತ ಎಎಪಿ ರಾಜ್ಯ ಘಟಕದ ಟ್ವೀಟ್ ಮಾಡಿದೆ.


ಮರುನಾಮಕರಣಗೊಂಡ ಶಾಲೆಗಳಲ್ಲಿ ಪಟಿಯಾಲ ಜಿಲ್ಲೆಯಲ್ಲಿ 12, ಮಾನ್ಸಾದಲ್ಲಿ ಏಳು, ನವನ್‌ಶಹರ್‌ನಲ್ಲಿ 6 ಮತ್ತು ಸಂಗ್ರೂರ್ ಮತ್ತು ಗುರುದಾಸ್‌ಪುರದಲ್ಲಿ ತಲಾ 4 ಮತ್ತು ಫತೇಘರ್ ಸಾಹಿಬ್, ಬಟಿಂಡಾ, ಬರ್ನಾಲಾ ಮತ್ತು ಮುಕ್ತಸರ್‌ನಲ್ಲಿ ತಲಾ 3 ಶಾಲೆಗಳು ಸೇರಿವೆ.


ಶಿಕ್ಷಣ ಸಚಿವರು ಹೇಳೋದೇನು?
ಈ ಹಿಂದೆ ಡಿಸೆಂಬರ್ 1 ರಂದು ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಜಾತಿ ಆಧಾರದ ಮೇಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಮರುನಾಮಕರಣ ಮಾಡಲು ಆದೇಶ ಹೊರಡಿಸಿದ್ದರು. ಆದೇಶದಲ್ಲಿ ಬೈನ್ಸ್ ಅವರು, ರಾಜ್ಯದ ಅನೇಕ ಸರ್ಕಾರಿ ಶಾಲೆಗಳ ಹೆಸರುಗಳು ಜಾತಿಗೆ ಸಂಬಂಧಿಸಿವೆ. ಈ ಬಗ್ಗೆ ಹಲವಾರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಪ್ರಸ್ತುತ ದಿನಮಾನದಲ್ಲಿ ಅದನ್ನು ಅಸಂಸ್ಕೃತಿಯೆಂದು ಭಾವಿಸಲಾಗುತ್ತದೆ. ಅಲ್ಲದೇ ಅದು ಸಮಾಜದಲ್ಲಿ ಜಾತಿ ಪ್ರತ್ಯೇಕತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದರು.


ಸಮಾನ ಶಿಕ್ಷಣವೇ ಉದ್ದೇಶ
ಅಲ್ಲದೇ, ಪಂಜಾಬ್‌ನ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನತೆಯ ಆಧಾರದ ಮೇಲೆ ಸಮಾನ ಶಿಕ್ಷಣವನ್ನು ನೀಡಲಾಗುತ್ತಿದೆ. ಅದರ ಅಡಿಯಲ್ಲಿ ಸರ್ಕಾರಿ ಶಾಲೆಗಳ ಹೆಸರುಗಳು ವರ್ಗ ಅಥವಾ ಜಾತಿಗೆ ಸಂಬಂಧಿಸಿರಬಾರದು.


ಇದನ್ನೂ ಓದಿ: Good News: ವಿದೇಶದಲ್ಲಿ ಉಚಿತ ಉನ್ನತ ಶಿಕ್ಷಣ, ಹೆಚ್ಚುವರಿ 65 ಕೋಟಿ ಅನುದಾನ


ಪಂಜಾಬ್ ಗುರುಗಳು, ಸಂತರು ಮತ್ತು ಮಹಾನ್ ಪ್ರವಾದಿಗಳ ನಾಡು. ಅವರು ಜಾತಿ ಮತ್ತು ಎಲ್ಲಾ ರೀತಿಯ ತಾರತಮ್ಯದಿಂದ ಹೊರಗೆ ಬಂದು ಮಾನವೀಯತೆಯಿಂದ ಬದುಕಲು ಕಲಿಸಿದ್ದಾರೆ ಎಂಬುದಾಗಿ ಅವರು ಹೇಳಿದ್ದರು.


ಅಲ್ಲದೇ ಇಂದಿನ ಯುಗದಲ್ಲಿ ಈ ಹೆಸರುಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಕೆಲವೊಮ್ಮೆ ಈ ಹೆಸರುಗಳಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುವುದಕ್ಕೆ ಹಿಂಜರಿಯುತ್ತಾರೆ ಎಂದು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಹೇಳಿದ್ದಾರೆ.


ಇದನ್ನೂ ಓದಿ: EDII Recruitment 2023: ಪಿಜಿ ಕಂಪ್ಲೀಟ್ ಆಗಿದ್ರೆ ಬೆಂಗಳೂರಿನಲ್ಲಿದೆ ನೋಡಿ ಕೆಲಸ- 12 ಲಕ್ಷದವರೆಗೆ ಸಂಬಳದ ಪ್ಯಾಕೇಜ್


ಒಟ್ಟಾರೆ ಜಾತಿ ಆಧಾರಿತ ಹೆಸರುಳ್ಳ ಶಾಲೆಗ ಮರುನಾಮಕರಣವೇನೋ ಸರಿ. ಆದ್ರೆ ಸರ್ಕಾರಿ ಶಾಲೆಗಳ ವ್ಯವಸ್ಥೆಗಳನ್ನು ಹಾಗೂ ಗುಣಮಟ್ಟವನ್ನು ಸುಧಾರಿಸಿದರೆ ಮಾತ್ರ ಅಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುತ್ತದೆ ಅನ್ನೋದನ್ನು ಇಲಾಖೆ ಗಮನದಲ್ಲಿಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ.

First published: