ಪುನೀತ್ ರಾಜ್ ಕುಮಾರ್ ಅವರು ಹಲವರಿಗೆ ಸ್ಪೂರ್ತಿಯಾದವರು. ಇವರಿಂದ ಕಲಿಯುವಂತಹ ಅಂಶಗಳು ಹಲವಾರು. ಈಗ ಪುನೀತ್ ಅವರ ಅಭಿಮಾನಗಳಿಗೆ ಇನ್ನೊಂದು ಸಿಹಿ ಸುದ್ದಿ ಎಂಬಂತೆ ಬೆಂಗಳೂರು (Bengaluru) ವಿಶ್ವವಿದ್ಯಾಲಯವು ಪುನೀತ್ (Puneeth Rajkumar) ಅವರ ಜೀವನದ ಕುರಿತಾದ ವಿಷಯವನ್ನು ಪಠ್ಯಕ್ರಮದಲ್ಲಿ (Text Book) ಅಳವಡಿಕೆ ಮಾಡಿಕೊಳ್ಳುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯವು (University) ಈ ಸುದ್ದಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೀವನಾಧಾರಾತಿಕ ಕೆಲವು ಅಂಶಗಳನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವ ಕುರಿತು ಹಲವಾರು ಜನರು ಈಗಾಗಲೇ ಬೇಡಿಕೆ ಇಟ್ಟಿದ್ದರು. ಈ ಕುರಿತು ಹಲವೆಡೆ ಚರ್ಚೆಗಳೂ ಕೂಡ ನಡೆಯುತ್ತಿತ್ತು. ಅದರಂತೆ ಬೆಂಗಳೂರು ವಿಶ್ವವಿದ್ಯಾಯವು ಇದೀಗ ಪಠ್ಯ ಕ್ರಮದಲ್ಲಿ ಈ ಅಂಶವನ್ನು ಅಳವಡಿಸಿಕೊಂಡಿದೆ. ಇದು ವಿದ್ಯಾರ್ಥಿ ಹಾಗೂ ಅಭಿಮಾನಿಗಳೆಲ್ಲರಿಗೆ ಸಂತಸದ ವಿಚಾರವಾಗಿದೆ.
ಅಭಿಮಾನಿಗಳ ಆಸೆ ಈಡೇರಿತು
ಅಭಿಮಾನಿಗಳಿಗೆ ಇದೊಂದು ಮಹತ್ತರ ಆಸೆಯಾಗಿತ್ತು ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ವಿಷಯವನ್ನು ಸೇರಿಸುವ ಕುರಿತು ಅಪ್ಪು ಅಭಿಮಾನಿಗಳ ಸಂಘಗಳು ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದಿದ್ದವು. ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರವನ್ನೂ ಸಹ ನೀಡಿದ್ದವು. ಇದೀಗ ಅಭಿಮಾನಗಳ ಆಶಯ ಸಾಕಾರಗೊಂಡಿದೆ.
ಇದನ್ನೂ ಓದಿ: Telangana: ಶಾಲೆಗೆ ಬರದ 10ನೇ ಕ್ಲಾಸ್ ವಿದ್ಯಾರ್ಥಿಯ ಮನೆಗೇ ಹೋದ ಶಿಕ್ಷಕ!
ಯಾವ ತರಗತಿಗೆ ಈ ಪಠ್ಯ ಅಳವಡಿಸಲಾಗಿದೆ?
ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಅಪ್ಪು ಅವರ ಜೀವನದ ಕುರಿತು ಪಠ್ಯವನ್ನು ಅಳವಡಿಸಲಾಗಿದೆ. ಅದರಲ್ಲೂ ಬಿಕಾಂ ನ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಈ ಪಾಠ ಇದೆ ಎಂದು ತಿಳಿದುಬಂದಿದೆ. ಕನ್ನಡ ಭಾಷಾ ಪಠ್ಯವಾಗಿ. ವಾಣಿಜ್ಯ ಕನ್ನಡ 3ರಲ್ಲಿ ಇದನ್ನು ಅಳವಡಿಸಲಾಗಿದೆ. ಕೆಲವು ಆಯ್ದ ಭಾಗಗಳನ್ನು ಇಲ್ಲಿ ಅಳವಡಿಸಲಾಗಿದೆಯಂತೆ.
ಸಾವನ್ನಾ ಪ್ರಕಾಶನದಲ್ಲಿ ಪ್ರಕಟವಾದ ಪುಸ್ತಕ
ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ ಸಾವನ್ನಾ ಪ್ರಕಾಶನದಲ್ಲಿ ಪ್ರಕಟಿಸಿದ ನೀನೇ ರಾಜಕುಮಾರ ಕೃತಿಯ ಒಂದು ಅದ್ಯಾಯವಾದ ಲೋಹಿತ ಎಂಬ ಮರಿಮುದ್ದ ಎಂಬ ಭಾಗವನ್ನು ಪಠ್ಯದಲ್ಲಿ ಒಂದು ಭಾಗವಾಗಿ ಬಳಸಿಕೊಳ್ಳಲಾಗಿದೆ. ಡಾ. ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದು ಡಾ. ಅಮರೇಂದ್ರ ಶೆಟ್ಟಿ, ಆರ್ ಡಾ ಕಂ ನಿಂ. ಹೊಯ್ಸಳಾದಿತ್ಯ, ಡಾ. ಶಿವರಾಜ್ ಬಿ ಇ, ಹಾಗೂ ಡಾ. ರಘುನಂದನ್ ಬಿ ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಪಠ್ಯ ಸಮಂಜಸ
ಪುನೀತ್ ರಾಜ್ ಕುಮಾರ್ ಅವರು ಇನ್ನು ಇರಬೇಕಿತ್ತು ಅನ್ನೋ ನೋವು, ಸಂಕಟ ಎಲ್ಲರಿಗೂ ಇದೆ. ಆದರೆ ಅವರನ್ನು ಒಂದಿಲ್ಲ ಒಂದು ರೂಪದಲ್ಲಿ ಜನರು ಜೀವಂತವಾಗಿಟ್ಟಿದ್ದಾರೆ. ಇತ್ತೀಚಿಗಷ್ಟೇ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಸಹ ಇವರಿಗೆ ನೀಡಲಾಗಿದೆ. ಅಷ್ಟೇ ಅಲ್ಲ ಪುನೀತ್ ಅವರು ಶಿಕ್ಷಣ ಕ್ಷೇತ್ರಕ್ಕೂ ಸಹ ಅಪಾರ ಕೊಡುಗೆ ನೀಡಿದ್ದಾರೆ. ಈ ಎಲ್ಲಾ ಕಾರಣದಿಂದ ಪುನೀತ್ ಅವರ ಜೀವನದ ಭಾಗವನ್ನು ಪಠ್ಯದಲ್ಲಿ ಅಳವಡಿಸುವುದು ಸಮಂಜಸ ಎಂಬ ಅಭಿಪ್ರಾಯ ಕೇಳಿಬರ್ತಿದೆ.
ದಾಖಲೆ ಮಾಡಿದ ಪುಸ್ತಕ
ಮೊನ್ನೆಯಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಬಯೋಗ್ರಫಿ ಎಂದರೆ ಅದು ನೀನೇ ರಾಜಕುಮಾರ ಪುಸ್ತಕ. ಈ ಪುಸ್ತಕ ಈಗಾಗಲೇ ದಾಖಲೆ ನಿರ್ಮಿಸಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಪಠ್ಯ ಭಾಗಕ್ಕೂ ಈ ಕೃತಿಯ ಅಳವಡಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ