• ಹೋಂ
 • »
 • ನ್ಯೂಸ್
 • »
 • Jobs
 • »
 • PUC Revaluation Result: ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ; ಕಲಾ ವಿಭಾಗದಲ್ಲಿ ಕುಶ ನಾಯ್ಕ್ ರಾಜ್ಯಕ್ಕೆ ಪ್ರಥಮ

PUC Revaluation Result: ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ; ಕಲಾ ವಿಭಾಗದಲ್ಲಿ ಕುಶ ನಾಯ್ಕ್ ರಾಜ್ಯಕ್ಕೆ ಪ್ರಥಮ

ಕುಶ ನಾಯ್ಕ್​

ಕುಶ ನಾಯ್ಕ್​

ಈ ಹಿಂದೆ ಕುಶಾಲ್​ ನಾಯ್ಕ್​ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಲಾ ವಿಭಾಗದಲ್ಲಿ ಹೆಚ್ಚಿನ ಅಂಕವನ್ನು ಗಳಿಸಿದ್ದರು. ಆದರೆ ಮತ್ತೆ ಮರು ಮೌಲ್ಯಮಾಪನಕ್ಕೆ ಅವರು ತಮ್ಮ ಪತ್ರಿಕೆಯನ್ನು ಕಳಿಸಿಕೊಟ್ಟಾಗ ಖುಷಿ ವಿಚಾರ ಹೊರಬಿದ್ದಿದೆ. ಇವರು ಒಬ್ಬ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದು ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Karnataka, India
 • Share this:

ದ್ವಿತೀಯ ಪಿಯುಸಿ (Second PUC) ಫಲಿತಾಂಶ ಈಗಾಗಲೇ ಬಿಡುಗಡೆಯಾಗಿತ್ತು. ಕಲಾ ವಿಭಾಗದಲ್ಲಿ ಮತ್ತೆ ಮೊದಲ ಸ್ಥಾನ ಪಡೆದ ವಿಜಯನಗರ ಜಿಲ್ಲೆ ಸತತ ಎಂಟು ವರುಷಗಳಿಂದ ಕಲಾ ವಿಭಾಗದಲ್ಲಿ ಮೊದಲ ಸ್ಥಾನವನ್ನೇ ಪಡೆಯುತ್ತಾ ಬಂದಿತ್ತು. ಈ ಬಾರಿಯೂ ತನ್ನ ಸ್ಥಾನವನ್ನು ಇದೇ ಕಾಲೇಜು (College) ಕಾಯ್ದಿರಿಸಿಕೊಂಡಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿಗೆ ಮೊದಲ ಸ್ಥಾನ ಸಿಕ್ಕಿದೆ. ಈ ಮೊದಲು 592 ಅಂಕ ಪಡೆದಿದ್ದ ವಿಶೇಷ ಚೇತನ ವಿದ್ಯಾರ್ಥಿ (Student) ಕುಶನಾಯ್ಕ್ ಮರು ಮೌಲ್ಯ ಮಾಪನದಲ್ಲಿ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ.


ಈ ಹಿಂದೆ ಕುಶಾಲ್​ ನಾಯ್ಕ್​ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಲಾ ವಿಭಾಗದಲ್ಲಿ ಹೆಚ್ಚಿನ ಅಂಕವನ್ನು ಗಳಿಸಿದ್ದರು. ಆದರೆ ಮತ್ತೆ ಮರು ಮೌಲ್ಯಮಾಪನಕ್ಕೆ ಅವರು ತಮ್ಮ ಪತ್ರಿಕೆಯನ್ನು ಕಳಿಸಿಕೊಟ್ಟಾಗ ಖುಷಿ ವಿಚಾರ ಹೊರಬಿದ್ದಿದೆ. ಇವರು ಒಬ್ಬ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದು ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.


ಇದೀಗ ಮರು ಮೌಲ್ಯಮಾಪನದಲ್ಲಿ ಎರಡು ಅಂಕ ವ್ಯತ್ಯಾಸ
594 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿ ಕುಶನಾಯ್ಕ್ ಇದೀಗ ರಾಜ್ಯಕ್ಕೆ ಪ್ರಥಮ ಎಂದು ತಿಳಿದು ಬಂದಿದೆ.
ಕೃಷ್ಣ 591 ಇದ್ದ ಅಂಕ ಮರುಮೌಲ್ಯಮಾಪನದಲ್ಲಿ 593 ಅಂಕ ಮೂಲಕ ಎರಡನೇ ಸ್ಥಾನ ಪಡೆಕೊಂಡಿದ್ದಾರೆ.


ಕುಶ ನಾಯ್ಕ್


ಇದನ್ನೂ ಓದಿ: Summer Holidays: ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಿಗೂ ಸಿಗಲಿದೆ 15 ದಿನಗಳ ರಜೆ!


ಬೆಂಗಳೂರಿನ ವಿದ್ಯಾರ್ಥಿನಿ ತಬುಸಬ್ ಶೇಕ್ 593 ಅಂಕ ಪಡೆದಿದ್ದರು
ಈ ವಿದ್ಯಾರ್ಥಿನಿ ಮೊದಲ ಸ್ಥಾನ ಪಡೆದಿದ್ದಾಳೆ ಎಂದು ಘೋಷಿಸಿದ್ದ ಪಿಯು ಬೋರ್ಡ್
ಇದೀಗ ಅಂಕಗಳ ಆಧಾರದ ಮೇಲೆ ಅವರಿಗೆ ಎರಡನೇ ಸ್ಥಾನವನ್ನು ಘೋಷಿಸಿದೆ.


ವಿಜ್ಞಾನ ವಿಭಾಗದಲ್ಲಿ  ಎಸ್.ಎಂ.ಕೌಶಿಕ್ ಹಾಗೂ ಸುರಭಿ ಇಬ್ಬರೂ 596 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಯುವತಿಯರೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಾತ್ರ ಕೌಶಿಕ್ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿಯ ಜೊತೆ ಹಂಚಿಕೊಂಡಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಕಲಾ ವಿಭಾಗದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ತಬಸುಮ್​ ಗಳಿಸಿದ ಅಂಕಕ್ಕಿಂತ ಕುಶ ನಾಯ್ಕ ಗಳಿಸಿದ ಅಂಕ ಹೆಚ್ಚಿನದಾಗಿದೆ.


ಇತರ ವಿದ್ಯಾರ್ಥಿಗಳ ಅಂಕ


1) ಅನನ್ಯಾ ಕೆ.ಎ - 600 ಅಂಕಗಳು - ದಕ್ಷಿಣ ಕನ್ನಡದ ಆಳ್ವಾ ಕಾಲೇಜಿನ ವಿದ್ಯಾರ್ಥಿನಿ.


2) ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು 9 ವಿದ್ಯಾರ್ಥಿಗಳು ಪಡೆಯುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಅನ್ವಿತಾ ಡಿ.ಎ, ಬೆಂಗಳೂರಿನ ರವಿ ಕುಮಾರ್​, ಮಂಗಳೂರಿನ ಖುಷಿ, ಮಂಗಳೂರಿನ ಸ್ವಾತಿ, ಬೆಂಗಳೂರಿನ ಧನ್ಯಶ್ರೀ, ಬೆಂಗಳೂರಿನ ವರ್ಷಾ, ಆಳ್ವಾಸ್ ಕಾಲೇಜಿನ ದಿಶಾ ರಾವ್​ , ಬೆಂಗಳೂರಿನ ಇಂಚರಾ ಹಾಗೂ ಗಾನಾ 2ನೇ ರ್ಯಾಂಕ್​ ಪಡೆದಿದ್ದಾರೆ.

top videos


  ವರದಿ: ಶರಣು ಹಂಪಿ

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು