ದ್ವಿತೀಯ ಪಿಯುಸಿ ಮುಖ್ಯಪರೀಕ್ಷೆಯಲ್ಲಿ (Main Exam) ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಮರುಮೌಲ್ಯಮಾಪನ ಮಾಡಿದಾಗ ವಿದ್ಯಾರ್ಥಿಯು (Students) ಮುಖ್ಯ ಪರೀಕ್ಷೆಯಲ್ಲಿ (Exam) ಪಡೆದಿರುವುದಕ್ಕಿಂತ ಒಂದು ಅಂಕ ಹೆಚ್ಚು ಬಂದರೂ ಅದನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅಷ್ಟೇ ಅಲ್ಲ ಮೌಲ್ಯಮಾಪಕರಿಗೂ ಇದು ಸಂಬಂಧಪಟ್ಟಿರುತ್ತದೆ. ಈ ಹಿಂದೆ ಒಂದು ಅಂಕ (Marks) ಹೆಚ್ಚು ಬಂದರೆ ಅದನ್ನು ಪರಿಗಣನೆ ಮಾಡುತ್ತಿರಲಿಲ್ಲ.
ಈ ಹಿಂದೆ ಮರುಮೌಲ್ಯ ಮಾಪನಕ್ಕೆ ಹಾಕಿದಾಗ ಶೇ6 ಕ್ಕಿಂತ ಹೆಚ್ಚು ಅಂಕ ಬಂದರೆ ಮಾತ್ರ ಅದನ್ನು ಪರಿಗಣನೆ ಮಾಡಲಾಗುತ್ತಿತ್ತು. ಆದರೆ ಈಗ ಹಾಗಲ್ಲ ಯಾಕೆಂದರೆ ಈಗ ಕೇವಲ ಒಂದು ಅಂಕವೂ ಕೂಡಾ ತುಂಬಾ ಮುಖ್ಯವಾಗುತ್ತದೆ ಎನ್ನುವ ಕಾರಣವಾಗುತ್ತದೆ ಎಂದು ಈ ರೀತಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ.
ಇದನ್ನೂ ಓದಿ: BCA vs BTech: ಬಿಸಿಎ ಅಥವಾ ಬಿಟೆಕ್ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ಆನ್ಸರ್
2023ರ ಮಾರ್ಚ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಯಿಂದಲೇ ಈ ಹೊಸ ನಿಯಮ ಅನ್ವಯವಾಗಲಿದೆ ಎಂದೂ ಸಹ ತಿಳಿಸಿದ್ದಾರೆ. ಹಾಲಿ ನಿಯಮದ ಪ್ರಕಾರ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಪತ್ರಿಕೆಯ ಒಟ್ಟು ಅಂಕದ ಶೇ.6ರಷ್ಟು ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಮಾತ್ರ ಅದನ್ನು ಪರಿಗಣಿಸಲಾಗುತ್ತಿತ್ತು ಆದ್ರೆ ಇನ್ನು ಮುಂದಿನ ದಿನದಲ್ಲಿ ಈ ಮೇಲೆ ತಿಳಿಸಿರುವಂತೆ ಒಂದೊಂದು ಅಂಕಕ್ಕೂ ನ್ಯಾಯ ದೊರೆಯುತ್ತದೆ.
ಹೀಗಿರುವಾಗ ಈ ಬಾರಿ ಮರು ಮೌಲ್ಯಪಾಪನಕ್ಕೆ ಹಾಕುವವರ ಸಂಖ್ಯೆ ಕೂಡಾ ಹೆಚ್ಚಾದರೆ ಅದರಲ್ಲೇನು ಆಶ್ಚರ್ಯವಿಲ್ಲ. ಈ ಕ್ರಮ ವಿದ್ಯಾರ್ಥಿ ಸ್ನೇಹಿಯಾಗಿದೆ. ಶೀಘ್ರದಲ್ಲೇ ‘ಕರ್ನಾಟಕ ಪದವಿಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು-1997’ಕ್ಕೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ರಾಜ್ಯ ಸರ್ಕಾರವು ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯ ಮರುಮೌಲ್ಯಮಾಪನ ವ್ಯವಸ್ಥೆಯನ್ನು ಸುಧಾರಿಸಲು ನಿರ್ಧರಿಸಿದೆ ಆದ್ದರಿಂದ ಇದು ತಿಂಬಾ ವಿದ್ಯಾರ್ಥಿಗಳಿಗೆ ಸಹಾಯವಾಗಿದೆ.
ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆ ಮರುಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
2023ರ ಮಾರ್ಚ್‌ನಲ್ಲಿ ನಡೆಯುವ 'ವಾರ್ಷಿಕ ಪರೀಕ್ಷೆ'ಯಿಂದ ಈ ಹೊಸ ನಿಯಮ ಅನ್ವಯವಾಗಲಿದೆ. (1/3)
— B.C Nagesh (@BCNagesh_bjp) February 9, 2023
ಮುಂದಿನ ನಿರ್ಧಾರಕ್ಕೆ ಪೂರಕ
ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮಕ್ಕಳು ಸಿದ್ಧತೆ ನಡೆಸುತ್ತಾರೆ. ಈಗ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ವಿಶೇಷ ಅಧ್ಯಯನಕ್ಕೆ ಸಿದ್ಧರಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಅಂಕವೂ ತುಂಬಾ ಮುಖ್ಯವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ