• ಹೋಂ
 • »
 • ನ್ಯೂಸ್
 • »
 • jobs
 • »
 • 2nd PUC Preparatory Exam: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

2nd PUC Preparatory Exam: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪರೀಕ್ಷೆ ದಿನಕ್ಕೆ ಯಾವುದೆಲ್ಲಾ ತಯಾರಿ ಬೇಕು ಅದನ್ನು ಇಂದಿನಿಂದಲೇ ಆರಂಭಿಸಿ. ಉತ್ತಮ ಅಂಕಗಳಿಸಿ. ಮುಖ್ಯವಾಗಿ ಪರೀಕ್ಷೆ ಬಂತೆಂದು ಭಯಪಡಬೇಡಿ.ರಾಜ್ಯದಲ್ಲಿ 2023ರ PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ನೀವೀಗ ಅಭ್ಯಾಸ ಆರಂಭಿಸಲೇ ಬೇಕು. ಅದಕ್ಕಾಗಿ ನೀವು ಕೆಲವೊಂದು ಟಿಪ್ಸ್​ ಪಾಲೋ ಮಾಡಿದರೆ ಹೆಚ್ಚಿನ ಅಂಕ ಬರುವುದು ಗ್ಯಾರಂಟಿ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Karnataka, India
 • Share this:

ವಿದ್ಯಾರ್ಥಿಗಳೆಲ್ಲರೂ ಕಾದಿರುವ ದ್ವಿತೀಯ ಪಿಯುಸಿ ವೇಳಾಪಟ್ಟಿ (Time Table) ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಅದರ ವೇಳಾಪಟ್ಟಿ ಕೂಡ ಇದೀಗ ಬಿಡುಗಡೆಯಾಗಿದೆ. ಇದನ್ನು ಗಮನಿಸಿ ವಿದ್ಯಾರ್ಥಿಗಳು (Student) ಸಿದ್ಧತೆಯಲ್ಲಿ ತೊಡಗಿಕೊಂಡರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಇಲ್ಲಿ ಪರೀಕ್ಷೆ ದಿನಾಂಕ (Date) ಹಾಗೂ ವಿಷಯಗಳ ವಿವವರಗಳನ್ನು ನೀಡಲಾಗಿದೆ ಇದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ.  


ಅನೇಕ ಪ್ರಶ್ನೆಗಳು ಪುನರಾವರ್ತಿತವಾಗಿರುವುದರಿಂದ ಗಣಿತ ವಿಜ್ಞಾನದಂತಹ ವಿಷಯಗಳ ಹಿಂದಿನ ವರ್ಷದ ಪ್ರಶ್ನೆಗಳನ್ನು ಡಿಸೆಂಬರ್‌ನಿಂದಲೇ ಓದಿಕೊಳ್ಳಿ ಇದಕ್ಕೆ ಒಂದು ವಾರದ ವೇಳಾಪಟ್ಟಿ ಮಾಡಿ ಒಂದೊಂದು ವಿಷಯಕ್ಕೆ ಒಂದೊಂದು ದಿನ ಮೀಸಲಿಡಿ.


ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಹೀಗಿದೆ


18-01-2023 ಬುಧವಾರ - ಕನ್ನಡ.
19-01-2023 ಗುರುವಾರ - ಇಂಗ್ಲಿಷ್.
20-01-2023 ಶುಕ್ರವಾರ - ಇತಿಹಾಸ, ಭೌತಶಾಸ್ತ್ರ.
21-01-2023 ಶನಿವಾರ - ಲೆಕ್ಕಶಾಸ್ತ್ರ, ಶಿಕ್ಷಣಶಾಸ್ತ್ರ, ಐಚ್ಛಿಕ ಕನ್ನಡ.
22-01-2023 ಭಾನುವಾರ ರಜೆ.
23-01-2023 ಸೋಮವಾರ - ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ.
24-01-2023 ಮಂಗಳವಾರ - ಅರ್ಥಶಾಸ್ತ್ರ, ರಸಾಯನಶಾಸ್ತ್ರ.
25-01-2023 ಬುಧವಾರ - ವ್ಯವಾಹರ ಅಧ್ಯಯನ, ಸಮಾಜಶಾಸ್ತ್ರ, ಗಣಿತ.
26-01-2023 ಗುರುವಾರ ಗಣರಾಜೋತ್ಸವ.
27-01-2023 ಶುಕ್ರವಾರ - ಭೂಗೋಳಶಾಸ್ತ್ರ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ.
28-01-2023 ಶನಿವಾರ - ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಬ್ಯೂಟಿ & ವೆಲ್‌ನೆಸ್.
29-01-2023 ಭಾನುವಾರ ರಜೆ


ಇದನ್ನೂ ಓದಿ: SSLC Exam: ಟೈಮ್​ ಟೇಬಲ್​ ಬಂದಾಯ್ತು! ಓದುವಾಗ ಈ ಟಿಪ್ಸ್​ ಫಾಲೋ ಮಾಡಿ


ಪರೀಕ್ಷೆ ದಿನಕ್ಕೆ ಯಾವುದೆಲ್ಲಾ ತಯಾರಿ ಬೇಕು ಅದನ್ನು ಇಂದಿನಿಂದಲೇ ಆರಂಭಿಸಿ. ಉತ್ತಮ ಅಂಕಗಳಿಸಿ. ಮುಖ್ಯವಾಗಿ ಪರೀಕ್ಷೆ ಬಂತೆಂದು ಭಯಪಡಬೇಡಿ.ರಾಜ್ಯದಲ್ಲಿ 2023ರ PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ನೀವೀಗ ಅಭ್ಯಾಸ ಆರಂಭಿಸಲೇ ಬೇಕು. ಅದಕ್ಕಾಗಿ ನೀವು ಕೆಲವೊಂದು ಟಿಪ್ಸ್​ ಪಾಲೋ ಮಾಡಿದರೆ ಹೆಚ್ಚಿನ ಅಂಕ ಬರುವುದು ಗ್ಯಾರಂಟಿ ಎಲ್ಲಕ್ಕಿಂತ ಮುಖ್ಯವಾಗಿ ನೀವು ಹೆದರದೆ ಈಗಿನಿಂದಲೇ ದಿನಕ್ಕೊಂದು ವಿಷಯದಂತೆ ಓದುತ್ತಾ ಹೋದರೆ ಸಾಕು. 80ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದು ಇದು ನಿಖರ.


ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದೆ
ಹೀಗೆ ಕ್ರಮವಾಗಿ ಪರೀಕ್ಷಾ ದಿನಾಂಕಗಳು ಪ್ರಕಟವಾಗಿದೆ. ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಸಿದ್ಧತೆ ನಡೆಸಬೇಕು. ವೇಳಾಪಟ್ಟಿಗೆ ಅನುಗುಣವಾಗಿ ಸಿದ್ಧತೆ ನಡೆಸುತ್ತಾರೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವದ ಅತಿ ಮುಖ್ಯ ಘಟ್ಟ ಇದರ ನಂತರ ತಾವೂ ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರಕ್ಕೆ ಮಕ್ಕಳು ಬರುತ್ತಾರೆ.


ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಭ್ಯಾಸ ಮಾಡಿ
ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ತರಗತಿಯ ವಿಷಯಗಳೊಂದಿಗೆ ಏಕಕಾಲದಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಾಯವಾಗುತ್ತದೆ. ಓದಿದ ವಿಷಯವನ್ನು ಇನ್ನೊಮ್ಮೆ ಓದಿ ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ನೆರವಾಗುತ್ತದೆ.


ಮುಂದಿನ ನಿರ್ಧಾರಕ್ಕೆ ಪೂರಕ
ಅಷ್ಟೇ ಅಲ್ಲ ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮಕ್ಕಳು ಸಿದ್ಧತೆ ನಡೆಸುತ್ತಾರೆ. ಈಗ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ವಿಶೇಷ ಅಧ್ಯಯನಕ್ಕೆ ಸಿದ್ಧರಾಗುತ್ತಾರೆ.

First published: