• Home
  • »
  • News
  • »
  • jobs
  • »
  • PUC Exam Time Table: ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಎಕ್ಸಾಂ?

PUC Exam Time Table: ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಎಕ್ಸಾಂ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಇದೀಗ ಪ್ರಕಟವಾಗಿದೆ.  2023 ಮಾರ್ಚ್ 9 ರಿಂದ 29 ರವರೆಗೆ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು  ಶಿಕ್ಷಣ ಇಲಾಖೆ  ಇದೀಗ ಪ್ರಕಟಿಸಿದೆ.

  • News18 Kannada
  • Last Updated :
  • Karnataka, India
  • Share this:

ವಿದ್ಯಾರ್ಥಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ದ್ವಿತೀಯ ಪಿಯು (2nd PUC Exam) ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಇದೀಗ ಪ್ರಕಟವಾಗಿದೆ.  2023 ಮಾರ್ಚ್ 9 ರಿಂದ 29 ರವರೆಗೆ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು  ಶಿಕ್ಷಣ (Education) ಇಲಾಖೆ  ಇದೀಗ ಪ್ರಕಟಿಸಿದೆ. ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (Final Time Table) ನೀವು ಅಧಿಕೃತ ವೆಬ್​ಸೈಟ್​ನಲ್ಲಿ ಪಡೆಯಬಹುದು. ಅಧಿಕೃತ ವೆಬ್​ಸೈಟ್​ಗೆ  ಭೇಟಿ ನೀಡಲು ನೀವು ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. 


ವೇಳಾಪಟ್ಟಿ ವಿವರ ಹೀಗಿದೆ
2023 ಮಾರ್ಚ್ 09 ಕನ್ನಡ
ಮಾರ್ಚ್ 11 ಗಣಿತ, ಶಿಕ್ಷಣ
ಮಾರ್ಚ್ 13 ಅರ್ಥಶಾಸ್ತ್ರ


ಮಾರ್ಚ್ 14 ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ ಮತ್ತು ಮೂಲಗಣಿತ
ಮಾರ್ಚ್ 15 , ಪ್ರಥಮ ಭಾಷೆ ಪರೀಕ್ಷೆ
ತ‌ಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್


ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಧಿಕಾರಿ ಬಿ ಸಿ ನಾಗೇಶ್​ ಈ ಕುರಿತು ಟ್ವೀಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಮಾರ್ಚ್ 16 ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 17 ಮಾಹಿತಿ ತಂತ್ರಜ್ಜಾನ, ರಿಟೈಲ್ , ಆಟೋಮೊಬೈಲ್, ಹೆಲ್ತ್ ಕೆರ್, ಬ್ಯೂಟಿ ಆ್ಯಂಡ್​ ವೆಲ್ ನೆಸ್
ಮಾರ್ಚ್ 18 ಭೂಗೋಳ ಶಾಸ್ತ್ರ ಮತ್ತು ಜೀವಶಾಸ್ತ್ರ
ಮಾರ್ಚ್ 20 ಇತಿಹಾಸ ಮತ್ತು ಭೌತಶಾಸ್ತ್ರ


ಮಾರ್ಚ್ 21 ಹಿಂದಿ
ಮಾರ್ಚ್ 23 ಇಂಗ್ಲೀಷ್
ಮಾರ್ಚ್ 25 ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ
ಮಾರ್ಚ್ 27 ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ ಮತ್ತು ಗೃಹ ವಿಜ್ಞಾನ
ಮಾರ್ಚ್ 29 ಸಮಾಜಶಾಸ್ತ್ರ,ವಿದ್ಯುನ್ಮಾನ ಶಾಸ್ತ್ರ ಮತ್ತು ಗಣಕ ವಿಜ್ಞಾನ


ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದೆ
ಹೀಗೆ ಕ್ರಮವಾಗಿ ಪರೀಕ್ಷಾ ದಿನಾಂಕಗಳು ಪ್ರಕಟವಾಗಿದೆ. ಇಲ್ಲಿ ನೀಡಿರುವ ದಿನಾಂಕದ ಪ್ರಕಾರ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಸಿದ್ಧತೆ ನಡೆಸಬೇಕು. ವೇಳಾಪಟ್ಟಿಗೆ ಅನುಗುಣವಾಗಿ ಸಿದ್ಧತೆ ನಡೆಸುತ್ತಾರೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವದ ಅತಿ ಮುಖ್ಯ ಘಟ್ಟ ಇದರ ನಂತರ ತಾವೂ ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರಕ್ಕೆ ಮಕ್ಕಳು ಬರುತ್ತಾರೆ.


ಮುಂದಿನ ನಿರ್ಧಾರಕ್ಕೆ ಪೂರಕ
ಅಷ್ಟೇ ಅಲ್ಲ ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮಕ್ಕಳು ಸಿದ್ಧತೆ ನಡೆಸುತ್ತಾರೆ. ಈಗ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ವಿಶೇಷ ಅಧ್ಯಯನಕ್ಕೆ ಸಿದ್ಧರಾಗುತ್ತಾರೆ.ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಭ್ಯಾಸ ಮಾಡಿ
ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ತರಗತಿಯ ವಿಷಯಗಳೊಂದಿಗೆ ಏಕಕಾಲದಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಾಯವಾಗುತ್ತದೆ. ಓದಿದ ವಿಷಯವನ್ನು ಇನ್ನೊಮ್ಮೆ ಓದಿ ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ನೆರವಾಗುತ್ತದೆ.


ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಅಗತ್ಯವಾದ ಸಿದ್ಧತಾ ಸಲಹೆಗಳು ಮತ್ತು ತಂತ್ರಗಳ ಬಗ್ಗೆ ತಿಳಿದುಕೊಳ್ಳಬೇಕು.

First published: