• Home
  • »
  • News
  • »
  • jobs
  • »
  • Anganwadi Workers: ಮೂರನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Anganwadi Workers: ಮೂರನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಾರ್ಯಕರ್ತೆಯರ ಯಾವ ಬೇಡಿಕೆಗಳಿಗೂ ಸೊಪ್ಪು ಹಾಕದ ಸರ್ಕಾರ ಈ ವಿಷಯದಲ್ಲಿ ತಟಸ್ಥವಾಗಿದೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೂ ಸಹ ಯಾರೂ ಬರುತ್ತಿಲ್ಲ. ಯಾವ ಅಧಿಕಾರಿಗಳೂ ಸಹ ಬೇಡಿಕೆಗಳೇನು ಎಂಬುದರ ಕುರಿತು ಮಾಹಿತಿ ಪಡೆಯುತ್ತಿಲ್ಲ ಎಂದು ದೂರಿದ್ದಾರೆ. ಮುಂದಿನ ದಿನದಲ್ಲಿ ಇದು ಯಾವ ರೀತಿ ತಿರುವು ಪಡೆಯಲಿದೆ ಎಂಬುದು ತಿಳಿಯದಾಗಿದೆ. 

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಂನವಾಡಿ (Anganwadi Workers) ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಕೊರೆವ ಚಳಿಯಲ್ಲೇ ಪ್ರತಿಭಟನೆ ನಡೆಸ್ತಿರೋ ಕಾರ್ಯಕರ್ತೆಯರ ಬೇಡಿಕೆಗಳಿಗೆ (Demand) ಯಾವಾಗ ಸ್ಪಂದನೆ ಸಿಗಲಿದೆ ಎಂದು ಕಾದುನೋಡುತ್ತಿದ್ದಾರೆ. ತಾವಷ್ಟೇ ಅಲ್ಲ ತಮ್ಮ ಮಕ್ಕಳನ್ನು (Students) ಈ ಪ್ರತಿಭಟೆಗೆ ಕರೆ ತಂದಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ಸ್ಥಳದಲ್ಲಿ ಯಾವುದೇ ಸೌಕರ್ಯಗಳು ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಪರದಾಡುವಂತಾಗಿದೆ. 


ರಸ್ತೆಯಲ್ಲೇ ನಿದ್ದೆ ರಸ್ತೆಯಲ್ಲೇ ಊಟ ಮಾಡುತ್ತಾ ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಎಷ್ಟೇ ಚಳಿ ಇರಲಿ ಅಥವಾ ಬಿಸಿಲು ಬರಲಿ ನಾವು ಮಾತ್ರ ಇಲ್ಲಿಂದ ಹೋಗೋದಿಲ್ಲ. ನಮ್ಮ ಬೇಡಿಕೆಗಳಿಗೆ ಬೆಲೆ ಕೊಟ್ಟಾಗ ಮಾತ್ರ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದು ಎಂದು ಹೇಳುತ್ತಾ ಮುಷ್ಕರ ಮುಂದುವರೆಸಿದ್ದಾರೆ.


ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಹ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. CITU ಸಂಘ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಜರುಗುತ್ತಿದೆ.


ಇದನ್ನೂ ಓದಿ: COMEDK UGET 2023: ಮೇ 28ರಂದು ಪರೀಕ್ಷೆ, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬ್ರೋಷರ್


ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರೋ ಹೋರಾಟ ಇದಾಗಿದೆ. ಇತ್ತೀಚೆಗಷ್ಟೇ ಇನ್ನೂ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು ಆ ಸಂದರ್ಭದಲ್ಲಿ ಸಚಿವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆ ಕೈ ಬಿಡಲಾಗಿತ್ತು ಆದರೆ ಈಗ ಮತ್ತೂ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಮಾಡುತ್ತಿರುವ ಈ  CITU ಸಂಘದ ಪ್ರತಿಭಟನೆ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ.


ತಮ್ಮ ಅಳಲು ತೋಡಿಕೊಂಡ ಅಂಗನಾಡಿ ಕಾರ್ಯಕರ್ತೆಯರು


ಹೌದು ಕಾರ್ಯಕರ್ತೆಯರ ಬಗ್ಗೆ ಸರ್ಕಾರ ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅಥವಾ ಬೇಡಿಕೆಗಳನ್ನು ಆಲಿಸಲು ಯಾರೊಬ್ಬರೂ ಅತ್ತ ಸುಳಿದಿಲ್ಲ. ಕುಡಿಯಲು ಸರಿಯಾದ ನೀರಿಲ್ಲ, ಇತರ ಮೂಲಭೂತ ಸೌಕರ್ಯಗಳು ಯಾವುದೂ ಇಲ್ಲ ಎಂದು ರೈಲ್ವೇ ನಿಲ್ದಾಣಕ್ಕೆ ಹೋಗಿ ತಮ್ಮ ತಮ್ಮ ಶೌಚಾಲಯಬಳಸಿ ಸ್ನಾನ ಮಾಡಿ ಬರುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ತಿದ್ದಾರೆ.




ಕಾರ್ಯಕರ್ತೆರ ಬಗ್ಗೆ ಸರ್ಕಾರ ಕಂಪ್ಲೀಟ್ ನೆಗ್ಲೆಟ್
ಕಾರ್ಯಕರ್ತೆಯರ ಯಾವ ಬೇಡಿಕೆಗಳಿಗೂ ಸೊಪ್ಪು ಹಾಕದ ಸರ್ಕಾರ ಈ ವಿಷಯದಲ್ಲಿ ತಟಸ್ಥವಾಗಿದೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೂ ಸಹ ಯಾರೂ ಬರುತ್ತಿಲ್ಲ. ಯಾವ ಅಧಿಕಾರಿಗಳೂ ಸಹ ಬೇಡಿಕೆಗಳೇನು ಎಂಬುದರ ಕುರಿತು ಮಾಹಿತಿ ಪಡೆಯುತ್ತಿಲ್ಲ ಎಂದು ದೂರಿದ್ದಾರೆ. ಮುಂದಿನ ದಿನದಲ್ಲಿ ಇದು ಯಾವ ರೀತಿ ತಿರುವು ಪಡೆಯಲಿದೆ ಎಂಬುದು ತಿಳಿಯದಾಗಿದೆ.


ಅಂಗನವಾಡಿ ಕಾರ್ಯಕರ್ತೆಯರ ಈ ಬಾರಿಯ ಬೇಡಿಕೆಗಳು


1.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು


2) ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ವೇತನ ನೀಡಬೇಕು


3) ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು


4) ಗ್ರಾಚ್ಯುಟಿ ಹಣ , ಪೆನ್‌ಷನ್ ಜಾರಿ ಮಾಡಬೇಕು


5) ಆರೋಗ್ಯವಿಮೆಯಾದ ಇ.ಎಸ್.ಐ. ಬಾರಿ ಮಾಡಬೇಕು


5) ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು


ಈ ಐದು ಬೇಡಿಕೆಗಳನ್ನು ಮುಂದಿಟ್ಟು CITU ಸಂಘಟನೆಯಿಂದ ಪ್ರತಿಭಟನೆ ಆರಂಭವಾಗಿದೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ನಂತರವೇ ಮುಷ್ಕರ ನಿಲ್ಲಿಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದು ಕೂತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯನ್ನು ಮತ್ತು ಅವರ ಕೆಲಸವನ್ನು ಖಾಯಂ ಮಾಡಬೇಕು ಅಂದರೆ ತಮಗೆ ಕೆಲಸದ ಭದ್ರತೆ ಬೇಕು ಎಂಬ ನಿಲುವನ್ನು ಸೂಚಿಸಿದ್ದಾರೆ.

First published: