ನಿನ್ನೆಯಿಂದ ಅಹೋರಾತ್ರಿ ಪ್ರತಿಭಟನೆ (Protest) ಮುಂದುವರಿಸಿರುವ ಅಂಗನವಾಡಿ ಕಾರ್ಯಕರ್ತಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ರಾತ್ರಿ ಫ್ರೀಡಂ ಪಾರ್ಕ್ನಲ್ಲಿ ಮಲಗಿದ್ದ ಅಂಗನವಾಡಿ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. NEP ಯನ್ನು ಅಂಗನವಾಡಿಗಳಿಗೂ (Anganwadi) ಜಾರಿಗೆ ತರುವಂತೆ ಇವರ ಬೇಡಿಕೆ (Demand) ಇದೆ. ಕನಿಷ್ಠ ವೇತನ, ಗ್ರ್ಯಾಚೂಟಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮೊದಲೇ ಈ ಕುರಿತು ಮಾಹಿತಿ (Information) ನೀಡಿದ್ದರೂ ಸಹ ಈ ಪ್ರತಿಭಟನೆ ನಿಲ್ಲಿಸಲು ಸಾಧ್ಯವಾಗಲಿಲ್ಲ.
ಚಳಿಯನ್ನು ಕೂಡಾ ಲೆಕ್ಕಿಸದೆ ರಾತ್ರಿ ಇಡೀ ಪ್ರತಿಭಟನೆ ನಡೆಸಿರುವ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ನಡೆಸುವುದು ಖಾತ್ರಿಯಾಗಿದೆ. ಸಚಿವರು ಬಂದು ಸಮಸ್ಯೆ ಬಗೆಹರಿಸುವ ತನಕ ಸ್ಥಳ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದು ಕೂತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು
ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸರ್ಕಾರ ಈ ಪ್ರತಿಭಟನೆಯ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ? ಇವರಿಗೆ ನ್ಯಾಯ ಯಾವಾಗ ಸಿಗುತ್ತದೆ? ಎಂಬುದು ಮಾತ್ರ ತಿಳಿದು ಬರುತ್ತಿಲ್ಲ. ಆದ್ದರಿಂದ ನಿನ್ನೆಯೇ ಆರಂಭವಾದ ಇವರ ಪ್ರತಿಭಟನೆ ಇಂದಿಗೂ ಅಂದರೆ ಎರಡನೇ ದಿನಕ್ಕೂ ಮುಂದುವರೆದಿದೆ.
ಇದನ್ನೂ ಓದಿ: SSLC Exam 2023: ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ; ಅಂತಿಮ ಟೈಮ್ ಟೇಬಲ್ ಪ್ರಕಟ
ಪ್ರೀಡಂಪಾರ್ಕ್ ನಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ ಆದರೂ ಚಳಿಯನ್ನೂ ಲೆಕ್ಕಿಸದೆ ಎಲ್ಲರೂ ಧರಣಿ ಕೂತಿದ್ದಾರೆ. ನಾವು ಇಡೀ ರಾತ್ರಿ ಚಳಿ ಲೆಕ್ಕಿಸದೆ ಇಲ್ಲಿ ಮಲಗಿದ್ದೇವೆ, ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ ಎಂದು ಕಾರ್ಯಕರ್ತೆಯರು ಹೇಳಿದ್ದಾರೆ. ಆದರೂ ಸಹ ಅಲ್ಲೇ ಉಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಇಷ್ಟು ಜನ ಮಹಿಳೆಯರು ಎಲ್ಲಿಗೆ ಹೋಗಬೇಕು? ಆರರಿಂದ ಏಳು ಸಾವಿರ ಜನ ಮಹಿಳಿಯರಿದ್ದೇವೆ ಏನು ಮಾಡಬೇಕು? ಎಂಬ ಪ್ರಶ್ನೆಯನ್ನೂ ಸಹ ಮುಂದಿಟ್ಟಿದ್ದಾರೆ.
ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಇನ್ನೂ ಮುಂದಾಗಿಲ್ಲ
- ಕನಿಷ್ಠ ವೇತನ ಜಾರಿಗೊಳಿಸಬೇಕು
- ನೌಕರಿ ಖಾಯಂಗೊಳಿಸಬೇಕು
- ಗ್ರ್ಯಾಚುಟಿ ಬಿಡುಗಡೆ ಮಾಡಬೇಕು
- NEP ಯಲ್ಲಿ ಕೆಲ ಬದಲಾವಣೆ ಮಾಡಬೇಕು
ಅಂಗನವಾಡಿ ಕಾರ್ಯಕರ್ತೆಯರು ಮುಖ್ಯವಾಗಿ ಈ ನಾಲ್ಕು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಅಂಗನವಾಡಿಗಳಿಗೂ ಸಹ ಹೊಸ ಶಿಕ್ಷಣ ನೀತಿ ಜಾರಿಯಾದರೆ ಸಹಾಯವಾಗುತ್ತದೆ. ಕಾರ್ಯಕರ್ತೆಯರಿಗೂ ಇದರ ಅನ್ವಯ ಉತ್ತಮ ವೇತನ ದೊರೆಯುತ್ತದೆ ಎಂಬುದು ಇವರ ಉದ್ದೇಶವಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಅಂಗನವಾಡಿಗಳಿಗೂ ಅನ್ವಯ ಮಾಡಿ ಎಂದು ಕೇಳುತ್ತಿದ್ದಾರೆ.
ಹೊಸ ಶಿಕ್ಷಣ ನೀತಿ ಅನ್ವಯ ಮಾಡುವಂತೆ ಬೇಡಿಕೆ
ಪ್ರಾಥಮಿಕ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯವಾಗುತ್ತಿದೆ. ಅದನ್ನು ಅಲ್ಲಿಗೇ ಸ್ಥಗಿತ ಗೊಳಿಸದೆ ಅಂಗನವಾಡಿ ಹಂತಗಳಿಗೂ ಹೊಸ ಶಿಕ್ಷಣ ನೀತಿಯನ್ನು ನೀವು ತರಬೇಕು ಎಂದು ಹೇಳುತ್ತಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ದಶಕದಿಂದ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಷ್ಟು ಬೇಡಿಕೆಗಳನ್ನು ಆಗ್ರಹಿಸಿ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ನೋವು ತೋಡಿಕೊಂಡಿದ್ದಾರೆ. ಆದ್ದರಿಂದ ಅನಿರ್ಧಿಷ್ಟ ಅವಧಿಯವರೆಗೂ ಈ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ