• ಹೋಂ
 • »
 • ನ್ಯೂಸ್
 • »
 • Jobs
 • »
 • Mission Education: ಮೂಲಸೌಕರ್ಯಗಳಿಂದ ವಂಚಿತರಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆ

Mission Education: ಮೂಲಸೌಕರ್ಯಗಳಿಂದ ವಂಚಿತರಾದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳಲ್ಲಿನ ನ್ಯೂನತೆಗಳನ್ನು ಸುಧಾರಿಸಲು ಈ ಯೋಜನೆ ಸಹಾಯಕ ಎಂದೆನಿಸಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದಲ್ಲಿ ಅಂಕ ಸಾಧಿಸಲು ನೆರವಾಗಲಿದೆ

 • Share this:

ಶಿಕ್ಷಣವೆಂಬುದು (Education) ಮೂಲಭೂತ ಹಕ್ಕುಗಳಲ್ಲಿ ಒಂದೆನಿಸಿದ್ದು ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಪಡೆದುಕೊಳ್ಳಬಹುದಾದ ಅತ್ಯಮೂಲ್ಯ ಆಸ್ತಿ ಎಂದೆನಿಸಿದೆ. ದೇಶದ ಹೆಚ್ಚಿನ ಗ್ರಾಮೀಣ (Rural) ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಭಾಗಗಳಲ್ಲಿನ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣದ ಕೊರತೆಯನ್ನೆದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನವಜ್ಯೋತಿ ಫೌಂಡೇಶನ್ ಕಲಿಕಾ ಯೋಜನೆಯನ್ನು (Plan) ಆರಂಭಿಸಿದೆ.


ಕಲಿಕಾ ಅಭಿಯಾನ ಕೈಗೊಂಡಿರುವ ನವಜ್ಯೋತಿ ಫೌಂಡೇಶನ್


ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಈಶಾನ್ಯ ದೆಹಲಿಯಲ್ಲಿ ವಾಸವಾಗಿರುವ ಬಡಮಕ್ಕಳಿಗಾಗಿ ನವಜ್ಯೋತಿ ಫೌಂಡೇಶನ್ ಕಲಿಕಾ ಅಭಿಯಾನವನ್ನು ಕೈಗೊಂಡಿದ್ದು ಈ ಪ್ರೋಗ್ರಾಮ್ ಅಡಿಯಲ್ಲಿ ವಿದ್ಯಾರ್ಥಿಗಳು ಲೈವ್ ತರಗತಿಗಳಿಗೆ ಹಾಜರಾಗಬಹುದಾಗಿದೆ ಹಾಗೂ ವಿಷಯ ಪರಿಣಿತರು ಹಾಗೂ ಅನುಭವಸ್ಥರಿಂದ ವಿಷಯಗಳಲ್ಲಿ ಪ್ರಾವೀಣ್ಯತೆ ಗಳಿಸಬಹುದಾಗಿದೆ.


ಕಲಿಕೆಯಲ್ಲಿ ಹಿಂದುಳಿದವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರೋಗ್ರಾಮ್ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡುತ್ತಿದ್ದು ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ವರದಾನವಾಗಲಿದೆ ಎಂದು ವರದಿ ತಿಳಿಸಿದೆ. ಮೂಲಭೂತ ಸೌಕರ್ಯಗಳಿಂದ ಪ್ರತೀ ದಿನ ಕಂಗೆಟ್ಟಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ ಅನುಕೂಲವಾಗಲಿದೆ ಎಂದು ಯೋಜನೆಯ ವಕ್ತಾರರು ತಿಳಿಸಿದ್ದಾರೆ.


ಶೈಕ್ಷಣಿಕ ಪ್ರದರ್ಶನವನ್ನು ಸುಧಾರಿಸಲಿದೆ


ಎಜ್ಯು-ಟೆಕ್ ಸ್ಟಾರ್ಟಪ್ ಫಿಲೊದ ಸಹಯೋಗದೊಂದಿಗೆ ಈ ಯೋಜನೆ ಮೂಡಿಬಂದಿದ್ದು, ಮೂಲಸೌಕರ್ಯಗಳಿಂದ ವಂಚಿತರಾದ ಮಕ್ಕಳಿಗೆ ಆಶಾಕಿರಣವಾಗಲಿದೆ.


ಪರಿಣಿತ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ತುಂಬಲು ಸಹಾಯ ಮಾಡುವುದಲ್ಲದೆ ಅವರ ಶೈಕ್ಷಣಿಕ ಪ್ರದರ್ಶನವನ್ನು ಸುಧಾರಿಸಲಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Technology: ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತಿದೆ ತಂತ್ರಜ್ಞಾನ; ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ


ಮಕ್ಕಳಲ್ಲಿನ ನ್ಯೂನತೆಗಳನ್ನು ಸುಧಾರಿಸಲು ಈ ಯೋಜನೆ ಸಹಾಯಕ ಎಂದೆನಿಸಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದಲ್ಲಿ ಅಂಕ ಸಾಧಿಸಲು ನೆರವಾಗಲಿದೆ ಎಂದು ಯೋಜನೆಯ ವಕ್ತಾರರು ತಿಳಿಸಿದ್ದಾರೆ.


ಕಲಿಕಾ ಯೋಜನೆ ವಿದ್ಯಾರ್ಥಿಗಳಿಗೆ ನೆರವಾಗಲಿದೆ


ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಭರ್ತಿಮಾಡುವಲ್ಲಿ ಈ ಯೋಜನೆ ಅತ್ಯಂತ ಪರಿಣಾಮಕಾರಿ ಫಲಿತಾಂಶವನ್ನು ನೀಡಿದೆ ಎಂಬುದನ್ನು ಯೋಜನೆ ಪ್ರದರ್ಶಿಸಿದೆ.


ಅತಿ ದೀರ್ಘ ಸಮಯದಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿತ್ತು. 1500 ಸೆಶನ್‌ಗಳಲ್ಲಿ ಒಟ್ಟು 10,573 ನಿಮಿಷಗಳನ್ನು ಆನ್‌ಲೈನ್ ವೇದಿಕೆಯಲ್ಲಿ ಕಲಿಸಲಾಗಿದ್ದು ಗಣಿತ 45% ಸಾಧನೆ ಸಾಧಿಸಿದ್ದು ವಿಜ್ಞಾನ 33% ದಾಖಲೆ ಸಾಧಿಸಿದೆ ಎಂದು ಫಿಲೊ ಹೇಳಿಕೆಯಲ್ಲಿ ತಿಳಿಸಿದೆ.


ಕಲಿಕಾ ಯೋಜನೆಯಲ್ಲಿ ಸೇರ್ಪಡೆಗೊಂಡಿರುವ ಹತ್ತನೇ ತರಗತಿ ವಿದ್ಯಾರ್ಥಿ ರಿತಿಕ್, ಶಿಕ್ಷಕರು ಸರಳವಾದ ವಿಧಾನದ ಮೂಲಕ ವಿಷಯಗಳನ್ನು ಬೋಧಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅರ್ಥವಾಗದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು, ಸಂದೇಹಗಳನ್ನು ನಿವಾರಿಸಿಕೊಳ್ಳಲು ಕಲಿಕಾ ಯೋಜನೆ ನೆರವಾಗಿದೆ ಎಂದು ತಿಳಿಸಿದ್ದಾರೆ. ಯೋಜನೆಯು ಪರಸ್ಪರ ವಿಚಾರ ವಿನಿಮಯ ಸೆಶನ್‌ಗಳನ್ನು ಒಳಗೊಂಡಿದ್ದು ಈ ವೇದಿಕೆಯಲ್ಲಿ ವಿದ್ಯಾರ್ಥಿಗಳು ಪ್ರಶ್ನೋತ್ತರಗಳನ್ನು ನಡೆಸಬಹುದಾಗಿದೆ.


ಮಕ್ಕಳ ಯಶಸ್ಸಿಗೆ ಹಗಲಿರುಳು ಶ್ರಮಿಸುವ ಶಿಕ್ಷಕರು


ನವಜ್ಯೋತಿ ಫೌಂಡೇಶನ್‌ನ ವಿದ್ಯಾರ್ಥಿನಿ ನೀತು ಜೋಶಿ ಯೋಜನೆಯ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದು ಅಗತ್ಯ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಮಕ್ಕಳ ಅಭಿವೃದ್ಧಿಗೆ ಶಿಕ್ಷಕರ ಕಂಕಣ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದು ಮಕ್ಕಳ ಯಶಸ್ಸಿಗೆ ಹಗಲಿರುಳೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಫಿಲೊದ ಒನ್-ಒನ್ ಟ್ಯೂಟರಿಂಗ್ ಬೆಂಬಲದ ಮೂಲಕ ಇದನ್ನು ಸಾಧಿಸಲು ನಮಗೆ ಸಾಧ್ಯವಾಗಿದೆ ಎಂದು ನೀತು ತಿಳಿಸಿದ್ದಾರೆ.
ಕಲಿಕಾ ಸೌಹಾರ್ದಕ್ಕೆ ಸೇತುವೆಯಾಗಿದೆ

top videos


  ಫಿಲೊದ ಸಿಪಿಒ ಹಾಗೂ ಸಹಸ್ಥಾಪಕರಾಗಿರುವ ರೋಹಿತ್ ಕುಮಾರ್ ಹೊಸ ಯೋಜನೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿ ಹಾಗೂ ಮಕ್ಕಳ ನಡುವೆ ಕಲಿಕಾ ಸೌಹಾರ್ದವನ್ನು ಏರ್ಪಡಿಸಲು ಈ ಯೋಜನೆ ನೆರವಾಗಿದೆ ಎಂದು ತಿಳಿಸಿದ್ದಾರೆ. ಸೆಶನ್‌ಗಳ ಸಮಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ನಿರ್ಮಿಸಲು ಶಿಕ್ಷಕರು ಕಾರ್ಯತತ್ಪರರಾಗಿದ್ದಾರೆ ಎಂದು ತಿಳಿಸಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು